SENSEX
NIFTY
GOLD
USD/INR

Weather

19    C
... ...View News by News Source

ಈಗ ಕಾಂಗ್ರೆಸ್‌ಗೆ ಸಂಕಷ್ಟ , ರಾಹುಲ್‌ಗೆ ಅಗ್ನಿ ಪರೀಕ್ಷೆ

ಈಗ ಕಾಂಗ್ರೆಸ್‌ಗೆ ಸಂಕಷ್ಟ , ರಾಹುಲ್‌ಗೆ ಅಗ್ನಿ ಪರೀಕ್ಷೆ. ಹನ್ನೊಂದು ವರ್ಷಗಳ ಹಿಂದೆ, 2014ರಲ್ಲಿ ಬೀಸಿದ ರಾಜಕೀಯ ಬಿರುಗಾಳಿಗೆ ಸಿಕ್ಕಿ ಕಾಂಗ್ರೆಸ್ ಧೂಳೀಪಟವಾಗಿದೆ. ಧರ್ಮ ಮತ್ತು ಹಿಂದುತ್ವ ರಾಜಕಾರಣಕ್ಕೆ ಜೋತು ಬಿದ್ದ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ ಕಟ್ಟುವಲ್ಲಿ ಕೈ ಪಡೆ ಸೋತಿದೆ. ಗುಂಪುಗಾರಿಕೆ, ಭಿನ್ನಾಭಿಪ್ರಾಯ, ಕಿತ್ತಾಟದಿಂದ ಸೊರಗಿರುವ ಕಾಂಗ್ರೆಸ್‌ಗೆ ನಿಜಕ್ಕೂ ಸಂಕಷ್ಟ. ಈ ಬಿಕ್ಕಟ್ಟು ಪರಿಹಾರ ರಾಹುಲ್‌ಗೆ ಅಗ್ನಿ ಪರೀಕ್ಷೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರವಲ್ಲ, ಅಧಿಕಾರದಲ್ಲಿ ಇಲ್ಲದಿರುವ ರಾಜ್ಯಗಳಲ್ಲೂ ಕಿತ್ತಾಟ, ಗುಂಪುಗಾರಿಕೆ ಇದೆ. ಕರ್ನಾಟಕದಲ್ಲಿ ಒಳಗೊಳಗೇ ನಡೆಯುತ್ತಿದ್ದ ಶೀತಲ ಸಮರ ಬೀದಿಗೆ ಬಂದಿದೆ. ‘ಕುರ್ಚಿ‘ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಜಟಾಪಟಿಯನ್ನು ಸುಸೂತ್ರವಾಗಿ ಬಗೆಹರಿಸುವರೇ ರಾಹುಲ್ ಗಾಂಧಿ ಎಂಬ ಚರ್ಚೆ ಆರಂಭವಾಗಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷದೊಳಗಿನ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ದಿಲ್ಲಿ ನಾಯಕರು ಸಕಾರಾತ್ಮಕ ಹೆಜ್ಜೆ ಇಟ್ಟಿದ್ದಾರೆ. ದಿಲ್ಲಿ ನಾಯಕರ ಸಲಹೆ ಮೇರೆಗೆ ಇಬ್ಬರೂ ನಾಯಕರು ಎರಡು ಉಪಾಹಾರ ಸಭೆ ನಡೆಸಿದ್ದಾರೆ. ಚರ್ಚೆ ಮಾಡಿದ್ದಾರೆ. ಇದರಿಂದ ಬಿಕ್ಕಟ್ಟು ಪರಿಹಾರ ಆಗದಿದ್ದರೂ, ಸ್ವಲ್ಪ ಕಾಲ ದೂಡಬಹುದು. ಈಗ ಸಂಸತ್ ಅಧಿವೇಶನ ನಡೆಯುತ್ತಿದೆ. ಮುಂದಿನ ಸೋಮವಾರದಿಂದ (ಡಿ. 8) ವಿಧಾನ ಮಂಡಲ ಅಧಿವೇಶನ. ಮಹತ್ವದ ವಿಷಯಗಳು ದಿಲ್ಲಿ ಹಾಗೂ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪವಾಗುವ ಸಮಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಹೀಗೆ ಕಚ್ಚಾಡಿದರೆ ಪಕ್ಷ- ಸರಕಾರ ಮುಜುಗರ ಎದುರಿಸಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ‘ಕದನ ವಿರಾಮ’ ಘೋಷಿಸುವಂತೆ ಪಕ್ಷದ ವರಿಷ್ಠರು ಸಿದ್ದರಾಮಯ್ಯ, ಶಿವಕುಮಾರ್‌ಗೆ ಕಿವಿ ಮಾತು ಹೇಳಿದ್ದಾರೆ. ನಾಯಕರ ಸಲಹೆಗೆ ಇಬ್ಬರೂ ಕಿವಿಗೊಟ್ಟು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದು ತಾತ್ಕಾಲಿಕ. ಮುಂದಿನ ವರ್ಷ ‘ಅಧಿಕಾರ ಗುದ್ದಾಟ‘ ಪುನಃ ಶುರುವಾಗಬಹುದು ಎಂಬುದು ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯ. 2023ರ ಮೇನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಪಡೆದು ಸರಕಾರ ರಚಿಸಿದ ಸಮಯದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಸಿದ್ದರಾಮಯ್ಯನವರ ಜತೆ ಶಿವಕುಮಾರ್ ಟವೆಲ್ ಹಾಕಿದ್ದರು. ಅದೃಷ್ಟ ಶಿವಕುಮಾರ್ ಪರವಾಗಿರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಕೆಪಿಸಿಸಿ ಅಧ್ಯಕ್ಷರಾಗಿರುವ ಶಿವಕುಮಾರ್ ಅವರನ್ನು ಸಮಾಧಾನಪಡಿಸಲು ಉಪ ಮುಖ್ಯಮಂತ್ರಿ ಮಾಡಲಾಯಿತು. ಸಾಮಾನ್ಯವಾಗಿ ಇಬ್ಬರು ಅಥವಾ ಮೂವರು ಉಪ ಮುಖ್ಯಮಂತ್ರಿ ಇರುತ್ತಾರೆ. ಆದರೆ, ಸಿದ್ದರಾಮಯ್ಯ ಸರಕಾರದಲ್ಲಿ ಡಿಕೆಶಿ ಮಾತ್ರವೇ ಉಪ ಮುಖ್ಯಮಂತ್ರಿಯಾದರು. ಆ ಮೂಲಕ ‘ಪರ್ಯಾಯ ಪವರ್ ಸೆಂಟರ್’ ಸೃಷ್ಟಿಯಾಯಿತು. ಮೊದಲೇ ಕೆಪಿಸಿಸಿ ಅಧ್ಯಕ್ಷರು; ಉಪ ಮುಖ್ಯಮಂತ್ರಿ ಬೇರೆ. ಅಂದ ಮೇಲೆ ಕೇಳಬೇಕೇ? 2013- 2018ರವರೆಗಿನ ಸಿದ್ದರಾಮಯ್ಯನವರ ಆಡಳಿತಕ್ಕೂ, ಈಗಿನ ಅವರ ಸರಕಾರದ ಕಾರ್ಯವೈಖರಿಗೂ ಅಜಗಜ ವ್ಯತ್ಯಾಸವಾಗಲು ಇದೇ ಕಾರಣ. 2013ರಲ್ಲಿ ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಬಳಿಕ ಅತ್ಯಲ್ಪ ಕಾಲ ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದರು. ಸಿದ್ದರಾಮಯ್ಯನವರಿಗೆ ಆಗ ಕೆಲಸ ಮಾಡಲು ಮುಕ್ತ ಅವಕಾಶವಿತ್ತು. ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರಾಗಿದ್ದರು. ಶಿವಕುಮಾರ್ ಇಷ್ಟೊಂದು ಪ್ರಬಲವಾಗಿ ಬೆಳೆದಿರಲಿಲ್ಲ. ಪಕ್ಷದ ಕಾರ್ಯಾಧ್ಯಕ್ಷರಾಗಿದ್ದರು. ಸಂಪುಟ ದರ್ಜೆ ಸಚಿವ ಸ್ಥಾನವೂ ಅವರಿಗೆ ಸಿಕ್ಕಿತ್ತು. ಸಿದ್ದರಾಮಯ್ಯ ಅವರಿಗೆ ಡಿಕೆಶಿ ಈಗ ಸರಿಸಮಾನನಾಗಿ ಬೆಳೆದಿದ್ದಾರೆ. ಎರಡು ಪವರ್ ಸೆಂಟರ್‌ಗಳಿರುವುದರಿಂದ ಸರಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಸ್ವತಃ ಸಿದ್ದರಾಮಯ್ಯನವರೇ ಆಪ್ತರ ಬಳಿ ಈ ಮಾತು ಹೇಳಿಕೊಂಡಿದ್ದಾರೆ. ಕನಕಪುರದ ‘ಬಂಡೆ’ ಸಿದ್ದರಾಮಯ್ಯನವರ ದಾರಿಗೆ ಅಡ್ಡಿಯಾಗಿದೆ ಇನ್ನು, ‘ಎರಡೂವರೆ ವರ್ಷದ ಅಧಿಕಾರ ಹಸ್ತಾಂತರ ಒಪ್ಪಂದ’ ಕುರಿತು ರಾಜ್ಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ನವೆಂಬರ್ 20ರ ಬಳಿಕ ಶಿವಕುಮಾರ್ ಕುರ್ಚಿ ಹಿಡಿಯುವ ಪ್ರಯತ್ನವನ್ನು ಚುರುಕುಗೊಳಿಸಿದ್ದಾರೆ. ಇಂಥದೊಂದು ಒಪ್ಪಂದ ಆಗಿದೆಯೇ ಎನ್ನುವುದು ಎಲ್ಲರೂ ಕೇಳುತ್ತಿರುವ ಪ್ರಶ್ನೆ. ಈ ಪ್ರಶ್ನೆ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರಿಗೂ ಕಾಡುತ್ತಿದೆ. ಅನೇಕರು ಸಿದ್ದರಾಮಯ್ಯ ಅವರನ್ನೇ ಖುದ್ದು ಕೇಳಿದ್ದಾರೆ. ಶಿವಕುಮಾರ್ ಪ್ರಕಾರ, ಐದಾರು ನಾಯಕರ ಸಮ್ಮುಖದಲ್ಲಿ ಆಗಿರುವ ಒಪ್ಪಂದ ಇದು. ಆ ನಾಯಕರು ಯಾರು , ಒಪ್ಪಂದ ಏರ್ಪಟ್ಟಾಗ ರಾಹುಲ್ ಅವರಿದ್ದರೇ ಎಂದು ಡಿಕೆಶಿ ಸ್ಪಷ್ಟಪಡಿಸಿಲ್ಲ. ಅಕಸ್ಮಾತ್ ಸಂಧಾನ ಸಭೆಯಲ್ಲಿ ರಾಹುಲ್ ಅವರಿದ್ದರೆ ಸಮಸ್ಯೆ ಪರಿಹಾರ ಜಟಿಲ ಆಗಬಹುದು. ಬಿಹಾರ ಚುನಾವಣೆ ಮುಗಿಯುವವರೆಗೂ ರಾಹುಲ್ ಒಬಿಸಿ ರಾಜಕಾರಣ ಕುರಿತು ಪದೇ ಪದೇ ಪ್ರಸ್ತಾಪಿಸುತ್ತಿದ್ದರು. ಒಟ್ಟು ಜನಸಂಖ್ಯೆಯಲ್ಲಿ ಶೇ.64 ರಷ್ಟಿರುವ ಬಿಹಾರದಲ್ಲಿ ಒಬಿಸಿ ‘ಗೇಮ್ ಪ್ಲ್ಯಾನ್’ ಫಲ ಕೊಡಲಿಲ್ಲ. ‘ಇಂಡಿಯಾ ಬ್ಲಾಕ್‌‘ ಪಕ್ಷಗಳನ್ನು ಮತದಾರ ಬೆಂಬಲಿಸಲಿಲ್ಲ. ಆರ್‌ಜೆಡಿ ಮತ್ತು ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಿತು. ಆರ್‌ಜೆಡಿಗೆ ಸಿಕ್ಕಿದ್ದು ಬರೀ 22 ಸ್ಥಾನ. ಕಾಂಗ್ರೆಸ್‌ಗೆ ದೊರೆತಿದ್ದು ಕೇವಲ ನಾಲ್ಕು ಸ್ಥಾನ. ಒಟ್ಟು 61 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ಗೆ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ. ಬಿಹಾರದಲ್ಲಿ ಕಹಿ ಅನುಭವ ಆದ ಬಳಿಕವೂ ರಾಹುಲ್ ಹಿಂದುಳಿದ ಮತ್ತು ಅತೀ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಮಂತ್ರ ಜಪಿಸುವರೇ? ಈ ನಿಲುವಿಗೆ ಬದ್ಧವಾಗಿದ್ದರೆ ‘ಅಹಿಂದ’ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕದಲಿಸುವರೇ? ‘ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಮಾಡುತ್ತೇನೆ’ ಎಂದು ಡಿಕೆಶಿಗೆ ಮಾತು ಕೊಟ್ಟಿದ್ದರೆ, ಅದರಂತೆ ನಡೆದುಕೊಳ್ಳುವರೆ? ಇವೆರಡರಲ್ಲಿ ರಾಹುಲ್ ಯಾವ ದಾರಿ ತುಳಿಯಲಿದ್ದಾರೆ ಎನ್ನುವುದು ನಿಗೂಢ. ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದು ಮೂರು ರಾಜ್ಯಗಳಲ್ಲಿ ಮಾತ್ರ. ಹಿಮಾಚಲ ಪ್ರದೇಶ. ತೆಲಂಗಾಣ ಮತ್ತು ಕರ್ನಾಟಕದಲ್ಲಿ. ಕೆಲವು ವರ್ಷಗಳ ಹಿಂದೆ 11 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಕ್ರಮೇಣ ಅನೇಕ ರಾಜ್ಯಗಳಲ್ಲಿ ಅಧಿಕಾರ ಕೈ ತಪ್ಪಿಹೋಯಿತು. ಈಗಿರುವ ಮೂರು ರಾಜ್ಯಗಳಲ್ಲೇ ಸಾಮಾಜಿಕ ಸಮತೋಲನ ಕಾಪಾಡಬೇಕಿದೆ. ಈ ದೃಷ್ಟಿಯಲ್ಲಿ ನೋಡಿದರೆ ಹಿಮಾಚಲದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ಖು ರಜಪೂತ ಸಮಾಜದವರು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೆಸರೇ ಸೂಚಿಸುವಂತೆ ರೆಡ್ಡಿ ಸಮುದಾಯದವರು. ಸಿದ್ದರಾಮಯ್ಯ ಹಿಂದುಳಿದ ಕುರುಬ ಜಾತಿಯವರು. ಜಾತ್ಯತೀತ ಜನತಾ ದಳದಿಂದ ಹೊರಬಂದ ಬಳಿಕ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ಸಮಾಜ ಸಂಘಟಿಸಲು ಪ್ರಯತ್ನಿಸಿದ್ದಾರೆ. ರಾಜ್ಯ ಕಾಂಗ್ರೆಸ್‌ನ ಬೇರೆ ನಾಯಕರಿಗೆ ಹೋಲಿಸಿದರೆ ಅಹಿಂದ ಸಮುದಾಯದಲ್ಲಿ ಸಿದ್ದರಾಮಯ್ಯನವರ ಪ್ರಾಬಲ್ಯ ಹೆಚ್ಚಿದೆ. ಇಡೀ ಅಹಿಂದ ಸಮಾಜವೇ ಅವರ ಹಿಂದಿದೆ ಎಂದು ಹೇಳಲಾಗದು. ಇತ್ತೀಚೆಗೆ ಸಂಸ್ಥೆಯೊಂದು ಅಹಿಂದ ಸಮಾಜದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ನಾಯಕರು ಯಾರೆಂದು ಸಮೀಕ್ಷೆ ನಡೆಸಿತ್ತು. ಅದರಲ್ಲಿ ಸಿದ್ದರಾಮಯ್ಯನವರ ಗ್ರಾಫ್ ಉಳಿದವರಿಗಿಂತ ಕೊಂಚ ಮೇಲಿತ್ತು. ಇದು ಆರು ತಿಂಗಳ ಹಿಂದಿನ ಸಮೀಕ್ಷೆ. ಈ ಸಮೀಕ್ಷೆ ವಿಶ್ವಾಸಾರ್ಹವೇ ಎಂದು ಹೇಳುವುದು ಕಷ್ಟ. ಈಗ ಸಮೀಕ್ಷೆ ನಡೆದರೆ ಏನಾಗಬಹುದು ಎಂದು ಅಂದಾಜಿಸಲಾಗದು. ರಾಜ್ಯ ನಾಯಕತ್ವ ಬದಲಾವಣೆ ಸಮಸ್ಯೆಯನ್ನು ರಾಹುಲ್ ಸುಸೂತ್ರವಾಗಿ ಪರಿಹರಿಸಿದರೆ ಅವರೊಬ್ಬ ಸಮರ್ಥ ನಾಯಕರಾಗಿ ಹೊರಹೊಮ್ಮಬಹುದು. ಏಕೆಂದರೆ, ಸಿದ್ದರಾಮಯ್ಯ, ಶಿವಕುಮಾರ್ ಅವರಿಗಿಂತಲೂ ರಾಹುಲ್‌ಗೆ ಈ ಬಿಕ್ಕಟ್ಟು ಹೆಚ್ಚು ತಲೆನೋವಾಗಿದೆ. ಅಕಸ್ಮಾತ್ ಇವರಿಬ್ಬರ ನಡುವೆ ಆಗಿದೆ ಎನ್ನಲಾದ ಒಪ್ಪಂದದಲ್ಲಿ ರಾಹುಲ್ ಭಾಗಿಯಾಗದಿದ್ದರೆ ಕೊಟ್ಟ ಮಾತು ಉಳಿಸಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ. ‘ನನ್ನ ಸಮ್ಮುಖದಲ್ಲಿ ಒಪ್ಪಂದ ಆಗಿಲ್ಲ’ ಎಂದು ಜಾರಿಕೊಳ್ಳಲು ಅವಕಾಶವಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ನಾಯಕರು ಈ ವಿಷಯವನ್ನು ಯಾಕೆ ಇಷ್ಟೊಂದು ಜಟಿಲ ಮಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಇಷ್ಟೊತ್ತಿಗೆ ಏನಾದರೊಂದು ಹೇಳಬೇಕಿತ್ತು. ಒಪ್ಪಂದ ಆಗಿದೆಯೇ ಅಥವಾ ಆಗಿಲ್ಲವೇ ಎಂಬುದನ್ನು ಬಹಿರಂಗಪಡಿಸಬೇಕಿತ್ತು. ರಾಜ್ಯದ ಮತದಾರರು 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರೀಕ್ಷೆ ಮೀರಿ ಬೆಂಬಲಿಸಿದ್ದಾರೆ. 135 ಕ್ಷೇತ್ರಗಳಲ್ಲಿ ಈ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಗೆಲುವಿನಲ್ಲಿ ಬಹುತೇಕ ಎಲ್ಲ ನಾಯಕರ ಪರಿಶ್ರಮವೂ ಇದೆ. ಸಿದ್ದರಾಮಯ್ಯ ಅವರ ಜತೆ ಶಿವಕುಮಾರ್ ಹೆಗಲು ಕೊಟ್ಟಿದ್ದಾರೆ. ಈಗ ಕುರ್ಚಿಗಾಗಿ ನಡೆದಿರುವ ಕಿತ್ತಾಟದಿಂದ ಜನ ಬೇಸತ್ತಿದ್ದಾರೆ. ವಿರೋಧ ಪಕ್ಷ ಬಿಜೆಪಿಗೂ ಕಾಂಗ್ರೆಸ್ ನಾಯಕರು ಕಚ್ಚಾಡುವುದು ಬೇಕಿದೆ. ಇವರು ಕಿತ್ತಾಡಿದಷ್ಟು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಲಾಭವಾಗಲಿದೆ ಎನ್ನುವುದು ಅದರ ಲೆಕ್ಕಾಚಾರ. ‘ಕಾಂಗ್ರೆಸ್‌ನಲ್ಲಿ ದೋಸೆ ತೂತಾದರೆ, ಬಿಜೆಪಿಯಲ್ಲಿ ತವವೇ ತೂತು’. ಅಲ್ಲೂ ಬಿ.ವೈ. ವಿಜಯೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿದೆ. ‘ಮುಖ್ಯಮಂತ್ರಿ ಬದಲಾವಣೆ ಮುಂದೇನು’ ಎಂಬುದು ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನಡೆಸಿದ ಎರಡು ಉಪಾಹಾರ ಸಭೆಗಳಲ್ಲಿ ರಾಜಕಾರಣ ಚರ್ಚೆಯಾಗಿದೆ. ಮಂಗಳವಾರ ಬೆಳಗ್ಗೆ ಡಿಕೆಶಿ ಏರ್ಪಡಿಸಿದ್ದ ಉಪಾಹಾರ ಸಭೆಯಲ್ಲಿ ಮಹತ್ವದ ಚರ್ಚೆನಡೆದಿವೆ. ಒಂದು ಹಂತದಲ್ಲಿ, ಡಿಕೆಶಿ ಸಹೋದರ ಡಿ.ಕೆ. ಸುರೇಶ್ ತಮ್ಮ ಅಣ್ಣನಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರಂತೆ. ರಾಹುಲ್ ಗಾಂಧಿ ಸೂಚಿಸಿದರೆ ತಕ್ಷಣವೇ ಅಧಿಕಾರ ತ್ಯಜಿಸುವುದಾಗಿ ಹೇಳಿದರಂತೆ. ಇವೆಲ್ಲವೂ ಅಂತೆ- ಕಂತೆಗಳು. ನಿಖರತೆ ಇಲ್ಲ. ಆದರೆ, ರಾಜಕೀಯ ಪಡಸಾಲೆಯಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. ಸದ್ಯ ರಾಹುಲ್ ಮುಂದಿರುವುದು ಕರ್ನಾಟಕ ಕಾಂಗ್ರೆಸ್ ಸಮಸ್ಯೆ ಅಷ್ಟೇ ಅಲ್ಲ. ರಾಜಸ್ಥಾನದಲ್ಲೂ ಕಿತ್ತಾಟ ಇದೆ. ಮಧ್ಯ ಪ್ರದೇಶದಲ್ಲೂ ಜಗಳವಿದೆ. ಹರ್ಯಾಣದ ಬಗ್ಗೆ ಹೇಳುವುದೇ ಬೇಡ. ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಗುದ್ದಾಡುತ್ತಿದ್ದಾರೆ. ಈಚೆಗೆ ಅಜ್ಮೀರ್‌ನಲ್ಲಿ ಇವರಿಬ್ಬರ ಬೆಂಬಲಿಗರು ಕಿತ್ತಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಆದ ಗೊಂದಲ ಫಲಿತಾಂಶದ ಮೇಲೆ ತೀವ್ರ ಪರಿಣಾಮ ಬೀರಿತು. ಮಧ್ಯ ಪ್ರದೇಶದಲ್ಲಿ 2018ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಕೇವಲ 15 ತಿಂಗಳಲ್ಲಿ ಸರಕಾರ ಪತನವಾಯಿತು. ಹಿರಿಯ ಕಾಂಗ್ರೆಸ್ ಮುಖಂಡ ಮಾಧವರಾವ್ ಸಿಂದಿಯಾ ಅವರ ಪುತ್ರ ಜ್ಯೋತಿರಾದಿತ್ಯ ಸಿಂದಿಯಾ 22 ಶಾಸಕರ ಜತೆ ಬಿಜೆಪಿ ಸೇರಿದ್ದರಿಂದ ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆ ಕೊಡಬೇಕಾಯಿತು. ಹರ್ಯಾಣದಲ್ಲೂ ಹೂಡಾ ಹಾಗೂ ಶೆಲ್ಜಾ ನಡುವಿನ ಕಿತ್ತಾಟದಿಂದ ಕಾಂಗ್ರೆಸ್ ಚುನಾವಣೆಯಲ್ಲಿ ಬಾರೀ ಬೆಲೆ ತೆರಬೇಕಾಯಿತು. ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷ ಅನುಭವಿಸಿರುವ ಎಲ್ಲ ಸೋಲುಗಳನ್ನು ರಾಹುಲ್ ಅವರ ತಲೆಗೆ ಕಟ್ಟಲಾಗುತ್ತಿದೆ. ಅವರನ್ನು ಅಪ್ಪು- ಪಪ್ಪು ಎಂದೆಲ್ಲಾ ಲೇವಡಿ ಮಾಡಲಾಗುತ್ತಿದೆ. ಎರಡು ದಶಕಗಳಲ್ಲಿ ಕಾಂಗ್ರೆಸ್ ಅನೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಅದು ಗೆದ್ದಿದ್ದು ಬರೀ 44 ಸ್ಥಾನ. ಐದು ವರ್ಷದ ಬಳಿಕ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 52 ಸ್ಥಾನ ಪಡೆದಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ 99 ಸ್ಥಾನ ಗೆದ್ದಿದೆ. ಆನಂತರ ವಿವಿಧ ರಾಜ್ಯಗಳಲ್ಲಿ ಸೋಲುಂಡಿದೆ. ರಾಹುಲ್ ನಾಯಕತ್ವವನ್ನು ನೆಹರೂ, ಇಂದಿರಾ, ಸೋನಿಯಾ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಆದರೆ, ಅವರ ಕಾಲ ಘಟ್ಟವೇ ಬೇರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜಕಾರಣ ಮಾಡುತ್ತಿರುವ ಕಾಲ ಘಟ್ಟ ಬೇರೆ. ಆ ಸಮಯದಲ್ಲಿ ಕಾಂಗ್ರೆಸ್‌ನಲ್ಲಿ ಬಹಳಷ್ಟು ನಂಬಿಕಸ್ಥ ನಾಯಕರಿದ್ದರು. ಈಗ ನಂಬಬಹುದಾದ ನಾಯಕರ ಸಂಖ್ಯೆ ಕಡಿಮೆಯಿದೆ. ಎಲ್ಲದಕ್ಕೂ ರಾಹುಲ್ ಅವರೊಬ್ಬರೇ ಹೆಗಲು ಕೊಡುತ್ತಿದ್ದಾರೆ. ಅವರ ವೇಗಕ್ಕೆ ಹೆಜ್ಜೆ ಹಾಕುವ ನಾಯಕರ ಸಂಖ್ಯೆ ಕಾಂಗ್ರೆಸ್‌ನಲ್ಲಿ ಕಡಿಮೆಯಿದೆ. ಅನೇಕ ದಕ್ಷ- ಸಮರ್ಥ ನಾಯಕರು ವಯಸ್ಸಿನ ಕಾರಣಕ್ಕೆ ಮನೆ ಸೇರಿದ್ದಾರೆ. ಕೆಲವರು ಎಲ್ಲ ಸೌಲಭ್ಯ ಸವಲತ್ತು ಅನುಭವಿಸಿ ಕಾಂಗ್ರೆಸ್‌ಗೆ ಕೈ ಕೊಟ್ಟು ಹೋಗಿದ್ದಾರೆ. ಒಂದಿಬ್ಬರು ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಗುಣಗಾನ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಗಳನ್ನು ಗೆಲ್ಲಲು ಶಕ್ತಿ ಇಲ್ಲದ ಕೆಲವು ನಾಯಕರಿಗೆ ರಾಜ್ಯಗಳ ಉಸ್ತುವಾರಿ ವಹಿಸಲಾಗಿದೆ. ಅವರು ಕೊಡುವ ವರದಿಗಳ ಮೇಲೆ ರಾಹುಲ್ ನಿರ್ಧಾರ ಮಾಡಬೇಕಿದೆ. ಇಂಥ ನಾಯಕರಿಗೇ ಕರ್ನಾಟಕದ ಹೊಣೆ ವಹಿಸಲಾಗಿದೆ. ಅವರು ಬೆಂಗಳೂರಿಗೆ ಬಂದು ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸುವ ಕಸರತ್ತು ನಡೆಸಿದ ಮೇಲೆಯೇ ರಾಜಕಾರಣ ಹಳಸಿದ್ದು. ಅಲ್ಲಿವರೆಗೂ ಎಲ್ಲವೂ ಸರಿಯಿತ್ತು. ಪಾಪ ರಾಹುಲ್‌ಗೆ ಇದು ಅರ್ಥವಾಗಲಿಲ್ಲ. ರಾಜಕಾರಣದ ಒಳಸುಳಿಗಳು ಅವರಿಗೆ ಮನವರಿಕೆ ಆಗುವ ತನಕ ಕಾಂಗ್ರೆಸ್ ಚೇತರಿಸಿಕೊಳ್ಳುವುದು ಕಷ್ಟ.

ವಾರ್ತಾ ಭಾರತಿ 6 Dec 2025 9:11 am

ಡಿಸೆಂಬರ್ 6ರಂದು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ

Petrol, Diesel Price: ಪೆಟ್ರೋಲ್, ಡೀಸೆಲ್‌ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 6) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ

ಒನ್ ಇ೦ಡಿಯ 6 Dec 2025 8:58 am

ನಿತೀಶ್ ಪುತ್ರ ರಾಜಕೀಯದಲ್ಲಿರಬೇಕು ಎಂಬ ಬಯಕೆ ಹಲವರದ್ದು: ಬಿಹಾರ ರಾಜಕೀಯವನ್ನು ಕಲಕಿದ ಜೆಡಿಯು ನಾಯಕನ ಹೇಳಿಕೆ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎನ್ನುವುದು ಪ್ರತಿಯೊಬ್ಬರ ಬಯಕೆ ಎಂದು ಹೇಳುವ ಮೂಲಕ ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ, ರಾಜ್ಯ ರಾಜಕೀಯವನ್ನು ಮತ್ತೆ ಕೆದಕಿದ್ದಾರೆ. ಆದರೆ ಅಂತಿಮ ನಿರ್ಧಾರ ಸಿಎಂ ಪುತ್ರ, 49 ವರ್ಷದ ಎಂಜಿನಿಯರ್ಗೆ ಬಿಟ್ಟದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಮತ್ತು ಬೆಂಬಲಿಗರು ನಿಶಾಂತ್ ಬರಬೇಕು ಮತ್ತು ಪಕ್ಷದ ಕೆಲಸ ಮುಂದುವರಿಸಬೇಕು ಎಂದು ಬಯಸಿದ್ದಾರೆ ಎಂದು ನಿಶಾಂತ್ ಉಪಸ್ಥಿತಿಯಲ್ಲೇ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಝಾ ಹೇಳಿದರು. ಆದರೆ ಪಕ್ಷದ ಕೆಲಸವನ್ನು ಯಾವಾಗ ಆರಂಭಿಸಬೇಕು ಎಂಬ ನಿರ್ಧಾರ ಕೈಗೊಳ್ಳುವುದು ನಿಶಾಂತ್ ಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು. ದೇಶದಲ್ಲಿ ಅತಿಹೆಚ್ಚು ಅವಧಿಗೆ ಮುಖ್ಯಮಂತ್ರಿ ಪದವಿ ಅಲಂಕರಿಸಿದವರ ಪೈಕಿ ಒಬ್ಬರಾದ ನಿತೀಶ್, ತಮ್ಮ ವಯಸ್ಸು ಮತ್ತು ಆರೋಗ್ಯದ ಬಗೆಗಿನ ಆತಂಕದ ನಡುವೆಯೂ ತಮ್ಮ ರಾಜಕೀಯ ಉತ್ತರಾಧಿಕಾರಿಯ ಬಗ್ಗೆ ಮೌನ ವಹಿಸಿದ್ದಾರೆ. ಕುಟುಂಬ ರಾಜಕೀಯವನ್ನು ಟೀಕಿಸುತ್ತಾ ಬಂದಿರುವ ನಿತೀಶ್, ತಮ್ಮ ಬದ್ಧ ಎದುರಾಳಿ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರನ್ನು ಈ ವಿಚಾರದಲ್ಲಿ ಬೆಟ್ಟು ಮಾಡಿದ್ದಾರೆ. ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಅದ್ಭುತ ಪ್ರದರ್ಶನ ನೀಡಿದ್ದು, 2020ರಲ್ಲಿ ಇದ್ದ 43 ಸ್ಥಾನಗಳನ್ನು ದುಪ್ಪಟ್ಟು ಪಡಿಸಿಕೊಂಡಿದೆ. 243 ಸದಸ್ಯಬಲದ ವಿಧಾನಸಭೆಯಲ್ಲಿ ಜೆಡಿಯು 85 ಸ್ಥಾನ ಗೆದ್ದಿತ್ತು.

ವಾರ್ತಾ ಭಾರತಿ 6 Dec 2025 8:54 am

ಟ್ರಂಪ್‌ ಗೆ FIFA ಶಾಂತಿ ಪ್ರಶಸ್ತಿ: ಕೊನೆಗೂ ಈಡೇರಿತು ಟ್ರಂಪ್‌ ಬಹುಕಾಲದ ಆಸೆ, ಆದ್ರೆ ಇದು ನೊಬೆಲ್‌ ಪ್ರಶಸ್ತಿ ಅಲ್ಲ...

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಫಿಫಾ ಶಾಂತಿ ಪ್ರಶಸ್ತಿ ಲಭಿಸಿದೆ. ಗಾಜಾದಲ್ಲಿ ಕದನ ವಿರಾಮಕ್ಕೆ ಶ್ಲಾಘಿಸಿ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಈ ಪ್ರಶಸ್ತಿ ನೀಡಿದ್ದಾರೆ. ಟ್ರಂಪ್‌ ಅವರು ನೊಬೆಲ್‌ ಪ್ರಶಸ್ತಿಗೂ ಅರ್ಹರಾಗಿದ್ದರು ಎಂದು ಇನ್ಫಾಂಟಿನೊ ಹೇಳಿದ್ದಾರೆ. ಇದು ಫಿಫಾ ನೀಡಿದ ಮೊದಲ ಶಾಂತಿ ಪ್ರಶಸ್ತಿಯಾಗಿದೆ. ಟ್ರಂಪ್‌ ಪ್ರಶಸ್ತಿ ಪಡೆದ ನಂತರ ಇದು ತಮ್ಮ ಜೀವನದ ಶ್ರೇಷ್ಠ ಗೌರವಗಳಲ್ಲಿ ಒಂದು ಎಂದಿದ್ದಾರೆ. ಆದರೆ ಇದೇ ವೇಳೆ ಮತ್ತೆ ಭಾರತ-ಪಾಕ್‌ ಶಾಂತಿಗೆ ಮತ್ತೆ ಕ್ರೇಡಿಟ್‌ ಪಡೆದುಕೊಂಡಿದ್ದಾರೆ.

ವಿಜಯ ಕರ್ನಾಟಕ 6 Dec 2025 8:44 am

ವ್ಲಾಡಿಮಿರ್‌ ಪುಟಿನ್‌ ಸವಿದ ಭಾರತೀಯ ಭೋಜನದ ಮೆನು; ಕ್ರೆಮ್ಲಿನ್‌ ತಲುಪಿದ ದಕ್ಷಿಣ ಭಾರತದ ರಸಂ ಘಮ

ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ, ನಿನ್ನೆ (ಡಿ. 5-ಶುಕ್ರವಾರ) ರಾತ್ರಿ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಭವ್ಯ ಭೋಜನಕೂಟ ಹಲವು ದಿನಗಳವರೆಗೆ ನೆನಪಿರಲಿದೆ. ಈ ಭೋಜನಕೂಟದಲ್ಲಿ ಭಾರತದ ವಿವಿಧ ರಾಜ್ಯಗಳ ವಿಶೇಷ ತಿನಿಸುಗಳನ್ನು ಪುಟಿನ್‌ ಅವರಿಗೆ ಉಣಬಡಿಸಲಾಗಿದ್ದು, ಪ್ರಮುಖವಾಗಿ ದಕ್ಷಿಣ ಭಾರತದ ಮಸಾಲೆಭರಿತ ರಸಂ ರುಚಿಗೆ ರಷ್ಯಾ ಅಧ್ಯಕ್ಷರು ಮನಸೋತಿದ್ದಾರೆ. ಪುಟಿನ್‌ ಮತ್ತು ಪ್ರಧಾನಿ ಮೋದಿ ಭಾಗವಹಿಸದ್ದ ಭೀಜನಕೂಟದ ಮೆನುವಿನ ಸಂಪೂರ್ಣ ವಿವರ ಇಲ್ಲಿದೆ.

ವಿಜಯ ಕರ್ನಾಟಕ 6 Dec 2025 8:32 am

Putin Visit to India : ಪ್ರಧಾನಿ ಮೋದಿಗೆ ಕುಮಾರಸ್ವಾಮಿ ವಿಶೇಷ ಅಭಿನಂದನೆ - ಇಲ್ಲಿದೆ ಕಾರಣ

Russia President India Visit : ಜಾಗತಿಕವಾಗಿ ಎಲ್ಲರ ಕಣ್ಣು ನೆಟ್ಟಿದ್ದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಭಾರತ ಭೇಟಿ ಮುಕ್ತಾಯಗೊಂಡಿದೆ. ಭೇಟಿಯ ವೇಳೆ, ಪ್ರಧಾನಿ ಮೋದಿ, ಉಡುಗೊರೆಯಾಗಿ ಭಗವದ್ಗೀತೆಯನ್ನು ನೀಡಿದ್ದಕ್ಕೆ ಕುಮಾರಸ್ವಾಮಿ, ಪ್ರಧಾನಿಯನ್ನು ಅಭಿನಂದಿಸಿದ್ದಾರೆ. ಗೀತೆಯನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸುವಂತೆ ಶಿಕ್ಷಣ ಸಚಿವರಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ವಿಜಯ ಕರ್ನಾಟಕ 6 Dec 2025 8:31 am

America| ಡೊನಾಲ್ಡ್ ಟ್ರಂಪ್ ಗೆ ಫಿಫಾ ಶಾಂತಿ ಪ್ರಶಸ್ತಿ ಪ್ರದಾನ

ವಾಷಿಂಗ್ಟನ್: ಫಿಫಾ ಅಧ್ಯಕ್ಷ ಜೈನಿ ಇನ್ಫಾಂಟಿನೊ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಫಿಫಾ ಶಾಂತಿ ಪ್ರಶಸ್ತಿಯನ್ನು ಪ್ರದಾನಿಸುವ ಮೂಲಕ ಫಿಫಾ ವಿಶ್ವಕಪ್-2026 ರ ಪಂದ್ಯಗಳ ಡ್ರಾ ಸಮಾರಂಭ ಅನಿರೀಕ್ಷಿತ ರಾಜಕೀಯ ಲೇಪ ಪಡೆಯಿತು. ವಾಷಿಂಗ್ಟನ್ ಡಿಸಿಯ ಕೆನಡಿ ಸೆಂಟರ್ ನಲ್ಲಿ ಈ ಸಮಾರಂಭ ನಡೆಯಿತು. ಇದು ಫಿಫಾದಿಂದ ನೀಡುವ ಮೊಟ್ಟಮೊದಲ ಶಾಂತಿ ಪ್ರಶಸ್ತಿಯಾಗಿದ್ದು, ಶಾಂತಿಗಾಗಿ ವಿಶೇಷ ಮತ್ತು ಅದ್ಭುತ ಕ್ರಮಗಳನ್ನು ಕೈಗೊಂಡ ವ್ಯಕ್ತಿಗಳನ್ನು ಗುರುತಿಸುವ ಮತ್ತು ವಿಶ್ವದ ಜನರನ್ನ ಒಗ್ಗೂಡಿಸುವ ಈ ಗೌರವವನ್ನು ಈ ವರ್ಷದಿಂದ ಆರಂಭಿಸಲಾಗುತ್ತಿದೆ ಎಂದು ಫಿಫಾ ಪ್ರಕಟಿಸಿದೆ. ಜಾಗತಿಕವಾಗಿ ಪ್ರಸಾರ ಮಾಡಲಾದ ಮತ್ತು ಮೊದಲೇ ಚಿತ್ರೀಕರಿಸಿದ ವಿಡಿಯೊ ಮಾಂಟೇಜ್ ನ ಭಾಗವಾಗಿಈ ಪ್ರಶಸ್ತಿ ಘೋಷಿಸಲಾಯಿತು. ವಿಡಿಯೊ ಮಾಂಟೇಜ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನೂ ಬಿಂಬಿಸಲಾಗಿದ್ದು, ಇದರ ಜತೆಗೆ ರಾಜತಾಂತ್ರಿಕತೆಯನ್ನು ಚರ್ಚಿಸುತ್ತಿರುವ ಟ್ರಂಪ್ ಅವರ ವಿಡಿಯೊ ತುಣುಕು ಕೂಡಾ ಸೇರಿದೆ. ಶಾಂತಿ ಒಪ್ಪಂದದ ಮಧ್ಯಸ್ಥಿಕೆದಾರ ಮತ್ತು ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಿದ ಮುಖಂಡ ಎಂದು ಟ್ರಂಪ್ ಅವರನ್ನು ನಿರೂಪಕರು ಬಣ್ಣಿಸಿದರು. ಟ್ರಂಪ್ ಆಡಳಿತ ವಿಶ್ವಾದ್ಯಂತ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಪ್ರಯತ್ನ ಮಾಡಿದೆ ಎಂದು ವ್ಯಾಖ್ಯಾನಿಸಲಾಯಿತು. ಇದು ನಿಜಕ್ಕೂ ನನ್ನ ಜೀವನದಲ್ಲಿ ದೊಡ್ಡ ಗೌರವ. ಪ್ರಶಸ್ತಿಗಿಂತ ಹೆಚ್ಚಾಗಿ, ಲಕ್ಷಾಂತರ ಜನರನ್ನು ಹಾಗೂ ಲಕ್ಷಾಂತರ ಜನರ ಬದುಕನ್ನು ನಾವು ರಕ್ಷಿಸಿದ್ದೇವೆ. ಉದಾಹರಣೆಗೆ ಕಾಂಗೊ, ಇಲ್ಲಿ ಒಂದು ಕೋಟಿಗಿಂತಲೂ ಹೆಚ್ಚು ಜನ ಹತ್ಯೆಗೀಡಾಗಿದ್ದಾರೆ. ಮತ್ತೆ ಒಂದು ಕೋಟಿ ಮಂದಿಯ ಜೀವಹಾನಿ ಸದ್ಯದಲ್ಲೇ ಆಗುತ್ತಿತ್ತು. ನಾವು ಮಧ್ಯಸ್ಥಿಕೆ ವಹಿಸಿ ಇದನ್ನು ತಪ್ಪಿಸಿದ ಬಗ್ಗೆ ಹೆಮ್ಮೆ ಇದೆ. ಭಾರತ- ಪಾಕಿಸ್ತಾನ ಕೂಡಾ; ಇದರ ಜತೆಗೆ ಹಲವು ಸಂಘರ್ಷಗಳನ್ನು ಕೊನೆಗೊಳಿಸುವುದು ಸಾಧ್ಯವಾಯಿತು. ಕೆಲವೊಂದು ಪ್ರಕರಣಗಳು ಆರಂಭವಾಗುವ ಮುನ್ನವೇ ಕೊನೆಗೊಳಿಸಲಾಯಿತು ಎಂದು ಪ್ರಶಸ್ತಿ ಸ್ವೀಕರಿಸಿದ ಟ್ರಂಪ್ ಹೇಳಿದರು.

ವಾರ್ತಾ ಭಾರತಿ 6 Dec 2025 7:45 am

Car Accident: ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಬೆಂಕಿ ಹೊತ್ತುಹೊರಿದು ಸ್ಥಳದಲ್ಲೇ ಸಾವನ್ನಪ್ಪಿದ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್

ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಅವರು ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲೇ ಸಜೀವ ದಹನವಾಗಿದ್ದಾರೆ. ಕುಟುಂಬಸ್ಥರನ್ನು ಭೇಟಿ ಮಾಡಲು ಹುಬ್ಬಳ್ಳಿ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ರಕ್ಷಿಸಲು ಯತ್ನಿಸಿದರೂ ಬೆಂಕಿ ತೀವ್ರಗೊಂಡಿದ್ದರಿಂದ ಸಾಧ್ಯವಾಗಿಲ್ಲ.

ವಿಜಯ ಕರ್ನಾಟಕ 6 Dec 2025 7:38 am

ವಕ್ಫ್ ನೋಂದಣಿ ಇಂದು ಅಂತ್ಯ; ವಿಸ್ತರಣೆ ಇಲ್ಲ:ಕಿರಣ್ ರಿಜಿಜು

ಹೊಸದಿಲ್ಲಿ: ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಆರಂಭಿಸಿದ ಉಮೀದ್ ಸೆಂಟ್ರಲ್ ಪೋರ್ಟಲ್ ನಲ್ಲಿ ಇದುವರೆಗೆ 4.6 ಲಕ್ಷ ವಕ್ಫ್ ಆಸ್ತಿಗಳ ವಿವರಗಳನ್ನು ಅಪ್ಲೋಡ್ ಮಾಡಲಾಗಿದೆ. ವಕ್ಫ್ (ತಿದ್ದಪಡಿ) ಕಾಯ್ದೆ-2025ರಡಿ ನೀಡಲಾದ ಆರು ತಿಂಗಳ ಗಡುವು ಶನಿವಾರ ಮುಕ್ತಾಯಗೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಯಾವುದೇ ಕಾರಣಕ್ಕೆ ಈ ಗಡುವು ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇದುವರೆಗೆ ಅಪ್ಲೋಡ್ ಮಾಡದಿದ್ದಲ್ಲಿ ಅಂಥವರು ವಕ್ಫ್ ನ್ಯಾಯಮಂಡಳಿಯನ್ನು ಸಂಪರ್ಕಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಆದಾಗ್ಯೂ ಇದುವರೆಗೆ ನೋಂದಾಯಿಸಲು ಸಾಧ್ಯವಾಗದೇ ಇದ್ದಲ್ಲಿ ಅಂಥವರಿಗೆ ಮಾನವೀಯ ಮತ್ತು ಸೌಲಭ್ಯಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯ ಹೇಳಿದೆ. ಮುಂದಿನ ಮೂರು ತಿಂಗಳವರೆಗೆ ಯಾವುದೇ ದಂಡ ಅಥವಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂಬ ಭರವಸೆ ನೀಡಿದೆ. ಈ ಮೂಲಕ ಸಕಾರಣಗಳಿಂದಾಗಿ ನೋಂದಣಿಗೆ ಅಪ್ಲೋಡ್ ಮಾಡಲು ಸಾಧ್ಯವಾಗದವರಿಗೆ ನ್ಯಾಯಮಂಡಳಿಯ ಮೊರೆ ಹೋಗುವ ಅವಕಾಶ ನೀಡಲಾಗುತ್ತಿದೆ ಎಂದು ವಿವರಿಸಿದೆ. ಕಾನೂನಿನ ಪ್ರಕಾರ, ಗಡುವಿನ ಒಳಗಾಗಿ ಸಲ್ಲಿಕೆ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ತೃಪ್ತಿದಾಯಕ ಎಂದು ನ್ಯಾಯಾಧಿಕರಣಕ್ಕೆ ಅನಿಸದಲ್ಲಿ ಮಾತ್ರ ಮುಂದಿನ ಆರು ತಿಂಗಳವರೆಗೆ ವಿಸ್ತರಣೆಗೆ ಅವಕಾಶವಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿಕೆಯನ್ನು ಕೂಡಾ ಸಚಿವಾಲಯ ಬಿಡುಗಡೆ ಮಾಡಿದೆ. ಕಾಯ್ದೆಯಡಿ ನೀಡಿರುವ ಆರು ತಿಂಗಳ ಕಡ್ಡಾಯ ಗಡುವು ಮುಕ್ತಾಯವಾಗಿದೆ. ಕಾನೂನಿನ ನಿಬಂಧನೆಗಳ ಅನುಸಾರ ಮತ್ತು ಸುಪ್ರೀಂಕೋರ್ಟ್ನ ಸ್ಪಷ್ಟ ನಿರ್ದೇಶನದ ಕಾರಣದಿಂದ ಇದನ್ನು ವಿಸ್ತರಿಸಲಾಗದು ಎಂದು ರಿಜಿಜು ಹೇಳಿದ್ದಾರೆ.

ವಾರ್ತಾ ಭಾರತಿ 6 Dec 2025 7:37 am

ಮಸ್ಕತ್ ‌3ನೇ ವಿಶ್ವ ಕನ್ನಡ ಹಬ್ಬ; ನೇರಂಬಳ್ಳಿ ಸುರೇಶ್ ರಾವ್ ಅವರಿಗೆ ವಿಶ್ವ ಮಾನ್ಯ ಪ್ರಶಸ್ತಿ ಪ್ರದಾನ

ಸಪ್ತ ಸಾಗರದಾಚೆ ನೆಲೆಸಿರುವ ಕನ್ನಡಿಗರ ಕನ್ನಡತನ ಎಂದಿಗೂ ಮರೆಯಾಗದು ಎಂಬುದಕ್ಕೆ, ಓಮಾನ್‌ ದೇಶದ ಮಸ್ಕತ್‌ನಲ್ಲಿ ಕನ್ನಡ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಕನ್ನಡ ಹಬ್ಬ ಸಾಕ್ಷಿ ಒದಗಿಸಿದೆ. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಕನ್ನಡಕ್ಕಾಗಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ ಮತ್ತು ಸದ್ಯ ಕುವೈತ್‌ನಲ್ಲಿ ನೆಲೆಸಿರುವ ನೇರಂಬಳ್ಳಿ ಸುರೇಶ್ ರಾವ್ ಅವರಿಗೆ ವಿಶ್ವ ಮಾನ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ಈ ಸಮಾರಂಭದ ವಿಶೇಷತೆಗಳೇನು>ಯಾರೆಲ್ಲಾ ಗಣ್ಯರು ಭಾಗವಹಿಸಿದ್ದರು? ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 6 Dec 2025 7:32 am

ಭಾರತದ ವೈಮಾನಿಕ ಕ್ಷೇತ್ರದಲ್ಲಿ ತುರ್ತುಪರಿಸ್ಥಿತಿ!

ಕಳೆದ ಜೂನ್ ತಿಂಗಳಲ್ಲಿ ಏರ್‌ಇಂಡಿಯಾ ವಿಮಾನ ಪತನ ವಿಶ್ವಾದ್ಯಂತ ಸುದ್ದಿಯಾಯಿತು. ಈ ಭಾರೀ ದುರಂತ ಸಂಭವಿಸಿದ ಬೆನ್ನಿಗೇ ಕೇಂದ್ರ ಸರಕಾರ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನ ನಡೆಸಿತು. ‘‘ಇಂತಹ ಅಪಘಾತಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’’ ಎಂಬ ಹೇಳಿಕೆಯನ್ನು ಗೃಹ ಸಚಿವರು ನೀಡಿದರು. ಏರ್ ಇಂಡಿಯಾದ ಬೇಜವ್ದಾರಿಯ ಬಗ್ಗೆ ತನಿಖೆ ನಡೆಸಬೇಕಾದ ಸರಕಾರವೇ ಅದಕ್ಕೆ ಕ್ಲೀನ್ ಚಿಟ್ ನೀಡಿತು. ದೋಷಪೂರಿತ ಇಂಜಿನ್‌ಗಳು ಭಾರತದ ವಿಮಾನ ಉದ್ಯಮಕ್ಕೆ ಮಾಡುತ್ತಿರುವ ನಷ್ಟವೂ ಈ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗಿದ್ದವು. ಆದರೆ ಈ ದುರಂತಕ್ಕೆ ಸಂಬಂಧಿಸಿ ಸರಕಾರದ ಯಾರೊಬ್ಬರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ. ಇದೀಗ ಭಾರತ ವಿಮಾನ ಉದ್ಯಮ ಮತ್ತೆ ಸುದ್ದಿಯಲ್ಲಿದೆ. ಕಳೆದೆರಡು ದಿನಗಳಿಂದ ವಿಮಾನ ಯಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಅಧ್ವಾನಗಳು ಯಾವುದೇ ಭೀಕರ ಅವಘಡಕ್ಕಿಂತ ಕಡಿಮೆಯಿಲ್ಲ. ದೇಶದ ವಾಯುಯಾನ ಮಾರುಕಟ್ಟೆಯಲ್ಲಿ ಶೇ. 60ಕ್ಕೂ ಅಧಿಕ ಪಾಲನ್ನು ಹೊಂದಿರುವ ಇಂಡಿಗೊ ಅಕ್ಷರಶಃ ರೆಕ್ಕೆ ಹರಿದು ನೆಲದಲ್ಲಿ ಒದ್ದಾಡುತ್ತಿದೆ. ಸಾವಿರಾರು ಪ್ರಯಾಣಿಕರು ತಮ್ಮ ಗುರಿ ತರುಪಲಾರದೆ ವಿಮಾನ ಯಾನ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ದೇಶದ ಔದ್ಯಮಿಕ ವಲಯವೇ ಹಾಹಾಕಾರದಲ್ಲಿರುವ ಹೊತ್ತಿಗೆ, ಇತ್ತ ನಮ್ಮ ಪ್ರಧಾನಿಯವರು ರಶ್ಯ ಅಧ್ಯಕ್ಷ ಪುಟಿನ್ ಜೊತೆಗೆ ಚಹಾಕೂಟ ನಡೆಸುತ್ತಿದ್ದಾರೆ. ಪುಟಿನ್‌ಗೆ ‘ಭಗವದ್ಗೀತೆ’ ಓದುವ ಸಲಹೆ ನೀಡುತ್ತಿದ್ದಾರೆ. ಈ ಸಂಕಟ ಕಾಲದಲ್ಲಿ ದೇಶದ ಜನರ ಗೊಂದಲವನ್ನು ನಿವಾರಿಸುವ ತನ್ನ ಹೊಣೆಗಾರಿಕೆಯಿಂದ ಕೇಂದ್ರ ಸರಕಾರ ಸಂಪೂರ್ಣ ನುಣುಚಿಕೊಂಡಿದೆ. ಭಾರತದ ವಾಯುಯಾನ ಕ್ಷೇತ್ರದಲ್ಲಿ ಇಂಡಿಗೊ ಅತ್ಯಧಿಕ ಪಾಲನ್ನು ಹೊಂದಿದ್ದರೆ ಬಳಿಕ ಏರ್‌ಇಂಡಿಯಾ ಹೊಂದಿದೆ. ಒಂದು ರೀತಿಯಲ್ಲಿ ಭಾರತೀಯ ವಿಮಾನ ಯಾನ ಕ್ಷೇತ್ರದಲ್ಲಿ ಈ ಸಂಸ್ಥೆಗಳು ಏಕಸ್ವಾಮ್ಯತೆಯನ್ನು ಸಾಧಿಸಿವೆ. ಇಂಡಿಗೊ ಪ್ರತಿದಿನ 2,200ಕ್ಕೂ ಅಧಿಕ ದೇಶೀಯ ಮತ್ತು ಅಂತರ್‌ರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುತ್ತದೆ. ಕಡಿಮೆ ವೆಚ್ಚದಲ್ಲಿ ಸೇವೆಗಳನ್ನು ನೀಡುತ್ತದೆ ಎನ್ನುವ ಹೆಗ್ಗಳಿಕೆಯೂ ಅದಕ್ಕಿದೆ. ಆದರೆ ಏಕಾಏಕಿ ಸಿಬ್ಬಂದಿ ಸಮಸ್ಯೆಯನ್ನು ಸೃಷ್ಟಿಸಿಕೊಂಡು ಇಂಡಿಗೊ ಕೈ ಚೆಲ್ಲಿ ಕೂತಿದೆ. ಈ ವಿಮಾನಗಳನ್ನೇ ನಂಬಿ ಕೂತ ಸಾವಿರಾರು ಜನರು ಅತಂತ್ರರಾಗಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಇಂಡಿಗೊ 1,000ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆಯನ್ನು ರದ್ದುಪಡಿಸಿದೆ. ಇದಕ್ಕೆ ಸಿಬ್ಬಂದಿಯ ಕೊರತೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಮುಂದೊಡ್ಡಿದೆ. ಇದು ಬಿಕ್ಕಟ್ಟು ಕೇವಲ ಒಂದೆರಡು ದಿನಗಳಿಗೆ ಸೀಮಿತವಾದುದಲ್ಲ. ನಾಳೆಯೂ ಇಷ್ಟೇ ವಿಮಾನಗಳು ರದ್ದಾಗಲಿವೆ ಎಂದು ಸಂಸ್ಥೆ ಹೇಳಿಕೆ ನೀಡಿದ್ದು, ಡಿಸೆಂಬರ್ 15ರವರೆಗೂ ಪರಿಸ್ಥಿತಿ ಹೀಗೆಯೇ ಮುಂದುವರಿಯಬಹುದು ಎಂದಿದೆ. ಇದು ನಿಸ್ಸಂಶಯವಾಗಿ ಭಾರತದ ವೈಮಾನಿಕ ಕ್ಷೇತ್ರದ ತುರ್ತು ಪರಿಸ್ಥಿತಿಯ ದಿನಗಳಾಗಿವೆ. ಈ ತುರ್ತುಪರಿಸ್ಥಿತಿಯು ಭಾರತದ ಎಲ್ಲಾ ಕ್ಷೇತ್ರಗಳ ಮೇಲೆ ಅತ್ಯಂತ ಹೀನಾಯ ಪರಿಣಾಮಗಳನ್ನು ಬೀರಿದೆ. ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಉದ್ಯಮಿಗಳಿಗೆ ಅತ್ಯಂತ ಕೆಟ್ಟ ಸಂದೇಶವನ್ನು ಈ ಮೂಲಕ ವೈಮಾನಿಕ ಉದ್ಯಮವು ರವಾನಿಸಿದೆ. ಮೋದಿ ಪ್ರಧಾನಿಯಾದರೆ ಭಾರತದ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳಾಗಲಿವೆ ಎನ್ನುವ ಭರವಸೆ ತಿರುವು ಮುರುವಾಗಿದೆ. ಬದಲಿಗೆ ವಿಮಾನ ನಿಲ್ದಾಣಗಳೇ ರೈಲು ನಿಲ್ದಾಣಗಳಿಗಿಂತ ಕಳಪೆ ಮಟ್ಟಕ್ತೆ ತಲುಪಿದೆ. ಇದು ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಭಾರೀ ಧಕ್ಕೆಯನ್ನು ತಂದಿದೆ. ಇದಕ್ಕೆ ಹೊಣೆ ಯಾರು? ಇಂಡಿಗೊ ಇದರ ಹೊಣೆಯನ್ನು ವಿಮಾನ ಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ತಲೆಗೆ ಕಟ್ಟಲು ನೋಡುತ್ತಿದೆ. ಡಿಜಿಸಿಎಯು ಇತ್ತೀಚೆಗೆ ಜಾರಿಗೆ ತಂದಿರುವ ನಿಯಮಗಳ ಕಾರಣದಿಂದ ಸಿಬ್ಬಂದಿ ಕೊರತೆ ಎದುರಾಗಿರುವುದೇ ಇಂತಹದೊಂದು ಬಿಕ್ಕಟ್ಟು ನಿರ್ಮಾಣವಾಗಲು ಕಾರಣವಾಗಿದೆ ಎಂದು ಇಂಡಿಗೊ ಹೇಳಿಕೊಳ್ಳುತ್ತಿದೆ. ಜಾರಿಗೆ ತಂದಿರುವ ರೋಸ್ಟರಿಂಗ್ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇಂಡಿಗೊ ವಿಫಲವಾಗಿರುವುದೇ ಈ ಎಲ್ಲ ಅನಾಹುತಗಳಿಗೆ ಕಾರಣ ಎನ್ನುವ ಇನ್ನೊಂದು ಆರೋಪವೂ ಇದೆ. ಇಂತಹದೊಂದು ‘ತುರ್ತುಪರಿಸ್ಥಿತಿ’ಯನ್ನು ಇಂಡಿಗೊ ಸಂಸ್ಥೆಯೇ ನಿರ್ಮಾಣ ಮಾಡಿ ಅದು ಡಿಜಿಸಿಎಯನ್ನು ‘ಬ್ಲ್ಯಾಕ್‌ಮೇಲ್’ ಮಾಡುತ್ತಿದೆಯೆ? ಎಂದೂ ಕೆಲವರು ಅನುಮಾನಿಸುತ್ತಿದ್ದಾರೆ. ಭಾರತದ ವಿಮಾನ ಕಂಪೆನಿಗಳು ಪೈಲಟ್‌ಗಳ ಮೇಲೆ ಹೆಚ್ಚಿನ ಒತ್ತಡಗಳನ್ನು ಹಾಕುತ್ತಿವೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಪೈಲಟ್‌ಗಳ ಆರೋಗ್ಯ ಮತ್ತು ವಿಮಾನದ ಸುರಕ್ಷತೆಯ ದೃಷ್ಟಿಯಿದ ಡಿಜಿಸಿಎ ಹೊಸ ನಿಯಮಗಳನ್ನು ಜಾರಿಗೊಳಿಸಿತ್ತು. ನಿಯಮಗಳ ಪ್ರಕಾರ ಪೈಲಟ್‌ಗಳ ಕರ್ತವ್ಯದ ಅವಧಿಯನ್ನು ಇಳಿಸಲಾಗಿದ್ದು, ವಿಶ್ರಾಂತಿಯ ಸಮಯವನ್ನು ಹೆಚ್ಚಿಸಲಾಗಿತ್ತು. ನಿಯಮ ಪ್ರಕಾರ ಯಾವುದೇ ವಿಮಾನ ಸಂಸ್ಥೆಯು ಸಿಬ್ಬಂದಿಗೆ ವಿಧಿಸಿದ ಮಿತಿಗಳಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿಸಬಾರದು. ಈ ನಿಯಮ ಜಾರಿಗೆ ತರುವುದಕ್ಕೆ ಸಾಕಷ್ಟು ಕಾಲಾವಧಿಯನ್ನು ಡಿಜಿಸಿಎ ನೀಡಿತ್ತು. ಹೊಸ ನಿಯಮದ ಪರಿಣಾಮವನ್ನು ಅತಿ ತೀವ್ರವಾಗಿ ಅನುಭವಿಸಿರುವುದು ಇಂಡಿಗೊ. ಯಾಕೆಂದರೆ ಈ ಕ್ಷೇತ್ರದಲ್ಲಿ ಶೇ. 67ರಷ್ಟು ಪಾಲನ್ನು ಇಂಡಿಗೊ ಹೊಂದಿದೆ. ಸಿಬ್ಬಂದಿಯ ಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸುವುದು ಅದಕ್ಕೆ ಅನಿವಾರ್ಯವಾಗಿತ್ತು. ಆದರೆ ಡಿಜಿಸಿಎ ಆದೇಶವನ್ನು ಪಾಲಿಸಲು ಇಷ್ಟವಿಲ್ಲದ ಇಂಡಿಗೊ ಅದರ ವಿರುದ್ಧ ಪರೋಕ್ಷ ಮುಷ್ಕರಕ್ಕಿಳಿದ ಪರಿಣಾಮವಾಗಿಯೇ ಇಂತಹದೊಂದು ಬಿಕ್ಕಟ್ಟು ಎದುರಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ‘ನೀವು ನಿಯಮವನ್ನು ಕಠಿಣವಾಗಿಸಿದರೆ ನಾವು ವಿಮಾನವನ್ನೇ ಹಾರಿಸುವುದಿಲ್ಲ’ ಎನ್ನುವ ಎಚ್ಚರಿಕೆಯನ್ನು ನೀಡಿ, ವಿಮಾನ ನಿರ್ದೇಶನಾಲಯವು ತನ್ನ ನಿಯಮದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಅದು ಭಾಗಶಃ ಯಶಸ್ವಿಯಾಗಿದೆ. ಈಗಿನ ಬಿಕ್ಕಟ್ಟು ಯಾವ ಕಾರಣಕ್ಕೂ ಆಕಸ್ಮಿಕ ಅಲ್ಲ, ಕಂಪೆನಿಯೇ ಉದ್ದೇಶಪೂರ್ವಕ ಸೃಷ್ಟಿಸಿದ ಒಂದು ಮಹಾ ಮುಷ್ಕರ. ಭಾರತ ಸರಕಾರವನ್ನೇ ಸಂಸ್ಥೆ ಬ್ಲ್ಯಾಕ್‌ಮೇಲ್ ಮಾಡಿ ತನ್ನ ಉದ್ದೇಶ ಈಡೇರಿಸಿ ಕೊಳ್ಳಲು ಮುಂದಾಗಿದೆ ಎನ್ನುವ ವಿಶ್ಲೇಷಣೆ ಉದ್ಯಮವಲಯಗಳಲ್ಲಿ ಕೇಳಿ ಬರುತ್ತಿವೆ. ಭಾರತದ ಉದ್ಯಮ ಕ್ಷೇತ್ರದಲ್ಲಿ ಈ ‘ಮುಷ್ಕರ’ ತೀವ್ರ ಪರಿಣಾಮವನ್ನು ಬೀರಿದೆ. ತುರ್ತು ಕಾರಣಗಳಿಗಾಗಿ ಪ್ರಯಾಣ ಹೊರಟ ಜನಸಾಮಾನ್ಯರನ್ನು ಕಂಗೆಡಿಸಿದ್ದು ಪಕ್ಕಕ್ಕಿರಲಿ. ವೈಮಾನಿಕ ಕ್ಷೇತ್ರಗಳು ಆರ್ಥಿಕ ಸಂಬಂಧಗಳ ಸೇತುವೆಗಳಾಗಿವೆ. ಭಾರತ ವಿಮಾನಯಾನದ ಈ ದಯನೀಯ ಸ್ಥಿತಿಯು ಬಂಡವಾಳ ಹೂಡಿಕೆದಾರರನ್ನು ಹಿಂದಕ್ಕೆ ಹೆಜ್ಜೆ ಇಡುವಂತೆ ಮಾಡಿದೆ. ವಿಮಾನಯಾನ ಕ್ಷೇತ್ರದಲ್ಲಿ ಭಾರೀ ಸುಧಾರಣೆಗಳನ್ನು ಮಾಡಿದ್ದೇವೆ ಎಂದು ಹೇಳುತ್ತಾ ಬಂದಿರುವ ಪ್ರಧಾನಿ ಮೋದಿಯವರ ಮಾತುಗಳ ಅಸಲಿಯತ್ತು ಬಯಲಾಗಿದೆ. ವಿಮಾನಯಾನವೂ ಸೇರಿದಂತೆ ಭಾರತದ ಉದ್ಯಮಗಳು ಬೆರಳೆಣಿಕೆಯ ಕಾರ್ಪೊರೇಟ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಬಲಿಯಾದರೆ ಭಾರತದ ಸ್ಥಿತಿ ಏನಾಗಬಹುದು ಎನ್ನುವುದಕ್ಕೆ ಈ ವೈಮಾನಿಕ ಕ್ಷೇತ್ರದಲ್ಲಿ ಎದುರಾದ ತುರ್ತುಪರಿಸ್ಥಿತಿ ಒಂದು ಉದಾಹರಣೆಯಾಗಿದೆ.

ವಾರ್ತಾ ಭಾರತಿ 6 Dec 2025 7:13 am

IndiGo Crisis: ಉನ್ನತ ಮಟ್ಟದ ತನಿಖೆಗೆ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ; ಶೀಘ್ರ ಪರಿಹಾರದ ಭರವಸೆ

ದೇಶಾದ್ಯಂತ ಭುಗಿಲೆದ್ದಿರುವ ಇಂಡಿಗೋ ವಿಮಾನ ಹಾರಾಟ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಸರ್ಕಾರ ದೃಢ ಹೆಜ್ಜೆಯನ್ನಿರಿಸಿದೆ. ಇಂಡಿಗೋ ಬಿಕ್ಕಟ್ಟಿಗೆ ಕಾರಣಗಳನ್ನು ತಿಳಿದುಕೊಳ್ಳಲು, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ಅವರು ಉನ್ನತ ಮಟ್ಟದ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಈ ಬಿಕ್ಕಟ್ಟಿಗೆ ಮೂರು ದಿನಗಳ ಒಳಗಾಗಿ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ನೀಡಿದ್ದಾರೆ. ಇಂಡಿಗೋ ವಿಮಾನ ಸೇವೆ ರದ್ದು ಇನ್ನೂ ಮುಂದುವರೆದಿದ್ದು, ಈ ಬೆಳವಣಿಗೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 6 Dec 2025 6:46 am

Putin India Visit: ರಷ್ಯಾ ತೈಲಕ್ಕೆ ಅಡ್ಡಿ ಇಲ್ಲ, ಭಾರತದಲ್ಲಿ ಪೆಟ್ರೋಲ್ &ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ...

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿ ಇದೀಗ ಭಾರಿ ದೊಡ್ಡ ಬದಲಾವಣೆಗೆ ನಾಂದಿ ಹಾಡುವ ಸಾಧ್ಯತೆ ದಟ್ಟವಾಗಿದೆ. ಒಂದು ಕಡೆ ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ಇದೀಗ ದೊಡ್ಡ ಒಪ್ಪಂದ ಮಾಡಿಕೊಂಡಿವೆ. ಇದರ ಜೊತೆಗೆ ಆರ್ಥಿಕತೆ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುವ ಇಂಧನ ಪೂರೈಕೆ ವಿಚಾರದಲ್ಲಿ ಕೂಡ ರಷ್ಯಾ ಅಧ್ಯಕ್ಷ ಪುಟಿನ್ ಈಗ ಭಾರಿ

ಒನ್ ಇ೦ಡಿಯ 6 Dec 2025 6:35 am

ಭಾರತ-ರಷ್ಯಾ ಪರಮಾಣು ಸಹಕಾರ ಮತ್ತಷ್ಟು ಗಟ್ಟಿ; ಕುಡುಕುಳಂ ಸ್ಥಾವರ ಸಾಮರ್ಥ್ಯ ಹೆಚ್ಚಿಸುವ ವಾಗ್ದನ ಮಾಡಿದ ಪುಟಿನ್‌

ಎರಡು ದಿನಗಳ ಭಾರತ ಪಪ್ರವಾಸ ಕೈಗೊಂಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಭಾರತ ಮತ್ತು ರಷ್ಯಾ ನಡುವೆ ಏಕೆ ಅತ್ಯಂತ ಗಟ್ಟಿ ಗೆಳೆತನವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಭಾರತದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಭರವಸೆ ನೀಡಿರುವ ಪುಟಿನ್‌, ಅತ್ಯಂತ ಪ್ರಮುಖವಾಗಿ ಪರಮಾಣು ಸಹಕಜಾರ ವೃದ್ಧಿಯನ್ನು ಘೋಷಿಸಿದ್ದಾರೆ. ತಮಿಳುನಾಡಿನ ಕುಡುಕುಳಂನಲ್ಲಿರುವ ಭಾರತದ ಅತಿದೊಡ್ಡ ಪರಮಾಣು ಸ್ಥಾವರದ ಚಟುವಟಿಕೆಯಲ್ಲಿ, ರಷ್ಯಾ ಸಹಭಾಗಿತ್ವ ದೊರೆಯಲಿದ್ದು, ಇದು ಈ ವಿದ್ಯುತ್‌ ಸ್ಥಾವರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಇಲ್ಲಿದೆ ಮಾಹಿತಿ.

ವಿಜಯ ಕರ್ನಾಟಕ 6 Dec 2025 5:43 am

ಪೋಷಕರ ವಾರ್ಷಿಕ ಆದಾಯ ನಿಗದಿತ ಮಿತಿ ದಾಟಿದ್ದರೆ ಅಭ್ಯರ್ಥಿ ಮೀಸಲಾತಿ ಪತ್ರ ಪಡೆಯಲು ಅನರ್ಹ: ಹೈಕೋರ್ಟ್

ಬೆಂಗಳೂರು : ಪ್ರವರ್ಗ 2ಎ (ಹಿಂದುಳಿದ ವರ್ಗ) ಅಡಿ ಪೋಷಕರ ವಾರ್ಷಿಕ ಆದಾಯ ನಿಗದಿತ ಮಿತಿ ದಾಟಿದ್ದರೆ ಅಭ್ಯರ್ಥಿ ಕೆನೆ ಪದರಕ್ಕೆ ಸೇರುತ್ತಾರೆ. ಆದ್ದರಿಂದ, ಅವರು ಮೀಸಲಾತಿ ಪತ್ರ ಪಡೆಯಲು ಅನರ್ಹರಾಗುತ್ತಾರೆ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಹುದ್ದೆಗೆ ಪ್ರವರ್ಗ 2ಎ (ಕುರುಬ ಜಾತಿ) ಅಡಿ ಆಯ್ಕೆಯಾಗಿದ್ದ ರಾಘವೇಂದ್ರ ಚಂದ್ರಣ್ಣನವರ್ ಎಂಬುವರಿಗೆ ಮೀಸಲಾತಿಗೆ ಅನ್ವಯಿಸುವ ಜಾತಿ ಸಿಂಧುತ್ವ ಪ್ರಮಾಣಪತ್ರ ವಿತರಿಸುವಂತೆ ಏಕಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸರಕಾರ ಮೇಲ್ಮನವಿ ಸಲ್ಲಿಸಿತ್ತು. ಮತ್ತೊಂದೆಡೆ, ಏಕಸದಸ್ಯ ಪೀಠದ ಆದೇಶ ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ‌ನಿಂದನೆ ಆರೋಪದಡಿ ಕ್ರಮ ಜರುಗಿಸುವಂತೆ ಕೋರಿ ರಾಘವೇಂದ್ರ ಅವರು ನ್ಯಾಯಾಂಗ ‌ನಿಂದನೆ ಅರ್ಜಿ ಸಲ್ಲಿಸಿದ್ದರು. ಮೇಲ್ಮನವಿ ಹಾಗೂ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ. ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಅಭ್ಯರ್ಥಿಯ ಪೋಷಕರ ವೇತನ ಸೇರಿ ಎಲ್ಲ ಮೂಲದ ಆದಾಯವನ್ನು ಪರಿಗಣಿಸಬೇಕು. ಒಂದು ವೇಳೆ ಆದಾಯವು ನಿಗದಿತ ಮಿತಿಯನ್ನು ದಾಟಿದರೆ, ಆದಾಯ ತೆರಿಗೆ ಪಾವತಿದಾರನಾದರೆ ಆಗ ಕೆನೆ ಪದರ ನಿಯಮ ಅನ್ವಯ ಆಗಲಿದ್ದು, ಅಭ್ಯರ್ಥಿಯು ಪ್ರವರ್ಗ 2ಎ ಅಡಿ ಮೀಸಲಾತಿ ಪಡೆಯಲು ಅವಕಾಶವಿಲ್ಲ ಎಂದು ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲ್ಮನವಿ ಮಾನ್ಯ ಮಾಡಿ, ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿರುವ ವಿಭಾಗೀಯ ಪೀಠ, ಅಭ್ಯರ್ಥಿ ರಾಘವೇಂದ್ರ ಸಲ್ಲಿಸಿದ್ದ‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಕ್ತಾಯಗೊಳಿಸಿದೆ. ಪ್ರಕರಣದ ಹಿನ್ನೆಲೆ: ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಧಾರವಾಡದ ರಾಘವೇಂದ್ರ ಚಂದ್ರಣ್ಣನವರ್ ಪ್ರವರ್ಗ- 2ಎ (ಕುರುಬ) ಅಡಿ ಆಯ್ಕೆಯಾಗಿದ್ದರು. ಅದರಂತೆ, ಮೀಸಲಾತಿ ಪತ್ರಕ್ಕಾಗಿ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನೆ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ,‌ ಅಭ್ಯರ್ಥಿಯ ಪೋಷಕರ ಆದಾಯವು ಪ್ರವರ್ಗ- 2ಎಗೆ ನಿಗದಿ ಪಡಿಸಿರುವ ವಾರ್ಷಿಕ ಆದಾಯ ಮಿತಿಯಾದ 8 ಲಕ್ಷ ರೂ. ಮೀರುತ್ತಿರುವುದರಿಂದ ಅವರು ಹಿಂದುಳಿದ ವರ್ಗಗಳಡಿ ಮೀಸಲಾತಿ ಪಡೆಯಲು ಅರ್ಹರಲ್ಲ ಎಂದಿದ್ದ ಸಮಿತಿ, 2024ರ ಮಾರ್ಚ್ 6ರಂದು ರಾಘವೇಂದ್ರ ಅರ್ಜಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ರಾಘವೇಂದ್ರ ಚಂದ್ರಣ್ಣನವರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು 2024ರ ಅಕ್ಟೋಬರ್ 28ರಂದು ಮಾನ್ಯ ಮಾಡಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಕುರುಬ ಜಾತಿಯ ಪ್ರವರ್ಗ 2ಎ ಗೆ ಅನ್ವಯಿಸುವ ಮೀಸಲಾತಿಗೆ ರಾಘವೇಂದ್ರ ಅವರು ಅರ್ಹರೆಂದು ಪ್ರಮಾಣೀಕರಿಸುವ ಜಾತಿ ಸಿಂಧುತ್ವ ಪ್ರಮಾಣಪತ್ರವನ್ನು ಎರಡು ವಾರಗಳ ಒಳಗೆ ವಿತರಿಸಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮತ್ತೊಂದೆಡೆ, ರಾಘವೇಂದ್ರ ಸಹ ಹೈಕೋರ್ಟ್ ಆದೇಶವನ್ನು ಸರ್ಕಾರ ಪಾಲನೆ ಮಾಡಿಲ್ಲ ಎಂದು ಆಕ್ಷೇಪಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ವಾರ್ತಾ ಭಾರತಿ 6 Dec 2025 1:12 am

ಪ್ರತ್ಯೇಕ ಶೇ.1ರಷ್ಟು ಮೀಸಲಾತಿಗೆ ಆಗ್ರಹಿಸಿ ಅಲೆಮಾರಿ ಸಮುದಾಯದಿಂದ ‘ಬೆಳಗಾವಿ ಚಲೋ’

ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿಯಲ್ಲಿ 49 ಅಲೆಮಾರಿ ಸಮುದಾಯಗಳಿಗೆ ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿಗಳನ್ನು ಪ್ರತ್ಯೇಕವಾಗಿ ಗುರುತಿಸಿ ಶೇ.1ರಷ್ಟು ಮೀಸಲಾತಿಯನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ ‘ಬೆಳಗಾವಿ ಚಲೋ’ಗೆ ಕರೆ ನೀಡಿದೆ. ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಪದಾಧಿಕಾರಿ ಬಿ.ಎಚ್.ಮಂಜುನಾಥ್, ಡಿ.4ರಂದು ನಡೆದ ಸಂಪುಟದಲ್ಲಿ ಸರಕಾರ ಅನೇಕ ವಿಚಾರಗಳ ಕುರಿತು ನಿರ್ಧಾರ ತೆಗೆದುಕೊಂಡಿದೆ. ಆದರೆ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿಗಳ ಬಗ್ಗೆ ಯಾವುದೇ ಚರ್ಚೆಯಾಗಲಿ, ತೀರ್ಮಾನವಾಗಲಿ ತೆಗೆದುಕೊಳ್ಳದೆ ಸಂಪುಟ ಮುಕ್ತಾಯಗೊಂಡಿರುವುದು ಅಲೆಮಾರಿಗಳಿಗೆ ಆತಂಕ ಹೆಚ್ಚು ಮಾಡಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅ.31 ರಂದು ಅಲೆಮಾರಿ ಸಮುದಾಯಗಳ ಮುಖಂಡರೊಂದಿಗೆ ಸಭೆ ಕರೆದು, ಶೇ.1 ರಷ್ಟು ಮೀಸಲಾತಿ ನೀಡುವ ಭರವಸೆಯನ್ನು ಕೊಟ್ಟಿದ್ದರು. ಅವರ ಮಾತಿಗೆ ಬೆಲೆಕೊಟ್ಟು ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟೆವು. ಆದರೆ ಇಲ್ಲಿಯವರೆಗೂ ರಾಜ್ಯ ಸರಕಾರ ನಮ್ಮ ಜೊತೆ ಯಾವುದೇ ಸಭೆ, ಸಮಲೋಚನೆ ಮಾಡದೆ ವಂಚಿಸುತ್ತಾ ಬಂದಿದೆ. ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ, ಕನಿಷ್ಠ ಪ್ರಮಾಣಪತ್ರವೂ ನೀಡಿಲ್ಲ ಎಂದು ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ. ಸರಕಾರ ಅಲೆಮಾರಿ ಸಮುದಾಯಕ್ಕೆ ಕೊಟ್ಟ ಮಾತಿಗೆ ಬದ್ಧವಾಗಿದಿಯೇ? ಎಂಬ ಅನುಮಾನ ಇದೆ. ಡಿ.6 ರಂದು(ಇಂದು) ಒಳ ಮೀಸಲಾತಿ ಕುರಿತು ತೀರ್ಮಾನ ತೆಗೆದುಕೊಳ್ಳಲು ಅಧಿಕಾರಿಗಳು ಮತ್ತು ಸಚಿವರುಗಳ ಸಮಾಲೋಚನೆ ಸಭೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಸಭೆಯಲ್ಲೂ ಶೇ.1ರಷ್ಟು ಮೀಸಲಾತಿ ನೀಡುತ್ತಾರೋ, ಇಲ್ಲವೋ ಎನ್ನುವ ಪ್ರಶ್ನೆ ಕಾಡುತ್ತಿದೆ. ಈ ಸಂದರ್ಭದಲ್ಲಿ ಸರಕಾರ ಯಾವುದೇ ತೀರ್ಮಾನ ತೆಗೆದುಕೊಂಡರು, ಬಿಲ್ ತಂದರು ಅಲೆಮಾರಿಗಳು ಹಾಕಿರುವ ತಡೆಯಜ್ಞೆಯನ್ನು ವಾಪಸ್ ತೆಗೆದುಕೊಳ್ಳದಿದ್ದರೆ, ಯಾವುದೇ ಒಳಮಿಸಲಾತಿ ಮತ್ತು ಇಡೀ ನೇಮಕಾತಿ ಪ್ರಕ್ರಿಯೆಯು ಜಾರಿಯಾಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಅಲೆಮಾರಿಗಳ ವಿಚಾರದಲ್ಲಿ ಸರಕಾರ ತೀರ್ಮಾನಕ್ಕೆ ಬರಲೇಬೇಕಾಗಿದೆ. ಅಲೆಮಾರಿಗಳ ಶೇ.1ರಷ್ಟು ವಿಚಾರದಲ್ಲಿ ಉಡಾಫೆ ಮಾಡಿ ಸಂಪೂರ್ಣ ಒಳಮೀಸಲಾತಿಯನ್ನು ಮತ್ತು ಇಡೀ ನೇಮಕಾತಿಯನ್ನು ಬಿಕ್ಕಟ್ಟಿಗೆ ಸಿಕ್ಕಿಸಿದೆ. ಅಲೆಮಾರಿಗಳಿಗಂತೂ ಅನ್ಯಾಯ ಮಾಡಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು, ಸೂಕ್ತ ರೀತಿಯಲ್ಲಿ ಪರಿಹರಿಸುವುದಕ್ಕೆ ಹೆಜ್ಜೆ ಹಾಕಬೇಕು. ಅಲೆಮಾರಿಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ, ವಿಶೇಷ ಪ್ಯಾಕೇಜ್ ಅನ್ನು ನೀಡುವರೆಗೂ ಬೆಳಗಾವಿಯಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸುತ್ತೇವೆ ಎಂದು ಮಂಜುನಾಥ್ ಎಚ್ಚರಿಕೆ ನೀಡಿದಾರೆ.

ವಾರ್ತಾ ಭಾರತಿ 6 Dec 2025 1:04 am

ಜನರಿಗೆ ಆಹಾರ, ಬಟ್ಟೆ ಮುಖ್ಯವೇ ಹೊರತು ಧಾರ್ಮಿಕ ಮೂಲಭೂತವಾದಲ್ಲ : ಹೈಕೋರ್ಟ್

ಬೆಂಗಳೂರು : ದೇಶದ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ, ತಾರ್ಕಿಕತೆ, ವೈಜ್ಞಾನಿಕ ಮನೋಭಾವಗಳು ಕಾರಣವಾಗಿವೆಯೇ ಹೊರತು ಧಾರ್ಮಿಕ ನಂಬಿಕೆಗಳಲ್ಲ. ಜನ ಸಾಮಾನ್ಯರಿಗೆ ಅನ್ನ, ಆಹಾರ, ಬಟ್ಟೆ ಮುಖ್ಯವೇ ಹೊರತು ಧಾರ್ಮಿಕ ಮೂಲಭೂತವಾದವಲ್ಲ ಎಂದು ಹೈಕೋರ್ಟ್‌ ಮೌಖಿಕವಾಗಿ ನುಡಿದಿದೆ. ಕರ್ನಾಟಕ ಸರಕಾರದ 'ಸ್ವಾವಲಂಬಿ ಸಾರಥಿ ಯೋಜನೆ'ಯ ಕುರಿತು ಕೋಮು ಪ್ರಚೋದನಕಾರಿ ವರದಿ ಪ್ರಸಾರ ಮಾಡಿದ ಆರೋಪ ಸಂಬಂಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಆಜ್ ತಕ್ ಸುದ್ದಿ ವಾಹಿನಿ ಮತ್ತದರ ಮಾಜಿ ಸಂಪಾದಕ ಸುಧೀರ್ ಚೌಧರಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಆಜ್‌ ತಕ್‌ ಪ್ರಸಾರ ಮಾಡಿರುವ ಸುಧೀರ್‌ ಚೌಧರಿ ನಡೆಸಿಕೊಟ್ಟಿರುವ ಸುದ್ದಿಯ ವಿಶ್ಲೇಷಣೆಯಲ್ಲಿ ಅದು ಪ್ರಚೋದನಕಾರಿಯಾಗಿದ್ದರೂ ಸರ್ಕಾರದ ನೀತಿಯ ಬಗ್ಗೆ ಸತ್ಯ ಮಾತನಾಡಲಾಗಿದೆಯೇ? ಸುಳ್ಳಾಗಿದ್ದರೆ ಅದು ಏನು? ವಿಶ್ಲೇಷಣೆಯಲ್ಲಿ ಮಾತನಾಡಿರುವುದು ಸತ್ಯ ಎಂದಾದರೆ ಅರ್ಜಿ ಪುರಸ್ಕರಿಸಲಾಗುವುದು. ನ್ಯಾಯಾಲಯ ಅದು ಸುಳ್ಳು ಎಂಬ ಅಭಿಮತ ತಳೆದು, ಪ್ರಚೋದನೆಯ ಅಂಶ ಇದೆ ಎಂಬ ತೀರ್ಮಾನಕ್ಕೆ ಬಂದರೆ ಅರ್ಜಿ ವಜಾಗೊಳಿಸಲಾಗುವುದು ಎಂದು ತಿಳಿಸಿ, ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು. ವಿಚಾರಣೆಯ ಒಂದು ಹಂತದಲ್ಲಿ ವಕೀಲ ಎಸ್‌ ಬಾಲನ್‌ ಅವರು, ಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರ ರೂಪಿಸಿರುವ ನೀತಿಯ ಮೇಲೆ ಚರ್ಚೆಯಾದರೆ ಆಕ್ಷೇಪವಿಲ್ಲ. ಆದರೆ, ಸುದ್ದಿ ವಿಶ್ಲೇಷಣೆಯ ನೆಪದಲ್ಲಿ ಪ್ರಚೋದನೆ ನೀಡಲಾಗಿದೆ. ಒಂದು ಸಮುದಾಯವನ್ನು ರಾಕ್ಷಸೀಕರಿಸಲಾಗಿದ್ದು, ದ್ವೇಷ ಹರಡುವ ಪ್ರಯತ್ನ ಮಾಡಲಾಗಿದೆ. ಇಡೀ ಕಾರ್ಯಕ್ರಮದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಹೇಗೆ ಬಿಂಬಿಸಲಾಗಿದೆ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು. ವಕ್ಫ್‌ ಮಂಡಳಿ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಚೋದನೆ ಒಪ್ಪಿತವೇ, ಒಂದು ಸಮುದಾಯದ ವಿರುದ್ಧ ದ್ವೇಷ ಕಾರಬಹುದೇ ಎಂದರು. ಆಗ ನ್ಯಾಯಪೀಠ, ಪ್ರಜಾಪ್ರಭುತ್ವದಲ್ಲಿ ಈ ವಿಚಾರಗಳು ಬರುತ್ತವೆ. ಬೇರೆಯವರನ್ನು ನಾವು ಜನಾಂಗೀಯವಾದಿಗಳು ಎಂದು ಆರೋಪಿಸುತ್ತೇವೆ. ಆದರೆ, ವಿಶ್ವದಲ್ಲೇ ಅತ್ಯಂತ ಜನಾಂಗೀಯ ಸಮಾಜ ನಮ್ಮದು. ಸಮುದಾಯದ ಆಧಾರದಲ್ಲಿ ತಾರತಮ್ಯ ಮಾಡಬೇಕು ಎಂಬುದು ನಮ್ಮ ಮಾನಸಿಕತೆ. ಇದೇ ಕಾರಣಕ್ಕೆ, ಬೇರೆ ಎಲ್ಲವನ್ನೂ ಬಿಟ್ಟು ರಾಜಕಾರಣದಲ್ಲಿ ಜಾತಿ ನೋಡಿಕೊಂಡು ಸೀಟು ಹಂಚಿಕೆ ಮಾಡುತ್ತಾರೆ. ಸೀಟು ನೀಡುವಾಗ ಶೇ.50ಕ್ಕೂ ಹೆಚ್ಚಿನ ಪ್ರಮಾಣ ಜಾತಿಯ ಆಧಾರದಲ್ಲೇ ನೀಡಲಾಗುತ್ತದೆ ಎಂದರು. ಮುಂದುವರಿದು, ರಾಜಕಾರಣಿಗಳು ಭ್ರಷ್ಟರು, ಕ್ರಿಮಿನಲ್‌ಗಳು ಎನ್ನುತ್ತೇವೆ. ಪ್ರಜಾಪ್ರಭುತ್ವದಲ್ಲಿ ನಮಗೆ ತಕ್ಕ ನಾಯಕರು ಸಿಗುತ್ತಾರೆ. ಇಲ್ಲಿ ಯಥಾ ಪ್ರಜಾ, ಥತಾ ರಾಜ. ಈಸ್ಟ್‌ ಇಂಡಿಯಾ ಕಂಪನಿಯ ಕೆಲವೇ ಕೆಲವು ಸಾವಿರದಷ್ಟು ಭದ್ರತಾ ಸಿಬ್ಬಂದಿ ನಮ್ಮನ್ನು ವಸಹಾತುಗಳನ್ನಾಗಿ ಮಾಡಿಕೊಂಡಿದ್ದರು. ಏಕೆಂದರೆ, ನಮಗೆ ಭಾರತೀಯತೆ ಎಂಬುದು ತಿಳಿದಿರಲಿಲ್ಲ. ಅದು ನಮಗೆ ಬಂದ ತಕ್ಷಣ ಬ್ರಿಟಿಷರು ದೇಶ ತೊರೆದರು. ಇದು ಆಧುನಿಕ ವಸಾಹತುಕರಣದ ಶತಮಾನ. ಕಂಪನಿ, ಕಾರ್ಪೊರೇಟೀಕರಣ.. ಈಗ ಮತ್ತೆ ನಾವು ಹಳೆಯ ಹವ್ಯಾಸಗಳಿಗೆ ಮರಳುತ್ತಿದ್ದೇವೆ ಎಂದು ಬೇಸರಿಸಿದರು. ಪ್ರಕರಣವೇನು? ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಹಾಯಕ‌ ಆಡಳಿತಾಧಿಕಾರಿ ಎಸ್. ಶಿವಕುಮಾರ್ ಅವರು 2023ರ ಸೆಪ್ಟೆಂಬರ್ 12ರಂದು ಶೇಷಾದ್ರಿಪುರ ಠಾಣೆಗೆ ದೂರು ನೀಡಿ, ಸೆಪ್ಟೆಂಬರ್‌ 11ರ ರಾತ್ರಿ 9.55ರ ವೇಳೆಗೆ ರಾಷ್ಟ್ರೀಯ ಸುದ್ದಿ ವಾಹಿನಿಯಾದ ಆಜ್‌ ತಕ್‌ನಲ್ಲಿ ಅಂದಿನ ಪ್ರಧಾನ ಸಂಪಾದಕ ಸುಧೀರ್‌ ಚೌಧರಿ ಅವರು ಸರ್ಕಾರದ ಯೋಜನೆಯ ಪ್ರಯೋಜನವನ್ನು ಕೇವಲ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದೆ ಎಂದು ಸುದ್ದಿ ಪ್ರಸಾರ ಮಾಡಿದ್ದಾರೆ. ಅಲ್ಪಸಂಖ್ಯಾತರಲ್ಲದ ಹಿಂದೂಗಳಿಗೆ ಈ ಯೋಜನೆ ನೀಡದೇ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲದ ಬಡ ಹಿಂದೂಗಳಿಗೆ ಅನ್ಯಾಯವಾಗಿರುತ್ತದೆ ಎಂದು ಕೋಮು ಪ್ರಚೋದನಾಕಾರಿ ಸುದ್ದಿ ಪ್ರಸಾರ ಮಾಡುವ ಮೂಲಕ ಹಿಂದು ಧರ್ಮ ಮತ್ತು ಇತರ ಧರ್ಮಗಳ ನಡುವೆ ದ್ವೇಷ ಹರಡುವ, ಅಶಾಂತಿಯ ವಾತಾವರಣ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದರು. ರಾಜ್ಯ ಸರ್ಕಾರ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆಯ ಬಗ್ಗೆ ಸುಳ್ಳು ಮತ್ತು ಕೋಮು ಪ್ರಚೋದನಕಾರಿ ಸುದ್ದಿ ಬಿತ್ತರಿಸಿದ ಆಜ್‌ ತಕ್‌ ಸುದ್ದಿ ವಾಹಿನಿ, ಸುಧೀರ್‌ ಚೌಧರಿ ಹಾಗೂ ಕಾರ್ಯಕ್ರಮ ಆಯೋಜಿಸಿರುವ ವಾಹಿನಿಯ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದರು. ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ವಾರ್ತಾ ಭಾರತಿ 6 Dec 2025 12:25 am

ಮುಂದಿನ ಶೈಕ್ಷಣಿಕ ವರ್ಷದಿಂದ 1 ರಿಂದ 12ನೇ ತರಗತಿವರೆಗೆ ಉಚಿತ ನೋಟ್‌ಬುಕ್, ಪಠ್ಯಪುಸ್ತಕ : ಮಧು ಬಂಗಾರಪ್ಪ

ಚಿಕ್ಕಮಗಳೂರು : ಮುಂದಿನ ಶೈಕ್ಷಣಿಕ ಸಾಲಿನಿಂದ ಒಂದನೇ ತರಗತಿಯಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ನೋಟ್ ಬುಕ್ ಹಾಗೂ ಪಠ್ಯ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು ಎಂದು ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಕೊಪ್ಪ ತಾಲೂಕಿನ ಮೇಲ್ಪಾಲ್ ಸರಕಾರಿ ಪ್ರೌಢಶಾಲೆಯ ನೂತನ ಕೊಠಡಿಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಈಗಾಗಲೇ ಶೂಗಳು, ಸಾಕ್ಸ್‌ಗಳು ಮತ್ತು ಸಮವಸ್ತ್ರ ನೀಡುವುದರ ಜೊತೆಗೆ ಪಠ್ಯಪುಸ್ತಕ ಹಾಗೂ ನೋಟ್ ಪುಸ್ತಕಗಳನ್ನೂ ನೀಡಲಾಗುತ್ತಿದೆ. 8ನೇ ತರಗತಿಯವರೆಗಿನ ಮಕ್ಕಳಿಗೆ ಒಂದು ಮೊಟ್ಟೆ ಮಾತ್ರ ವಿತರಿಸಲಾಗುತ್ತಿತ್ತು. ಅದನ್ನು ನಮ್ಮ ಸರಕಾರ 10ನೇ ತರಗತಿಯವರೆಗೆ ವಿಸ್ತರಿಸಿದೆ. ಬಡ ಮಕ್ಕಳ ಅಪೌಷ್ಟಿಕತೆ ನೀಗಿಸುವ ಸಲುವಾಗಿ ಬೆಳಗ್ಗೆ ಹಾಲು ಹಾಗೂ ರಾಗಿ ಮಾಲ್ಟ್ ಜೊತೆಗೆ ವಾರವಿಡೀ ಮೊಟ್ಟೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಬಡತನಕ್ಕೆ ಸ್ಪಂದಿಸಿ ಕಾರ್ಯ ನಿರ್ವಹಿಸುವುದೇ ನಮ್ಮ ಸರಕಾರದ ಕೆಲಸ. ಈ ನಿಟ್ಟಿನಲ್ಲಿ 57 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ ಎಂದು ಹೇಳಿದರು. ಶಿಕ್ಷಕರ ಕೊರತೆ ನೀಗಿಸಲು ನಮ್ಮ ಸರಕಾರ ಅಧಿಕಾರಕ್ಕೆ ಬಂದ 11 ತಿಂಗಳಲ್ಲಿ 13 ಸಾವಿರ ಶಿಕ್ಷಕರ ನೇಮಕ ಮಾಡಲಾಗಿದೆ. ಡಿ.7ರಂದು ಟಿಇಟಿ ಪರೀಕ್ಷೆ ನಡೆಯಲಿದ್ದು, ಮತ್ತೆ 12 ಸಾವಿರ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲಾಗುವುದು. ಈ ಶೈಕ್ಷಣಿಕ ವರ್ಷ ಆರಂಭವಾದ ಸಂದರ್ಭದಲ್ಲೇ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡುವ ಕಾರ್ಯ ನಡೆದಿದೆ ಎಂದರು. ರಾಜ್ಯದಲ್ಲಿ ಗ್ರಾಪಂ ವ್ಯಾಪ್ತಿಗೆ ಒಂದರಂತೆ ಇಡೀ ರಾಜ್ಯಕ್ಕೆ 6 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಸ್ಥಾಪಿಸಬೇಕೆಂಬ ಉದ್ದೇಶ ಸರಕಾರದ್ದು. ಜೊತೆಗೆ ಆ ಶಾಲೆಗಳ ವಿದ್ಯಾರ್ಥಿಗಳಿಗೆ ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಉಚಿತ ಬಸ್ ವ್ಯವಸ್ಥೆಯೂ ಲಭ್ಯವಿರುತ್ತದೆ ಎಂದು ತಿಳಿಸಿದರು. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಸುಮಾರು 45 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಗ್ರಾಪಂ ಕಟ್ಟಡ, ಸುಮಾರು 10 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಅಂಗನವಾಡಿ ಕಟ್ಟಡ, 82 ಲಕ್ಷ ರೂ.ಗಳ ವೆಚ್ಚದಲ್ಲಿ ಐದು ಶಾಲಾ ಕೊಠಡಿಗಳನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಉದ್ಘಾಟಿಸಿದ್ದಾರೆ. ಸಚಿವ ಮಧು ಬಂಗಾರಪ್ಪನವರು ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದಾರೆ. ಇಂದು ಖಾಸಗಿ ಉದ್ಯಮಿಗಳು ಶಿಕ್ಷಣ ಕ್ಷೇತ್ರಕ್ಕೆ ನೆರವು ನೀಡಲು ಮುಂದೆ ಬರಲು ಸಿದ್ಧರಿದ್ದಾರೆ. ಅದರಲ್ಲೂ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಸಹಯೋಗದಲ್ಲಿ ಸುಮಾರು 1,560 ಕೋಟಿ ರೂ.ಗಳ ಆರ್ಥಿಕ ನೆರವು ತಂದಿದ್ದು, ವಾರದಲ್ಲಿ ಆರು ದಿನಗಳ ಕಾಲ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಹಾಗೂ ರಾಗಿ ಮಾಲ್ಟ್ ನೀಡುವ ಯೋಜನೆ ರೂಪಿಸಲಾಗಿದೆ. ಇದು ಮಧು ಬಂಗಾರಪ್ಪ ಅವರ ಪ್ರಯತ್ನದಿಂದ ಆಗಿದೆ ಎಂದರು. ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಕರ್ಕೇಶ್ವರ ಗ್ರಾಪಂ ಅಧ್ಯಕ್ಷ ರಾಜೇಶ್ ಕೇಶವತ್ತಿ, ಉಪಾಧ್ಯಕ್ಷೆ ಆಶಾಲತಾ, ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಿಮ್ಮರಾಜು, ಗ್ರಾಪಂ ಸದಸ್ಯರು ಮತ್ತಿತರರಿದ್ದರು.

ವಾರ್ತಾ ಭಾರತಿ 6 Dec 2025 12:03 am

Shivamogga | ನೇಣು ಬಿಗಿದ ಸ್ಥಿತಿಯಲ್ಲಿ ಸ್ತ್ರೀ ರೋಗ ತಜ್ಞೆ; ಪುತ್ರನ ಮೃತದೇಹ ಪತ್ತೆ

ಶಿವಮೊಗ್ಗ : ಶಿವಮೊಗ್ಗದ ಸ್ತ್ರೀ ರೋಗ ತಜ್ಞೆ ಮತ್ತು ಅವರ ಪುತ್ರನ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಹೊಮ್ಮರಡಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ (55) ಮತ್ತು ಅವರ ಪುತ್ರ ಆಕಾಶ್ (34) ಮೃತಪಟ್ಟವರು. ಅಶ್ವಥನಗರದಲ್ಲಿರುವ ಮನೆಯ ಕೆಳಭಾಗದಲ್ಲಿ ಡಾ.ಜಯಶ್ರೀ ಅವರು ನೇಣು ಬಿಗಿದುಕೊಂಡಿದ್ದರೆ, ಮೊದಲ ಮಹಡಿಯಲ್ಲಿ ಅಕಾಶ್ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಒಂದೂವರೆ ವರ್ಷದ ಹಿಂದೆ ಆಕಾಶ್ ಅವರ ಪತ್ನಿ ನವ್ಯಶ್ರೀ ಇದೇ ಮನೆಯ ಕೆಳಭಾಗದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದರಿಂದ ಆಕಾಶ್ ಮತ್ತು ಡಾ. ಜಯಶ್ರೀ ತೀವ್ರ ಆಘಾತಕ್ಕೊಳಗಾಗಿದ್ದರೆನ್ನಲಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಆಕಾಶ್‌ಗೆ ಮತ್ತೊಂದು ಮದುವೆಯಾಗಿತ್ತು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಿನೋಬ ನಗರ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 5 Dec 2025 11:56 pm

ರೈತನಿಗೆ ಪರಿಹಾರ ನೀಡಲು ವಿಳಂಬ; ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ನ್ಯಾಯಾಲಯ ಆದೇಶ

ಶಿವಮೊಗ್ಗ : ರೈತರೊಬ್ಬರಿಗೆ ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕಾಗಿ ಶಿವಮೊಗ್ಗ ಜಿಲ್ಲಾಧಿಕಾರಿಯ ಕಾರು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ವಸತಿ ಯೋಜನೆಗಾಗಿ ಹರಮಘಟ್ಟದ ಕೃಷಿಕ ನಂದಾಯಪ್ಪ ಎಂಬವರ ಒಂದು ಎಕರೆ ಜಮೀನನ್ನು 1992ರಲ್ಲಿ ಸರಕಾರ ವಶಕ್ಕೆ ಪಡೆದಿತ್ತು. ಇದಕ್ಕೆ 22 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದ ಸರಕಾರ ಕೇವಲ 9 ಲಕ್ಷ ರೂ. ನೀಡಿತ್ತು. ಬಾಕಿ ಹಣಕ್ಕಾಗಿ ರೈತ ನಂದಾಯಪ್ಪ ಕಚೇರಿಗೆ ಅಲೆದಾಡಿದರೂ ಫಲ ಸಿಕ್ಕಿರಲಿಲ್ಲ. ಕೊನೆಗೆ ನಂದಾಯಪ್ಪ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಎರಡನೇ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 95,88,283 ರೂ. ಪರಿಹಾರವನ್ನು ಪಾವತಿಸುವಂತೆ ಸೂಚಿಸಿತ್ತು. ನ್ಯಾಯಾಲಯದ ಆದೇಶವಾಗಿದ್ದರೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಳಸುತ್ತಿರುವ ಕಾರು ಜಪ್ತಿ ಮಾಡುವಂತೆ ಶಿವಮೊಗ್ಗದ ಎರಡನೇ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ಒಳಗಡೆ ಸಚಿವರ ಸಭೆ: ಜಪ್ತಿಗೆ ಬಂದ ಕೋರ್ಟ್ ಅಮೀನರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ, ಎಲೆ ಚುಕ್ಕಿ ರೋಗಗಳ ಕುರಿತಂತೆ ಸಂಬಂಧಿಸಿದ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಹಾಗೂ ಸುದ್ದಿಗೋಷ್ಠಿ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ಕೋರ್ಟ್ ಅಮೀನರು ನ್ಯಾಯಾಲಯದ ಆದೇಶ ಪ್ರತಿ ಹಿಡಿದುಕೊಂಡು ಜಿಲ್ಲಾಧಿಕಾರಿ ಕಾರು ಜಪ್ತಿಗೆ ಬಂದಿದ್ದರು. ಸಂತ್ರಸ್ತ ನಂದಾಯಪ್ಪನವರು ಮಾತನಾಡಿ, ಪರಿಹಾರಕ್ಕಾಗಿ, ನ್ಯಾಯಾಲಯದ ಹೋರಾಟಕ್ಕಾಗಿ ನಾನು ನನ್ನ ಇನ್ನೊಂದು ಎಕರೆ ಜಮೀನನ್ನೂ ಕಳೆದುಕೊಳ್ಳಬೇಕಾಯಿತು. ನನಗೆ ವಯಸ್ಸಾಗಿದ್ದು, ಕಾಯಿಲೆಯಿಂದ ಬಳಲುತ್ತಿದ್ದೇನೆ. ಬೆಂಗಳೂರು, ಶಿವಮೊಗ್ಗ ಮತ್ತು ನ್ಯಾಯಾಲಯಕ್ಕೆ ಓಡಾಡಿ ಸುಸ್ತಾಗಿದ್ದು, ಆದರೂ ಅಧಿಕಾರಿಗಳು ಕರುಣೆ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಂತಿಮವಾಗಿ ಜಿಲ್ಲಾಧಿಕಾರಿಯವರು, ನ್ಯಾಯಾಲಯಕ್ಕೆ ಮತ್ತೊಮ್ಮೆ ಪರಿಹಾರ ವಿತರಣೆಗೆ ಗಡುವು ಮುಂದುವರಿಸುವಂತೆ ಪತ್ರನೀಡಿದರು.

ವಾರ್ತಾ ಭಾರತಿ 5 Dec 2025 11:52 pm

Dharwad | ಡಿವೈಡರ್​ಗೆ ಢಿಕ್ಕಿ ಹೊಡೆದು ಹೊತ್ತಿ ಉರಿದ ಕಾರು; ಲೋಕಾಯುಕ್ತ ಇನ್ಸ್​ಪೆಕ್ಟರ್ ಸಜೀವ ದಹನ

ಧಾರವಾಡ : ಕಾರೊಂದು ಡಿವೈಡರ್​ಗೆ ಢಿಕ್ಕಿಯಾಗಿ ಬಳಿಕ ನಡುರಸ್ತೆಯಲ್ಲೇ ಹೊತ್ತಿ ಉರಿದಿದ್ದು, ಇದರಲ್ಲಿದ್ದ ಲೋಕಾಯುಕ್ತ ಇನ್ಸ್​​ಪೆಕ್ಟರ್ ಸಜೀವ ದಹನವಾಗಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ಬಳಿ ದುರ್ಘಟನೆ ನಡೆದಿದೆ ಹಾವೇರಿಯ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಪಂಚಾಕ್ಷರಯ್ಯ ಸಾಲಿಮಠ ಎಂಬುವವರೇ ಘಟನೆಯಲ್ಲಿ ಮೃತಪಟ್ಟಿದ್ದು, ಕಾರು ಕೂಡಾ ಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಗದಗಕ್ಕೆ ಹೋಗುವ ಸಮಯದಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 5 Dec 2025 11:33 pm

ಮಂಗಳೂರು | ವ್ಯಾಪಾರ, ಉದ್ದಿಮೆ ಹೆಸರಿನಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದು ವಂಚನೆ: ಪ್ರಕರಣ ದಾಖಲು

ಮಂಗಳೂರು, ಡಿ.5: ಬೇರೆ ಬೇರೆ ವ್ಯಾಪಾರ ಮತ್ತು ಉದ್ದಿಮೆ ನಡೆಸುವ ಸಲುವಾಗಿ ಬ್ಯಾಂಕ್ನಿಂದ ಸಾಲ ಪಡೆದ 14 ಮಂದಿ ಸಕಾಲಕ್ಕೆ ಸಾಲ ಮರುಪಾವತಿಸದೆ ವಂಚಿಸಿದ ಹಾಗೂ ಅವರಿಗೆ ಸಹಕಾರ ನೀಡಿದ ಆರೋಪದ ಮೇರೆಗೆ ನಗರದ ಮಲ್ಲಿಕಟ್ಟೆಯಲ್ಲಿ ಶಾಖೆಯನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಿಲೇಶನ್ ಶಿಪ್ ಮ್ಯಾನೇಜರ್ ಅಭಿಷೇಕ್ ನಂದ ವಿರುದ್ಧ ಬ್ಯಾಂಕ್ n ಪ್ರಧಾನ ವ್ಯವಸ್ಥಾಪಕ ಸೌರಭ್ ಕುಮಾರ್ ವರ್ಮ ಕದ್ರಿ ಠಾಣೆಗೆ ದೂರು ನೀಡಿದ್ದಾರೆ. 2025ರ ಜೂನ್ 2ರಿಂದ ತಾನು ಈ ಬ್ಯಾಂಕ್ n ಮುಖ್ಯ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿರುವೆ. ಈ ಬ್ಯಾಂಕಿನಲ್ಲಿ ರಿಲೇಷನ್ ಶಿಪ್ ಮ್ಯಾನೇಜರ್ ಆಗಿದ್ದ 1ನೇ ಆರೋಪಿ ಅಭಿಷೇಕ್ ನಂದ 2022ರ ಜೂನ್ 27ರಿಂದ 2024ರ ನವೆಂವರ್ 20ರ ಮಧ್ಯೆ ಲಘು ಉದ್ಯಮ ಯೋಜನೆಯಡಿ ರಿಫಾದ್ ಮುಹಮ್ಮದ್, ಸೆಫಿಯಾ, ಮುಹಮ್ಮದ್ ಝಿಯಾಮ್ ನಿಟ್ಟೆ ಹಸನ್ ಆದಂ ಎಂಬವರಿಗೆ ಇಲೆಕ್ಟ್ರಾನಿಕ್ಸ್ ವಸ್ತುಗಳ ಉದ್ಯಮ ನಡೆಸಲು, ಅಕ್ಷತಾಳಿಗೆ ಸೋಲಾರ್ ರೂಫ್ ಟಾಪ್ ವಸ್ತುಗಳ ಉದ್ಯಮ ನಡೆಸಲು, ಅನ್ವರ್ ಹುಸೈನ್, ಅಬೂಬಕರ್, ಮುಹಿಯುದ್ದೀನ್, ರಶ್ಮಿತಾ, ಹೀಬಾ ಹಲೀಮಾ, ಅಶ್ರಫ್ ಅಬ್ಬಾಸ್ ಬ್ಯಾರಿ, ಸುಷ್ಮಾ, ಅಕ್ಬರ್ ಸಲಾಂ, ರೈಹಾನತ್ ಕೆ.ಎ., ಮುಹಮ್ಮದ್ ರಫಾನ್ ಅವರಿಗೆ ಫ್ಲೈವುಡ್ ಟ್ರೇಡಿಂಗ್, ಅಡಿಕೆ ವ್ಯಾಪಾರ, ಕೋಳಿ ಆಹಾರದ ಉದ್ದಿಮೆ, ಸುಪರ್ ಮಾರ್ಕೆಟ್ ಉದ್ಯಮ, ಲೆದರ್ಬ್ಯಾಗ್ ಹಾಗೂ ಶೂ ಟ್ರೇಡಿಂಗ್ ಉದ್ಯಮ, ಗೃಹೋಪಯೋಗಿ ವಸ್ತುಗಳ ತಯಾರಿಕೆ ಉದ್ಯಮ, ಕಿಚನ್ ಸಾಮಗ್ರಿ ಉದ್ಯಮ, ಹೊಟೇಲ್ ಮತ್ತು ರೆಸ್ಟೋರೆಂಟ್ ಉದ್ಯಮ ನಡೆಸಲು ಆರೋಪಿಗಳಿಂದ ದಾಖಲಾತಿಗಳನ್ನು ಪಡೆದುಕೊಂಡು ಸಾಲ ಮಂಜೂರು ಮಾಡಿದ್ದಾರೆ. ಆದರೆ ಸಾಲಗಾರರು ಕಂತನ್ನು ಅಂದರೆ ಸುಮಾರು 10,47,40,000 ಕೋ.ರೂ. ವನ್ನು ಕ್ಲಪ್ತ ಸಮಯಕ್ಕೆ ಬ್ಯಾಂಕ್ ge ಪಾವತಿಸದೆ ವಂಚಿಸಿದ್ದಾರೆ. ಸಾಲಗಾರರು ಬ್ಯಾಂಕ್ ge ಮೋಸ ಮಾಡುವ ಸಮಾನ ಉದ್ಧೇಶವನ್ನು ಹೊಂದಿದ್ದು,ಬ್ಯಾಂಕ್ n ರಿಲೇಶನ್ ಶಿಪ್ ಮ್ಯಾನೇಜರ್ ಅಭಿಷೇಕ್ ನಂದ ಸಾಲಗಾರರಿಂದ ಆರ್ಥಿಕ ಲಾಭವನ್ನು ಪಡೆದಿದ್ದಾರೆ. ಸಾಲಗಾರರು ಉದ್ದಿಮೆಯನ್ನು ಸಮರ್ಪಕವಾಗಿ ನಡೆಸುವುದಿಲ್ಲವೆಂದು ತಿಳಿದಿದ್ದರೂ ಕೂಡಾ ಸಾಲ ಮಂಜೂರಾತಿಗೆ ಶಿಫಾರಸ್ಸು ಮಾಡಿರುವುದಾಗಿ ದೂರು ನೀಡಲಾಗಿದೆ. ಅದರಂತೆ ಬ್ಯಾಂಕ್ n ರಿಲೇಶನ್ ಶಿಪ್ ಮ್ಯಾನೇಜರ್ ಸಹಿತ 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 5 Dec 2025 11:22 pm

ಭಾರತದ ಕೈಗೆ ಈ ಅಸ್ತ್ರ ಸಿಕ್ಕರೆ ಪಾಪಿ ಪಾಕಿಸ್ತಾನ 24 ಗಂಟೆಗಳಲ್ಲಿ ಉಡೀಸ್! S-500 Missile

ಪ್ರಪಂಚದಲ್ಲಿ ಭಾರತಕ್ಕೆ ತನ್ನದೇ ಆದ ಶಕ್ತಿ ಇದೆ ಹಾಗೂ ಭಾರತ ಇಲ್ಲದೆ ದೊಡ್ಡ ದೊಡ್ಡ ಶ್ರೀಮಂತ ರಾಷ್ಟ್ರಗಳು ಕೂಡ ಉಸಿರಾಡಲು ಆಗಲ್ಲ. ಯಾಕಂದ್ರೆ ಭಾರತದ ಜೊತೆಗೆ ವ್ಯಾಪಾರ ನಡೆಸದೆ &ಸ್ನೇಹ ಬೆಸೆಯದೆ ಜಗತ್ತಿನ ಆರ್ಥಿಕತೆ ಅಭಿವೃದ್ಧಿ ಹೊಂದುವುದು ಅಸಾಧ್ಯ. ಅಷ್ಟರಮಟ್ಟಿಗೆ ನಮ್ಮ ಭಾರತ ಇಡೀ ಜಗತ್ತನ್ನು ಆವರಿಸಿಕೊಂಡಿದೆ. ಹಾಗೇ ಇಂತಿಪ್ಪ ಶಕ್ತಿಶಾಲಿ ದೇಶ ಭಾರತದ ಸೇನೆ,

ಒನ್ ಇ೦ಡಿಯ 5 Dec 2025 11:12 pm

ಕಾಳಗಿಯಲ್ಲಿ ಕೆಡಿಪಿ ಸಭೆ| ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಡಾ.ಅವಿನಾಶ್ ಜಾಧವ್

ಕಲಬುರಗಿ: ಸಾರ್ವಜನಿಕ ಸೇವೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಉತ್ತಮ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಡಾ. ಅವಿನಾಶ್ ಜಾಧವ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಕಾಳಗಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಅವಿನಾಶ್ ಜಾದವ್, ಗ್ರಾಮ ಪಂಚಾಯಿತಿ ವಸತಿ ಯೋಜನೆಗಳ ಪರಿಶೀಲನೆ ನಡೆಸಿ ಕಾಲಹರಣ ಮಾಡಬೇಡಿ. ಸಾರ್ವಜನಿಕರಿಗೆ ತೊಂದರೆ ಕೊಡದೆ ನ್ಯಾಯಯುತವಾಗಿ ಕೆಲಸ ಮಾಡುವಂತೆ ನಿರ್ದೇಶನ ನೀಡಿದರು. ಕಾಳಗಿ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಿ. ಕೊಡ್ಲಿ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಸಂಜೀವ್ ಕುಮಾರ್ ಸಲ್ಲಿಸಿದ ವರದಿ ಪ್ರಕಾರ, 24,360 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಬೆಳೆ ನಷ್ಟವಾಗಿರುವ ಇನ್ನೂ ಹಲವಾರು ರೈತರ ಖಾತೆಗಳಿಗೆ ಪರಿಹಾರ ಹಣ ಜಮೆ ಆಗಿಲ್ಲ, ಇದಕ್ಕೆ ಕಾರಣ ತಿಳಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜನಸೇವೆಗೆ ಬದ್ಧರಾಗಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಬಾಬಾಸಾಹೇಬರ ಸಂವಿಧಾನದ ಬಗ್ಗೆ ಬರೀ ಮಾತಿನಲ್ಲಿ ಹೇಳಿದರೆ ಸಾಲದು, ಪಕ್ಷ -ಭೇದ ಮರೆತು ಅಭಿವೃದ್ಧಿಯ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಬಂದಿರುವ ಅನುದಾನವನ್ನು ಸಮಾನತೆಯಿಂದ ಹಂಚಿ ಸರ್ವರು ಅಭಿವೃದ್ಧಿ ಕಾಣುವಂತಾಗಬೇಕು. ಆಗ ಮಾತ್ರ ಸಂವಿಧಾನ ರಕ್ಷಣೆ ಆಗುತ್ತದೆ ಎಂದು ಹೇಳಿದರು.   ಈ ವೇಳೆ ಕಾಳಗಿ ಗ್ರೇಡ್-1 ತಹಶೀಲ್ದಾರ್‌ ಪೃಥ್ವಿರಾಜ್‌ ಪಾಟೀಲ್‌, ಜಿಪಂ.ಕಾರ್ಯದರ್ಶಿ ಹಾಗೂ ಕಾಳಗಿ ತಾಲೂಕು ಪಂಚಾಯತಿ ಆಡಳಿತಾಧಿಕಾರಿ ಲಕ್ಷ್ಮಣ ಶೃಂಗೇರಿ, ತಾಪಂ ಇಓ ಬಸಲಿಂಗಪ್ಪ ಡಿಗ್ಗಿ, ಸಿಪಿಐ ಜಗದೇವಪ್ಪ ಪಾಳಾ, ಪಪಂ. ಮುಖ್ಯಾಧಿಕಾರಿ ಪಂಕಜಾ ಎ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Dec 2025 11:02 pm

ʻದೇವಸ್ಥಾನಗಳಿಗೆ ಭಕ್ತರು ನೀಡಿದ ಹಣ ದೇಗುಲ ಅಭಿವೃದ್ಧಿಗಷ್ಟೇ, ಸಹಕಾರಿ ಬ್ಯಾಂಕ್‌ಗಳ ಲಾಭಕ್ಕಾಗಿ ಅಲ್ಲʼ: ಸುಪ್ರೀಂ

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೇವಾಲಯದ ಹಣ ದೇವರಿಗೆ ಸೇರಿದ್ದು, ಅದನ್ನು ಸಹಕಾರಿ ಬ್ಯಾಂಕುಗಳ ಲಾಭಕ್ಕಾಗಿ ಬಳಸಲು ಅವಕಾಶವಿಲ್ಲ. ಭಕ್ತರ ಕಾಣಿಕೆ ಹಣವನ್ನು ದೇವಾಲಯದ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಸಹಕಾರಿ ಬ್ಯಾಂಕುಗಳು ಠೇವಣಿ ಹಣವನ್ನು ತಕ್ಷಣವೇ ಹಿಂದಿರುಗಿಸಬೇಕು. ಬ್ಯಾಂಕುಗಳ ಸಮಸ್ಯೆಗಳಿಗೆ ದೇವಾಲಯದ ಹಣವನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವಿಜಯ ಕರ್ನಾಟಕ 5 Dec 2025 11:00 pm

ಬಡ್ಡಿ ದರ ಇಳಿಸಿ ವರ್ಷಾಂತ್ಯದ ಗಿಫ್ಟ್‌ ನೀಡಿದ ಆರ್‌ಬಿಐ, ಸಾಲದ ಇಎಂಐನಲ್ಲಿ ಎಷ್ಟು ಇಳಿಕೆ? ಇಲ್ಲಿದೆ ಲೆಕ್ಕಾಚಾರ

ಆರ್‌ಬಿಐ ರೆಪೋ ದರವನ್ನು ಶೇಕಡಾ 0.25ರಷ್ಟು ಕಡಿತಗೊಳಿಸಿ ಶೇಕಡಾ 5.25ಕ್ಕೆ ಇಳಿಸಿದೆ. ಈ ಮೂಲಕ ವರ್ಷದಲ್ಲಿ ನಾಲ್ಕನೇ ಸಲ ಬಡ್ಡಿ ದರ ಇಳಿಕೆ ಮಾಡಿದೆ. ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರ ಶೇಕಡಾ 2ಕ್ಕಿಂತ ಕಡಿಮೆ ಇರುವುದರಿಂದ ಆರ್ಥಿಕ ಬೆಳವಣಿಗೆಯನ್ನು ಬಲಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸಾಲಗಳು ಅಗ್ಗವಾಗುವ ನಿರೀಕ್ಷೆ ಇದೆ.

ವಿಜಯ ಕರ್ನಾಟಕ 5 Dec 2025 10:49 pm

ಸಚಿನ್ ತೆಂಡೂಲ್ಕರ್ ಅವರಿಂದಲೂ ಸಾಧ್ಯವಾಗದ ಸಾಧನೆ ಮಾಡಿದ ಪುತ್ರ ಅರ್ಜುನ್! ಟಿ20 ಕ್ರಿಕೆಟ್ ನಲ್ಲಿ ಹೊಸ ಮೈಲಿಗಲ್ಲು

Arjun Tendulkar Creates History- ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಇದೀಗ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಗೋವಾ ಪರ ಆಡುತ್ತಾ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡನ್ನೂ ಆರಂಭಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ತಮ್ಮ ತಂದೆ ಮಾಡಲಾಗದ ಈ ಅಪರೂಪದ ಸಾಧನೆಯನ್ನು ಅರ್ಜುನ್ ಅವರು ಮಹಾರಾಷ್ಟ್ರ ತಂಡದ ವಿರುದ್ಧ ಮಾಡಿದ್ದಾರೆ.

ವಿಜಯ ಕರ್ನಾಟಕ 5 Dec 2025 10:48 pm

ನಿಗದಿತ ಸಮಯದೊಳಗೆ ನೀಲಿ ಮೆಟ್ರೋ ಮಾರ್ಗ ಪೂರ್ಣಗೊಳಿಸಲು ಡಿ.ಕೆ.ಶಿವಕುಮಾರ್ ಸೂಚನೆ

ಬೆಂಗಳೂರು : ನಿಗದಿತ ಅವಧಿಯೊಳಗೆ ನೀಲಿ ಮೆಟ್ರೋ ಮಾರ್ಗ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು, ಕೆ.ಆರ್.ಪುರದಿಂದ ಸಿಲ್ಕ್ ಬೋರ್ಡ್‍ವರೆಗಿನ ಮಾರ್ಗವನ್ನು 2026ರ ಡಿಸೆಂಬರ್‌ ಗೆ ಮುಗಿಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಶುಕ್ರವಾರ ಕೊಡಿಗೆಹಳ್ಳಿಯಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಉಳಿದಂತೆ ಕೆ.ಆರ್ ಪುರದಿಂದ ಹೆಬ್ಬಾಳ ವರೆಗಿನ ಮಾರ್ಗವನ್ನು 2027ರ ಡಿಸೆಂಬರ್ ವೇಳೆಗೆ ಹಾಗೂ ಹೆಬ್ಬಾಳದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2027 ಜೂನ್‍ಗೆ ಪೂರ್ಣಗೊಳಿಸುತ್ತೇವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ವಿಮಾನ ನಿಲ್ದಾಣಕ್ಕೆ ಸಂಪರ್ಕ ಸಾಧಿಸುತ್ತಿರುವ ಮೆಟ್ರೋ ಮಾರ್ಗದ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರನ್ನು ಕರೆಸಿ ಚರ್ಚಿಸಿದ್ದೇವೆ. ಗುತ್ತಿಗೆದಾರ ಸಂಸ್ಥೆಯು ಕೆಲವು ಸಬೂಬು ಹೇಳುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸಲು ಸೂಚಿಸಿದ್ದೇನೆ. ಈ ಭಾಗದಲ್ಲಿ ಕೆಲವು ಸಮಸ್ಯೆಗಳಿದ್ದ ಕಾರಣ ನಾನು ಸ್ಥಳಕ್ಕೆ ಬಂದು ಭೇಟಿ ನೀಡಿದ್ದೇನೆ ಎಂದರು. ಇಲ್ಲಿನ ಕಾಮಗಾರಿ ಪೂರ್ಣವಾಗುವವರೆಗೂ ಇಲ್ಲಿರುವ ಪ್ರಮುಖ ಯಂತ್ರವನ್ನು ಬೆಂಗಳೂರಿನಿಂದಾಚೆಗೆ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ. ಇದರ ಉಸ್ತುವಾರಿಯನ್ನು ತುಷಾರ್ ಗಿರಿನಾಥ್‍ಗೆ ನೀಡಲಾಗಿದೆ. ಇದು 58ಕಿ.ಮೀ ಉದ್ಧದ ಈ ಯೋಜನೆ 15ಸಾವಿರ ಕೋಟಿ ರೂ.ಮೊತ್ತದ ಯೋಜನೆಯಾಗಿದೆ. ಸಿಲ್ಕ್ ಬೋರ್ಡ್‍ನಿಂದ ವಿಮಾನ ನಿಲ್ದಾಣದವೆರೆಗಿನ ಈ ಮಾರ್ಗದಲ್ಲಿ 30ನಿಲ್ದಾಣಗಳು ಬರಲಿವೆ ಎಂದು ಅವರು ತಿಳಿಸಿದರು. ರೈಲ್ವೆ ಸಂಚಾರ ಆರಂಭಿಸಲು ಚಿಂತನೆ : ಈ ಮಾರ್ಗದಲ್ಲಿ 5-10 ರೈಲ್ವೇ ನಿಲ್ದಾಣಗಳು ಪೂರ್ಣಗೊಳ್ಳುತ್ತಿದ್ದಂತೆ ಅಲ್ಲಿ ರೈಲು ಸಂಚಾರ ಆರಂಭಿಸಲು ಚಿಂತನೆ ನಡೆಸುತ್ತಿದ್ದೇವೆ. ಕೇವಲ ರಾತ್ರಿ ವೇಳೆ ಮಾತ್ರ ಕೆಲಸ ಮಾಡಲಾಗುತ್ತಿದೆ. ಕಾಮಗಾರಿ ನಡೆಯುವ ವೇಳೆ ಒಂದು ಸಾವು ಉಂಟಾದ ನಂತರ ಸಂಚಾರ ದಟ್ಟಣೆ ನೋಡಿಕೊಂಡು ಕೆಲಸ ಮಾಡಲಾಗುತ್ತಿದೆ. ಇದು ವಾಸ್ತವದ ಪರಿಸ್ಥಿತಿ. ಟೀಕೆ ಮಾಡುವವರು, ಮಾತನಾಡುವವರು ಏನೇ ಹೇಳಿದರೂ ಕೆಲಸ ನಡೆಯಲೇಬೇಕು ಎಂದರು. ಡೆಪಾಸಿಟ್ ಇಡಲು ಸೂಚನೆ : ಬೆಳಗ್ಗೆಯಿಂದ ವಿವಿಧ ಕಾಮಗಾರಿಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ದೇನೆ. ಮುಂದಿನ 15 ದಿನಗಳ ಕಾಲ ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಗೆ ತೆರಳಬೇಕಿದ್ದು, ಅದಕ್ಕೂ ಮುನ್ನ ಬಿಎಂಆರ್‍ಡಿಎ, ಬಿಡಿಎ, ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗಳಲ್ಲಿ ಏನೆಲ್ಲಾ ಆಗಬೇಕಿದೆ ಎಂದು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ವಿಚಾರದಲ್ಲಿ ಸರಕಾರದ ಪರಿಹಾರಕ್ಕೆ ಒಪ್ಪಿ ಭೂಮಿ ನೀಡುವ ರೈತರಿಗೆ ತೀರ್ಮಾನ ಮಾಡಲಾಗಿರುವ ಪರಿಹಾರವನ್ನು ನೀಡುತ್ತೇವೆ. ಯಾರು ಒಪ್ಪುವುದಿಲ್ಲವೋ ಅವರಿಗೆ ಕೋರ್ಟ್‍ನಲ್ಲಿ ಹಳೆಯ ದರದಲ್ಲಿ ಡೆಪಾಸಿಟ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ವಾರ್ತಾ ಭಾರತಿ 5 Dec 2025 10:46 pm

ಹೊರವರ್ತುಲ ರಸ್ತೆ ಕಾರಿಡಾರ್ | ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಬದ್ಧ: ಪ್ರಿಯಾಂಕ್ ಖರ್ಗೆ

ಬೆಂಗಳೂರು : ನಗರದ ಹೊರ ವರ್ತುಲ ರಸ್ತೆ ಕಾರಿಡಾರ್‌ನಲ್ಲಿ ಉದ್ಭವಿಸಿರುವ ಮೂಲಸೌಕರ್ಯಗಳ ಕೊರತೆಗಳಿಗೆ ಕಾಲಮಿತಿಯ ಪರಿಹಾರ ಒದಗಿಸುವುದಾಗಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ. ಶುಕ್ರವಾರ ನಗರದಲ್ಲಿ ಬೆಂಗಳೂರಿನ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘವು (ಒಆರ್‌ಆರ್‍ಸಿಎ) ಪ್ರಿಯಾಂಕ್ ಖರ್ಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೇರಿದಂತೆ ಹಿರಿಯ ಸರಕಾರಿ ಅಧಿಕಾರಿಗಳ ಜೊತೆಗೆ ನಡೆಸಿದ ಸಭೆಯಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದಿತು. ನಗರದ ಪ್ರಮುಖ ತಂತ್ರಜ್ಞಾನ ಮತ್ತು ವಾಣಿಜ್ಯ ಕಾರಿಡಾರ್ ಎದುರಿಸುತ್ತಿರುವ ಗಂಭೀರ ಸ್ವರೂಪದ ಮೂಲಸೌಕರ್ಯ, ನಾಗರಿಕ ಸೌಲಭ್ಯ ಮತ್ತು ಸಂಚಾರ ದಟ್ಟಣೆ ಸವಾಲುಗಳನ್ನು ಪರಿಹರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಂವಾದದಲ್ಲಿ ಮಾತನಾಡಿದ ಉದ್ಯಮದ ಪ್ರತಿನಿಧಿಗಳು, ಮೆಟ್ರೊ ನಿಲ್ದಾಣಗಳಿಗೆ ಕೊನೆಯ ಹಂತದ ಸಂಪರ್ಕ, ಸರ್ವೀಸ್ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ದುಃಸ್ಥಿತಿ, ಪ್ರಮುಖ ಜಂಕ್ಷನ್‍ಗಳಲ್ಲಿನ ಸಂಚಾರ ದಟ್ಟಣೆ, ಹೆಚ್ಚಿನ ಜನಸಾಂದ್ರತೆಯ ಪ್ರದೇಶಗಳಲ್ಲಿ ಕಸ ಸಂಗ್ರಹ, ನಿರಂತರ ನಿರ್ಮಾಣ ಚಟುವಟಿಕೆಗಳಿಂದ ಉದ್ಭವಿಸಿರುವ ದೂರಸಂಪರ್ಕ ಅಡಚಣೆಗಳು ಮತ್ತು ವಿವಿಧ ಸಮೂಹ ಸಾರಿಗೆ ಸೌಲಭ್ಯಗಳ ಮಧ್ಯೆ ಸಮನ್ವಯತೆಯಂತಹ ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾವಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಹೊರ ವರ್ತುಲ ರಸ್ತೆ ಕಾರಿಡಾರ್ ರಾಜ್ಯದ ಜಾಗತಿಕ ತಂತ್ರಜ್ಞಾನ ಆರ್ಥಿಕತೆಯ ಕೇಂದ್ರಬಿಂದುವಾಗಿದೆ. ಸಮಸ್ಯೆಗಳನ್ನು ಸರಿಪಡಿಸಲು ಕಾಲಮಿತಿ ಹೊಂದಿದ ಹಾಗೂ ಹೆಚ್ಚಿನ ಪರಿಣಾಮ ಬೀರುವ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಹೇಳಿದರು. ಈ ಪ್ರದೇಶದ ಸಂಚಾರ ಮತ್ತು ಮೂಲಸೌಕರ್ಯ ಅಡಚಣೆಗಳಿಗೆ ದೀರ್ಘಕಾಲೀನ ಪರಿಹಾರಗಳನ್ನು ಕಾಲಮಿತಿ ಒಳಗೆ ಒದಗಿಸುವ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಅವರು ಹೇಳಿದರು. ಜಿಬಿಎ ರಚನೆಯಿಂದ ಈಗಾಗಲೆ ವಿವಿಧ ಇಲಾಖೆಗಳಲ್ಲಿ ಸಮನ್ವಯತೆ ಹೆಚ್ಚಿದೆ. ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವುದರ ವೇಗವೂ ಹೆಚ್ಚಳಗೊಂಡಿದೆ. ವಿಶೇಷವಾಗಿ ಕಾಡುಬೀಸನಹಳ್ಳಿ, ಬೆಳ್ಳಂದೂರು ಮತ್ತು ಮಾರತ್ತಹಳ್ಳಿಯಂತಹ ಹೆಚ್ಚಿನ ದಟ್ಟಣೆಯ ಸ್ಥಳಗಳಲ್ಲಿ ಯೋಜನೆಗಳ ಸುಗಮ ಅನುಷ್ಠಾನ ಖಚಿತಪಡಿಸಿಕೊಳ್ಳಲು ಬಿಬಿಎಂಪಿ, ಬಿಎಂಆರ್‍ಸಿಎಲ್, ಸಂಚಾರ ಪೊಲೀಸರು ಮತ್ತು ಇತರ ಏಜೆನ್ಸಿಗಳ ನಡುವೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದರು. ಸಭೆಯಲ್ಲಿ ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್, ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ರವಿಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 5 Dec 2025 10:41 pm

Putin India Visit: ರಾಷ್ಟ್ರಪತಿ ಭವನದಲ್ಲಿ ಭರ್ಜರಿ ಡಿನ್ನರ್, ರಷ್ಯಾಗೆ ವಾಪಸ್ ತೆರಳಿದ ವ್ಲಾದಿಮಿರ್ ಪುಟಿನ್

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿ ಇಡೀ ಪ್ರಪಂಚದ ಗಮನ ಸೆಳೆದಿದ್ದು, ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಜಾಗತಿಕ ಮಟ್ಟದಲ್ಲಿ ಬರೀ ಯುದ್ಧ ಹಾಗೂ ಹಿಂಸಾಚಾರದ ಮಾತುಗಳು ಕೇಳಿ ಬರುತ್ತಿರುವ ಸಮಯದಲ್ಲೇ ರಷ್ಯಾ ಮತ್ತು ಭಾರತವು ಮಾತ್ರ ಶಾಂತಿ ಮಾರ್ಗದ ಚರ್ಚೆ ನಡೆಸಿವೆ. ಅದರಲ್ಲೂ ಸ್ವತಃ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ಒನ್ ಇ೦ಡಿಯ 5 Dec 2025 10:39 pm

ರೂಪಾಯಿ ಮೌಲ್ಯ ಉಳಿಸಿಕೊಳ್ಳಲು ಆರ್‌ಬಿಐ ಮಧ್ಯಪ್ರವೇಶ, ಲಕ್ಷ ಕೋಟಿ ರೂ. ಮೌಲ್ಯದ ಬಾಂಡ್‌ ಖರೀದಿಗೆ ನಿರ್ಧಾರ

ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್‌ಬಿಐ 1 ಲಕ್ಷ ಕೋಟಿ ರೂಪಾಯಿ ಬಾಂಡ್‌ಗಳ ಖರೀದಿಗೆ ಮುಂದಾಗಿದೆ. ಫಾರೆಕ್ಸ್ ಸ್ವಾಪ್‌ಗಳ ಘೋಷಣೆಯೊಂದಿಗೆ, ಮಾರುಕಟ್ಟೆ ಆಧಾರಿತ ರೂಪಾಯಿಯ ಏರಿಳಿತವನ್ನು ನಿಯಂತ್ರಿಸುವುದಾಗಿ ಕೇಂದ್ರೀಯ ಬ್ಯಾಂಕ್‌ ತಿಳಿಸಿದೆ. ಇದೇ ವೇಳೆ ಬಡ್ಡಿ ದರ ಇಳಿಕೆ ಬ್ಯಾಂಕಿಂಗ್ ವ್ಯವಸ್ಥೆಗೆ ನಗದು ಹರಿವು ಹೆಚ್ಚಳ, ಜಿಡಿಪಿ ಬೆಳವಣಿಗೆಯ ನಿರೀಕ್ಷೆ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.

ವಿಜಯ ಕರ್ನಾಟಕ 5 Dec 2025 10:36 pm

ಕೊಲೆ ಪ್ರಕರಣಗಳ ಇಳಿಕೆ, ಪ್ರಸಕ್ತ ವರ್ಷ 1,142 ವರದಿ : ಗೃಹ ಸಚಿವ ಡಾ.ಜಿ.ಪರಮೇಶ್ವರ್

‘2025ರಲ್ಲಿ 13,000ಕ್ಕಿಳಿದ ಸೈಬರ್ ಪ್ರಕರಣಗಳು’

ವಾರ್ತಾ ಭಾರತಿ 5 Dec 2025 10:35 pm

2025ರಲ್ಲಿ ವಿದೇಶಿ ಪ್ರವಾಸಿಗರ ಹೃದಯಗಳನ್ನು ಗೆದ್ದ ವೈರಲ್ ಕಥೆಗಳು

2025ರಲ್ಲಿ ಭಾರತದಲ್ಲಿ ವಿದೇಶಿ ಪ್ರವಾಸಿಗರು ಹಂಚಿದ ಕೆಲವು ಸಕಾರಾತ್ಮಕ ವೈರಲ್ ಕಥೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಜನಪ್ರಿಯಗೊಂಡಿವೆ. ಕೆಲವು ವೈರಲ್‌ ವಿಡಿಯೋದಲ್ಲಿ ಭಾರತೀಯರ ಸಹಾಯಕತೆ ಮತ್ತು ಸಾಂಸ್ಕೃತಿಕ ಸೌಜನ್ಯಯನ್ನ ಗಮನಿಸಬಹುದಾಗಿದೆ. ಭಾರತಕ್ಕೆ ಬಂದ ವಿದೇಶಿಗರು ಇಲ್ಲಿನ ಆಹಾರದಿಂದ ಹಿಡಿದು ಪ್ರವಾಸಿ ತಾಣಗಳನ್ನು ಇಷ್ಟ ಪಡ್ತಾರೆ. ಇಲ್ಲಿನ ಆಚಾರ, ವಿಚಾರ ಸೇರಿದಂತೆ ಹಲವು ವಿಚಾರವನ್ನು ಕಲಿಯುತ್ತಾರೆ. 2025 ರಲ್ಲಿ

ಒನ್ ಇ೦ಡಿಯ 5 Dec 2025 10:28 pm

ನನ್ನ ಹೇಳಿಕೆ ತಿರುಚಲಾಗಿದೆ : ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಬೇಸರ

ಬೆಂಗಳೂರು : 'ಶೇ.63ರಷ್ಟು ಭ್ರಷ್ಟಾಚಾರʼ ಸಂಬಂಧ ನನ್ನ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಮಾತ್ರವಲ್ಲದೆ, ತಿರುಚಲಾಗಿದೆ ಎಂದು ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ತಿರುಚಲಾಗಿದೆ. ರಾಜಕೀಯ ನಾಯಕರು ಇದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ. ನಾನು ನಮ್ಮ ದೇಶ, ನಮ್ಮ ರಾಜ್ಯ ಎಂದು ಸಾಮಾನ್ಯೀಕರಿಸಿ ಮಾಡಿ ಮಾತನಾಡಿದ್ದೇನೆ. ನನ್ನ ಹೇಳಿಕೆಯನ್ನು ಈ ರೀತಿ ಬಳಕೆ ಮಾಡಿಕೊಂಡಿರುವುದು ನನಗೆ ನಿಜಕ್ಕೂ ನೋವು ತಂದಿದೆ ಎಂದರು. ಈ ಭ್ರಷ್ಟಾಚಾರಕ್ಕೆ ಸಮಾಜ ಮತ್ತು ಜನರು ಕೂಡ ಕಾರಣ. ಆರಂಭದಿಂದಲೂ ಎಲ್ಲ ಸರಕಾರಗಳು ಕೂಡ ಭ್ರಷ್ಟಾಚಾರದಲ್ಲಿ ಇವೆ. ನಾನು ಯಾವುದೇ ಒಂದು ನಿರ್ದಿಷ್ಟ ಸರಕಾರ ಎಂದು ಗುರಿಯಾಗಿಸಿ ಹೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವಾರ್ತಾ ಭಾರತಿ 5 Dec 2025 10:24 pm

GST ದರ ಇಳಿಕೆ ಬಿಸಿ; ಕರ್ನಾಟಕದಲ್ಲಿ ವಾಣಿಜ್ಯ ಆದಾಯ ಸಂಗ್ರಹ ಬೆಳವಣಿಗೆ ಕುಸಿತ; ಮಾರ್ಚ್ ವೇಳೆಗೆ ಗುರಿ ಮುಟ್ಟಲು ಸಿಎಂ ತಾಕೀತು

ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಾಣಿಜ್ಯ ತೆರಿಗೆಯಿಂದ 1.20 ಲಕ್ಷ ಕೋಟಿ ರೂ. ಆದಾಯ ಗುರಿ ನಿಗದಿಪಡಿಸಲಾಗಿದೆ. ನವೆಂಬರ್ ಅಂತ್ಯಕ್ಕೆ 72,131 ಕೋಟಿ ರೂ. ಸಂಗ್ರಹವಾಗಿದೆ. ಜಿಎಸ್‌ಟಿ ದರ ಇಳಿಕೆಯಿಂದ ಆದಾಯದ ಬೆಳವಣಿಗೆ ದರ ಕಡಿಮೆಯಾಗಿದೆ. ಆದರೂ, ಮಾರ್ಚ್ ಅಂತ್ಯಕ್ಕೆ ಶೇ.100ರಷ್ಟು ಗುರಿ ಸಾಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಲಾಗಿದ್ದು, ಅಬಕಾರಿ ಇಲಾಖೆಯೂ ಗುರಿ ಸಾಧನೆಗೆ ಕ್ರಮ ಕೈಗೊಳ್ಳಬೇಕಾಗಿದೆ.

ವಿಜಯ ಕರ್ನಾಟಕ 5 Dec 2025 10:24 pm

Excise revenue: ₹43,000 ಕೋಟಿ ಅಬಕಾರಿ ತೆರಿಗೆ ಟಾರ್ಗೆಟ್‌: ಈವರೆಗೆ ಸಂಗ್ರಹವಾಗಿದ್ದೆಷ್ಟು?

ವಿಧಾನಸೌಧದಲ್ಲಿ ತೆರಿಗೆ ಸಂಗ್ರಹ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬಕಾರಿ ತೆರಿಗೆ ಸಂಗ್ರಹದ ವಿಚಾರವಾಗಿ ಮುಂದಿನ ವರ್ಷಕ್ಕೆ ಟಾರ್ಗೆಟ್‌ ನೀಡಿದ್ದಾರೆ. 2025-26ನೇ ಹಣಕಾಸು ಸಾಲಿನಲ್ಲಿ 43,000 ಕೋಟಿ ರೂಪಾಯಿ ಅಬಕಾರಿ ತೆರಿಗೆ ಗುರಿಯನ್ನು ನಿಗದಿಪಡಿಸಲಾಗಿದೆ. ನವೆಂಬರ್‌ ಅಂತ್ಯದವರೆಗೆ 26,215 ಕೋಟಿ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಬಕಾರಿ ತೆರಿಗೆ ಸಂಗ್ರಹದಲ್ಲಿ ಶೇ

ಒನ್ ಇ೦ಡಿಯ 5 Dec 2025 10:17 pm

ಪ್ರವಾಸೋದ್ಯಮ ಪರಿಸರ ವ್ಯವಸ್ಥೆ ನಿರ್ಮಿಸಲು ಬದ್ಧ: ಎಚ್.ಕೆ.ಪಾಟೀಲ್

ಕರ್ನಾಟಕ ಸಂಸ್ಕೃತಿ ರಾಜತಾಂತ್ರಿಕ ಸಮಾವೇಶ

ವಾರ್ತಾ ಭಾರತಿ 5 Dec 2025 10:16 pm

ಭ್ರಷ್ಟಾಚಾರದ ಆರೋಪ ಆಧಾರರಹಿತ : ಕೆಎಸ್‍ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ಸ್ಪಷ್ಟನೆ

‘ಕೆಎಸ್‍ಡಿಎಲ್ ಟೆಂಡರ್ ಸಂಪೂರ್ಣ ಪಾರದರ್ಶಕ’

ವಾರ್ತಾ ಭಾರತಿ 5 Dec 2025 10:12 pm

ನ್ಯಾಷನಲ್ ಹೆರಾಲ್ಡ್ ತನಿಖೆ | ಡಿಸಿಎಂ ಡಿ ಕೆ ಶಿವಕುಮಾರ್‌ ಗೆ ದಿಲ್ಲಿ ಪೊಲೀಸ್ ನೋಟಿಸ್

ಹೊಸದಿಲ್ಲಿ, ಡಿ. 5: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ನಡೆಸುತ್ತಿರುವ ತನ್ನ ತನಿಖೆಯ ಭಾಗವಾಗಿ ವಿಸ್ತೃತ ಹಣಕಾಸು ಹಾಗೂ ವಹಿವಾಟು ಮಾಹಿತಿ ಕೋರಿ ದಿಲ್ಲಿ ಪೊಲೀಸ್‌ನ ಆರ್ಥಿಕ ಅಪರಾಧ ದಳ (ಇಒಡಬ್ಲ್ಯು) ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗೆ ನೋಟಿಸು ಜಾರಿ ಮಾಡಿದೆ. ನವೆಂಬರ್ 29ರ ದಿನಾಂಕದ ನೋಟಿಸಿನ ಪ್ರಕಾರ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಅಕ್ಟೋಬರ್ 3ರಂದು ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಮಾಹಿತಿ ಶಿವಕುಮಾರ್ ಅವರಲ್ಲಿ ಇದೆ ಎಂದು ನಂಬಲಾಗಿದೆ. ಡಿಸೆಂಬರ್ 19ಕ್ಕಿಂತ ಮುನ್ನ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಅಥವಾ ಮನವಿ ಮಾಡಲಾದ ದಾಖಲೆಗಳನ್ನು ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ. ಶಿವಕುಮಾರ್ ಅವರ ವೈಯಕ್ತಿಕ ಹಾಗೂ ರಾಜಕೀಯ ಹಿನ್ನೆಲೆ, ಕಾಂಗ್ರೆಸ್‌ ನೊಂದಿಗಿನ ಅವರ ನಂಟು, ಹಾಗೂ ಅವರು ಅಥವಾ ಅವರು ನಂಟು ಹೊಂದಿದ ಕಂಪೆನಿಗಳು ಯಂಗ್ ಇಂಡಿಯಾಕ್ಕೆ ವರ್ಗಾವಣೆ ಮಾಡಿದ್ದಾರೆ ಎನ್ನಲಾದ ಹಣದ ಸಂಪೂರ್ಣ ವಿವರಗಳನ್ನು ಆರ್ಥಿಕ ಅಪರಾಧ ದಳ (ಇಒಡಬ್ಲ್ಯು) ಕೋರಿದೆ. ಈ ಹಣ ವರ್ಗಾವಣೆಯ ಉದ್ದೇಶ ಹಾಗೂ ಮೂಲ, ಯಂಗ್ ಇಂಡಿಯಾ ಅಥವಾ ಎಐಸಿಸಿ ಅಧಿಕಾರಿಗಳೊಂದಿಗೆ ಯಾವುದೇ ಸಂವನದ ಕುರಿತು ಹಾಗೂ ಇತರರ ಸೂಚನೆ ಮೇರೆಗೆ ಪಾವತಿಗಳನ್ನು ಮಾಡಲಾಗಿದೆಯೇ ಎಂಬ ಮಾಹಿತಿಯನ್ನು ಕೂಡ ತನಿಖಾಧಿಕಾರಿಗಳು ಬಯಸಿದ್ದಾರೆ. ಅವರಿಂದ ಆದಾಯ ತೆರಿಗೆ ಸಲ್ಲಿಕೆ, ಹಣಕಾಸು ವಿವರ ಹಾಗೂ ವಹಿವಾಟಿಗೆ ಸಂಬಂಧಿಸಿದ ದೇಣಿಗೆ ಪ್ರಮಾಣ ಪತ್ರಗಳನ್ನು ಕೂಡ ತನಿಖಾಧಿಕಾರಿಗಳು ಕೋರಿದ್ದಾರೆ. ಈ ನೋಟಿಸ್ ಅನ್ನು ರಾಜಕೀಯ ಪ್ರೇರಿತ ಎಂದು ಶಿವಕುಮಾರ್ ಅವರ ಆಪ್ತ ಮೂಲಗಳು ಕರೆದಿವೆ. ಬಿಜೆಪಿಯೊಂದಿಗೆ ಸಹಕರಿಸದ ಕಾರಣಕ್ಕೆ ಅವರನ್ನು ಗುರಿಯಾಗಿಸಲಾಗಿದೆ. ಅವರು ಹೆಚ್ಚು ಒತ್ತಡಕ್ಕೆ ಒಳಗಾಗಿರುವ ಕಾಂಗ್ರೆಸ್ ನಾಯಕರಲ್ಲಿ ಒಬ್ಬರು. ಅವರನ್ನು ಬಿಜೆಪಿಗೆ ಮಣಿಸಲು ಸಾಧ್ಯವಾಗಲಿಲ್ಲ ಎಂದು ಆಪ್ತ ಮೂಲಗಳು ಹೇಳಿವೆ.

ವಾರ್ತಾ ಭಾರತಿ 5 Dec 2025 10:10 pm

ರೈತರಿಗೆ ಕೇಂದ್ರದಿಂದ ವಿಶೇಷ ಪ್ಯಾಕೇಜ್‍ ಘೋಷಿಸಿ: ಲೋಕಸಭೆಯಲ್ಲಿ ಸಂಸದ ಸಾಗರ್ ಖಂಡ್ರೆ ಆಗ್ರಹ

ಬೀದರ್ : ಬೆಳೆ ಹಾನಿಗೆ ಸಂಬಂಧಿಸಿದ ಕೇಂದ್ರ ಸರಕಾರದ ಪರಿಹಾರ ಮಾನದಂಡಗಳನ್ನು ತಕ್ಷಣವೇ ಪರಿಷ್ಕರಿಸುವಂತೆ ಮತ್ತು ಅತಿವೃಷ್ಠಿಯಿಂದ ಸಂತ್ರಸ್ತರಾದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಲೋಕಸಭೆಯಲ್ಲಿ ಸಂಸದ ಸಾಗರ್ ಖಂಡ್ರೆ ಆಗ್ರಹಿಸಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಸಂಸದ ಸಾಗರ್ ಖಂಡ್ರೆ, ಈ ವರ್ಷ ಬೀದರ್ ಪ್ರದೇಶದಲ್ಲಿ ಅಧಿಕ ಮಳೆಯಿಂದ ತೀವ್ರ ಹಾನಿ ಉಂಟಾಗಿದೆ, ಇದು ಬೆಳೆಗಳು ಮತ್ತು ಕೃಷಿ ಉತ್ಪನ್ನಗಳಲ್ಲಿ ಭಾರೀ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.  ನಷ್ಟದ ಪ್ರಮಾಣಕ್ಕೆ ಹೋಲಿಸಿದರೆ ಕೇಂದ್ರ ಸರಕಾರದ ಮಾರ್ಗಸೂಚಿಗಳ ಅಡಿಯಲ್ಲಿ ಒದಗಿಸಲಾಗುವ ಪ್ರಸ್ತುತ ಪರಿಹಾರವು ಅತ್ಯಂತ ಅಸಮರ್ಪಕವಾಗಿದೆ. ನೀರಾವರಿ ಭೂಮಿಗೆ ಪ್ರತಿ ಎಕರೆಗೆ 7 ಸಾವಿರ ರೂ., ನೀರಾವರಿ ರಹಿತ ಭೂಮಿಗೆ ಪ್ರತಿ ಎಕರೆಗೆ 3,500 ರೂ., ಈ ಮೊತ್ತಗಳು ರೈತರು ತಮ್ಮ ನಷ್ಟದಿಂದ ಚೇತರಿಸಿಕೊಳ್ಳಲು ಅಥವಾ ತಮ್ಮ ಜೀವನೋಪಾಯವನ್ನು ನಿರ್ವಹಿಸಲು ಸಾಕಾಗುವುದಿಲ್ಲ ಎಂದು ಹೇಳಿದರು. ಕೇಂದ್ರದ ನೆರವನ್ನು ರಾಜ್ಯದ ಪ್ರಯತ್ನಗಳಿಗೆ ಹೋಲಿಸಿದ ಸಾಗರ್ ಖಂಡ್ರೆ, ಕರ್ನಾಟಕ ರಾಜ್ಯ ಸರಕಾರವು ಈಗಾಗಲೇ ಸಂತ್ರಸ್ತ ರೈತರಿಗೆ ಹೆಚ್ಚುವರಿ ಆರ್ಥಿಕ ನೆರವು ನೀಡಲು ವಿಶೇಷ ಪ್ಯಾಕೇಜ್ ಘೋಷಿಸಿದೆ. ಕೇಂದ್ರ ಸರಕಾರ ಕೂಡ ಪೂರಕ ಪರಿಹಾರವನ್ನು ಒದಗಿಸಲು ಇದೇ ರೀತಿಯ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಸಾಗರ್ ಖಂಡ್ರೆ, ರೈತರು ಶ್ರದ್ಧೆಯಿಂದ ವಿಮಾ ಕಂತುಗಳನ್ನು ಪಾವತಿಸುತ್ತಿದ್ದರೂ ಅವರಿಗೆ ಸಮಯಕ್ಕೆ ಸರಿಯಾಗಿ ಕ್ಲೈಮ್ ಇತ್ಯರ್ಥಗಳು ಸಿಗುತ್ತಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ವಿಮಾ ಪಾವತಿಗಳು ಹೆಚ್ಚಾಗಿ ವಿಳಂಬವಾಗುತ್ತಿವೆ ಅಥವಾ ನಿರಾಕರಿಸಲ್ಪಡುತ್ತಿವೆ ಎಂದು ಹೇಳಿದರು.   ಈ ಬಗ್ಗೆ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ, ವಿಮಾ ಕಂಪೆನಿಗಳು ಕ್ಲೈಮ್‍ಗಳನ್ನು ತಕ್ಷಣವೇ ಪ್ರಕ್ರಿಯೆಗೊಳಿಸುವುದನ್ನು ಮತ್ತು ಹಣವನ್ನು ವಿಳಂಬವಿಲ್ಲದೆ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.  

ವಾರ್ತಾ ಭಾರತಿ 5 Dec 2025 10:08 pm

ನ್ಯಾಯಾಂಗ ನಿಂದನೆ ಅರ್ಜಿ; ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಪೊಲೀಸರ ದುರ್ನಡತೆ ವಿರುದ್ಧ ದಾಖಲಾಗುವ ದೂರಿನ ವಿಚಾರಣೆ ನಡೆಸುವ ಬೆಂಗಳೂರು ನಗರ ಜಿಲ್ಲಾ ಪೊಲೀಸ್‌ ದೂರು ಪ್ರಾಧಿಕಾರದಲ್ಲಿ ಖಾಲಿ ಇರುವ ಒರ್ವ ಸದಸ್ಯ ಸ್ಥಾನವನ್ನು ಭರ್ತಿ ಮಾಡದ ವಿಚಾರಕ್ಕೆ ಸಂಬಂದಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದೆ. ಹೈಕೊರ್ಟ್‌ ನಿರ್ದೇಶನದ ಹೊರತಾಗಿಯೂ ಪ್ರಾಧಿಕಾರದಲ್ಲಿ ಖಾಲಿಯಿರುವ ಸದಸ್ಯ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಲು ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ಎಸ್‌. ಬಾಲಾಜಿ ಎಂಬುವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್‌, ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್‌, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌, ಬಾಗಲಗುಂಟೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಹನುಮಂತ ರಾಜುಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು 2026ರ ಮಾರ್ಚ್ 12ಕ್ಕೆ ಮುಂದೂಡಿತು. ಅರ್ಜಿದಾರರ ಮನವಿ: ಬೆಂಗಳೂರು ಜಿಲ್ಲಾ ಪೊಲೀಸ್‌ ದೂರು ಪ್ರಾಧಿಕಾರದಲ್ಲಿ ಖಾಲಿಯಿರುವ ಒರ್ವ ಸದಸ್ಯ ಸ್ಥಾನಕ್ಕೆ ಒಂದು ತಿಂಗಳಲ್ಲಿ ನಾಮ ನಿರ್ದೇಶನ ಮಾಡಬೇಕು ಎಂದು 2025ರ ಆಗಸ್ಟ್ 19ರಂದು ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಸರಕಾರಕ್ಕೆ ಆದೇಶಿಸಿದೆ. ಆದರೆ, ನ್ಯಾಯಾಲಯ ನಿಗದಿಪಡಿಸಿದ ಕಾಲಮಿತಿ ಪೂರ್ಣಗೊಂಡರೂ ಈವರೆಗೆ ದೂರು ಪ್ರಾಧಿಕಾರಕ್ಕೆ ಸದಸ್ಯರನ್ನು ನೇಮಿಸಿಲ್ಲ. ಆದ್ದರಿಂದ, ನ್ಯಾಯಾಲಯದ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅಪರಾಧಡಿ ಕ್ರಮ ಜರುಗಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ವಾರ್ತಾ ಭಾರತಿ 5 Dec 2025 10:04 pm

ಕಂಬಳದಲ್ಲಿ ಕಠಿಣ ನಿಯಮ, ಇನ್ಮುಂದೆ ನಿಶಾನೆಗೆ ನೀರು ಹಾಯಿಸಿದ್ರೆ ಮಾತ್ರ ಬಹುಮಾನ !

ಕಂಬಳದಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕನೆ ಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದರೆ ಮಾತ್ರ ಬಹುಮಾನ ನೀಡಲಾಗುವುದು. ಅಲ್ಲದೆ, ಕೋಣಗಳನ್ನು ಇಳಿಸಲು ಮತ್ತು ಬಿಡಲು ನಿರ್ದಿಷ್ಟ ಸಮಯ ನಿಗದಿಪಡಿಸಲಾಗಿದ್ದು, 24 ಗಂಟೆಯೊಳಗೆ ಕಂಬಳ ಪಂದ್ಯಗಳನ್ನು ಮುಗಿಸಲು ಆದ್ಯತೆ ನೀಡಲಾಗಿದೆ.

ವಿಜಯ ಕರ್ನಾಟಕ 5 Dec 2025 9:59 pm

ರೈತರ ವಿಚಾರ ಬಂದಾಗ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು : ಶಾಸಕಿ ಕರೆಮ್ಮ ಜಿ ನಾಯಕ್‌

ದೇವದುರ್ಗ: ರೈತರ ವಿಚಾರದಲ್ಲಿ ಅಧಿಕಾರಿಗಳು ಪ್ರಮಾಣಿಕವಾಗಿ ಸೇವೆ ಸಲ್ಲಿಸಬೇಕು. ಹತ್ತಿ ಖರೀದಿ ಕೇಂದ್ರದಲ್ಲಿರುವ ಹಲವು ಸಮಸ್ಯೆಗಳನ್ನು ರೈತರು ಪರಿಹರಿಸಬೇಕು ಎಂದು ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು. ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ರೈತರು ಹಾಗೂ ಜಿನ್ನಿಂಗ್‌ ಫ್ಯಾಕ್ಟರಿಗಳ ಮಾಲೀಕರ ಸಭೆಯಲ್ಲಿ ಮಾತನಾಡಿದ ಶಾಸಕಿ ಕರೆಮ್ಮ ಜಿ. ನಾಯಕ, ಆನ್‌ಲೈನ್‌ ಮೂಲಕ ಅಪ್ಲೋಡ್‌ ಮಾಡಲು ತಾಂತ್ರಿಕ ಸಮಸ್ಯೆಯಿಂದ ರೈತರು ಬೇಸೆತ್ತಿದ್ದಾರೆ. ಹಲವು ರೈತರು ಸಮಸ್ಯೆ ಕುರಿತು ನನ್ನ ಬಳಿ ಹೇಳಿಕೊಂಡಿದ್ದಾರೆ. ಹತ್ತಿ ಖರೀದಿ ಕೇಂದ್ರದಲ್ಲಿರುವ ಸಮಸ್ಯೆಗಳು ಕೂಡಲೇ ಸರಿಪಡಿಸಬೇಕು. ಪದೇ-ಪದೇ ರೈತರು ನನ್ನ ಹತ್ತಿರ ಬರದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಹೇಳಿದರು.  ಬೆಳಿಗ್ಗೆಯಿಂದ ಸಂಜೆವರೆಗೆ ಹತ್ತಿ ಖರೀದಿ ಕೇಂದ್ರದಲ್ಲಿ ಹತ್ತಿ ತುಂಬಿದ ವಾಹನಗಳು ನಿಲ್ಲಿಸಿಕೊಂಡು ಸಂಜೆ ನಂತರ ವಾಪಸ್‌ ಕಳುಹಿಸುವುದು ಏಕೆ ಎಂದು ರೈತ ಮುಖಂಡ ನರಸಣ್ಣ ನಾಯಕ ಜಾಲಹಳ್ಳಿ ಅಧಿಕಾರಿಗಳಿಗೆ ಪ್ರಶ್ನಿಸಿದರು. ಹೇರುಂಡಿ ಗ್ರಾಮದ ಕಂದಾಯ ವಿಎ ರೈತರಿಗೆ ಪರಿಹಾರ ನೀಡುವ ಹೆಸರಿನಲ್ಲಿ ಲಕ್ಷಾಂತರ ರೂ.ವಂಚನೆ ಮಾಡಿದ್ದಾರೆ. ಅವರನ್ನು ಅಮಾನತು ಮಾಡುವ ಜೊತೆಗೆ ಹಣ ವಸೂಲಿ ಮಾಡಬೇಕು. ಅತಿವೃಷಿಯಲ್ಲಿ ಬೆಳೆ ಹಾನಿಯಾಗಿ ಬಹುತೇಕ ರೈತರಿಗೆ ಪರಿಹಾರ ಬಂದಿಲ್ಲ. ಕೂಡಲೇ ರೈತರಿಗೆ ಪರಿಹಾರದ ಹಣ ಬರುವಂತೆ ತಹಶೀಲ್ದಾರಿಗೆ ಸೂಚನೆ ನೀಡಿದರು. ರೈತರಿಗೆ ಮೋಸ ಮಾಡುವ ಅಧಿಕಾರಿಗಳ ವಿರುದ್ಧ ಮುಲ್ಲಾಜಿಲ್ಲದೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಶಾಸಕಿ ಕರೆಮ್ಮ ನಾಯಕ್‌ ಹೇಳಿದರು.

ವಾರ್ತಾ ಭಾರತಿ 5 Dec 2025 9:57 pm

ಕೂಡಂಕುಳಂ ಪರಮಾಣು ಸ್ಥಾವರದ ಪೂರ್ಣ ಸಾಮರ್ಥ್ಯ ಅಭಿವೃದ್ಧಿಗೆ ಬದ್ಧ: ಜಂಟಿ ಸುದ್ದಿಗೋಷ್ಠಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಘೋಷಣೆ

ಹೊಸದಿಲ್ಲಿ,ಡಿ.5: ಭಾರತದ ಅತ್ಯಂತ ದೊಡ್ಡ ಪರಮಾಣು ಸ್ಥಾವರವಾಗಿರುವ ಕೂಡಂಕುಳಂನಲ್ಲಿ ರಷ್ಯಾ ಭಾರತದೊಂದಿಗೆ ಸಹಕರಿಸುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ತಮಿಳುನಾಡಿನ ಕೂಡಂಕುಳಂ ಪರಮಾಣು ಸ್ಥಾವರದಲ್ಲಿಯ ಆರು ರಿಯಾಕ್ಟರ್‌ ಗಳ ಪೈಕಿ ಎರಡು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಅದು ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ ಬದ್ಧತೆಯನ್ನು ರಷ್ಯಾ ಹೊಂದಿದೆ. ‘ಕೂಡಂಕುಳಂನಲ್ಲಿ ಭಾರತದ ಅತ್ಯಂತ ದೊಡ್ಡ ಪರಮಾಣು ಸ್ಥಾವರ ನಿರ್ಮಾಣಕ್ಕೆ ಪ್ರಮುಖ ಯೋಜನೆಯೊಂದನ್ನು ನಾವು ಕಾರ್ಯಗತಗೊಳಿಸುತ್ತಿದ್ದೇವೆ. ಆರು ರಿಯಾಕ್ಟರ್‌ ಗಳ ಪೈಕಿ ಎರಡು ಈಗಾಗಲೇ ವಿದ್ಯುತ್ ಜಾಲದೊಂದಿಗೆ ಸಂಪರ್ಕಗೊಂಡಿದ್ದು, ನಾಲ್ಕು ರಿಯಾಕ್ಟರ್‌ ಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. ಈ ಪರಮಾಣು ಸ್ಥಾವರವು ಅದರ ಪೂರ್ಣ ಸಾಮರ್ಥ್ಯವನ್ನು ತಲುಪುವಂತೆ ಮಾಡುವುದು ಭಾರತದ ವಿದ್ಯುತ್ ಅಗತ್ಯಗಳಿಗೆ ಪ್ರಭಾವಶಾಲಿ ಕೊಡುಗೆಯನ್ನು ನೀಡುತ್ತದೆ ’ಎಂದು ಪುಟಿನ್ ಹೇಳಿದರು. ರಷ್ಯಾದ ಸರಕಾರಿ ಸ್ವಾಮ್ಯದ ಪರಮಾಣು ನಿಗಮ ರೋಸಾಟಮ್ ಕೂಡಂಕುಳಂ ಸ್ಥಾವರದ ಮೂರನೇ ರಿಯಾಕ್ಟರ್‌ ಗಾಗಿ ಪರಮಾಣು ಇಂಧನದ ಮೊದಲ ಕಂತಿನ ಪೂರೈಕೆಯನ್ನು ದೃಢಪಡಿಸಿದ ಬಳಿಕ ಪುಟಿನ್ ಹೇಳಿಕೆಗಳು ಹೊರಬಿದ್ದಿವೆ. ಶುಕ್ರವಾರ ನಡೆದ ದ್ವಿಪಕ್ಷೀಯ ಮಾತುಕತೆಗಳಲ್ಲಿ ಪುಟಿನ್ ಮತ್ತು ಮೋದಿ ಇಂಧನ ಕ್ಷೇತ್ರದಲ್ಲಿ ಸಹಕಾರ ವಿಸ್ತರಣೆ ಸೇರಿದಂತೆ ಹಲವಾರು ದ್ವಿಪಕ್ಷೀಯ ವಿಷಯಗಳನ್ನು ಚರ್ಚಿಸಿದರು. ‘ಸಣ್ಣ ಮಾಡ್ಯುಲರ್ ರಿಯಾಕ್ಟರ್‌ ಗಳು ಮತ್ತು ತೇಲುವ ಪರಮಾಣು ವಿದ್ಯುತ್ ಸ್ಥಾವರಗಳ ಕುರಿತು ಹಾಗೂ ಔಷಧಿ ಅಥವಾ ಕೃಷಿಯಂತಹ ಪರಮಾಣು ತಂತ್ರಜ್ಞಾನಗಳ ಇಂಧನೇತರ ಅನ್ವಯಿಕೆಗಳ ಬಗ್ಗೆ ಉಭಯ ದೇಶಗಳು ಮಾತನಾಡಬಹುದು ಎಂದು ನಾವು ಭಾವಿಸಿದ್ದೇವೆ’ ಎಂದೂ ಪುಟಿನ್ ನುಡಿದರು. ರಷ್ಯಾ ತೈಲ, ಅನಿಲ, ಕಲ್ಲಿದ್ದಲು ಮತ್ತು ಭಾರತದ ಇಂಧನ ಕ್ಷೇತ್ರದ ಅಭಿವೃದ್ಧಿಗಾಗಿ ಅಗತ್ಯವಿರುವ ಪ್ರತಿಯೊಂದರ ವಿಶ್ವಾಸಾರ್ಹ ಪೂರೈಕೆದಾರನಾಗಿದೆ ಎಂದು ಹೇಳಿದ ಪುಟಿನ್, ವೇಗವಾಗಿ ಬೆಳೆಯುತ್ತಿರುವ ಭಾರತೀಯ ಆರ್ಥಿಕತೆಗಾಗಿ ನಿರಂತರ ಇಂಧನ ರವಾನೆಯ ಭರವಸೆಯನ್ನು ನೀಡಿದರು. ದೇಶದ ದಕ್ಷಿಣ ತುದಿಯಲ್ಲಿರುವ ಕೂಡಂಕುಳಂ ಪರಮಾಣು ಸ್ಥಾವರವು 6,000 ಮೆಗಾವ್ಯಾಟ್‌ ಗಳ ಒಟ್ಟು ಸಾಮರ್ಥ್ಯದೊಂದಿಗೆ ಆರು ವಿವಿಇಆರ್-1000 ರಿಯಾಕ್ಟರ್‌ ಗಳನ್ನು ಹೊಂದಲು ಸಜ್ಜಾಗಿದೆ. ಮೊದಲ ಎರಡು ರಿಯಾಕ್ಟರ್‌ ಗಳನ್ನು 2013 ಮತ್ತು 2016ರಲ್ಲಿ ವಿದ್ಯುತ್ ಜಾಲದೊಂದಿಗೆ ಸಂಪರ್ಕಿಸಲಾಗಿದ್ದು, ಇತರ ನಾಲ್ಕು ರಿಯಾಕ್ಟರ್‌ ಗಳು ಇನ್ನೂ ನಿರ್ಮಾಣಗೊಳ್ಳುತ್ತಿವೆ. ರಷ್ಯಾ ದೀರ್ಘಾವಧಿಯ ಆಧಾರದಲ್ಲಿ ಪರಮಾಣು ಸ್ಥಾವರಕ್ಕೆ ಯುರೇನಿಯಂ ಇಂಧನವನ್ನು ಪೂರೈಸುತ್ತಿದೆ. ರೋಸಾಟಮ್ ಮೂರನೇ ರಿಯಾಕ್ಟರ್‌ ಗಾಗಿ ಇಂಧನ ಜೋಡಣೆಗಳನ್ನು ಶುಕ್ರವಾರ ಕಾರ್ಗೋ ವಿಮಾನದ ಮೂಲಕ ಭಾರತಕ್ಕೆ ತಲುಪಿಸಿದೆ. ಮೂರನೇ ಮತ್ತು ನಾಲ್ಕನೇ ರಿಯಾಕ್ಟರ್‌ ಗಳಿಗೆ ಅವುಗಳ ಸಂಪೂರ್ಣ ಸೇವಾವಧಿಗೆ ಇಂಧನ ಪೂರೈಕೆಗಾಗಿ 2024ರಲ್ಲಿ ಮಾಡಿಕೊಳ್ಳಲಾಗಿರುವ ಒಪ್ಪಂದದಡಿ ರಷ್ಯಾದಿಂದ ಸಂಪೂರ್ಣ ಪೂರೈಕೆಯು ಏಳು ವಿಮಾನಗಳಲ್ಲಿ ಭಾರತವನ್ನು ತಲುಪಲಿದೆ.

ವಾರ್ತಾ ಭಾರತಿ 5 Dec 2025 9:56 pm

ಸುಳ್ಯ | ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಮೃತ್ಯು

ಸುಳ್ಯ : ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಗುತ್ತಿಗಾರಿನ ಚಿಕ್ಕುಳಿಯಲ್ಲಿ ನಡೆದಿದೆ. ಗುತ್ತಿಗಾರಿನ ಚಿಕ್ಕುಳಿ ಬಳಿಯ ನಿವಾಸಿ ಕುಕ್ಕೆ ಸುಬ್ರಹ್ಮಣ್ಯ ಪದವಿ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ ಪೂಜಾ (19) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಪೂಜಾ ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿದ್ದರು. ಅಸ್ವಸ್ಥಗೊಂಡ ಆಕೆಯನ್ನು ಎರಡು ದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎMದು ತಿಳಿದು ಬಂದಿದೆ. ಅವರಿಗೆ ತಂದೆ, ತಾಯಿ, ಸಹೋದರ, ಸಹೋದರಿ ಇದ್ದಾರೆ.

ವಾರ್ತಾ ಭಾರತಿ 5 Dec 2025 9:53 pm

ಉಡುಪಿ | ಡಿ.21ರಂದು ವಿದ್ಯಾರ್ಥಿವೇತನಕ್ಕೆ ಪ್ರತಿಭಾನ್ವೇಷಣಾ ಪರೀಕ್ಷೆ

ಉಡುಪಿ, ಡಿ.5: ನಗರದ ಕಿದಿಯೂರು ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಹೈದರಾಬಾದಿನ ಆರ್‌ಜಿಎಫ್ ಸಂಸ್ಥೆಯ ಸಹಯೋಗದಲ್ಲಿ ನಿಟ್ಟೂರಿನ ಲಾರ್ಡ್ಸ್ ಇಂಟರ್‌ನೇಷನಲ್ ರೆಸಿಡೆನ್ಷಿಯಲ್ ಸ್ಕೂಲ್‌ನ ಆಶ್ರಯದಲ್ಲಿ ಉಡುಪಿ ಆಸುಪಾಸಿನ ಒಂದರಿಂದ 9ನೇ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ವೇತನಕ್ಕಾಗಿ ಇದೇ ಡಿ.21ರಂದು ಬೆಳಗ್ಗೆ 10ರಿಂದ 12ಗಂಟೆಯವರೆಗೆ ಪ್ರತಿಭಾನ್ವೇಷಣೆ ಪರೀಕ್ಷೆ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಭುವನೇಂದ್ರ ಕಿದಿಯೂರು ತಿಳಿಸಿದ್ದಾರೆ. ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊಟೇಲ್ ಉದ್ಯಮಿಯೂ ಆಗಿರುವ ಭುವನೇಂದ್ರ ಕಿದಿಯೂರು ಉಡುಪಿ, ಆಸುಪಾಸಿನಲ್ಲಿರುವ ಎಲ್ಲಾ ಶಾಲೆಗಳ, ಎಲ್ಲಾ ಪಠ್ಯಕ್ರಮಗಳಲ್ಲಿ ಕಲಿಯುತ್ತಿರುವ ಒಂದರಿಂದ 9ನೇ ತರಗತಿಯ ವಿದ್ಯಾಥಿಗಳು ಇದರಲ್ಲಿ ಭಾಗವಹಿಸಬಹುದು ಎಂದರು. ಒಟ್ಟು ಮೂರು ಕೋಟಿ ರೂ. ವಿದ್ಯಾರ್ಥಿ ವೇತನ ನೀಡುವ ಗುರಿಯಿದ್ದು, ಪ್ರತಿ ವಿಭಾಗದಿಂದ ತಲಾ 10 ಮಂದಿ ಟಾಪರ್‌ಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಯೂ ಹತ್ತನೇ ತರಗತಿ ಉತ್ತೀರ್ಣರಾಗುವವರೆಗೆ ವಿದ್ಯಾರ್ಥಿ ವೇತನ ಪ್ರತಿವರ್ಷ ನೀಡಲಾಗುವುದು ಎಂದು ಅವರು ವಿವರಿಸಿದರು. ಉಡುಪಿ ಕಿದಿಯೂರು ಹೊಟೇಲಿನ ಅನಂತಶಯನ ಸಭಾಂಗಣದಲ್ಲಿ ಡಿ.21ರಂದು ಈ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಮೊದಲೇ ಹೆಸರು ನೊಂದಾಯಿಸಬಹುದು ಅಥವಾ ಪರೀಕ್ಷಾ ಸ್ಥಳದಲ್ಲಿ ಅದೇ ದಿನ ಹೆಸರು ನೊಂದಾಯಿಸಿ ನೇರವಾಗಿ ಪರೀಕ್ಷೆ ಬರೆಯಬಹುದು ಎಂದರು. ಒಟ್ಟು ಸುಮಾರು 3000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ ಇದೆ ಎಂದರು. ಹೈದರಾಬಾದ್‌ನ ಆರ್‌ಜಿಎಫ್ ಸಂಸ್ಥೆಯ ಸಿಇಓ ರವೀಂದ್ರ ನಾಯ್ದು ಮಾತನಾಡಿ, ಅದೇ ದಿನ ಮಕ್ಕಳ ಹೆತ್ತವರು ಹಾಗೂ ಪೋಷಕರಿಗೂ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿದೆ. ಮಕ್ಕಳ ಪಾಲನಾ ಕೌಶಲ್ಯ, ಮಾಹಿತಿ ಹಾಗೂ ಅರಿವು ಕಾರ್ಯಾಗಾರ ನಡೆಯಲಿದೆ ಎಂದರು. ಲಾರ್ಡ್ಸ್ ಇಂಟರ್‌ನೇಷನಲ್ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ಒಂದರಿಂದ ಐದನೇ ತರಗತಿ ಮಕ್ಕಳಿಗೆ ಸ್ಪಾರ್ಕ್ ಕಾರ್ಯಕ್ರಮ ಹಾಗೂ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂಟೆಗ್ರೇಟೆಡ್ ಫೌಂಡೇಷನ್ ಕೋಚಿಂಗ್‌ನ್ನು ನೀಡಲಾಗುತ್ತಿದೆ. ಇದರಿಂದ 10ನೇ ತರಗತಿಯಿಂದ ಹೊರಬರುವ ವಿದ್ಯಾರ್ಥಿ ಮುಂದಿನ ಗುರಿಯ ಕುರಿತು ಸ್ಪಷ್ಟತೆಯನ್ನು ಹೊಂದಿರುತ್ತಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನವೀನ್ ಶೆಟ್ಟಿ, ವಿಲಾಸ್‌ಕುಮಾರ್ ಹಾಗೂ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Dec 2025 9:49 pm

ಅಂತರಾಷ್ಟ್ರೀಯ ನೆರವು ಕಡಿತದಿಂದ ಮಕ್ಕಳ ಸಾವು ಹೆಚ್ಚಳ: ಬಿಲ್ ಗೇಟ್ಸ್ ಎಚ್ಚರಿಕೆ

ನ್ಯೂಯಾರ್ಕ್, ಡಿ.5: ಶ್ರೀಮಂತ ರಾಷ್ಟ್ರಗಳು ಅಂತರಾಷ್ಟ್ರೀಯ ನೆರವನ್ನು ತೀವ್ರವಾಗಿ ಕಡಿತಗೊಳಿಸಿರುವುದರಿಂದ ಜಾಗತಿಕ ಮಕ್ಕಳ ಸಾವಿನ ಪ್ರಮಾಣ ಹೆಚ್ಚಲಿದೆ. 2000ದ ಆರಂಭದಿಂದ ಸಾಧಿಸಿದ ಪ್ರಗತಿ ಈಗ ಅಪಾಯದಲ್ಲಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಮತ್ತು ದಾನಿ ಬಿಲ್ ಗೇಟ್ಸ್ ಹೇಳಿದ್ದಾರೆ. ಅಮೆರಿಕಾ ಅಂತರಾಷ್ಟ್ರೀಯ ನೆರವಿನಲ್ಲಿ ಅತ್ಯಧಿಕ ಕಡಿತ ಮಾಡಿದ ರಾಷ್ಟ್ರವಾಗಿದೆ. ಎಲಾನ್ ಮಸ್ಕ್ ಅವರ ನೇತೃತ್ವದ `ಸರಕಾರದ ಕಾರ್ಯದಕ್ಷತೆ ಇಲಾಖೆ'ಯು ಯುಎಸ್‍ಎಯ್ಡ್(ಅಂತರಾಷ್ಟ್ರೀಯ ಅಭಿವೃದ್ಧಿಗಾಗಿ ಅಮೆರಿಕಾದ ಏಜೆನ್ಸಿ) ಅನುದಾನವನ್ನು ಥಟ್ಟನೆ ನಿಲ್ಲಿಸಿದ್ದು ಈ ಕ್ರಮವು ಬಹಳಷ್ಟು ಸಾವಿಗೆ ಕಾರಣವಾಗಿದೆ. ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಕೂಡಾ ಸಾಗರೋತ್ತರ ನೆರವನ್ನು `ಅಸಮಾನವಾಗಿ' ಕಡಿತಗೊಳಿಸಿದೆ ಎಂದು ಗೇಟ್ಸ್ ಹೇಳಿರುವುದಾಗಿ AFP ಸುದ್ದಿಸಂಸ್ಥೆ ವರದಿ ಮಾಡಿದೆ. ಗೇಟ್ಸ್ ಪ್ರತಿಷ್ಠಾನದ ವರದಿಯ ಪ್ರಕಾರ 2025ರಲ್ಲಿ 5ರ ಕೆಳಹರೆಯದ ಮಕ್ಕಳ ಸಾವಿನ ಪ್ರಮಾಣ 4.8 ದಶಲಕ್ಷಕ್ಕೆ ಏರಿಕೆಯಾಗಲಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು 2 ಲಕ್ಷದಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಿನ ಪ್ರಮಾಣದಲ್ಲಿ 27% ಇಳಿಕೆಯಾಗಿರುವುದು ಎಚ್‍ಐವಿ, ಮಲೇರಿಯಾ, ಪೋಲಿಯೊ ಹಾಗೂ ಇತರ ತಡೆಯಬಹುದಾದ ರೋಗಗಳ ನಿಯಂತ್ರಣದಲ್ಲಿ ಮಾಡಿರುವ ಪ್ರಗತಿಗೆ ಬೆದರಿಕೆ ಒಡ್ಡಿದೆ. ಸುಮಾರು 30%ದಷ್ಟು ಕಡಿತವು ಮುಂದುವರಿದರೆ 2045ರ ವೇಳೆಗೆ 16 ದಶಲಕ್ಷ ಹೆಚ್ಚುವರಿ ಸಾವು ಸಂಭವಿಸಬಹುದು ಎಂದು ಗೇಟ್ಸ್ ಎಚ್ಚರಿಸಿದ್ದಾರೆ. ಯುಎಸ್‍ಎಯ್ಡ್ ನೆರವು ಸ್ಥಗಿತಗೊಳಿಸಿದ ಬಳಿಕ ಪರಿಸ್ಥಿತಿ ಅಸ್ತವ್ಯಸ್ತಗೊಂಡಿದೆ ಎಂದವರು ಟೀಕಿಸಿದ್ದು ಸಹಾಯವನ್ನು ಮರುಸ್ಥಾಪಿಸುವ ಬಗ್ಗೆ ಅಧ್ಯಕ್ಷ ಟ್ರಂಪ್ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ.

ವಾರ್ತಾ ಭಾರತಿ 5 Dec 2025 9:46 pm

ಭಾರತ-ರಶ್ಯ ಶೃಂಗಸಭೆ | ಭಾರತವು ತಟಸ್ಥವಲ್ಲ,ಅದು ಶಾಂತಿಯ ಪರವಾಗಿದೆ: ಮೋದಿ

ಉಭಯ ದೇಶಗಳ ನಡುವಿನ ಆಳವಾದ ಸಂಬಂಧವನ್ನು ಪ್ರಶಂಸಿಸಿದ ಪುಟಿನ್

ವಾರ್ತಾ ಭಾರತಿ 5 Dec 2025 9:45 pm

ಉತ್ತರ ಪ್ರದೇಶ: ‘ಅಕ್ಬರ್‌ಪುರ’ದ ಮೇಲೆ ‘ರಘುವರಪುರ’ ಎಂದು ಬರೆದ ಕಿಡಿಗೇಡಿಗಳು

ಲಕ್ನೋ, ಡಿ. 5: ದಿಲ್ಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮಥುರಾ ಜಿಲ್ಲೆಯ ಗ್ರಾಮವೊಂದರ ನಾಮಫಲಕವನ್ನು ವಿರೂಪಗೊಳಿಸಿರುವ ಕಿಡಿಗೇಡಿಗಳು, ‘ಅಕ್ಬರ್‌ಪುರ’ ಹೆಸರಿನ ಮೇಲೆ ಬಣ್ಣ ಬಳಿದು ಅದರ ಮೇಲೆ ‘ರಘುವರಪುರ’ ಎಂಬುದಾಗಿ ಬರೆದಿದ್ದಾರೆ. ಇದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ, ಈ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ತಿಂಗಳು ಬಾಗೇಶ್ವರ ಧಾಮ ದೇವಸ್ಥಾನದ ಪ್ರಧಾನ ಅರ್ಚಕ ಧೀರೇಂದ್ರ ಕೃಷ್ಣ ಶಾಸ್ತ್ರಿ ದಿಲ್ಲಿಯಿಂದ ವೃಂದಾವನಕ್ಕೆ ಪಾದಯಾತ್ರೆಯಲ್ಲಿ ಹೋಗಿದ್ದು, ದಾರಿಯಲ್ಲಿ ‘ಅಕ್ಬರ್‌ಪುರ’ ನಾಮಫಲಕವನ್ನು ನೋಡಿ ಅದನ್ನು ‘ರಘುವರಪುರ’ ಎಂಬುದಾಗಿ ಬದಲಾಯಿಸಬೇಕು ಎಂದು ಹೇಳಿದ್ದರು. ಅವರ ಮಾತಿಗೂ, ನಾಮಫಲಕ ವಿರೂಪಕ್ಕೂ ಸಂಬಂಧವಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅವರ ಮಾತುಗಳಿಂದ ಪ್ರೇರಿತರಾಗಿ ಅಜ್ಞಾತ ವ್ಯಕ್ತಿಗಳು ನಾಮಫಲಕವನ್ನು ವಿರೂಪಗೊಳಿಸಿರಬಹುದಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ವಾರ್ತಾ ಭಾರತಿ 5 Dec 2025 9:39 pm

ಕಲಬುರಗಿ| ಜಾತಿ ನಿಂದನೆಗೈದು ಕೊಲೆ ಯತ್ನ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ

ಕಲಬುರಗಿ: ಜಾತಿ ನಿಂದನೆಗೈದು ಕೊಲೆ ಮಾಡಲು ಯತ್ನಿಸಿದ ಅಪರಾಧಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 16 ಸಾವಿರ ರೂ. ದಂಡವನ್ನು ವಿಧಿಸಿದೆ. ಶೇಖರ್ ಅಲಿಯಾಸ್‌ ರಾಜಶೇಖರ ರಾಣಪ್ಪ ತೆನೂರ್‌ ಶಿಕ್ಷೆಗೆ ಗುರಿಯಾದಾತ. ಈತ ಕಲಬುರಗಿ ನಗರದ ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಮೋಹನ್‌ ಲಾಡ್ಜ್‌ ಹತ್ತಿರದ ಪೂರ್ಣಿಮಾ ಮದ್ಯದಂಗಡಿ ಬಳಿ 2024ರ ಮೇ 22ರಂದು ವ್ಯಕ್ತಿಯೊಬ್ಬನಿಗೆ ಜಾತಿ ನಿಂದನೆಗೈದು ಕೊಲೆಗೆ ಯತ್ನಿಸಿದ್ದ.  ಈ ಕುರಿತು ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ವಿಚಾರಣೆ ನಡೆಸಿದ ಮೋಹನ ಬಾಡಗಂಡಿ ಅವರ ಪೀಠ, ಆರೋಪಿಯ ಅಪರಾಧ ಸಾಬೀತಾಗಿದ್ದರಿಂದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ  ಅಭಿಯೋಜಕ ರಾಜಮಹೇಂದ್ರ ಜಿ. ವಾದ ಮಂಡಿಸಿದ್ದರು. ತನಿಖಾಧಿಕಾರಿಯಾದ ಎಸಿಪಿ ಭೂತೇಗೌಡ ವಿ.ಎಸ್‌. ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ವಾರ್ತಾ ಭಾರತಿ 5 Dec 2025 9:39 pm

ಸಹಕಾರಿ ಬ್ಯಾಂಕ್‌ ಗಳನ್ನು ಉಳಿಸಲು ದೇವಸ್ಥಾನದ ಹಣವನ್ನು ಬಳಸಬಾರದು: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಡಿ. 5: ದೇವಸ್ಥಾನಕ್ಕೆ ಸೇರಿದ ಹಣವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಹಕಾರಿ ಬ್ಯಾಂಕ್‌ ಗಳನ್ನು ಮೇಲೆತ್ತಲು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಕೆಲವು ಸಹಕಾರಿ ಬ್ಯಾಂಕ್‌ ಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರನ್ನೊಳ ನ್ಯಾಯಪೀಠವೊಂದು ಈ ಆದೇಶ ನೀಡಿದೆ. ಕೇರಳ ಹೈಕೋರ್ಟ್ ಈ ಸಹಕಾರಿ ಬ್ಯಾಂಕ್‌ ಗಳಿಗೆ ತಿರುನೆಲ್ಲಿ ದೇವಸ್ಥಾನ ದೇವಸ್ವಮ್‌ ನ ಠೇವಣಿಗಳನ್ನು ಹಿಂದಿರುಗಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಬ್ಯಾಂಕ್‌ ಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ‘‘ಬ್ಯಾಂಕನ್ನು ಉಳಿಸಲು ದೇವಸ್ಥಾನದ ಹಣವನ್ನು ಬಳಸಲು ನೀವು ಬಯಸಿದ್ದೀರಾ? ದೇವಸ್ಥಾನದ ಹಣವು ಕಷ್ಟದಲ್ಲಿ ಉಸಿರಾಡುತ್ತಿರುವ ಸಹಕಾರಿ ಬ್ಯಾಂಕ್‌ ನಲ್ಲಿ ಇರುವ ಬದಲು ಗರಿಷ್ಠ ಬಡ್ಡಿ ನೀಡಬಲ್ಲ ಆರೋಗ್ಯಕರ ರಾಷ್ಟ್ರೀಕೃತ ಬ್ಯಾಂಕೊದಕ್ಕೆ ಹೋಗಬೇಕು ಎಂಬ ಆದೇಶದಲ್ಲಿ ಏನು ತಪ್ಪಿದೆ’’ ಎಂದು ಮುಖ್ಯ ನ್ಯಾಯಾಧೀಶರು ಪ್ರಶ್ನಿಸಿದರು. ‘‘ದೇವಸ್ಥಾನದ ಹಣ ದೇವರಿಗೆ ಸೇರಿದ್ದು. ಹಾಗಾಗಿ, ಹಣವನ್ನು ರಕ್ಷಿಸಿಡಬೇಕು ಮತ್ತು ದೇವಸ್ಥಾನದ ಉದ್ದೇಶಗಳಿಗಾಗಿ ಮಾತ್ರ ಉಪಯೋಗಿಸಬೇಕು. ಅದು ಸಹಕಾರಿ ಬ್ಯಾಂಕೊಂದರ ಆದಾಯದ ಮೂಲ ಅಥವಾ ಅದನ್ನು ಉಳಿಸುವ ಸಾಧನವಾಗಬಾರದು’’ ಎಂದು ಅವರು ಹೇಳಿದರು. ಅವಧಿ ಮುಗಿದ ಠೇವಣಿಗಳನ್ನು ಹಿಂದಿರುಗಿಸುವಂತೆ ದೇವಸ್ವಮ್ ಪದೇ ಪದೇ ಕೇಳಿಕೊಂಡರೂ, ಐದು ಸಹಕಾರಿ ಬ್ಯಾಂಕ್‌ ಗಳು ಹಣ ಹಿಂದಿರುಗಿಸಲು ನಿರಾಕರಿಸಿದ್ದವು ಎನ್ನಲಾಗಿದೆ. ದೇವಸ್ವಮ್‌ ನ ನಿರಖು ಠೇವಣಿಗಳನ್ನು ಎರಡು ತಿಂಗಳೊಳಗೆ ಹಿಂದಿರುಗಿಸುವಂತೆ ಬಳಿಕ ಹೈಕೋರ್ಟ್ ನಿರ್ದೇಶನ ನೀಡಿತ್ತು.

ವಾರ್ತಾ ಭಾರತಿ 5 Dec 2025 9:38 pm

ದಕ್ಷಿಣ ಕನ್ನಡ ಆಯ್ತು, ಇದೀಗ ಮಂಡ್ಯಕ್ಕೂ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ! ಮತೀಯ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರದ ಕ್ರಮ

ಕೋಮು ಹಿಂಸೆ ನಿಯಂತ್ರಣಕ್ಕೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ ಸ್ಥಾಪಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ ಗಣೇಶ ಹಬ್ಬದ ಮೆರವಣಿಗೆ ವೇಳೆ ನಡೆದ ಅವಘಡ ಪರಿಗಣಿಸಿ ಇದೀಗ ಮಂಡ್ಯದಲ್ಲೂ ಇಂತಹ ಪಡೆ ರಚನೆಗೆ ಗೃಹ ಇಲಾಖೆ ನಿರ್ಧರಿಸಿದೆ. ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನ ಅಳವಡಿಕೆ, ನಾಗರಿಕರಿಗೆ ನ್ಯಾಯ ಒದಗಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ ನೀಡಿದರು.

ವಿಜಯ ಕರ್ನಾಟಕ 5 Dec 2025 9:37 pm

ದುಬೈ-ಹೈದರಾಬಾದ್ ವಿಮಾನಕ್ಕೆ ಬಾಂಬ್ ಬೆದರಿಕೆ

ಹೈದರಾಬಾದ್, ಡಿ. 5: ದುಬೈ-ಹೈದರಾಬಾದ್ ಎಮಿರೇಟ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಒಡ್ಡಿದ ಈಮೇಲ್ ಅನ್ನು ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶುಕ್ರವಾರ ಸ್ವೀಕರಿಸಿದೆ. ಈ ಹಿನ್ನೆಲೆಯಲ್ಲಿ ವಿಮಾನ ಇಳಿದ ಬಳಿಕ ವಿಮಾನ ನಿಲ್ದಾಣ ಸ್ಥಾಪಿತ ಸುರಕ್ಷಾ ಶಿಷ್ಟಾಚಾರವನ್ನು ಅನುಸರಿಸಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಇಕೆ526 ವಿಮಾನ ದುಬೈಯಿಂದ ಮುಂಜಾನೆ 3.15ಕ್ಕೆ ಹಾರಾಟ ಆರಂಭಿಸಿತ್ತು. ಅದು ಬೆಳಗ್ಗೆ 8.30ಕ್ಕೆ ಇಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಮೂಲಗಳು ತಿಳಿಸಿವೆ. ‘‘ದುಬೈಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಕೆ526 ವಿಮಾನಕ್ಕೆ ಬೆದರಿಕೆ ಒಡ್ಡಿದ ಇಮೇಲ್ ಅನ್ನು ಹೈದರಾಬಾದ್ ವಿಮಾನ ನಿಲ್ದಾಣದ ಗ್ರಾಹಕ ನೆರವು ಐಡಿ 2025 ಡಿಸೆಂಬರ್ 5ರಂದು ಬೆಳಗ್ಗೆ 7.30ಕ್ಕೆ ಸ್ವೀಕರಿಸಿತ್ತು. ಆದರೆ, ವಿಮಾನ ಹೈದರಾಬಾದ್‌ ನಲ್ಲಿ ಬೆಳಗ್ಗೆ 8.30ಕ್ಕೆ ಸುರಕ್ಷಿತವಾಗಿ ಇಳಿಯಿತು. ಸ್ಥಾಪಿತ ಸುರಕ್ಷಿತ ಶಿಷ್ಟಾಚಾರವನ್ನು ಅನುಸರಿಸಲಾಯಿತು’’ ಎಂದು ಮೂಲಗಳು ತಿಳಿಸಿವೆ. ಗುರುವಾರ ವಿಮಾನ ನಿಲ್ದಾಣ ಇಂಡಿಗೊದ ಮದಿನಾ-ಹೈದರಾಬಾದ್ ಹಾಗೂ ಶಾರ್ಜಾ-ಹೈದರಾಬಾದ್ ವಿಮಾನಗಳನ್ನು ಪ್ರತ್ಯೇಕವಾಗಿ ಗುರಿಯಾಗಿರಿಸಿದ ಇದೇ ರೀತಿಯ ಎರಡು ಇಮೇಲ್‌ ಗಳನ್ನು ಸ್ವೀಕರಿಸಿತ್ತು. ಅನಂತರ ಮದಿನಾ-ಹೈದರಾಬಾದ್ ವಿಮಾನವನ್ನು ಅಹ್ಮದಾಬಾದ್‌ಗೆ ಪಥ ಬದಲಾಯಿಸಲಾಗಿತ್ತು.

ವಾರ್ತಾ ಭಾರತಿ 5 Dec 2025 9:32 pm

ಭ್ರಷ್ಟಾಚಾರದ 'ಪಾಪದ ಗಂಟು' ಬಿಜೆಪಿ ಸರಕಾರದ್ದೇ, ನಮ್ಮದಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ʼಆರ್.ಅಶೋಕ್ ಅವರು ಉಪ ಲೋಕಾಯುಕ್ತರ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬಿಜೆಪಿಯ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, ಟ್ರಾನ್ಸ್‌ಪರೆನ್ಸಿ ಇಂಡಿಯಾ ಇಂಟರ್ ನ್ಯಾಶನಲ್ ನವರು 2019ರ ನವೆಂಬರ್‌ನಲ್ಲಿ ನೀಡಿರುವ ವರದಿಯಲ್ಲಿ ರಾಜ್ಯದಲ್ಲಿ 63% ಭ್ರಷ್ಟಾಚಾರ ಇದೆ ಎಂಬುದಾಗಿತ್ತು. ಅದೇ ವರದಿಯನ್ನು ಆಧರಿಸಿ ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು ಇಂದು ಮಾತನಾಡಿದ್ದಾರೆ. ಈ ವರದಿ ಹೊರಬರುವ ವೇಳೆಯಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಆಡಳಿತದಲ್ಲಿ ಇತ್ತು ಎಂದು ಅವರು ಉಲ್ಲೀಖಿಸಿದ್ದಾರೆ. ಬಿಜೆಪಿ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಭ್ರಷ್ಟಾಚಾರ ಹಗರಣಗಳು ಒಂದೇ, ಎರಡೇ. ಕೊರೊನಾ ಕಾಲದಲ್ಲಿ ಜನ ಹಾದಿಬೀದಿಯಲ್ಲಿ ಸಾಯುವಾಗಲೂ ವೆಂಟಿಲೇಟರ್, ಮಾಸ್ಕ್, ಸ್ಯಾನಿಟೈಸರ್, ಐಸಿಯು ಖರೀದಿ ಎನ್ನದೆ ಎಲ್ಲದರಲ್ಲಿಯೂ ನಿರ್ಲಜ್ಜರಾಗಿ ಲೂಟಿ ಮಾಡಲಾಗಿತ್ತು. ಪ್ರತಿ ಇಲಾಖೆಯಲ್ಲಿ ಕನಿಷ್ಠ 40% ಕಮಿಷನ್ ಚಾಲ್ತಿಯಲ್ಲಿ ಇತ್ತು. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬುವವರು ಅಂದಿನ ಸಚಿವ ಈಶ್ವರಪ್ಪನವರ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು. ನೀರಾವರಿ ಇಲಾಖೆಯ ಭದ್ರಾ ಮೇಲ್ದಂಡೆ ಹಾಗೂ ಕಾವೇರಿ ನೀರಾವರಿ ನಿಗಮದಲ್ಲಿ ಭಾರೀ ಅಕ್ರಮ ನಡೆದಿದ್ದು, ಸುಮಾರು 20,000 ಕೋಟಿ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಸ್ವತಃ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಅವರು ಇಂದಿನ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ವಿರುದ್ಧ ನೇರಾನೇರ ಆರೋಪ ಮಾಡಿದ್ದರು. ಪಿಎಸ್‌ಐ ನೇಮಕಾತಿಯಲ್ಲಿ ಹಗರಣ ಮಾಡಿ ನಿಮ್ಮ ಹಲವು ಬಂಧು ಮಿತ್ರರು ಜೈಲು ಸೇರಿ ಬಂದಿದ್ದಾರೆ. ಇವೆಲ್ಲಾ ಮರೆತು ಹೋಯಿತೇ? ಹೀಗೆ ಬಿಜೆಪಿ ಕಾಲದ ಹಗರಣಗಳನ್ನು ಪಟ್ಟಿಮಾಡುತ್ತಾ ಹೋದರೆ ಒಂದು ಮಹಾಗ್ರಂಥವನ್ನೇ ಬರೆಯಬಹುದು ಎಂದು ಲೇವಡಿ ಮಾಡಿದ್ದಾರೆ. ಇಂದು ನ ಖಾವೂಂಗಾ, ನ ಖಾನೆದೂಂಗ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ‌ ಆಡಳಿತದಲ್ಲಿ ಭಾರತ ಭ್ರಷ್ಟಾಚಾರದಲ್ಲೇ ಮುಳುಗೇಳುತ್ತಿದೆ. ಇದಕ್ಕೆ ಟ್ರಾನ್ಸ್‌ಪರೆಸಿ ಇಂಟರ್ನ್ಯಾಷನಲ್ ನವರು ಬಿಡುಗಡೆ ಮಾಡಿರುವ ಜಾಗತಿಕ ಭ್ರಷ್ಟಾಚಾರಯುಕ್ತ ದೇಶಗಳ ಪಟ್ಟಿಯಲ್ಲಿ ಭಾರತ 96ನೇ ಸ್ಥಾನದಲ್ಲಿ ಇರುವುದು ಸಾಕ್ಷಿ. ಮೊದಲು ಆರ್.ಅಶೋಕ್ ಅವರು ತಮ್ಮ ಪ್ರಧಾನ ಸೇವಕರ ಬಳಿ ಭಾರತದ ಈ ದಯನೀಯ ಸ್ಥಿತಿಗೆ ಕಾರಣವೇನು ಎಂಬ ಪ್ರಶ್ನೆಯನ್ನೆತ್ತಲಿ. ಬಿ.ವೀರಪ್ಪನವರ ಮಾತುಗಳನ್ನು ನಮ್ಮ ಸರಕಾರಕ್ಕೆ ಅನ್ವಯಿಸಿ ಹೇಳುವ ಆರ್.ಅಶೋಕ್ ಅವರ ಮತಿಗೇಡಿತನಕ್ಕೆ ಏನೆನ್ನಬೇಕು? ನಮ್ಮ ಸರಕಾರದಲ್ಲಿ ನೇಮಕಾತಿಯಿಂದ ಹಿಡಿದು ವರ್ಗಾವಣೆಯ ವರೆಗೆ ಎಲ್ಲವನ್ನೂ ಪಾರದರ್ಶಕವಾಗಿಸುವ, ಯಾವುದೇ ರೀತಿಯ ಹಣ, ಅಧಿಕಾರದ ದುರ್ಬಳಕೆಯಾಗದಂತೆ ತಡೆಯುವ ಪ್ರಯತ್ನ ಜಾರಿಯಲ್ಲಿದೆ. ಆರ್.ಅಶೋಕ್ ಅವರೇ, ನೀವು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎರಡೂವರೆ ವರ್ಷದಲ್ಲಿ ಸ್ವಚ್ಚ ಮಾಡುವುದು ಅಸಾಧ್ಯ. ಸ್ವಲ್ಪ ಸಮಯ ಕೊಡಿ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದಿದ್ದಾರೆ. ನ್ಯಾ.ವೀರಪ್ಪ ಉಲ್ಲೇಖಿಸಿದ ವರದಿ ನಿಮ್ಮ ಸರಕಾರದ ಅವಧಿಯದ್ದು: ಆರ್.ಅಶೋಕ್ ನ್ಯಾಯಮೂರ್ತಿ ಬಿ.ವೀರಪ್ಪ ಉಲ್ಲೇಖಿಸಿರುವ ಟ್ರಾನ್ಸ್‍ಪರೆನ್ಸಿ ಇಂಟರ್‌ ನ್ಯಾಶನಲ್ ವರದಿಯು 2019ರ ನವೆಂಬರ್‌ ನಲ್ಲಿ ಬಿಡುಗಡೆಯಾಗಿತ್ತು, ಆದರೆ ಅದು ಹಿಂದಿನ ವರ್ಷದ ಭ್ರಷ್ಟಾಚಾರದ ಕುರಿತು ನಡೆಸಿದ ಸಮೀಕ್ಷೆ ಆಗಿತ್ತು. ಇದರ ಅರ್ಥ, ಆ ವರದಿಯ ದತ್ತಾಂಶವು 2018ರ ಅವಧಿಯನ್ನು ಪ್ರತಿಬಿಂಬಿಸುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಶುಕ್ರವಾರ ಈ ಸಂಬಂಧ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, 2018ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು ಯಾರು? ಸಿದ್ದರಾಮಯ್ಯ ಅವರೇ, ಅದು ತಾವೇ ಹೊರತು ಬೇರೆ ಯಾರೂ ಅಲ್ಲ. ಆದುದರಿಂದ, ಈ ವರದಿಯನ್ನು ಬಿಜೆಪಿ ಕಡೆಗೆ ತಿರುಚುವ ಬದಲು, ನಿಮ್ಮ ಆಡಳಿತಾವಧಿಯಲ್ಲಿ ಕರ್ನಾಟಕದ ಶೇ.63ರಷ್ಟು ನಾಗರಿಕರು ಏಕೆ ಲಂಚ ನೀಡಬೇಕಾಯಿತು ಎಂಬುದನ್ನು ನೀವೇ ಮೊದಲು ವಿವರಿಸಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೆ ಇದೊಂದೇ ವರದಿ ನಿಮ್ಮ ಸರಕಾರದ ಭ್ರ ಷ್ಟಾ ಚಾರವನ್ನು ಬಯಲಿಗೆಳೆದಿಲ್ಲ. 2017ರಲ್ಲಿ ಮತ್ತೊಂದು ರಾಷ್ಟ್ರೀಯ ಸಮೀಕ್ಷೆಯು ಆಗ ರಾಜ್ಯದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರಕಾರವನ್ನು ಭಾರತದ ಅತ್ಯಂತ ಭ್ರಷ್ಟ ರಾಜ್ಯ ಎಂದು ಘೋಷಿಸಿತ್ತು. ಕರ್ನಾಟಕ ಕಂಡ ಅತ್ಯಂತ ಭ್ರ ಷ್ಟಾ ತಿ ಭ್ರಷ್ಟ ಸರಕಾರಗಳನ್ನು ಮುನ್ನಡೆಸಿದ, ಮುನ್ನಡೆಸುತ್ತಿರುವ ತಾವು ಇನ್ನೊಬ್ಬರಿಗೆ ನೀತಿ ಪಾಠ ಹೇಳುವುದು ಹಾಸ್ಯಾಸ್ಪದ ಮತ್ತು ಉದ್ಧಟತನ ಎಂದು ಅಶೋಕ್ ಟೀಕಿಸಿದ್ದಾರೆ. ನಿಮ್ಮ ನಾಯಕ ರಾಹುಲ್ ಗಾಂಧಿ ಅವರ ಮೂರ್ಖತನವನ್ನು ದೇಶವು ಕ್ಷಮಿಸಬಹುದು, ಆದರೆ ಕರ್ನಾಟಕದ ಜನತೆ ರಾಜ್ಯದ ಇತಿಹಾಸದಲ್ಲೆ ಅತ್ಯಂತ ಭ್ರಷ್ಟ ಸರಕಾರಗಳನ್ನು ಮುನ್ನಡೆಸಿದ ನಿಮ್ಮನ್ನ, ನಿಮ್ಮ ಕಾಂಗ್ರೆಸ್ ಪಕ್ಷದ ನಿರ್ಲಜ್ಜತೆಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಇತರರತ್ತ ಬೆರಳು ತೋರಿಸುವ ಮೊದಲು ನಿಮ್ಮದೆ ಘನ ಸರಕಾರ ವರ್ಷದಿಂದ ವರ್ಷಕ್ಕೆ ಕರ್ನಾಟಕವನ್ನು ಭ್ರ ಷ್ಟಾ ಚಾರದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರಿಸಲು ಕಾರಣವೇನು ಎಂಬುದಕ್ಕೆ ಮೊದಲು ಉತ್ತರಿಸಿ ಎಂದು ಅಶೋಕ್ ಆಗ್ರಹಿಸಿದ್ದಾರೆ.

ವಾರ್ತಾ ಭಾರತಿ 5 Dec 2025 9:31 pm

ನ್ಯಾಯಾಂಗದಲ್ಲಿ ಕೃತಕ ಬುದ್ಧಿ ಮತ್ತೆ ಬಳಕೆಗೆ ನಿಯಂತ್ರಣ ಕೋರಿದ ಅರ್ಜಿ ಸುಪ್ರೀಂ ಕೋರ್ಟ್‌ ನಿಂದ ತಿರಸ್ಕೃತ

ಹೊಸದಿಲ್ಲಿ, ಡಿ. 5: ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿ ಮತ್ತೆ (ಎಐ)ಯನ್ನು ‘ಅನಿಯಂತ್ರಿತ’ ಬಳಕೆ ನಿಯಂತ್ರಿಸಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ನ್ಯಾಯಾಂಗದಲ್ಲಿ ಕೃತಕ ಬುದ್ಧಿ ಮತ್ತೆ (ಎಐ) ಹಾಗೂ ಮೆಷಿನ್ ಲರ್ನಿಂಗ್ (ಎಂಎಲ್) ಸಾಧನಗಳ ದುಷ್ಪರಿಣಾಮಗಳ ಕುರಿತು ತನಗೆ ತಿಳಿದಿದೆ. ಆದರೆ, ಈ ಸಮಸ್ಯೆಗಳನ್ನು ನ್ಯಾಯಾಲಯಗಳ ಆದೇಶಗಳ ಮೂಲಕ ಪರಿಹರಿಸುವ ಬದಲು ಆಡಳಿತದ ಮೂಲಕ ಸಮರ್ಪಕವಾಗಿ ಪರಿಹರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೃತಕ ಬುದ್ಧಿ ಮತ್ತೆಯಿಂದ ಉತ್ಪಾದಿತ ವಿಷಯದಿಂದ ಉಂಟಾಗುವ ಅಪಾಯಗಳು ಹಾಗೂ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಅದರ ದುರುಪಯೋಗದ ವಿರುದ್ಧ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ ದೂರುದಾರ ಕಾರ್ತಿಕೇಯ ರಾವಲ್ ಅವರ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಅನುಪಮ್ ಲಾಲ್ ದಾಸ್ ಅವರ ವಾದವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯಮಾಲ್ಯ ಭಾಗಚಿ ಅವರ ಪೀಠ ಆಲಿಸಿತು. ಕಾನೂನಿನಲ್ಲಿ ಅನಿರ್ಬಂಧಿತ ಕೃತಕ ಬುದ್ಧಿ ಮತ್ತೆಯ ಬಳಕೆಯ ವಿರುದ್ಧ ಐಐಟಿ ಮದ್ರಾಸ್‌ನ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಈ ಸಮಸ್ಯೆಯನ್ನು ನಿಭಾಯಿಸುವುದಕ್ಕಾಗಿ ಅವರು ‘ಲೀಗಲ್ ಸೇಫ್ಟಿ ಸ್ಕೋರ್’ ಎಂಬ ಕಲ್ಪನೆಯನ್ನು ಮುಂದಿರಿಸಿದ್ದಾರೆ. ಕೃತಕ ಬುದ್ಧಿ ಮತ್ತೆಯ ಪರಿಕರಗಳು ಅಸ್ತಿತ್ವದಲ್ಲಿಲ್ಲದ ತೀರ್ಪುಗಳು ಮತ್ತು ಪೂರ್ವನಿದರ್ಶನಗಳನ್ನು ಸೃಷ್ಟಿಸುತ್ತವೆ. ಈ ನಕಲಿ ತೀರ್ಪಗಳು ಕೆಲವೊಮ್ಮೆ ನಿಜವಾದ ನ್ಯಾಯಾಲಯದ ತೀರ್ಪುಗಳಲ್ಲಿ ಸೇರ್ಪಡೆಯಾಗಬಹುದು ಎಂದು ಹಿರಿಯ ವಕೀಲರು ಹೇಳಿದರು. ನಮ್ಮ ನ್ಯಾಯಾಂಗ ನಿರ್ಧಾರಗಳನ್ನು ನಿಯಂತ್ರಿಸಲು ಅಥವಾ ಪರಿಣಾಮ ಬೀರಲು ನಾವು ಬಯಸುವುದಿಲ್ಲವಾದುದರಿಂದ ನಾವು ಅದನ್ನು ಬಹಳ ಎಚ್ಚರಿಕೆಯಿಂದ ಬಳಸುತ್ತೇವೆ. ಕೃತಕ ಬುದ್ದಿ ಮತ್ತೆ ನ್ಯಾಯಾಂಗ ಕಾರ್ಯಗಳಿಗೆ ಸಹಾಯ ಮಾಡಬಹುದು. ಆದರೆ, ಅದು ನ್ಯಾಯಾಂಗ ತಾರ್ಕಿಕತೆಯ ಸ್ಥಾನ ತುಂಬಲು ಅಥವಾ ಪ್ರಭಾವಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ವಾರ್ತಾ ಭಾರತಿ 5 Dec 2025 9:31 pm

ವಿಶಾಖಪಟ್ಟಣದಲ್ಲೂ ಟಾಸ್ ಗೆದ್ದೋರು ಫೀಲ್ಡಿಂಗ್ ಮಾಡೋದು ಖಚಿತ; ಲಕ್ ಕೈಹಿಡಿಯದಿದ್ದಾಗ ಹೇಗಾಡುವುದು ಉಚಿತ?

India Vs South Africa- ರಾಯ್ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಕಹಿ ಉಂಡಿರುವ ಭಾರತ ತಂಡ ಇದೀಗ ವಿಶಾಖಪಟ್ಟಣದಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. 3 ಪಂದ್ಯಗಳ ಸರಣಿ 1-1 ಸಮಬಲಗೊಂಡಿರುವುದರಿಂದ 3ನೇ ಪಂದ್ಯ ನಿರ್ಣಾಯಕವಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿ ಇರುವುದುರಿಂದ ಕ್ರಿಕೆಟ್ ಪ್ರೇಮಿಗಳು ಸಹ ಪಂದ್ಯದ ಬಗ್ಗೆ ಬಹಳ ಕುತುೂಹಲಗೊಂಡಿದ್ದಾರೆ. ಇಲ್ಲಿನ ವಾತಾವರಣದಲ್ಲೂ ರಾತ್ರಿ ವೇಳೆ ಇಬ್ಬನಿಯ ಪ್ರಭಾವ ಹೆಚ್ಚಿರಲಿದ್ದು ಟಾಸ್ ಗೆಲುವು ಮುಖ್ಯವಾಗಲಿದೆ.

ವಿಜಯ ಕರ್ನಾಟಕ 5 Dec 2025 9:30 pm

ಕಲಬುರಗಿ| ಬದಲಿ ನೌಕರರನ್ನು ಹೊರ ಹಾಕುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಕಲಬುರಗಿ: ಅಫಜಲಪುರ ಸರಕಾರಿ ಆಸ್ಪತ್ರೆಯಲ್ಲಿ ಬದಲಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಕೂಡಲೇ ಹೊರಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಬಹುತೇಕ ನೌಕರರು ಕೆಲಸಕ್ಕೆ ಹಾಜರಾಗದೆ ಅವರ ಬದಲಾಗಿ ಮತ್ತೊಬ್ಬರನ್ನು ಕೂಲಿ ಕೊಟ್ಟು ಕೆಲಸ ಮಾಡಿಸುವುದು ಕಂಡು ಬರುತ್ತಿದೆ. ಇದನ್ನು ಕೂಡಲೇ ತಡೆಗಟ್ಟಬೇಕು. ಆರೋಗ್ಯ ಇಲಾಖೆಯಿಂದ ಆದೇಶ ಪಡೆದ ನೌಕರರೇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಆಗ್ರಹಿಸಿದರು. ಆಸ್ಪತ್ರೆಯಲ್ಲಿ ಹೆರಿಗೆಯಾದ ಬಾಣಂತಿಯರಿಗೆ ಆಸ್ಪತ್ರೆಯಲ್ಲಿ ಇರುವಷ್ಟು ದಿನ ಪೌಷ್ಟಿಕ ಆಹಾರವನ್ನು ಪೂರೈಸುವಂತೆ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗೆ ಅತ್ಯಂತ ಅವಶ್ಯಕವಾದ ತಾಂತ್ರಿಕ ಸೌಲಭ್ಯಗಳನ್ನು ಮತ್ತು ಯಂತ್ರೋಪಕರಣಗಳನ್ನು ತಕ್ಷಣ ಒದಗಿಸಬೇಕು. ಆಮ್ಲಜನಕ ಸಿಲಿಂಡರ್ ವ್ಯವಸ್ಥೆ ಮತ್ತು ಡಯಾಲಿಸಿಸ್ ವ್ಯವಸ್ಥೆಯನ್ನು ಕೂಡಲೇ ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ಮಾತನಾಡಿದ ಕರವೇ ತಾಲೂಕು ಘಟಕದ ಅಧ್ಯಕ್ಷ ಶ್ರೀಕಾಂತ್ ದಿವಾಣಜಿ, ಇತ್ತೀಚೆಗೆ ಈ ಆಸ್ಪತ್ರೆ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹೆರಿಗೆ ಮಾಡಿದ ಸಾಧನೆ ಬಗ್ಗೆ ಮಾಧ್ಯಮಗಳಲ್ಲಿ ಹೊಗಳಿಕೆ ವ್ಯಕ್ತವಾಗಿತ್ತು. ಆದರೆ ಒಳಗಡೆ ಇಂಥ ಅವ್ಯವಸ್ಥೆ ಇರುವುದು ದುರಾದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಿಗೆ, ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅಫಜಲಪುರ ತಾಲೂಕಿನ ತಹಶೀಲ್ದಾರರ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು. ಕರವೇ ಮಹಿಳಾ ತಾಲೂಕಾದ್ಯಕ್ಷರಾದ ಸೌಮ್ಯ ಪಟ್ನೇ, ಮಹಿಳಾ ಮುಖಂಡರಾದ ವೈಶಾಲಿ ಬಾಗೇವಾಡಿ , ಕರವೇ ಉಪಾಧ್ಯಕ್ಷರಾದ ಲತೀಫ್ ಪಟೇಲ್, ಅತನೂರ ವಲಯ ಅಧ್ಯಕ್ಷರಾದ ಇಮಾಮ ಶೇಖ್‌, ಕರಜಗಿ ವಲಯ ಅಧ್ಯಕ್ಷರಾದ ಸೋಮು ನಾಯಿಕೋಡಿ, ಅಮಿನಪ್ಪ ಸುಲ್ತಾನಪುರ, ಬಡದಾಳದ ಶರಣು ಬಳೂರ್ಗಿ, ಪ್ರಕಾಶ ಖೈರಾಟ, ತಾಲೂಕು ರೈತ ಘಟಕದ ಅಧ್ಯಕ್ಷ ಮನ್ಸೂರ ಪಟೇಲ್‌, ಮಲ್ಲಪ್ಪ ಮರಬಿ, ಸಿದನೂರದ ಲಕ್ಷೀಪುತ್ರ ನಿಂಬಾಳ, ಮಹಿಬೂಬ, ದತ್ತು ಜಮಾದಾರ, ಬಾಬು ಪೂಜಾರಿ ಮತ್ತು ಹಲವಾರು ಮುಖಂಡರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Dec 2025 9:26 pm

ನಾಳೆ ಡಿ.6ರಂದು ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯ; ಟ್ರೋಫಿ ಗೆಲ್ಲಲು ಭಾರತ-ದಕ್ಷಿಣ ಆಫ್ರಿಕಾ ಹಣಾಹಣಿ

ವಿಶಾಖಪಟ್ಟಣ, ಡಿ.5: ಭಾರತ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು ಶನಿವಾರ ಕೊನೆಯ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದ್ದು, ಸದ್ಯ ಮೂರು ಪಂದ್ಯಗಳ ಸರಣಿಯು 1-1ರಿಂದ ಸಮಬಲದಲ್ಲಿದೆ. ವಿಶಾಖಪಟ್ಟಣದಲ್ಲಿ ನಡೆಯಲಿರುವ ಪಂದ್ಯವು ಸರಣಿ ವಿಜೇತರನ್ನು ನಿರ್ಧರಿಸಲಿದೆ. ಉಭಯ ತಂಡಗಳು ಈಗಾಗಲೇ ಆಡಿರುವ ಎರಡೂ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದವು. ರಾಂಚಿಯಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯವನ್ನು ಭಾರತ ತಂಡ ಗೆದ್ದುಕೊಂಡಿತ್ತು. ರಾಯ್ಪುರದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯವನ್ನು ಜಯಿಸಿದ್ದ ದಕ್ಷಿಣ ಆಫ್ರಿಕಾ ಸರಣಿಯನ್ನು ಸಮಬಲಗೊಳಿಸಿತ್ತು. ಮೊದಲೆರಡು ಪಂದ್ಯಗಳಲ್ಲಿ ರನ್ ಹೊಳೆಯೇ ಹರಿದಿದ್ದು, ಪಿಚ್ ಬ್ಯಾಟರ್‌ ಗಳ ಸ್ನೇಹಿಯಾಗಿತ್ತು. ಈ ಗರಿಷ್ಠ ಮೊತ್ತದ ಪಂದ್ಯಗಳಲ್ಲಿ ಹಲವು ದಾಖಲೆಗಳು ಪತನಗೊಂಡಿವೆ. ದ್ವಿತೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 359 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಏಕದಿನ ಕ್ರಿಕೆಟ್‌ ನಲ್ಲಿ ಭಾರತ ವಿರುದ್ಧ ಮೊದಲ ಬಾರಿ ಈ ಸಾಧನೆ ಮಾಡಿತ್ತು. ಭಾರತ ತಂಡವು ಮೊದಲ ಪಂದ್ಯದಲ್ಲಿ 8 ವಿಕೆಟ್‌ ಗಳ ನಷ್ಟಕ್ಕೆ 349 ರನ್ ಗಳಿಸಿತ್ತು. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಎರಡನೇ ಗರಿಷ್ಠ ಸ್ಕೋರ್ ಗಳಿಸಿತ್ತು. ಆ ನಂತರ 2ನೇ ಪಂದ್ಯದಲ್ಲಿ 5 ವಿಕೆಟ್‌ ಗಳ ನಷ್ಟಕ್ಕೆ 358 ರನ್ ಗಳಿಸಿ ಹೊಸ ದಾಖಲೆ ನಿರ್ಮಿಸಿತ್ತು. ಭಾರತ ತಂಡವು 2021-22ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದ್ವಿಪಕ್ಷೀಯ ಸರಣಿಯ ವೇಳೆ ಟೆಸ್ಟ್ ಹಾಗೂ ಏಕದಿನ ಸರಣಿ ಎರಡನ್ನೂ ಕಳೆದುಕೊಂಡಿತ್ತು. ಆದರೆ ಸ್ವದೇಶದಲ್ಲಿ 1986-87ರ ನಂತರ ಎರಡೂ ಸರಣಿಗಳನ್ನು ಸೋತಿಲ್ಲ. 1986-87ರಲ್ಲಿ ಪಾಕಿಸ್ತಾನ ತಂಡವು ಟೆಸ್ಟ್‌ನಲ್ಲಿ 1-0 ಹಾಗೂ ಏಕದಿನ ಪಂದ್ಯದಲ್ಲಿ 5-1 ಅಂತರದಿಂದ ಜಯ ಸಾಧಿಸಿತ್ತು. ದಕ್ಷಿಣ ಆಫ್ರಿಕಾ ತಂಡವು ಅಪರೂಪದ ಡಬಲ್ ಸಾಧನೆಗೈಯುವ ಅದಮ್ಯ ವಿಶ್ವಾಸದೊಂದಿಗೆ ವಿಶಾಖಪಟ್ಟಣಕ್ಕೆ ಆಗಮಿಸಿದೆ. ಭಾರತದಲ್ಲಿ ನಡೆಯಲಿರುವ ಏಕದಿನ ಪಂದ್ಯದಲ್ಲಿ ಮಂಜಿನ ಹನಿಯು ಗೆಲುವು-ಸೋಲಿನಲ್ಲಿ ಪ್ರಮುಖ ಪಾತ್ರವಹಿಸಲಿದೆ. ಸತತ 20 ಬಾರಿ ಟಾಸ್‌ ನಲ್ಲಿ ಸೋತಿರುವ ಭಾರತ ತಂಡವು ಈ ಬಾರಿ ಟಾಸ್ ಗೆಲ್ಲುವ ವಿಶ್ವಾಸದಲ್ಲಿದೆ. 2023ರ ಏಕದಿನ ವಿಶ್ವಕಪ್‌ ನ ಸೆಮಿ ಫೈನಲ್‌ ನಲ್ಲಿ ಕೊನೆಯ ಬಾರಿ ಟಾಸ್ ಗೆದ್ದಿತ್ತು. ►ಟೀಮ್ ನ್ಯೂಸ್ ಎರಡು ಬಾರಿ ಟಾಸ್ ಸೋತ ಹೊರತಾಗಿಯೂ ಮೊದಲ ಪಂದ್ಯವನ್ನು ಜಯಿಸಿ, ಎರಡನೇ ಪಂದ್ಯವನ್ನು ಕೂದಲೆಳೆ ಅಂತರದಿಂದ ಸೋತಿರುವ ಭಾರತ ತಂಡದ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಋತುರಾಜ್ ಗಾಯಕ್ವಾಡ್ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿ ನಾಲ್ಕನೇ ಕ್ರಮಾಂಕಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಸಿದ್ಧ ಕೃಷ್ಣ ಎರಡನೇ ಏಕದಿನ ಪಂದ್ಯದಲ್ಲಿ ದುಬಾರಿ ಬೌಲರ್ ಆಗಿದ್ದರು. ಆದರೆ, ಭಾರತ ತಂಡದಲ್ಲಿ ಬದಲಿ ಬೌಲರ್ ಲಭ್ಯವಿಲ್ಲ. ಸ್ಪೆಷಲಿಷ್ಟ್ ಬೌಲರ್ ಬದಲಿಗೆ ಆಲ್‌ ರೌಂಡರ್‌ ರನ್ನು ಆಡಿಸುವ ಸಾಧ್ಯತೆ ಇಲ್ಲ. ಎರಡನೇ ಏಕದಿನ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ತಂಡದ ಇಬ್ಬರು ಆಟಗಾರರಾದ ನಾಂಡ್ರೆ ಬರ್ಗೆರ್ ಹಾಗೂ ಟೋನಿ ಡಿ ರೆರ್ಝಿ ಗಾಯಗೊಂಡಿದ್ದರು. ಈ ಇಬ್ಬರು ಮೂರನೇ ಪಂದ್ಯ ಆಡುವ ಸಾಧ್ಯತೆ ಇಲ್ಲ. ಈ ಇಬ್ಬರನ್ನು ಕಾಡುತ್ತಿರುವ ಮಂಡಿರಜ್ಜು ಸಮಸ್ಯೆ ಶೀಘ್ರ ಗುಣಮುಖವಾಗುವ ಸಾಧ್ಯತೆ ಇಲ್ಲ.ಹೀಗಾಗಿ ಬರ್ಗೆರ್ ಹಾಗೂ ಟೋನಿ ಡಿ ರೆರ್ಝಿ ಬದಲಿಗೆ ಒಟ್ನೀಲ್ ಬಾರ್ಟ್‌ಮನ್ ಹಾಗೂ ರಯಾನ್ ರಿಕೆಲ್ಟನ್ ಆಡುವ ನಿರೀಕ್ಷೆ ಇದೆ. ►ಪಿಚ್ ಹಾಗೂ ವಾತಾವರಣ ವಿಶಾಖಪಟ್ಟಣದಲ್ಲಿ ನಡೆದ ಕಳೆದ ಎರಡು ಪಂದ್ಯಗಳಲ್ಲಿ ಭಾರತ ಏಕರೂಪದ ಪ್ರದರ್ಶನ ನೀಡಿಲ್ಲ. 2019ರ ಡಿಸೆಂಬರ್‌ ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 387 ರನ್ ಗಳಿಸಿದ್ದ ಭಾರತ ತಂಡವು 2023ರ ಮಾರ್ಚ್‌ ನಲ್ಲಿ ಆಸ್ಟ್ರೇಲಿಯ ತಂಡದ ಎದುರು 117 ರನ್‌ ಗೆ ಆಲೌಟಾಗಿತ್ತು. ವಿಶಾಖಪಟ್ಟಣದ ತಾಪಮಾನವು ರಾಂಚಿ ಹಾಗೂ ರಾಯ್ಪುರಕ್ಕಿಂತ ಹೆಚ್ಚಾಗಿದೆ. ಆದರೆ ಇದು ಕ್ರಿಕೆಟಿಗೆ ಆಹ್ಲಾದಕರವಾಗಿರಲಿದೆ. ►ತಂಡಗಳು ಭಾರತ(ಸಂಭಾವ್ಯ): 1.ಯಶಸ್ವಿ ಜೈಸ್ವಾಲ್, 2. ರೋಹಿತ್ ಶರ್ಮಾ, 3. ವಿರಾಟ್ ಕೊಹ್ಲಿ, 4. ಋತುರಾಜ್ ಗಾಯಕ್ವಾಡ್, 5. ಕೆ.ಎಲ್.ರಾಹುಲ್(ನಾಯಕ, ವಿಕೆಟ್‌ ಕೀಪರ್), 6. ವಾಶಿಂಗ್ಟನ್ ಸುಂದರ್, 7. ರವೀಂದ್ರ ಜಡೇಜ, 8. ಹರ್ಷಿತ್ ರಾಣಾ, 9. ಕುಲದೀಪ ಯಾದವ್, 10. ಅರ್ಷದೀಪ ಸಿಂಗ್, 11. ಪ್ರಸಿದ್ಧ ಕೃಷ್ಣ ದಕ್ಷಿಣ ಆಫ್ರಿಕಾ(ಸಂಭಾವ್ಯ): 1. ಏಡೆನ್ ಮರ್ಕ್ರಮ್, 2. ಕ್ವಿಂಟನ್ ಡಿಕಾಕ್(ವಿಕೆಟ್‌ ಕೀಪರ್),3. ಟೆಂಬಾ ಬವುಮಾ(ನಾಯಕ), 4. ಮ್ಯಾಥ್ಯೂ ಬ್ರೀಝ್ಕೆ, 5. ರಯಾನ್ ರಿಕೆಲ್ಟನ್, 6. ಡೆವಾಲ್ಡ್ ಬ್ರೆವಿಸ್, 7. ಮಾರ್ಕೊ ಜಾನ್ಸನ್, 8. ಕಾರ್ಬಿನ್ ಬಾಷ್, 9. ಕೇಶವ ಮಹಾರಾಜ್, 10.ಲುಂಗಿ ಗಿಡಿ, 11. ಒಟ್ನೀಲ್ ಬಾರ್ಟ್‌ಮನ್ ಪಂದ್ಯ ಆರಂಭದ ಸಮಯ: ಮಧ್ಯಾಹ್ನ 1:30

ವಾರ್ತಾ ಭಾರತಿ 5 Dec 2025 9:19 pm

ಬೀದರ್| ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳೆ ಸಮೀಕ್ಷೆದಾರರಿಂದ ಶಾಸಕರಿಗೆ ಮನವಿ

ಬೀದರ್ : ಕರ್ನಾಟಕ ರಾಜ್ಯದ ಬೆಳೆ ಸಮೀಕ್ಷೆದಾರರಿಗೆ (ಪಿ.ಆರ್) ಸೇವಾ ಭದ್ರತೆ ಜೀವವಿಮೆ ನೀಡಬೇಕು. ನಮ್ಮನ್ನು ಖಾಯಂಗೊಳಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಿಆರ್ ಸಮೀಕ್ಷೆದಾರರಿಂದ ಬಸವಕಲ್ಯಾಣ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದ ಬೆಳೆ ಸಮೀಕ್ಷೆದಾರರು ಸುಮಾರು 7 ರಿಂದ 8 ವರ್ಷಗಳಿಂದ ಪ್ರತಿವರ್ಷ ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ನಿಗದಿತ ಸಮಯದಲ್ಲಿ ಅನೇಕ ಸಮಸ್ಯೆಗಳ ನಡುವೆ ಬೆಳೆ ಸಮೀಕ್ಷೆ ಮಾಡುತ್ತಿದ್ದಾರೆ. ಆದರೆ ನಮಗೆ ಯಾವುದೇ ರೀತಿಯಲ್ಲಿ ರಕ್ಷಣೆ ಇಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.   ರೈತರು ಪಹಣಿ ಪತ್ರದಲ್ಲಿ ಬೆಳೆ ನಮೂದು ಮಾಡಲು, ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆಯ ಲಾಭ ಪಡೆಯಲು, ಬೆಳೆ ವಿಮೆ ಪಡೆಯಲು, ಬೆಳೆ ಹಾನಿ ಪರಿಹಾರ ಪಡೆಯಲು, ಸರ್ಕಾರದ ಮಾರುಕಟ್ಟೆಯಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಮೀಕ್ಷೆ ಅತ್ಯಗತ್ಯವಾಗಿದೆ. ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಆದರೆ ನಾವು ರೈತರ ಬೆನ್ನಲುಬಾಗಿದ್ದೇವೆ. ನಾವು ನಮ್ಮ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಸಮೀಕ್ಷೆ ಮಾಡುತ್ತೇವೆ. ಕಲ್ಲು, ಮುಳ್ಳುಗಳೆನ್ನದೆ ಹೋಗುತ್ತೇವೆ. ಬೆಳೆದ ಬೆಳೆಗಳಲ್ಲಿ ಅಡಗಿ ಕುಳಿತಿರುವ ಹಾವುಗಳ, ಕೆಸರಿನಲ್ಲಿ ಸಿಕ್ಕಿ ಬೀಳುವ, ಕಾಡುಪ್ರಾಣಿಗಳ ದಾಳಿಯ ಹೆದರಿಕೆಯಲ್ಲಿ ಕೆಲಸ ಮಾಡುತ್ತೇವೆ. ಆದರೆ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳಲಾಗಿದೆ. ಕೆಲವು ರೈತರು ಅವಾಚ್ಯ ಪದಗಳಿಂದ ನಿಂದಿಸಿದರೂ ಕೂಡ ತಾಳ್ಮೆಯಿಂದ ಸಮೀಕ್ಷೆ ಮಾಡುತ್ತೇವೆ. ಆದರೆ ಯಾವ ಅಧಿಕಾರಿಗಳಾಗಲಿ, ಸರ್ಕಾರವಾಗಲಿ ನಮ್ಮ ಮೇಲೆ ಕರುಣೆ ತೋರದೆ ಮಲತಾಯಿ ಧೋರಣೆ ತೋರುತ್ತಿದೆ. ಆದರೆ ನಾವು ಸಹನೆಯಿಂದಿದ್ದೇವೆ. ಆದ್ದರಿಂದ ಸರಕಾರ ನಮ್ಮ ಕೂಗನ್ನು ಕೇಳಿ, ಪರಿಶೀಲಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮೋಹನ್ ಮಾನೆ, ಭಾಲ್ಕಿ ತಾಲೂಕು ಅಧ್ಯಕ್ಷ ಏಕನಾಥ ಮೇತ್ರೆ, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಕಾಂಬ್ಳೆ, ಹುಲಸೂರು ತಾಲೂಕು ಅಧ್ಯಕ್ಷ ಪರಮೇಶ್ವರ್ ಬಿರಾದಾರ್, ಬಸವಕಲ್ಯಾಣ ತಾಲೂಕು ಅಧ್ಯಕ್ಷ ಶಂಕರಲಿಂಗ, ಜಿಲ್ಲಾ ಖಜಾಂಚಿ ಮಹೇಶ್ ಗೊರಟೆ, ದಿಲೀಪ್ ಗೋರ್ಟಾ, ಬಸವರಾಜ್ ಎಳ್ಳುರೆ, ವಿಕಾಸ್  ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Dec 2025 9:17 pm

ODIನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ವಿರಾಟ್ ಕೊಹ್ಲಿ ಚಿತ್ತ

ವಿಶಾಖಪಟ್ಟಣ, ಡಿ.5: ಎರಡೂ ಪಂದ್ಯಗಳಲ್ಲಿ ಶತಕಗಳನ್ನು ಸಿಡಿಸಿದ್ದ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ್ದಾರೆ. ಶನಿವಾರ ನಡೆಯಲಿರುವ ಮೂರನೇ ಪಂದ್ಯದಲ್ಲಿ ಇನ್ನಷ್ಟು ದಾಖಲೆಗಳನ್ನು ನಿರ್ಮಿಸುವ ವಿಶ್ವಾಸದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ ನಲ್ಲಿ ಸತತ ಮೂರನೇ ಬಾರಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಳ್ಳುವ ಅಪೂರ್ವ ಅವಕಾಶ ಕೊಹ್ಲಿಗೆ ಒದಗಿಬಂದಿದೆ. ಇದೀಗ ಕೊಹ್ಲಿ ಹಾಗೂ ರೋಹಿತ್ ಅವರು ತಲಾ ಒಂದು ಬಾರಿ ಸತತ ಶತಕಗಳನ್ನು ಸಿಡಿಸಿದ್ದಾರೆ.ಕೊಹ್ಲಿ ತನ್ನ ವೃತ್ತಿಜೀವನದಲ್ಲಿ 11 ಬಾರಿ ಸತತ ಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ ಅವರು ‘ಹ್ಯಾಟ್ರಿಕ್’ ಶತಕ ಗಳಿಸುವಲ್ಲಿ ಶಕ್ತರಾದರೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸತತ ನಾಲ್ಕು ಏಕದಿನ ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಸಕ್ತ ಸರಣಿಗಿಂತ ಮೊದಲು 2023ರ ಕ್ರಿಕೆಟ್ ವಿಶ್ವಕಪ್‌ ನ ವೇಳೆ ದಕ್ಷಿಣ ಆಫ್ರಿಕಾದ ವಿರುದ್ಧ ಕೊಹ್ಲಿ ಶತಕ ಗಳಿಸಿದ್ದರು. ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್‌ ನಲ್ಲಿ ಹೆಚ್ಚು ಬಾರಿ 100 ರನ್ ಜೊತೆಯಾಟ ನಡೆಸಿದ ಜೋಡಿಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಜೋಡಿ ಕುಮಾರ ಸಂಗಕ್ಕರ ಹಾಗೂ ಟಿ.ಎಂ. ದಿಲ್ಶನ್ 20 ಬಾರಿ 100 ರನ್ ಜೊತೆಯಾಟ ನಡೆಸಿದ್ದರು. ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗುಲಿ 26ನೇ ಬಾರಿ ಶತಕದ ಜೊತೆಯಾಟ ನಡೆಸಿ ದಾಖಲೆ ನಿರ್ಮಿಸಿದ್ದಾರೆ. ರೋಹಿತ್ ಶರ್ಮಾಗೆ ದಕ್ಷಿಣ ಆಫ್ರಿಕಾದ ಲೆಜೆಂಡ್ ಜಾಕಸ್ ಕಾಲಿಸ್ ದಾಖಲೆ ಮುರಿದು ಏಕದಿನ ಕ್ರಿಕೆಟ್‌ ನಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಲು 120 ರನ್‌ಗಳ ಅಗತ್ಯವಿದೆ. 

ವಾರ್ತಾ ಭಾರತಿ 5 Dec 2025 9:16 pm

ಮದುವೆಯಾಗುವ ವಯಸ್ಸಾಗದಿದ್ದರೂ ವಯಸ್ಕರು ಸಹಜೀವನ ನಡೆಸಬಹುದು: ರಾಜಸ್ಥಾನ ಹೈಕೋರ್ಟ್

ಜೈಪುರ, ಡಿ. 5: ಕಾನೂನು ಪ್ರಕಾರ ಮದುವೆಯಾಗುವ ವಯಸ್ಸು ಆಗದಿದ್ದರೂ, ಇಬ್ಬರು ವಯಸ್ಕರು ಸಹಮತದಿಂದ ಸಹಜೀವನ ನಡೆಸುವ ಹಕ್ಕು ಹೊಂದಿದ್ದಾರೆ ಎಂದು ರಾಜಸ್ಥಾನ ಹೈಕೋರ್ಟ್ ಹೇಳಿದರು. ಅವರಿಗೆ ಮದುವೆಯಾಗುವ ವಯಸ್ಸು ಆಗಿಲ್ಲ ಎಂಬ ಕಾರಣಕ್ಕಾಗಿ ಅವರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ರಕ್ಷಣೆ ನೀಡಬೇಕೆಂದು ಕೋರಿ 18 ವರ್ಷದ ಯುವತಿ ಮತ್ತು 19 ವರ್ಷದ ಯುವಕ ಸಲ್ಲಿಸಿರುವ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಾಧೀಶ ಅನೂಪ್ ದಂಡ್ ಈ ತೀರ್ಪು ನೀಡಿದರು. ತಾವು ತಮ್ಮ ಸ್ವಂತ ಇಚ್ಛೆಯಿಂದ ಸಹಜೀವನ ನಡೆಸುತ್ತಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಜೋಡಿಯು ಅಕ್ಟೋಬರ್ 27ರಂದು ತಾವು ಸಹಜೀವನ ಒಪ್ಪಂದ ಮಾಡಿಕೊಂಡಿದ್ದೇವೆ ಎಂದಿತು. ಯುವತಿಯ ಕುಟುಂಬವು ಈ ಸಂಬಂಧವನ್ನು ವಿರೋಧಿಸಿದ್ದು, ತಮ್ಮನ್ನು ಕೊಲ್ಲುವ ಬೆದರಿಕೆ ಹಾಕಿದೆ ಎಂದು ಅರ್ಜಿದಾರರು ಆರೋಪಿಸಿದರು. ಈ ಬಗ್ಗೆ ತಾವು ಕೊಟ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದರು. ಅರ್ಜಿಯನ್ನು ವಿರೋಧಿಸಿದ ಸರಕಾರಿ ವಕೀಲ ವಿವೇಕ್ ಚೌಧರಿ, ಯುವಕನಿಗೆ ಕಾನೂನು ಪ್ರಕಾರ ಮದುವೆಯಾಗಬಹುದಾದ 21 ವರ್ಷ ಆಗಿಲ್ಲದಿರುವುದರಿಂದ ಅವರಿಗೆ ಸಹಜೀವನ ನಡೆಸಲು ಅವಕಾಶ ನೀಡಬಾರದು ಎಂದು ವಾದಿಸಿದರು. ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಅರ್ಜಿದಾರರು ಮದುವೆಯಾಗುವ ವಯಸ್ಸಿನವರು ಅಲ್ಲ ಎಂಬ ಏಕೈಕ ಕಾರಣಕ್ಕಾಗಿ ಸಂವಿಧಾನದ 21ನೇ ವಿಧಿಯಡಿಯಲ್ಲಿ ಬರುವ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಅವರಿಗೆ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿತು. ಅವರಿಗೆ ರಕ್ಷಣೆ ನೀಡಲು ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಧೀಶರು ಪೊಲೀಸರಿಗೆ ನಿರ್ದೇಶನ ನೀಡಿದರು.

ವಾರ್ತಾ ಭಾರತಿ 5 Dec 2025 9:11 pm

ಉಪ್ಪಿನಂಗಡಿಯ ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು

ಮಂಗಳೂರು, ಡಿ.5: ನಗರದ ಪೊಲೀಸ್ ಲೇನ್‌ನಲ್ಲಿ ವಾಸವಾಗಿರುವ ಪೊಲೀಸ್ ಅಧಿಕಾರಿಯ ಮನೆಗೆ ಬಂದಿದ್ದ ಉಪ್ಪಿನಂಗಡಿಯ ಮಠ ಹಿರ್ತಡ್ಕ ನಿವಾಸಿ ಮುಹಮ್ಮದ್ ಅಶ್ರಫ್ (49) ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.2ರಂದು ಬೆಳಗ್ಗೆ 6:30ಕ್ಕೆ ತನ್ನ ಸ್ಕೂಟರ್‌ನಲ್ಲಿ ಪೊಲೀಸ್ ಲೇನ್‌ನ ಮನೆಗೆ ಬಂದಿದ್ದ ಅಶ್ರಫ್ 7 ಗಂಟೆಗೆ ಉಪ್ಪಿನಂಗಡಿಗೆ ಹೋಗುವುದಾಗಿ ತೆರಳಿದ್ದಾರೆ. ಆದರೆ ಅಲ್ಲಿಂದ ಮನೆಗೆ ಹೋಗದೆ ನಾಪತ್ತೆಯಾಗಿರುವುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅಶ್ರಫ್‌ರನ್ನು ನಗರದ ವಿವಿಧೆಡೆ ಹುಡುಕಲಾಗಿದ್ದು, ಅವರ ಸ್ಕೂಟರ್ ರೈಲ್ವೇ ಸ್ಟೇಷನ್ ಬಳಿ ಪತ್ತೆಯಾಗಿದೆ. 5.4 ಅಡಿ ಎತ್ತರದ, ಸಪೂರ ಶರೀರದ, ಗೋಧಿ ಮೈ ಬಣ್ಣದ, ಸಾಧಾರಣ ಮೈಕಟ್ಟು ಹೊಂದಿರುವ ಅಶ್ರಫ್ ಉದ್ದ ತೋಳಿನ ಚೆಕ್ಸ್ ಶಟ್, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ, ತುಳು, ಬ್ಯಾರಿ ಭಾಷೆ ಬಲ್ಲ ಅಶ್ರಫ್‌ರನ್ನು ಕಂಡವರು ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ವಾರ್ತಾ ಭಾರತಿ 5 Dec 2025 9:06 pm

ಬೀದಿ ನಾಯಿ ನಿರ್ವಹಣೆಗೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮಾರ್ಗಸೂಚಿ ಪ್ರಕಟ; ಏನೆಲ್ಲಾ ನಿಯಮ? ಎಷ್ಟು ಆಹಾರ ಒದಗಿಸಬೇಕು?

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಬೀದಿ ನಾಯಿಗಳ ನಿರ್ವಹಣೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಾಯಿ ಕಡಿತ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಗಳು ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸಬೇಕು. ನಾಯಿಗಳ ತೂಕಕ್ಕೆ ಅನುಗುಣವಾಗಿ ಆಹಾರ ನೀಡಬೇಕು. ಸ್ವಚ್ಛತೆ ಮತ್ತು ನೀರಿನ ವ್ಯವಸ್ಥೆ ಕಡ್ಡಾಯವಾಗಿದೆ. ಈ ಮಾರ್ಗಸೂಚಿಗಳನ್ನು ಎಲ್ಲ ರಾಜ್ಯಗಳು ಪಾಲಿಸಬೇಕು.

ವಿಜಯ ಕರ್ನಾಟಕ 5 Dec 2025 9:06 pm

ತನ್ನ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಲೇವಡಿ ಮಾಡಿದ ನೆತನ್ಯಾಹು

ಜೆರುಸಲೇಂ, ಡಿ.5: ತನ್ನ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ವಿಚಾರಣೆ `ಬಗ್ಸ್ ಬನ್ನಿ (ಜನಪ್ರಿಯ ಕಾರ್ಟೂನ್ ಧಾರಾವಾಹಿ) ಪ್ರಹಸನವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೇವಡಿ ಮಾಡಿದ್ದು ತಾನು ಸಲ್ಲಿಸಿರುವ ವಿವಾದಾತ್ಮಕ ಕ್ಷಮಾದಾನ ಕೋರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಗೊಳಿಸಿರುವ ವೀಡಿಯೊದಲ್ಲಿ ನೆತನ್ಯಾಹು `ನ್ಯಾಯಾಲಯದಲ್ಲಿ ಮುಂದುವರಿದಿರುವ `ರಾಜಕೀಯ ಮೊಕದ್ದಮೆ'ಯ ವಿಚಾರಣೆಯು ತನ್ನನ್ನು ಬಲವಂತದಿಂದ ಪದಚ್ಯುತಗೊಳಿಸುವ ಉದ್ದೇಶ ಹೊಂದಿದ್ದು ತಾನು ಯಾವುದೇ ತಪ್ಪೆಸಗಿಲ್ಲ' ಎಂದಿದ್ದಾರೆ. ರಾಜಕೀಯ ಪ್ರಭಾವಕ್ಕೆ ಪ್ರತಿಯಾಗಿ ಐಷಾರಾಮಿ ವಸ್ತುಗಳನ್ನು ಕೊಡುಗೆಯಾಗಿ ಪಡೆದಿರುವುದು ಹಾಗೂ ತನ್ನ ಪರವಾಗಿ ವರದಿಗಳನ್ನು ಪ್ರಕಟಿಸುವಂತೆ ಇಸ್ರೇಲ್‍ ನ ಎರಡು ಸುದ್ದಿಸಂಸ್ಥೆಗಳ ಮೇಲೆ ಪ್ರಭಾವ ಬೀರಿರುವ ಆರೋಪವನ್ನು ನೆತನ್ಯಾಹು ಎದುರಿಸುತ್ತಿದ್ದಾರೆ. ಬಗ್ಸ್ ಬನ್ನಿ ಕಾರ್ಟೂನ್‍ ನ ಗೊಂಬೆಯನ್ನು ಕೈಯಲ್ಲಿ ಹಿಡಿದಿರುವ ವೀಡಿಯೋವನ್ನೂ ಪೋಸ್ಟ್ ಮಾಡಿರುವ ನೆತನ್ಯಾಹು `29 ವರ್ಷದ ಹಿಂದೆ ಮಗನಿಗಾಗಿ ಬಗ್ಸ್ ಬನ್ನಿಯನ್ನು ಕೊಡುಗೆಯಾಗಿ ಪಡೆದಿರುವುದಕ್ಕೆ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ಲೇವಡಿ ಮಾಡಿದ್ದಾರೆ.

ವಾರ್ತಾ ಭಾರತಿ 5 Dec 2025 9:06 pm

ರಾಜಘಾಟ್‌ ಗೆ ಪುಟಿನ್ ಭೇಟಿ: ಗಾಂಧೀಜಿಯವರಿಗೆ ನಮನ

ಹೊಸದಿಲ್ಲಿ,ಡಿ.5: ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿರುವ ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರ ದಿಲ್ಲಿಯ ರಾಜಘಾಟ್‌ ಗೆ ತೆರಳಿ ಮಹಾತ್ಮಾ ಗಾಂಧಿಯವರ ಸ್ಮಾರಕಕ್ಕೆ ನಮನಗಳನ್ನು ಸಲ್ಲಿಸಿದರು. ಪುಟಿನ್ ಬಳಿಕ ಅಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ, ಗಾಂಧಿ ಆಧುನಿಕ ಸ್ವತಂತ್ರ ಭಾರತದ ಸ್ಥಾಪಕರಾಗಿದ್ದಾರೆ. ಜೊತೆಗೆ ಮಾನವತಾವಾದಿ ಮತ್ತು ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದಾರೆ ಎಂದು ಬಣ್ಣಿಸಿದ್ದಾರೆ. ‘ಮಹಾತ್ಮಾ ಗಾಂಧಿಯವರು ಅಹಿಂಸೆ ಮತ್ತು ಸತ್ಯ ಮಾರ್ಗದ ಮೂಲಕ ನಮ್ಮ ಈ ಭೂಮಿಯಲ್ಲಿ ಶಾಂತಿ ನೆಲೆಸಲು ಅಮೂಲ್ಯಕೊಡುಗೆಯನ್ನು ನೀಡಿದ್ದಾರೆ ಮತ್ತು ಅದರ ಪ್ರಭಾವವು ಇಂದಿಗೂ ಪ್ರಸ್ತುತವಾಗಿದೆ. ಅವರು ಈಗ ರೂಪುಗೊಳ್ಳುತ್ತಿರುವ ಹೊಸ,ನ್ಯಾಯಯುತ ಮತ್ತು ಬಹುಧ್ರುವೀಯ ವಿಶ್ವ ವ್ಯವಸ್ಥೆಗೆ ಮಾರ್ಗವನ್ನು ತೋರಿಸಿದ್ದರು. ಸಮಾನತೆ, ಪರಸ್ಪರ ಗೌರವ ಮತ್ತು ಸಹಕಾರ ಕುರಿತು ಅವರ ಬೋಧನೆಗಳಿಂದಾಗಿ ಇಂದು ಭಾರತವು ಜಗತ್ತಿನ ಇತರರೊಂದಿಗೆ ಸೇರಿ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಈ ತತ್ವಗಳು ಮತ್ತು ಮೌಲ್ಯಗಳನ್ನು ಸಮರ್ಥಿಸುತ್ತಿದೆ. ರಷ್ಯ ಕೂಡ ಇದನ್ನೇ ಮಾಡುತ್ತಿದೆ ’ಎಂದು ಪುಟಿನ್ ರಷ್ಯನ್ ಭಾಷೆಯಲ್ಲಿ ಬರೆದಿದ್ದಾರೆ.

ವಾರ್ತಾ ಭಾರತಿ 5 Dec 2025 9:04 pm

ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಪ್ರಶ್ನಿಸಿದ ಪಿಐಎಲ್; ಮಾರ್ಚ್ 5ಕ್ಕೆ ಅಂತಿಮ ವಿಚಾರಣೆ ನಿಗದಿಪಡಿಸಿದ ಹೈಕೋರ್ಟ್

ಬೆಂಗಳೂರು : ರಾಜ್ಯದ ನಾಗರಿಕರ ಸಾಮಾಜಿಕ-ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಹೈಕೋರ್ಟ್ 2026ರ ಮಾರ್ಚ್ 5ಕ್ಕೆ ನಿಗದಿಪಡಿಸಿದೆ. ಸಮೀಕ್ಷೆಗಾಗಿ 2025ರ ಆಗಸ್ಟ್‌ 13ರಂದು ರಾಜ್ಯ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ.ಎನ್‌. ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್‌ಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಒಕ್ಕಲಿಗರ ಸಂಘದ ಪರ ವಕೀಲ ಕೆ.ಅಭಿಷೇಕ್‌ ವಾದ ಮಂಡಿಸಿ, ಹಾಲಿ ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ದತ್ತಾಂಶಗಳನ್ನು ಸಂರಕ್ಷಿಸಿಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಅದರಂತೆ ರಾಜ್ಯ ಸರಕಾರ ದತ್ತಾಂಶ ರಕ್ಷಿಸಿರುವುದರ ಸಂಬಂಧ ಪ್ರಮಾಣಪತ್ರ ಸಲ್ಲಿಸಿದೆ. ನಾಲ್ಕು ವಾರಗಳಲ್ಲಿ ಸರಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿತ್ತು. ಆದರೆ, ಸರಕಾರ ಅದನ್ನು ಅನುಪಾಲಿಸಿಲ್ಲ ಎಂದರು. ರಾಜ್ಯ ಸರಕಾರ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಆಕ್ಷೇಪಣೆ ಸಿದ್ಧವಾಗಿದ್ದು, ಇಂದು ಸಲ್ಲಿಸಲಾಗುವುದು ಎಂದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಭಾರತೀಯ ಜನಗಣತಿ ಆಯೋಗ ಮತ್ತು ರಿಜಿಸ್ಟ್ರಾರ್ ಜನರಲ್ ಅವರಿಗೆ ನೋಟಿಸ್‌ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿತು. ಜತೆಗೆ, ಎಲ್ಲ ಪಕ್ಷಕಾರರಿಗೆ ವಾದಾಂಶ ಸಲ್ಲಿಸಲು ನಿರ್ದೇಶಿಸಿದ ನ್ಯಾಯಪೀಠ ಅಂತಿಮ ವಿಚಾರಣೆಯನ್ನು ಮಾರ್ಚ್‌ 5ಕ್ಕೆ ನಿಗದಿಪಡಿಸಿತು. ಇದೇ ವೇಳೆ, ತೃತೀಯ ಲಿಂಗಿಗಳಿಗೆ ಸಂಬಂಧಿಸಿದ ಸಮೀಕ್ಷೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುತ್ತಿದೆಯೇ ವಿನಾ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿಲ್ಲ. ಆದ್ದರಿಂದ, ಅವುಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಬೇಕು ಎಂಬ ಅಡ್ವೊಕೇಟ್‌ ಜನರಲ್‌ ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಪೀಠ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ಪ್ರಶ್ನಿಸಿದ ಅರ್ಜಿಗಳಿಂದ ತೃತೀಯ ಲಿಂಗಿಗಳ ಸಮೀಕ್ಷೆ ಪ್ರಶ್ನಿಸಿದ ಅರ್ಜಿಗಳನ್ನು ಪ್ರತ್ಯೇಕಿಸಿ, ವಿಚಾರಣೆಯನ್ನು ಮಾರ್ಚ್‌ 8ಕ್ಕೆ ಮುಂದೂಡಿತು. ಪ್ರಕರಣವೇನು? ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸೆಪ್ಟೆಂಬರ್ 22ರಿಂದ ರಾಜ್ಯದ ನಾಗರಿಕರ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ರಾಜ್ಯ ಸರಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸೆಪ್ಟೆಂಬರ್ 25ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಸಮೀಕ್ಷೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತಾದರೂ, ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಮಾಹಿತಿ ಒದಗಿಸುವಂತೆ ಸಮೀಕ್ಷೆ ನಡೆಸುವವರು ಒತ್ತಾಯಿಸಬಾರದು, ಸಂಗ್ರಹಿಸಲಾಗುವ ದತ್ತಾಂಶವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹೊರತುಪಡಿಸಿ ಬೇರಾರಿಗೂ ಸೋರಿಕೆಯಾಗದಂತೆ ಗೌಪ್ಯತೆ ಕಾಯ್ದುಕೊಳ್ಳಬೇಕು ಮತ್ತು ಈ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಡಿಸೆಂಬರ್ ಮೊದಲ ವಾರಕ್ಕೆ ಮುಂದೂಡಿತ್ತು.

ವಾರ್ತಾ ಭಾರತಿ 5 Dec 2025 9:03 pm

ಇಂಡಿಗೋ ಬಿಕ್ಕಟ್ಟು | ಪೈಲಟ್‌ ಗಳ ವಾರದ ವಿಶ್ರಾಂತಿ ಆದೇಶ ಹಿಂದೆಗೆದುಕೊಂಡ DGCA

ಹೊಸದಿಲ್ಲಿ,ಡಿ.5: ದೇಶದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋವನ್ನು ಕಾಡುತ್ತಿರುವ ಕಾರ್ಯಾಚರಣೆ ಬಿಕ್ಕಟ್ಟನ್ನು ಪರಿಹರಿಸಲು ನಾಗರಿಕ ವಾಯುಯಾನ ಮಹಾನಿರ್ದೇಶನಾಲಯವು (DGCA) ಹಾರಾಟ ಕರ್ತವ್ಯ ಸಮಯ ಮಿತಿ (ಎಫ್‌ಡಿಟಿಎಲ್) ನಿಯಮಾವಳಿಯ ‘ವಾರದ ವಿಶ್ರಾಂತಿಗಾಗಿ ರಜೆಯನ್ನು ಹೊಂದಾಣಿಕೆ ಮಾಡಿಕೊಳ್ಳುವಂತಿಲ್ಲ’ ಎಂಬ ನಿಬಂಧನೆಯನ್ನು ಶುಕ್ರವಾರ ಹಿಂದೆಗೆದುಕೊಂಡಿದೆ. ಈ ನಿಯಮಾವಳಿಯ ಮೊದಲ ಹಂತ ಜು.1ರಂದು ಮತ್ತು ಎರಡನೇ ಹಂತ ನ.1ರಂದು ಜಾರಿಗೊಂಡಿದ್ದವು. ಪ್ರಸಕ್ತ ಕಾರ್ಯಾಚರಣೆಯಲ್ಲಿ ಉಂಟಾಗಿರುವ ವ್ಯತ್ಯಯಗಳು ಹಾಗೂ ಕಾರ್ಯಾಚರಣೆಗಳ ನಿರಂತರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯ ಕುರಿತು ವಿವಿಧ ವಿಮಾನಯಾನ ಸಂಸ್ಥೆಗಳ ಅಹವಾಲುಗಳ ಹಿನ್ನೆಲೆಯಲ್ಲಿ ಸದ್ರಿ ನಿಬಂಧನೆಯನ್ನು ಪುನರ್ ಪರಿಶೀಲಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ ಎಂದು DGCA ಶುಕ್ರವಾರ ಅಪರಾಹ್ನ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ರಾತ್ರಿ ವೇಳೆಯ ವಿಮಾನಯಾನಗಳಿಗೆ ಫೆ.10ರವರೆಗೆ ವಿನಾಯಿತಿಯ ಪ್ರಸ್ತಾವವನ್ನೂ ಮುಂದಿರಿಸಿರುವ DGCA, ಆದರೆ ವಿಮಾನಯಾನ ಸಂಸ್ಥೆಯು ಪ್ರತಿ 15 ದಿನಗಳಿಗೊಮ್ಮೆ ಪುನರ್‌ಪರಿಶೀಲನೆಯನ್ನು ಎದುರಿಸಬೇಕು ಮತ್ತು ನಿಯಮಗಳಿಗೆ ‘ಸಂಪೂರ್ಣ ಅನುಸರಣೆ’ಯನ್ನು ತೋರಿಸಲು 30 ದಿನಗಳ ಮಾರ್ಗಸೂಚಿಯನ್ನು ಸಲ್ಲಿಸಬೇಕು ಎಂದು ಹೇಳಿದೆ. ಇಂದಿನ ಎಫ್‌ಡಿಟಿಎಲ್ ನಿಯಮಗಳ ಪರಿಷ್ಕರಣೆಯಿಂದಾಗಿ ವಿಮಾನಯಾನ ಸಂಸ್ಥೆಗಳು ಪೈಲಟ್‌ ಗಳು ಮತ್ತು ಹಾರಾಟ ಸಿಬ್ಬಂದಿಯನ್ನು ನಿಯೋಜಿಸುವಾಗ ರಜೆ ಮತ್ತು ಸಾಪ್ತಾಹಿಕ ವಿಶ್ರಾಂತಿ ಅವಧಿಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಿಲ್ಲ. ನೂತನ ನಿಯಮಗಳ ಪ್ರಕಾರ 48 ಗಂಟೆಗಳ ಗಳಿಕೆ ರಜೆಯನ್ನು ಪಡೆದ ಪೈಲಟ್ ವಾರದ ವಿಶ್ರಾಂತಿಯನ್ನೂ ಪಡೆದಿದ್ದಾರೆ ಎಂದು ಪರಿಗಣಿಸಲಾಗುವುದು. ಗುರುವಾರ ರಾತ್ರಿ ಓರ್ವ ಪೈಲಟ್ ಹಾರಾಟ ನಡೆಸಬಹುದಾದ ನಿರಂತರ ಗಂಟೆಗಳನ್ನು 12ರಿಂದ 14ಕ್ಕೆ ಹೆಚ್ಚಿಸಲಾಗಿತ್ತು. ಇದರ ಬೆನ್ನಲ್ಲೇ ಇಂದಿನ ಪರಿಷ್ಕರಣೆಗಳು ಹೊರಬಿದ್ದಿವೆ. 2,200ಕ್ಕೂ ಅಧಿಕ ದೇಶೀಯ ಮತ್ತು ಅಂತರರಾಷ್ಟ್ರೀಯ ಯಾನಗಳನ್ನು ನಿರ್ವಹಿಸುತ್ತಿರುವ ಇಂಡಿಗೋದ ಕಾರ್ಯಾಚರಣೆಗಳು ಸಿಬ್ಬಂದಿ ಕೊರತೆಯಿಂದಾಗಿ ಕಳೆದ ನಾಲ್ಕು ದಿನಗಳಲ್ಲಿ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ. ನೂತನ ಎಫ್‌ಡಿಟಿಎಲ್ ನಿಯಮಗಳಡಿ ಅಗತ್ಯವಿರುವ ಪೈಲಟ್‌ಗಳ ಸಂಖ್ಯೆಯನ್ನು ತಾನು ತಪ್ಪಾಗಿ ನಿರ್ಧರಿಸಿದ್ದೆ ಎಂದು ಇಂಡಿಗೋ ಬುಧವಾರ ಒಪ್ಪಿಕೊಂಡಿತ್ತು. ಈ ನಿಯಮಗಳು ವಾರದ ವಿಶ್ರಾಂತಿ ಅವಧಿಯನ್ನೂ 36 ಗಂಟೆಗಳಿಂದ 48 ಗಂಟೆಗಳಿಗೆ ಹೆಚ್ಚಿಸಿದ್ದವು. ಇಂಡಿಗೋ ಗುರುವಾರ ದಿಲ್ಲಿ ಸೇರಿದಂತೆ ದೇಶದ ವಿವಿಧ ವಿಮಾನ ನಿಲ್ದಾಣಗಳಿಂದ ತನ್ನ 550 ಯಾನಗಳನ್ನು ರದ್ದುಗೊಳಿಸಿತ್ತು. ಇಂಡಿಗೋ ಈವರೆಗೆ ಒಟ್ಟೂ ಸುಮಾರು 1,300 ಯಾನಗಳನ್ನು ರದ್ದುಗೊಳಿಸಿದ್ದು, ಅಲ್ಪಾವಧಿಯಲ್ಲಿ ಪರಿಸ್ಥಿತಿ ಸುಧಾರಿಸುವ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಇಂಡಿಗೋ ಈಗಾಗಲೇ ಕನಿಷ್ಠ ಡಿ.8ರವರೆಗೆ ಇನ್ನಷ್ಟು ವ್ಯತ್ಯಯಗಳುಂಟಾಗುವ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ದಿಲ್ಲಿ ವಿಮಾನ ನಿಲ್ದಾಣವು ಶುಕ್ರವಾರ ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಇಂಡಿಗೋದ ಎಲ್ಲ ನಿರ್ಗಮನ ಯಾನಗಳನ್ನು ರದ್ದುಗೊಳಿಸಿದ್ದು, ಸಂಸ್ಥೆಯ ತಪ್ಪುನಿರ್ಧಾರ ಎಷ್ಟೊಂದು ದುಬಾರಿಯಾಗಿ ಪರಿಣಮಿಸಿದೆ ಎನ್ನುವುದನ್ನು ಇದು ತೋರಿಸಿದೆ. ಕಾರ್ಯಾಚರಣೆ ಸಮಸ್ಯೆಯಿಂದಾಗಿ ಚೆನ್ನೈನಿಂದ ಬೆಂಗಳೂರು, ಮುಂಬೈ, ದಿಲ್ಲಿ, ಕೋಲ್ಕತಾ ಮತ್ತು ಹೈದರಾಬಾದ್‌ ಗೆ ಇಂಡಿಗೋ ಯಾನಗಳನ್ನು ಶುಕ್ರವಾರ ಸಂಜೆ ಆರು ಗಂಟೆಯವರೆಗೆ ರದ್ದುಗೊಳಿಸಲಾಗಿತ್ತು. ಶುಕ್ರವಾರ ಸಂಜೆ ಇಂಡಿಗೋ ಮತ್ತೊಮ್ಮೆ ತನ್ನ ಗ್ರಾಹಕರಲ್ಲಿ ಕ್ಷಮೆ ಯಾಚಿಸಿದೆ.

ವಾರ್ತಾ ಭಾರತಿ 5 Dec 2025 9:03 pm

ಉಡುಪಿ | ರಂಗಭೂಮಿ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ : ಸುಮನಸಾ ಕೊಡವೂರು ‘ಈದಿ’ಗೆ ಪ್ರಥಮ ಬಹುಮಾನ

ಶಿವೋಹಂಗೆ ದ್ವಿತೀಯ, ಪ್ರಾಣಪದ್ಮಿನಿಗೆ ತೃತೀಯ ಬಹುಮಾನ

ವಾರ್ತಾ ಭಾರತಿ 5 Dec 2025 9:03 pm

ಉಡುಪಿ | ಲಾರಿ- ಕಾರು ಢಿಕ್ಕಿ: ನಾಲ್ವರಿಗೆ ಗಾಯ

ಉಡುಪಿ, ಡಿ.5: ಲಾರಿಯೊಂದು ಕಾರಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸಹಿತ ನಾಲ್ವರು ಗಾಯಗೊಂಡ ಘಟನೆ ಡಿ.4ರಂದು ಸಂಜೆ ವೇಳೆ ಸಂತೆಕಟ್ಟೆ ಅಂಡರ್ ಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಗಾಯಗೊಂಡವರನ್ನು ಕಲ್ಯಾಣಪುರದ ಬಡಗುನಯಂಪಳ್ಳಿ ನಿವಾಸಿ ವರುಣ್ ಕುಮಾರ್ ಎಸ್.ಜಿ.(40), ಅವರ ಅತ್ತೆ ಜಯಂತಿ ಬಲ್ಲಾಳ್ (72), ಮಕ್ಕಳಾದ ತೇಜಸ್(12) ದೀಕ್ಷಾ(7) ಎಂದು ಗುರುತಿಸಲಾಗಿದೆ. ಇದರಲ್ಲಿ ತೀವ್ರವಾಗಿ ಗಾಯಗೊಂಡ ಜಯಂತಿ ಬಲ್ಲಾಳ್ ಹಾಗೂ ವರುಣ್ ಕುಮಾರ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತೆಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ಲಾರಿಯು ರಸ್ತೆಯ ಬಲಬದಿಗೆ ಬಂದು ಅದೇ ರಸ್ತೆಯ ಮಧ್ಯೆ ಡೈವರ್ಶನ್ ಬಳಿ ಕುಂದಾಪುರ- ಉಡುಪಿ ರಸ್ತೆಗೆ ತಿರುಗಿಸಲು ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಕಾರಿನಲ್ಲಿ ನಾಲ್ವರು ಗಾಯಗೊಂಡರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 5 Dec 2025 8:54 pm

ಕಾಪು | ಮನೆಗೆ ನುಗ್ಗಿ 3.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಕಾಪು, ಡಿ.5: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮಲ್ಲಾರು ಎಂಬಲ್ಲಿ ಡಿ.4ರಂದು ಬೆಳಗ್ಗೆ ನಡೆದಿದೆ. ಪಾದೂರಿನಲ್ಲಿರುವ ಐಎಸ್ಪಿಆರ್‌ಎಲ್‌ನಲ್ಲಿ ಹೌಸ್ ಕೀಪರ್ ಆಗಿರುವ ಮಲ್ಲಾರಿನ ರಾಘವೇಂದ್ರ ಕಿಣಿ ಎಂಬವರು ಬೆಳಗ್ಗೆ ಕೆಲಸಕ್ಕೆ ಹೋಗಿದ್ದು, ನಂತರ ಇವರ ಪತ್ನಿ ಮಕ್ಕಳ ಶಾಲಾ ವಾರ್ಷಕೋತ್ಸವ ಕಾರ್ಯಕ್ರಮಕ್ಕೆ ಮನೆಗೆ ಬೀಗ ಹಾಕಿ ಕೀಯನ್ನು ಮನೆಯ ವಿದ್ಯುತ್ ಮೀಟರ್ ನ ಬಾಕ್ಸ್ ನಲ್ಲಿ ಇರಿಸಿ ಹೋಗಿದ್ದರು. ಈ ವೇಳೆ ಮನೆಯ ವಿದ್ಯುತ್ ಮೀಟರ್ ನ ಬಾಕ್ಸ್ ನಲ್ಲಿ ಇರಿಸಿದ್ದ ಕೀಯಿಂದ ಮನೆಯ ಎದುರಿನ ಬಾಗಿಲನ್ನು ತೆರೆದು ಒಳನುಗ್ಗಿದ ಕಳ್ಳರು, ಬೆಡ್ರೂಂನ ಕಪಾಟಿನಲ್ಲಿದ್ದ 28 ಗ್ರಾಂ ತೂಕದ ಹವಳದ ಸರ, 8ಗ್ರಾಂ ತೂಕದ ಚಿನ್ನದ ಚೈನ್, 10 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ, 8 ಗ್ರಾಂ ತೂಕದ ಉಂಗುರ ಮತ್ತು ಚಿಕ್ಕ ಮಕ್ಕಳ 2 ಉಂಗುರ, 8 ಗ್ರಾಂ ತೂಕದ ಒಂದು ಜೊತೆ ಕಿವಿಯ ಜುಮುಕಿ ಮತ್ತು ಬೆಂಡೋಲೆೆ, 8ಗ್ರಾಂ ತೂಕದ ಕೂರ್ಗಿಸ್ ಚೈನ್, ಬೆಳ್ಳಿಯ ಬಟ್ಟಲು, 2 ಬೆಳ್ಳಿ ದೀಪಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಒಟ್ಟು 72 ಗ್ರಾಂ ತೂಕದ ಚಿನ್ನಾಭರಣಗಳ ಮೌಲ್ಯ 3,90,000 ರೂ. ಹಾಗೂ ಬೆಳ್ಳಿಯ ಸೊತ್ತುಗಳ ಮೌಲ್ಯ 1,500 ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 5 Dec 2025 8:49 pm

ಬೆಂಗಳೂರು ಏರ್‌ಪೋರ್ಟ್‌ ಸಂಪರ್ಕಿಸುವ ನಮ್ಮ ಮೆಟ್ರೋ ನೀಲಿ ಮಾರ್ಗ ಪರಿಶೀಲಿಸಿದ ಡಿಕೆ ಶಿವಕುಮಾರ್; ಸಂಚಾರ ಯಾವಾಗ ಆರಂಭ?

ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಪರಿಶೀಲಿಸಿ, ಗುತ್ತಿಗೆದಾರರಿಗೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಕೆ.ಆರ್. ಪುರದಿಂದ ವಿಮಾನ ನಿಲ್ದಾಣದವರೆಗಿನ 58 ಕಿ.ಮೀ. ಉದ್ದದ 15 ಸಾವಿರ ಕೋಟಿ ರೂ. ಮೊತ್ತದ ಈ ಯೋಜನೆಯನ್ನು 2027ರ ಜೂನ್ ವೇಳೆಗೆ ಪೂರ್ಣಗೊಳಿಸುವ ಗುರಿ ಇದೆ.

ವಿಜಯ ಕರ್ನಾಟಕ 5 Dec 2025 8:46 pm

ಬಳ್ಳಾರಿ| ಹಂಪಾದೇವನಹಳ್ಳಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

ಬಳ್ಳಾರಿ : ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿ ಗ್ರಾಮ ಪಂಚಾಯತಿಗೆ ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ವಿದ್ಯುತ್ ದೀಪ, ಸ್ವಚ್ಛತೆ, ಶುದ್ಧ ಕುಡಿಯುವ ನೀರು ಸರಬರಾಜು ಸೇರಿದಂತೆ ಮೂಲ ಸೌಕರ್ಯ, ಲೆಕ್ಕ ಪರಿಶೋಧನೆ, ಸರಕಾರದ ಯೋಜನೆಗಳನ್ನು ಜನತೆಗೆ ಯಶಸ್ವಿಯಾಗಿ ತಲುಪಿಸಿರುವುದನ್ನು ಪರಿಗಣಿಸಿ ಹಂಪಾದೇವನಹಳ್ಳಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗಿದೆ.   ವಿಧಾನಸೌಧದ ಬ್ಯಾಂಕ್ವೇಟೆ ಹಾಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಜಿ.ಕವಿತಾ ಪಂಪನಗೌಡ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಕೆ.ಬೀರಲಿಂಗ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರಿಂದ ಗಾಂಧಿ ಗ್ರಾಮ ಪುರಸ್ಕಾರವನ್ನು ಪಡೆದರು. ಗ್ರಾ.ಪಂ.ಅಧ್ಯಕ್ಷೆ ಜಿ.ಕವಿತಾ ಪಂಪನಗೌಡ ಹಾಗೂ ಪಿಡಿಒ ಕೆ.ಬೀರಲಿಂಗ ಮಾತನಾಡಿ, ಗ್ರಾ.ಪಂ.ವ್ಯಾಪ್ತಿಯಲ್ಲಿ ಸಾರ್ವಜನಿಕರು, ಎಲ್ಲಾ ಸದಸ್ಯರು, ತಾ.ಪಂ.ಅಧಿಕಾರಿಗಳ ಸಹಕಾರದಿಂದಾಗಿ  ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು. 

ವಾರ್ತಾ ಭಾರತಿ 5 Dec 2025 8:45 pm

Mangaluru | ಎಂ.ಸಿ.ಸಿ. ಬ್ಯಾಂಕಿನ ನವೀಕೃತ ಕಂಕನಾಡಿ ಶಾಖೆಯ ಉದ್ಘಾಟನೆ

ಮಂಗಳೂರು,ಡಿ.5 : ಎಂಸಿಸಿ ಬ್ಯಾಂಕ್, ಮಂಗಳೂರು ಇದರ ನವೀಕೃತ ಕಂಕನಾಡಿ ಶಾಖೆಯನ್ನು ಶುಕ್ರವಾರ ಪಂಪ್‌ವೆಲ್ ರಸ್ತೆಯಲ್ಲಿರುವ ಎಂಪೋರಿಯಂ ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟಿಸಲಾಯಿತು. ನವೀಕರಿಸಿದ ಶಾಖೆಯನ್ನು ಅನಿವಾಸಿ ಭಾರತೀಯ ಉದ್ಯಮಿ ಮತ್ತು ವಿಷನ್ ಕೊಂಕಣಿಯ ಪ್ರವರ್ತಕ ಮೈಕಲ್ ಡಿಸೋಜಾ ಉದ್ಘಾಟಿಸಿ, ತಮ್ಮ ಭಾಷಣದಲ್ಲಿ ಅವರು ಬ್ಯಾಂಕಿನ ಪ್ರಗತಿಗೆ ಕಾರಣಕರ್ತರಾದ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಗ್ರಾಹಕರ ನಿರಂತರ ಬೆಂಬಲದೊಂದಿಗೆ ನಿರ್ದೇಶಕರು ಮತ್ತು ಸಿಬ್ಬಂದಿಯ ಸಂಯೋಜಿತ ಪ್ರಯತ್ನಗಳ ಮೂಲಕ ಉತ್ತಮ ಸಾಲ ನೀಡುವಿಕೆ ಮತ್ತು ಸಕಾಲಿಕ ಸಾಲ ವಸೂಲಾತಿ ಪ್ರಕ್ರಿಯೆ ಕೈಗೊಳ್ಳಲು ಅವರು ಸಲಹೆ ನೀಡಿದರು. ಅಧ್ಯಕ್ಷರಾದ ಅನಿಲ್ ಲೋಬೊ ಅವರು ತಮ್ಮ ಸ್ವಾಗತ ಭಾಷಣದಲ್ಲಿ,  ಕಂಕನಾಡಿ ಶಾಖೆಯ ನವೀಕರಣದ ಹಿಂದಿನ ಉದ್ದೇಶ ಮತ್ತು ದೃಷ್ಟಿಕೋನವನ್ನು ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಆಧುನೀಕರಣ ಮತ್ತು ಹೊಸ ಆಲೋಚನೆಗಳನ್ನು ನಿರೀಕ್ಷಿಸುತ್ತಾರೆ. ನಮ್ಮ ಬ್ಯಾಂಕ್ ಅದನ್ನು ಹೇಗೆ ಸಾಧಿಸುವುದು ಎಂಬುದರ ಸ್ಪಷ್ಟ ದೃಷ್ಟಿಕೋನದೊಂದಿಗೆ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಎಲ್ಲಾ 16 ಶಾಖೆಗಳನ್ನು ನವೀಕರಿಸಿದೆ. ಗ್ರಾಹಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ ಎಂದರು. ಕಂಕನಾಡಿ ಶಾಖೆಯು 54 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಗ್ರಾಹಕರು ತಮ್ಮ ವಹಿವಾಟುಗಳನ್ನು ಸಂತೋಷದಾಯಕವಾಗಿ ನಡೆಸಲು ಅನುಕೂಲವಾಗುವಂತೆ ಶಾಖೆಯನ್ನು ನವೀಕರಿಸಲಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಾಗ ಕೇವಲ 16 ಶಾಖೆಗಳಿದ್ದು, ಕಳೆದ 7 ವರ್ಷಗಳಲ್ಲಿ, 22 ವರ್ಷಗಳ ನಂತರ ಐದು ಹೊಸ ಶಾಖೆಗಳನ್ನು ತೆರೆಯಲಾಗಿದೆ. ಆರ್‌ಬಿಐ ಹೆಚ್ಚುವರಿ ಶಾಖೆಗಳನ್ನು ತೆರೆಯಲು ಅನುಮತಿ ನೀಡಿದ್ದು, ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. ಪ್ರಸ್ತುತ ಆಡಳಿತ ಮಂಡಳಿಯು 2018 ರಲ್ಲಿ ಬ್ಯಾಂಕಿನ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿಂದ ಬ್ಯಾಂಕ್ ಎಲ್ಲಾ ಹಣಕಾಸು ನಿಯತಾಂಕಗಳನ್ನು ಪೂರೈಸಿದ್ದು, ಇಂದು ಒಟ್ಟು 21 ಶಾಖೆಗಳು ಮತ್ತು 15 ಎಟಿಎಂಗಳನ್ನು ಹೊಂದಿದೆ ಎಂದರು. ಮುಂದಿನ ಹಣಕಾಸು ವರ್ಷದಲ್ಲಿ ದೇರಳಕಟ್ಟೆ, ಕಟಪಾಡಿ, ಪಡೀಲ್ ಮತ್ತು ಮುಡಿಪು ಅಥವಾ ವಾಮಂಜೂರಿನಲ್ಲಿ ಇನ್ನೂ ನಾಲ್ಕು ಶಾಖೆಗಳನ್ನು ತೆರೆಯಲು ಯೋಜನೆಯನ್ನು ಹಮ್ಮಿಕೊಂಡಿದೆ. ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ರಾಷ್ಟ್ರಾದ್ಯಂತ ಬ್ಯಾಂಕ್ ಬೆಳೆಯಲು ಅನುವು ಮಾಡಿಕೊಡಲು ಗ್ರಾಹಕರ ಬೆಂಬಲ ಮತ್ತು ಆಶೀರ್ವಾದವನ್ನು ಕೋರಿ ಸ್ವಾಗತಿಸಿದರು. ಬೆಂದೂರಿನ ಸೇವಾನಿಲಯ ಕಾನ್ವೆಂಟ್‌ನ ಸುಪೀರಿಯರ್‌ನ ಸಿಸ್ಟರ್ ಸಿಂತಿಯಾ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬ್ಯಾಂಕಿನ ಬೆಳವಣಿಗೆಗೆ ಅಧ್ಯಕ್ಷರನ್ನು ಅಭಿನಂದಿಸಿ, ಗಣ್ಯರು, ಸಿಬ್ಬಂದಿ ಮತ್ತು ಗ್ರಾಹಕರ ಉಪಸ್ಥಿತಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮುಖ್ಯ ಅತಿಥಿ ವಂ.ಜೆ.ಬಿ.ಕ್ರಾಸ್ತಾ ಅವರು ತಮ್ಮ ಭಾಷಣದಲ್ಲಿ, ಗ್ರಾಹಕರಿಗೆ ಬ್ಯಾಂಕ್ ನೀಡುವ ಅನುಕರಣೀಯ ಸೇವೆ ಮತ್ತು ಸುರಕ್ಷತೆಗಾಗಿ ಸಂತೋಷ ವ್ಯಕ್ತಪಡಿಸಿದರು. ವಂ ಫೌಸ್ಟಿನ್ ಲೋಬೊ ತಮ್ಮ ಭಾಷಣದಲ್ಲಿ, ಸಮಾಜಕ್ಕೆ ಸೇವೆ ಸಲ್ಲಿಸಲು ಬ್ಯಾಂಕ್ ತನ್ನ ಸೌಲಭ್ಯಗಳು ಮತ್ತು ಸೇವೆಗಳನ್ನು ಸುಧಾರಿಸುವ ಮೂಲಕ ಸ್ಥಿರ ಬೆಳವಣಿಗೆಯ ಹಾದಿಯಲ್ಲಿ ಮುಂದುವರಿಯಬೇಕು ಎಂದು ಹೇಳಿ ಬ್ಯಾಂಕಿನ ಮುಂದಿನ ಯೋಜನೆಗಳಿಗೆ ಶುಭ ಹಾರೈಸಿದರು. ಬೆಂದೂರಿನ ಸೇವಾನಿಲಯ ಕಾನ್ವೆಂಟ್‌ನ ಸುಪೀರಿಯರ್‌ನ ಸಿಸ್ಟರ್ ಸಿಂತಿಯಾ ಡಿಸೋಜಾ ಶುಭ ಹಾರೈಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಮಂಗಳೂರಿನ ದಿ ವೈಟ್ ಡವ್ಸ್ ಸೈಕಿಯಾಟ್ರಿಕ್ ನರ್ಸಿಂಗ್ & ಡೆಸ್ಟಿಟ್ಯೂಟ್ ಹೋಂನ ಸಂಸ್ಥಾಪಕಿ ಕೊರಿನ್ ರಸ್ಕಿನ್ಹಾ ಅವರನ್ನು ಶಾಲು, ಹಣ್ಣು ಹಂಪಲು, ಸ್ಮರಣಿಕೆ, ಸನ್ಮಾನ ಪತ್ರ ಮತ್ತು ಹೂವಿನ ಪುಷ್ಪಗುಚ್ಛದೊಂದಿಗೆ ಸನ್ಮಾನಿಸಲಾಯಿತು. ಮೈಕೆಲ್ ಡಿಸೋಜಾ ಅವರನ್ನು ಗೌರವಿಸಲಾಯಿತು. ಡಿ.11 ರಂದು ಚಂಡೀಗಢದಲ್ಲಿ ನಡೆಯುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ 20 ಪಂದ್ಯದಲ್ಲಿ ಎಸ್‌ಬಿಐ ಲೈಫ್ ಪರವಾಗಿ ಕ್ರಿಕೆಟ್ ತಾರೆಯೊಬ್ಬರಿಗೆ ಪಂದ್ಯ ಶೇಷ್ಟ ಪ್ರಶಸ್ತಿಯನ್ನು ಪ್ರದಾನ ಮಾಡಲು ಆಯ್ಕೆಯಾಗಿದ್ದಕ್ಕಾಗಿ ಐವಾನ್ ಫ್ರಾಂಕ್ ಅವರನ್ನು ಗೌರವಿಸಲಾಯಿತು. ಇತ್ತೀಚೆಗೆ ಬಿಡುಗಡೆಯಾದ ಕೊಂಕಣಿ ಚಲನಚಿತ್ರ ‘ಬಾಪಾಚೆ ಪುತಾಚೆ ನಾವಿ’ ದಲ್ಲಿ ನಟಿಸಿರುವ ಮೆಲ್ವಿನ್ ಡಿಅಲ್ಮೇಡಾ ಅವರನ್ನು ಸಹ ಸನ್ಮಾನಿಸಲಾಯಿತು. ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಕಂಕನಾಡಿ ಶಾಖಾ ನಿರ್ದೇಶಕರಾದ ಹೆರಾಲ್ಡ್ ಮೊಂತೇರೊ, ನಿರ್ದೆಶಕರಾದ ಮೆಲ್ವಿನ್ ವಾಸ್, ಸಿ.ಜಿ.ಪಿಂಟೊ, ಜೆ.ಪಿ.ರೊಡ್ರಿಗಸ್, ಐರೀನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೋಜ, ಶ ರೋಶನ್ ಡಿಸೋಜ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಮೊಂತೇರೊ, ಜನರಲ್ ಮ್ಯಾನೇ ಜರ್ ಸುನಿಲ್ ಮಿನೇಜಸ್, ಶಾಖಾ ವ್ಯವಸ್ಥಾಪಕಿ ಐಡಾ ಪಿಂಟೊ, ಸಿಬ್ಬಂದಿ ಸದಸ್ಯರು ಮತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.    

ವಾರ್ತಾ ಭಾರತಿ 5 Dec 2025 8:39 pm

ಮಹಾನಗರಗಳ್ಲಿ ಹೆಚ್ಚುತ್ತಿರುವ ಮಾಲಿನ್ಯ; ತವರಿಗೆ ಮರಳುತ್ತಿರುವ ಕರಾವಳಿಗರು!

ಒಂದು ಕಾಲದಲ್ಲಿ ಪ್ರಗತಿ ಮತ್ತು ಏಳಿಗೆಯ ಪ್ರತೀಕವಾಗಿದ್ದ ಮಹಾನಗರಗಳು ಇದೀಗ ತಮ್ಮ ಹೊಳಪನ್ನು ಕಳೆದುಕೊಳ್ಳುತ್ತಿವೆ. ಇತ್ತೀಚೆಗೆ ತೀವ್ರ ಮಳೆ ಮತ್ತು ವಾಯುಗುಣಮಟ್ಟದ ಸೂಚ್ಯಂಕ ಕುಸಿಯುತ್ತಿರುವುದರಿಂದ ಮಹಾನಗರಗಳಲ್ಲಿ ನೆಲೆಸಿರುವ ಕರ್ನಾಟಕದ ಜನತೆ ತವರಿನ ಕಡೆಗೆ ಮರಳುತ್ತಿದ್ದಾರೆ. ಮಹಾನಗರಗಳಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ) ನಿವಾಸಿಗರಿಗೆ ಸ್ವಚ್ಛ ಹವಾಮಾನವಿರುವ ಪ್ರದೇಶಗಳಿಗೆ ಪ್ರಯಾಣ ಬೆಳೆಸಲು ಹೊಸ ಕಾರಣವಾಗುತ್ತಿದೆ. ವಾಯುಮಾಲಿನ್ಯ ಮತ್ತು ಗಾಳಿಯ ಗುಣಮಟ್ಟದ ಕೊರತೆಯಿಂದಾಗಿ ವರ್ಷಾನುಗಟ್ಟಲೆ ದಿಲ್ಲಿ ಮತ್ತು ಮುಂಬೈಗಳಲ್ಲಿ ನೆಲೆಸಿದ್ದ ಕರ್ನಾಟಕದ ಜನತೆ ತವರಿಗೆ ಮರಳುತ್ತಿದ್ದಾರೆ. ಇಂತಹ ವಾಪಾಸಾತಿ ಟ್ರೆಂಡ್ನಲ್ಲಿ ಮೂರು ಮುಖ್ಯ ಅಂಶಗಳನ್ನು ಗುರುತಿಸಬಹುದು. ಮೊದಲನೆಯದಾಗಿ ವರ್ಕ್ ಫ್ರಂ ಹೋಮ್ ಆಯ್ಕೆಗಳು ಇತ್ತೀಚೆಗೆ ಜನಪ್ರಿಯವಾಗಿರುವುದು. ಎರಡನೆಯದು ದೂರದ ಊರಿನಲ್ಲಿ ಮುಂದಿನ ತಲೆಮಾರಿಗೆ ಉತ್ತಮ ಭವಿಷ್ಯದ ಕೊರತೆ ಕಂಡುಬರುತ್ತಿರುವುದು ಮತ್ತು ಮೂರನೆಯದು ಹೊಸ ತಲೆಮಾರಿನ ಪ್ರಯಾಣದ ಹಸಿವು. ವರ್ಕ್ ಫ್ರಂ ಹೋಂ ಆರಿಸುತ್ತಿರುವ ಜನತೆ ಇತ್ತೀಚೆಗೆ ಕಾರ್ಪೋರೇಟ್ ಕಂಪೆನಿಗಳಲ್ಲಿ ವಾರಕ್ಕೆ ಮೂರು ದಿನ ಕಚೇರಿ ಮತ್ತು ಉಳಿದ ದಿನ ಮನೆಯಿಂದ ಕೆಲಸ ಮಾಡುವ ಅವಕಾಶ ಕೊಡಲಾಗುತ್ತಿದೆ. ಇನ್ನು ಕೆಲವು ಕಡೆ ತಿಂಗಳಲ್ಲಿ ಎರಡು ವಾರ ಕಚೇರಿ ಮತ್ತು ಇನ್ನೆರಡು ವಾರ ಮನೆಯಿಂದ ಕೆಲಸ ಮಾಡುವ ಅವಕಾಶವಿದೆ. ಮೂಲತಃ ಕೊಡಗಿನ ನಿವಾಸಿಯಾಗಿದ್ದು, ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಕಿಶನ್ ವಾರಕ್ಕೆ ಮೂರೇ ಬಾರಿ ಕಚೇರಿಗೆ ಹೋಗುವುದು. ಉಳಿದ ಮೂರು ದಿನ ಬೆಂಗಳೂರಿನ ಮನೆಯಿಂದಲೇ ಕೆಲಸ ಮಾಡುತ್ತಾರೆ. ಕೋವಿಡ್ ಸಂದರ್ಭದಲ್ಲಿ ಅವರು ಸಂಪೂರ್ಣವಾಗಿ ಕೊಡಗಿನಲ್ಲಿ ನೆಲೆಸಿ ಕೆಲಸ ಮಾಡಿದ್ದರು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನ ನಿವಾಸಿಯೊಬ್ಬರು ಇಂತಹುದೇ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ವರ್ಷಾನುಗಟ್ಟಲೆ ನೆಲೆಸಿದ್ದ ಅವರು ಇದೀಗ ತಮ್ಮ ಕಚೇರಿಯಲ್ಲಿ ತಿಂಗಳ ಮೊದಲೆರಡು ವಾರ ಮಾತ್ರ ಕೆಲಸ ಮಾಡುತ್ತಾರೆ. ಮುಂದಿನ ಎರಡು ವಾರ ತಮ್ಮ ಊರಿನಲ್ಲೇ ಮನೆಯಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಉಡುಪಿಯಿಂದ ಮುಂಬೈಗೆ ಪ್ರಯಾಣ ಬೆಳೆಸುವುದು ಸುಲಭವಾಗಿರುವುದರಿಂದ ಅವರಿಗೆ ಈ ಆಯ್ಕೆ ಇಷ್ಟವಾಗಿದೆ. ಮೂಲತಃ ಮಂಗಳೂರಿನವರಾದ ಕಳೆದ ಎರಡು ದಶಕಗಳಿಂದ ದಿಲ್ಲಿಯಲ್ಲಿ ವೃತ್ತಿಪರರಾಗಿರುವ ಪ್ರಕಾಶ್ ಶೆಟ್ಟಿ ಪ್ರಕಾರ, “ನನ್ನ ಸಂಪೂರ್ಣ ಕುಟುಂಬ ಅಲಿಗಢ್ನಲ್ಲಿದೆ. ನಾನು ವಾರಾಂತ್ಯದಲ್ಲಿ ಅಲ್ಲಿಗೆ ಹೋಗಿ ಬರುತ್ತೇನೆ. ವಾಯುಮಾಲಿನ್ಯ, ಮಳೆ ಮೊದಲಾಗಿ ದಿಲ್ಲಿಯ ಪರಿಸರ ಕೆಟ್ಟು ಹೋಗಿರುವ ಕಾರಣದಿಂದಾಗಿ ನನ್ನ ಹತ್ತು ವರ್ಷ ವಯಸ್ಸಿನ ಮಗ ನನ್ನನ್ನೂ ಪೂರ್ಣವಾಗಿ ಅಲಿಗಢ್ಗೆ ಬಂದು ನೆಲೆಸುವಂತೆ ಒತ್ತಾಯಿಸುತ್ತಿರುತ್ತಾನೆ. ಆದರೆ ಕೆಲಸದ ಕಾರಣದಿಂದ ನಾನು ಇನ್ನೂ ದಿಲ್ಲಿಯಲ್ಲಿ ಉಳಿದಿರುವೆ” ಎನ್ನುತ್ತಾರೆ. ಮುಂದಿನ ತಲೆಮಾರಿನ ಭವಿಷ್ಯದ ಚಿಂತೆ ಈ ಹಿಂದೆ ದಿಲ್ಲಿ ಮತ್ತು ಮುಂಬೈ ಓದು ಮತ್ತು ವೃತ್ತಿಗೆ ಬಹಳ ಅನುಕೂಲಕರ ಆಯ್ಕೆಯಾಗಿತ್ತು. ಆದರೆ ವಾಯುಮಾಲಿನ್ಯ ಮತ್ತು ಮಳೆಯಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳು ಜನರನ್ನು ತವರಿನತ್ತ ಮರಳಿ ಕರೆಯುತ್ತಿದೆ. ದಿಲ್ಲಿಯಲ್ಲಿ ಸುಮಾರು 2 ದಶಕಗಳ ಕಾಲ ನೆಲೆಸಿದ್ದ ರಾಘವ ಶರ್ಮ ತಮ್ಮ ಕುಟುಂಬದ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತವರಿಗೆ ಮರಳಿದ್ದಾರೆ. “ದಿಲ್ಲಿಯಲ್ಲಿ ಪ್ರತಿ ವರ್ಷ ಮಾಲಿನ್ಯದ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಆಡಳಿತ ಪಕ್ಷ-ವಿಪಕ್ಷಗಳು ಈ ವಿಷಯದಲ್ಲಿ ಕಿತ್ತಾಡುತ್ತವೆಯೇ ವಿನಃ ಪರಿಹಾರ ಕಂಡುಕೊಳ್ಳಲು ಕೆಲಸ ಮಾಡುವುದಿಲ್ಲ. ಸುಪ್ರೀಂಕೋರ್ಟ್ ನಲ್ಲೂ ಇದು ಚರ್ಚೆಗೆ ಬರುತ್ತದೆ, ಆದರೆ ಅಂತಿಮವಾಗಿ ಸಾಧಿಸುವುದು ಏನೂ ಇಲ್ಲ. ಅವರು ಸರ್ಕಾರಕ್ಕೆ ಬಯ್ಯುತ್ತಾರೆ, ಸರ್ಕಾರ ಕೂಳೆ ಸುಡುವುದರಿಂದ ಹೀಗಾಗುತ್ತದೆ ಎಂದು ಕೈತೊಳೆದು ಕೂರುತ್ತದೆ. ದಿಲ್ಲಿ ಈಗಾಗಲೇ ಬದುಕಲು ಯೋಗ್ಯವಲ್ಲದ ನಗರ ಎಂಬ ಕುಖ್ಯಾತಿಗೆ ಗುರಿಯಾಗಿದೆ” ಎನ್ನುತ್ತಾರೆ ನಿಡ್ಲೆ ನಿವಾಸಿಯಾಗಿರುವ ಪತ್ರಕರ್ತರಾದ ರಾಘವ ಶರ್ಮ. ಅವರ ಪ್ರಕಾರ, “ನವೆಂಬರ್-ಡಿಸೆಂಬರ್-ಜನವರಿ ತಿಂಗಳಲ್ಲಿ ಆವರಿಸುವ ದಟ್ಟ ಮಾಲಿನ್ಯ ಕಂಡಾಗ ಭಯವಾಗುತ್ತದೆ. ಮಕ್ಕಳಿಗೆ, ವೃದ್ಧರಿಗೆ ಬಿಡಿ, ಈಗ ಯುವಕರಿಗೂ ಈ ಮಾಲಿನ್ಯ ಅನಾರೋಗ್ಯ ತಂದಿಡುತ್ತಿದೆ. ನಾವು ದಿಲ್ಲಿ ಬಿಡಲು ಮಾಲಿನ್ಯ ಕೂಡ ಕಾರಣ. 18 ವರ್ಷಗಳ ವಾಸ್ತವ್ಯ ನಮ್ಮ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮ ಬೀರಿದೆಯೋ ದೇವರೇ ಬಲ್ಲ. ನಾನು ಊರಿಗೆ ವಾಪಸ್ ಆಗಲು ಯೋಚಿಸಿದ್ದರ ಹಿಂದೆ ಮಗಳ ಆರೋಗ್ಯ ಕಾಪಾಡುವುದು ಕೂಡ ಒಂದು ಕಾರಣ ಆಗಿತ್ತು.” ಅವರಂತೆ ದಿಲ್ಲಿ ಮತ್ತು ಮುಂಬೈನಿಂದ ತವರಿಗೆ ಮರಳುವವರ ಸಂಖ್ಯೆ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹೊಸ ತಲೆಮಾರಿನ ಪ್ರಯಾಣದ ಹಸಿವು ದಿಲ್ಲಿ ನಿವಾಸಿಯಾಗಿರುವ ರೂಪಾಲಿ ಹೇಳುವ ಪ್ರಕಾರ, ವರ್ಷಕ್ಕೆ ಒಂದು ಬಾರಿ ಒಂದು ವಾರ ದಿಲ್ಲಿಯಿಂದ ದೂರ ಹೋಗುವುದನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದೇನೆ. ಕಳೆದ ವರ್ಷ ಕರ್ನಾಟಕದ ಕರಾವಳಿಗಳಲ್ಲಿ ಸುತ್ತಾಡಿದ್ದೇನೆ. ಈ ವರ್ಷ ಉದಯ್ಪುರಕ್ಕೆ ತೆರಳಿದ್ದೇನೆ. ಮುಂದಿನ ವರ್ಷ ಮಹಾರಾಷ್ಟ್ರ ಅಥವಾ ಈಶಾನ್ಯ ಪ್ರದೇಶಗಳಿಗೆ ಹೋಗುವ ಆಸಕ್ತಿ ಇದೆ. ಇತ್ತೀಚೆಗೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ತೆಗೆದುಕೊಂಡು ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಚಿಕ್ಕಮಗಳೂರು ಜಿಲ್ಲೆಯಂತೂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ರೆಸಾರ್ಟ್ಗಳಲ್ಲಿ ಒಂದೆರಡು ವಾರ ಬಂದು ನೆಲೆಸಿ ಅತ್ತ ಕೆಲಸವೂ ಸರಿ ಮತ್ತು ಇತ್ತ ಪ್ರಯಾಣವೂ ಆದಂತಾಗುತ್ತದೆ ಎಂದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಕಾಶ್ ಶೆಟ್ಟಿಯವರು ಇತ್ತೀಚೆಗೆ ಸುರತ್ಕಲ್- ಮುಲ್ಕಿ ನಡುವೆ ಇರುವ ಸಸಿಹಿತ್ಲು ಕಡಲತೀರದ ರೆಸಾರ್ಟ್ ಒಂದಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಸಿಬ್ಬಂದಿಗಳು ಹೇಳುವ ಪ್ರಕಾರ, “ಇತ್ತೀಚೆಗೆ ದಿಲ್ಲಿ ಮತ್ತು ಮುಂಬೈನಲ್ಲಿ ನೆಲೆಸಿರುವಂತಹ ಬಹುತೇಕ ಕರಾವಳಿ ನಿವಾಸಿಗರು ವಾರಗಟ್ಟಲೆ ರೆಸಾರ್ಟ್ನಲ್ಲಿ ಬಂದು ಉಳಿಯುತ್ತಿದ್ದಾರೆ. ರೆಸಾರ್ಟ್ನಿಂದಲೇ ಕೆಲಸ ಮಾಡುವುದು ಮತ್ತು ಸುಂದರ ಪ್ರಕೃತಿಯ ಮಡಲಿನ ಅನುಭವವನ್ನು ಪಡೆದು ಮರಳುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ.”

ವಾರ್ತಾ ಭಾರತಿ 5 Dec 2025 8:38 pm

ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ಬಿಜೆಪಿ ಹಿನ್ನಲೆ ಉಳ್ಳವರಿಗೆ ಪಕ್ಷದ ಪ್ರಮುಖ ಹುದ್ದೆ ನೀಡಲಾಗುತ್ತಿದೆ : ಪಾಮಯ್ಯ ಮುರಾರಿ ಆರೋಪ

ರಾಯಚೂರು: ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ಬಿಜೆಪಿ ಪಕ್ಷದ ಹಿನ್ನಲೆ ಉಳ್ಳವರಿಗೆ ಪಕ್ಷದ ಪ್ರಮುಖ ಹುದ್ದೆಗಳನ್ನು ನೀಡಿರುವುದರಿಂದ ಅವರಿಗೆ ಕಾಂಗ್ರೆಸ್ ಪಕ್ಷದ ಗಂಧ ಗಾಳಿಯೂ ತಿಳಿದಿಲ್ಲ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ ಹೇಳಿದರು.   ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ಧಿ ಗೋಷ್ಠಿ ನಡೆಸಿ ಮಾತನಾಡಿದ ಪಾಮಯ್ಯ ಮುರಾರಿ, ಹೂಲಗೇರಿಯವರು ಸಹ ಬಿಜೆಪಿ ಮೂಲದವರೆ, ಆದ್ದರಿಂದ ಅವರ  ಮನಸ್ಸು ಆ ಕಡೆಯೇ ಸೆಳೆಯುತ್ತದೆ. ನಾವು ಕಾಂಗ್ರೆಸ್  ರಾಜ್ಯ ಮುಖಂಡರ ಆದೇಶದ ಮೇರೆಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಮೂಲ ಕಾಂಗ್ರೆಸ್ ನವರ ಶ್ರಮದಿಂದಲೇ ತಾವು ಶಾಸಕರಾಗಿದ್ದೀರಿ. ಆದರೆ ಕಳೆದ ಚುನಾವಣೆ ವಲಸೆ ಬಂದವರಿಗೆ ಮಣೆ ಹಾಕಿದ್ದರಿಂದ ಸೋಲಬೇಕಾಯಿತು. ಈ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚಿಸಲು ಸಿದ್ದರಿದ್ದೇವೆ. ತಮಗೆ ಸಾಧ್ಯವಾದರೆ ಈ ಕುರಿತು ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಹೇಳಿದರು.   ಮೀಸಲು ಕ್ಷೇತ್ರ, ಮೀಸಲು ಕ್ಷೇತ್ರ ಎಂದು ಬೊಬ್ಬೆ ಹೊಡೆಯುವ ಗೋವಿಂದ ನಾಯಕರವರಿಗೆ ಮೀಸಲು ಎಂದರೆ ಪ್ರಾತಿನಿಧ್ಯವೇ ಹೊರತು ಪಟ್ಟಾಭಿಷೇಕವಲ್ಲ ಎಂದು ಡಿಜಿ ಗುರಿಕಾರ ಹೇಳಿದರು. ಮೀಸಲು ಕ್ಷೇತ್ರದಲ್ಲಿ ಮೀಸಲು ಪಡೆದವರಿಗೆ ಮಾತ್ರ ಹಕ್ಕು ಅಧಿಕಾರ ಇಲ್ಲವೇ? ಅವರಿಗೆ ಎಷ್ಟು ಹಕ್ಕು ಅಧಿಕಾರ ಇದೆಯೋ ಅಷ್ಟೇ ಹಕ್ಕು ಅಧಿಕಾರ ಸಾಮಾನ್ಯ ಜನರಿಗೂ ಇದೆ. ನಾವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರಿಗೆ ಪಕ್ಷ ಸಂಘಟನೆ ಮಾಡುವ ಅಧಿಕಾರವಿದೆ. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಅದನ್ನು ಅರಿತು ಮಾತನಾಡಬೇಕೆಂದು ಹೇಳಿದರು.   ಈ ಸಂದರ್ಭದಲ್ಲಿ ಭೂಪನಗೌಡ ಕರಡಕಲ್, ಗುಂಡಪ್ಪ ನಾಯಕ, ಹನಿಸ್ ಪಾಷಾ, ಶರಣಪ್ಪ ಚಲುವಾದಿ, ಜಗದೀಶ್‌ ಗೌಡ, ಮಲ್ಲಯ್ಯ, ಈರಪ್ಪ ಗೌಡೂರು ಸೇರಿ ಹಲವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 5 Dec 2025 8:36 pm

ಮಂಡ್ಯ ಜಿಲ್ಲೆಗೂ ‘ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ’ : ಗೃಹ ಸಚಿವ ಡಾ.ಜಿ.ಪರಮೇಶ್ವರ್

‘ಬೆಳ್ತಂಗಡಿಯಲ್ಲಿ ಸಿಐಡಿ ಉಪವಿಭಾಗ ಸ್ಥಾಪನೆ’

ವಾರ್ತಾ ಭಾರತಿ 5 Dec 2025 8:33 pm

ಬೆಂಗ್ರೆ ವೀರಭಾರತಿ ವ್ಯಾಯಾಮ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ

ಬೆಂಗ್ರೆ, ಡಿ. 5 : ಮಂಗಳೂರಿನ ಸ್ಯಾಂಡ್ಸ್ ಪಿಟ್ ಬೆಂಗರೆಯಲ್ಲಿರುವ ವೀರ ಭಾರತಿ ವ್ಯಾಯಾಮ ಶಾಲೆಯಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ನೂತನ ಕಟ್ಟಡಕ್ಕೆ  ಶುಕ್ರವಾರ ಶ್ಯಾಮಿಲಿ ಫೌಂಡೇಶನ್ ಟ್ರಸ್ಟ್ ಸ್ಥಾಪಕರು, ಮೊಗವೀರ ಸಮಾಜದ ಮುಖಂಡರಾದ ನಾಡೋಜ ಡಾ.ಜಿ.ಶಂಕರ್ ಶಿಲಾನ್ಯಾಸಗೈದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಗವೀರ ಬಾಂಧವರು, ಗ್ರಾಮಸ್ಥರು ಹಾಗೂ ಶಾಸಕರು ದಾನಿಗಳ ಸಹಕಾರದಲ್ಲಿ ವ್ಯಾಯಾಮ ಶಾಲೆಯ ನೂತನ ಕಟ್ಟಡ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಸರಕಾರದಿಂದಲೂ ಸಹಾಯಧನ ಒದಗಿಸುವ ಬಗ್ಗೆ ಪ್ರಯತ್ನ ನಡೆಸಲಾಗುವುದು ಎಂದರು. ಮೊಗವೀರ ಸಮಾಜವನ್ನು ಓಬಿಸಿ ವರ್ಗಕ್ಕೆ ಸೇರಿಸುವ ಕುರಿತಂತೆ ನಮ್ಮ ಪ್ರಯತ್ನ ಮುಂದುವರಿದಿದೆ. ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು. ಶಾಸಕರಾದ ವೇದವ್ಯಾಸ ಕಾಮತ್ ಅವರು ಮಾತನಾಡಿ, ನಾಡೋಜ ಡಾ.ಜಿ.ಶಂಕರ್ ಅವರ ನೇತೃತ್ವದಲ್ಲಿ, ಮೊಗವೀರ ಮುಖಂಡರ ಸಹಕಾರದಲ್ಲಿ ಜೀರ್ಣೋದ್ದಾರಕ್ಕೆ ಇಳಿಯಲಾಗಿದೆ. ನನ್ನಿಂದಾದ ಎಲ್ಲಾ ಸಹಕಾರಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಹಕಾರ ರತ್ನ ಚೇತನ್ ಬೆಂಗ್ರೆ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ನೂತನ ವ್ಯಾಯಾಮ ಶಾಲಾ ಕಟ್ಟಡದ ವಿನ್ಯಾಸವನ್ನು ಅನಾವರಣಗೊಳಿಸಲಾಯಿತು. ಧನಸಹಾಯ ಹೊಂದಿಸುವ ಸಲುವಾಗಿ ವಿಜ್ಞಾಪನಾ ಪತ್ರದ ಬಿಡುಗಡೆ ನಡೆಯಿತು. ಜೀರ್ಣೋದ್ಧಾರ ಸಮಿತಿ ಮುಂಬೈ ಮಂಡಳಿಯ ಅಧ್ಯಕ್ಷರಾದ ಅಜಿತ್ ಜಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ವೇದಮೂರ್ತಿ ಶಿವಪ್ರಸಾದ್ ತಂತ್ರಿ ಅವರು ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು. ಶ್ರೀ ಮಹಾವಿಷ್ಣು ವಿಶೇಷಯನ ಭಜನಾ ಮಂದಿರ ಬೆಂಗ್ರೆ ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷರಾದ ಶಶಿಕುಮಾರ್ ಬೆಂಗ್ರೆ, ಬೆಂಗರೆ ಮಹಾಜನ ಸಭಾ ಅಧ್ಯಕ್ಷರಾದ ಸಂಜಯ್ ಸುವರ್ಣ, ಕರ್ನಾಟಕ ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ವರದರಾಜ ಬಂಗೇರ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮೋಹನ್ ಬೆಂಗ್ರೆ, ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಆನಂದ ಅಮೀನ್, ಪ್ರಮುಖರಾದ ಹರಿಚಂದ್ರ ಪುತ್ರನ್, ಗಿರಿಧರ ಎಸ್ ಸುವರ್ಣ, ಲಕ್ಷ್ಮಣ ,ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಭಾರತಿ 5 Dec 2025 8:32 pm

18ನೇ ವರ್ಷದ ಮಿಡ್‌ನೈಟ್‌ ಮ್ಯಾರಥಾನ್‌, ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಮಾರ್ಗ ಬದಲಾವಣೆ

ಬೆಂಗಳೂರಿನಲ್ಲಿ 18ನೇ ಮಿಡ್‌ನೈಟ್ ಮ್ಯಾರಥಾನ್‌ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 3 ರಿಂದ ಭಾನುವಾರ ಮುಂಜಾನೆ 5 ಗಂಟೆಯವರೆಗೆ ಕೆಟಿಪಿಒ ಮತ್ತು ಇಪಿಐಪಿ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೂರ್ವ ವಿಭಾಗದ ಸಂಚಾರ ಡಿಸಿಪಿ ಸಾಹಿಲ್‌ ಬಾಗ್ಲಾ ಮನವಿ ಮಾಡಿದ್ದಾರೆ.

ವಿಜಯ ಕರ್ನಾಟಕ 5 Dec 2025 8:27 pm

ಬೆಳ್ತಂಗಡಿ | ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು ಮಾಡಲು ಮತ್ತೆ ನೋಟಿಸ್‌?

ಬೆಳ್ತಂಗಡಿ : ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮತ್ತೆ ಗಡಿಪಾರು ಮಾಡುವ ಬಗ್ಗೆ ನೋಟೀಸ್ ನೀಡಲಾಗಿರುವುದಾಗಿ ತಿಳಿದು ಬಂದಿದೆ. ಈ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಕಮಿಷನರ್ ಅವರು ಆದೇಶ ಮಾಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಗಡಿಪಾರು ಆದೇಶವನ್ನು ರದ್ದುಪಡಿಸಿ ಆದೇಶ ನೀಡಿತ್ತು. ಹಾಗೂ ಅವರನ್ನು ಗಡಿಪಾರು ಮಾಡಬೇಕಾದರೆ ಮತ್ತೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದೀಗ ಮತ್ತೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡುವ ಬಗ್ಗೆ ಪುತ್ತೂರು ಸಹಾಯಕ ಕಮಿಷನರ್ ಅವರು ಮತ್ತೆ ನೋಟೀಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಲಭ್ಯ ಮಾಹಿತಿಯಂತೆ ಮಹೇಶ್ ಶೆಟ್ಟಿ ಅವರಿಗೆ ಡಿ.8 ರಂದು ಪುತ್ತೂರು ಎಸಿ ಮುಂದೆ ಹಾಜರಾಗಲು ನೋಟಿಸ್ ಜಾರಿ ಮಾಡಿದೆ. ಈಗ ನೀಡಿರುವ ನೋಟೀಸ್ ನಲ್ಲಿ ಹೊಸದಾಗಿ ದಾಖಲಾಗಿರುವ ಪ್ರಕರಣಗಳನ್ನು ಸೇರಿಸಿ ನೋಟೀಸ್ ನೀಡಲಾಗಿರುವುದಾಗಿ ಮಾಹಿತಿ ಲಭ್ಯವಾಗುತ್ತಿದೆ.

ವಾರ್ತಾ ಭಾರತಿ 5 Dec 2025 8:24 pm

ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ: ಕಲಬುರಗಿಯಿಂದ ಚೈತ್ಯ ಭೂಮಿಗೆ ವಿಶೇಷ ರೈಲಿಗೆ ಡಿಜಿ ಸಾಗರ್ ಚಾಲನೆ

ಕಲಬುರಗಿ:  ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ನಿಮಿತ್ತ ಮಧ್ಯ ರೈಲ್ವೆಯ ಆಲ್ ಇಂಡಿಯಾ ಎಸ್ಸಿ ಎಸ್ಟಿ ರೈಲ್ವೆ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಕಲಬುರಗಿಯಿಂದ ಚೈತ್ಯ ಭೂಮಿಗೆ ವಿಶೇಷ ರೈಲಿಗೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿಜಿ ಸಾಗರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಸ್‌ಸಿ, ಎಸ್‌ಟಿ ರೈಲ್ವೆ ವಿಭಾಗೀಯ ಖಜಾಂಚಿಯಾದ ಕಲ್ಯಾಣಿ ಗಟ್ಟು ಮತ್ತು ಕ.ರಾ.ದ.ಸಂ.ಸ.ಯ ರಾಜ್ಯ ಖಜಾಂಚಿ ಬಿ.ಸಿ ವಾಲಿ, ನಿವೃತ್ತ ಅಭಿಯಂತರರಾದ ಅಶೋಕ ಅಂಬಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 5 Dec 2025 8:22 pm

Chitradurga Crimes: ಛೇ ಎಣ್ಣೆ ಮತ್ತಲ್ಲಿ ಹೀಗಾ ಮಾಡೋದು?; ತನ್ನ ಅಪ್ರಾಪ್ತ ಪುತ್ರಿಯರ ಮೇಲೆ ಅತ್ಯಾಚಾರ ಎಸಗಿದ ಪಾಪಿ ತಂದೆ

ಚಿತ್ರದುರ್ಗದಲ್ಲಿ ತಂದೆಯೊಬ್ಬ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಮಕ್ಕಳ ಮೇಲೆ ಮಾತ್ರವಲ್ಲದೇ ಹೆತ್ತ ತಾಯಿಯ ಮೇಲೆಯೂ ಲೈಂಗಿ ದೌರ್ಜನ್ಯ ಎಸಗಿದ ಆರೋಪ ಎಸಗಿದ್ದಾರೆ ಎಂದು ಅವರ ತಾಯಿಯೇ ದೂರು ನೀಡಿದ್ದಾರೆ. ಮಕ್ಕಳಿಗೆ ಏನೂ ಮಾಡೋದಿಲ್ಲ ಎಂದು ನಾನು ಭಾವಿಸಿದ್ದೆ ಆದರೆ, ಅವರನ್ನು ಬಿಟ್ಟಿಲ್ಲ ಆತನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

ವಿಜಯ ಕರ್ನಾಟಕ 5 Dec 2025 8:22 pm

ಹಾಲಿವುಡ್‌ನಲ್ಲೊಂದು ಮೆಗಾ ಡೀಲ್‌, ನೆಟ್‌ಫ್ಲಿಕ್ಸ್‌ ತೆಕ್ಕೆಗೆ ವಾರ್ನರ್‌ ಬ್ರದರ್ಸ್‌, ₹6.5 ಲಕ್ಷ ಕೋಟಿಗೆ ಖರೀದಿ

ಮನರಂಜನಾ ಕ್ಷೇತ್ರದ ದೈತ್ಯ ಸಂಸ್ಥೆಯಾದ ನೆಟ್‌ಫ್ಲಿಕ್ಸ್, ಮತ್ತೊಂದು ಪ್ರಮುಖ ಸಂಸ್ಥೆಯಾದ ವಾರ್ನರ್ ಬ್ರದರ್ಸ್ ಡಿಸ್ಕವರಿಯ ಟಿವಿ, ಚಲನಚಿತ್ರ ಮತ್ತು ಸ್ಟ್ರೀಮಿಂಗ್ ವಿಭಾಗವನ್ನು ಬರೋಬ್ಬರಿ 72 ಬಿಲಿಯನ್ ಡಾಲರ್‌ಗಳಿಗೆ ಖರೀದಿಸಲು ಒಪ್ಪಿಕೊಂಡಿದೆ. ಹಲವು ವಾರಗಳ ಕಾಲ ನಡೆದ ತೀವ್ರ ಪೈಪೋಟಿಯಲ್ಲಿ ಪ್ಯಾರಾಮೌಂಟ್ ಸ್ಕೈಡ್ಯಾನ್ಸ್ ಸಂಸ್ಥೆಯನ್ನು ಹಿಂದಿಕ್ಕಿದ ನೆಟ್‌ಫ್ಲಿಕ್ಸ್‌, ಪ್ರತಿ ಷೇರಿಗೆ ಸುಮಾರು 28 ಡಾಲರ್‌ನಂತೆ ನೀಡಿ ಈ ಬೃಹತ್ ಒಪ್ಪಂದವನ್ನು ತನ್ನದಾಗಿಸಿಕೊಂಡಿದೆ.

ವಿಜಯ ಕರ್ನಾಟಕ 5 Dec 2025 8:20 pm

4 ನೇ ದಿನವೂ ಹಾರಲು ಚಡಪಡಿಸಿದ ಇಂಡಿಗೋ!

ರೀಫಂಡ್ ಮಾಡಿ ಕೈತೊಳೆದುಕೊಂಡ ವಿಮಾನಯಾನ ಸಂಸ್ಥೆ

ವಾರ್ತಾ ಭಾರತಿ 5 Dec 2025 8:20 pm

ದೇವನಹಳ್ಳಿಯ 1,777 ಎಕರೆ ಇನ್ನು ʼಶಾಶ್ವತ ವಿಶೇಷ ಕೃಷಿ ವಲಯʼ : ಎಚ್.ಕೆ.ಪಾಟೀಲ್

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777ಎಕರೆ ಭೂಮಿಯನ್ನು `ಶಾಶ್ವತ ವಿಶೇಷ ಕೃಷಿ ವಲಯ’ ಎಂದು ಘೋಷಿಸಲು ಗುರುವಾರ ನಡೆದ ಸಂಪುಟ ಸಭೆಯು ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹಿತವನ್ನು ಪರಿಗಣಿಸಿ, ಅವರಿಗೆ ಪೂರಕವಾಗಿ ಸ್ಪಂದಿಸಲಾಗಿದೆ. 1996ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ಕಲಂ 4ರ ಅಡಿಯಲ್ಲಿರುವ ಅಧಿಕಾರವನ್ನು ಬಳಸಿಕೊಂಡು, 1,777ಎಕರೆಯನ್ನು ಪ್ರಾಥಮಿಕ ಅಧಿಸೂಚನೆಯಿಂದ ಹೊರಗಿಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ಇಷ್ಟು ಭೂಮಿಯನ್ನು ಶಾಶ್ವತ ವಿಶೇಷ ಕೃಷಿ ವಲಯವೆಂದು ಘೋಷಿಸಲು ಅಗತ್ಯವಿರುವ ರೂಪುರೇಷೆ ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಲಾಗುವುದು ಮತ್ತು ನಗರಾಭಿವೃದ್ಧಿ ಇಲಾಖೆಯ ಸಂಬಂಧಿತ ಸಮವರ್ತಿ ಅಧಿಸೂಚನೆ ಹೊರಡಿಸಲಾಗುವುದು. ಜೊತೆಗೆ, ಈ ಜಮೀನಿನ ಪಹಣಿಗಳಲ್ಲಿನ ಕಾಲಂ 11ರಲ್ಲಿ `ಶಾಶ್ವತ ವಿಶೇಷ ಕೃಷಿ ವಲಯ’ವೆಂದು ನಮೂದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು. ಒಂದು ವೇಳೆ ಈ 13 ಗ್ರಾಮಗಳ ರೈತರೆ ಸ್ವಯಂಪ್ರೇರಿತವಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ತಮ್ಮ ಜಮೀನುಗಳನ್ನು ಬಿಟ್ಟುಕೊಡಲು ಮುಂದೆ ಬಂದಲ್ಲಿ ಅಂತಹ ಜಮೀನುಗಳನ್ನು ಅಗತ್ಯಾನುಸಾರ ಮತ್ತು ನಿಯಮಾನುಸಾರ ಸ್ವಾಧೀನ ಪಡಿಸಿಕೊಳ್ಳಲಾಗುವುದು. ಇದಕ್ಕಾಗಿ ರೈತರಿಗೆ 3 ತಿಂಗಳ ಕಾಲಾವಕಾಶ ನೀಡಲಾಗುವುದು. ಇಂತಹ ಪ್ರಕರಣಗಳಲ್ಲಿ ಭೂ ದರ ನಿರ್ಧರಣಾ ಸಮಿತಿಯ ತೀರ್ಮಾನದಂತೆ ಸೂಕ್ತ ಪರಿಹಾರವನ್ನೂ ನೀಡಲಾಗುವುದು ಎಂದು ಎಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು.

ವಾರ್ತಾ ಭಾರತಿ 5 Dec 2025 8:18 pm

ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ| ಬಿಜೆಪಿ ಮುಖಂಡರಿಂದಲೇ ಚುನಾವಣಾಧಿಕಾರಿಗಳ ಮೇಲೆ ಹಲ್ಲೆ: ಆರ್.ಕೆ ಪಾಟೀಲ್ ಗಂಭೀರ ಆರೋಪ

ಕಲಬುರಗಿ: ಬುಧವಾರ ನಡೆದಿದ್ದ ಆಳಂದ ತಾಲೂಕಿನ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಉದ್ದೇಶಪೂರ್ವಕವಾಗಿ ಚುನಾವಣಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಆರ್.ಕೆ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಕೆ ಪಾಟೀಲ್, ಆಳಂದದಲ್ಲಿ ನಡೆದಿದೆ ಎನ್ನಲಾಗಿರುವ ಮತಗಳ್ಳತನ ಪ್ರಕರಣವನ್ನು ದಿಕ್ಕುತಪ್ಪಿಸಲು ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಬಿಜೆಪಿಗರು ಗಲಭೆ ನಡೆಸಿದ್ದಾರೆ. ಚುನಾವಣಾಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವುದು ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಯಲಿ ಎಂದು ಆಗ್ರಹಿಸಿದರು. ಮತಗಟ್ಟೆ ಸಂಖ್ಯೆ 1ರಲ್ಲಿ ಮತಪತ್ರ ಜೋಡಣೆಯ ಪುಸ್ತಕದಲ್ಲಿ 'ಜನತಾ ಬಜಾರ್' ಚುನಾವಣೆಯ ಮತಪತ್ರಗಳು ಕಂಡುಬಂದಿರುವುದು ನಿಜ. ಈ ಕುರಿತಾಗಿ ರೈತ ಪೆನಲ್ ನ ಅಭ್ಯರ್ಥಿಗಳೇ ಖುದ್ದಾಗಿ ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದನ್ನು ಒಪ್ಪಿ ಸರಿಪಡಿಸಲು ಅಧಿಕಾರಿಗಳು ಪ್ರಯತ್ನಿಸಿದ್ದರು. ಇದೇ ವೇಳೆ ಬಿಜೆಪಿ ಮುಖಂಡರು, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಅವರೇ ಚುನಾವಣೆ ನಿಲ್ಲಿಸಲು ಮತ ಪೆಟ್ಟಿಗೆಯಲ್ಲಿ ನೀರು ಸುರಿದಿದ್ದಾರೆ ಎಂದು ಆರೋಪಿಸಿದರು. ಈ ಹಿಂದೆ ಶಾಸಕ ಬಿ.ಆರ್.ಪಾಟೀಲ್ ಬೆಂಬಲಿಗರು ಕಾರ್ಖಾನೆಯ ಅಧ್ಯಕ್ಷರಾಗಿದ್ದ ವೇಳೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 12.50 ಕೋಟಿಯಷ್ಟು ಠೇವಣಿ ಇಟ್ಟಿದ್ದಾರೆ. ಇಂತಹ ಅನೇಕ ಯೋಜನೆಗಳು ಮಾಡಿದ್ದರಿಂದ ಮತದಾರರು ರೈತ ಪೆನಲ್ ಅನ್ನು ಬೆಂಬಲಿಸಿದ್ದರು. ಸೋಲು ಅನುಭವಿಸುವ ಸಾಧ್ಯತೆ ಹೆಚ್ಚಾಗಿದ್ದರಿಂದ ಹೇಗಾದರೂ ಮಾಡಿ ಮತದಾನವನ್ನು ಸ್ಥಗಿತಗೊಳಿಸಬೇಕು ಎಂದು ಯೋಜನೆ ರೂಪಿಸಿದ ಹರ್ಷಾನಂದ ಗುತ್ತೇದಾರ್ ಹಾಗೂ ಅವರ ಬೆಂಬಲಿಗರು ಈ ಗಲಾಟೆ ಸೃಷ್ಟಿಸಿದ್ದಾರೆ. ಬಳಿಕ ಹೆದ್ದಾರಿಯನ್ನು ತಡೆದು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದಾರೆ ಎಂದು ಆರ್.ಕೆ.ಪಾಟೀಲ್ ಆರೋಪಿಸಿದರು. ಮತಪತ್ರ ಅಲ್ಲಿ ಹೇಗೆ ಬಂದಿದೆ? ಯಾರು ಅಲ್ಲಿ ತಂದಿಟ್ಟಿದ್ದಾರೆ ಎನ್ನುವುದರ ಬಗ್ಗೆ ತನಿಖೆಯಾಗಲಿ. ಆದರೆ ಬಿಜೆಪಿ ಮುಖಂಡರು ಯಾವುದೇ ಆಧಾರವಿಲ್ಲದೆ ಎಲ್ಲದ್ದಕ್ಕೂ ಶಾಸಕ ಬಿ.ಆರ್ ಪಾಟೀಲ್, ಆರ್.ಕೆ.ಪಾಟೀಲ್ ಕಾರಣ ಎಂದು ಆರೋಪಿಸುತ್ತಿದ್ದಾರೆ. ಅವರ ಆರೋಪಗಳೆಲ್ಲವೂ ಸುಳ್ಳು. ಸತ್ಯವನ್ನು ಮಾತನಾಡುವುದನ್ನು ಅವರು ಕಲಿಯಲಿ ಎಂದು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು. ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಸಿದ್ದರಾಮ ಪ್ಯಾಟೆ, ಶಿವಪುತ್ರಪ್ಪ ಪಾಟೀಲ್, ಅಶೋಕ್ ಸಾವಳೇಶ್ವರ್, ಗುರುಲಿಂಗಮಜಂಗಮ ಮಾಲಿಪಾಟೀಲ್, ಬಸವರಾಜ ಉಪ್ಪಿನ, ಧರ್ಮರಾಜ ಸಾಹು, ಶ್ರೀಮಂತ ವಗ್ದರ್ಗಿ, ಸಿದ್ದರಾಮ ಸಾಲಿಮನಿ, ಸುಭಾಷ್, ಶಾಂತೇಶ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ವಾರ್ತಾ ಭಾರತಿ 5 Dec 2025 8:17 pm

ಉಡುಪಿ | ಕೇರಳ ಮೂಲದ ಮನೋರೋಗಿ ಪದವೀಧರೆಯ ರಕ್ಷಣೆ

ಉಡುಪಿ ಡಿ.5: ಪ್ರತಿಷ್ಟಿತ ಕಚೇರಿಯಲ್ಲಿ ಉದ್ಯೋಗದಲ್ಲಿರುವ ಮೂರು ಪದವಿ ಪಡೆದ ಕೇರಳ ಮೂಲದ ಯುವತಿಯೊಬ್ಬಳು ಉಡುಪಿ ನಗರದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಓಡಾಡುತ್ತಿದ್ದ ಯುವತಿಯನ್ನು ಸಾರ್ವಜನಿಕರು ಹಾಗೂ ಮಹಿಳಾ ಪೋಲಿಸರ ಸಹಾಯದಿಂದ ಸಾಮಾಜಿಕ ಕಾರ್ಯಕರ್ತ ವಿಶುಶೆಟ್ಟಿ ಅಂಬಲಪಾಡಿ ರಕ್ಷಿಸಿ ಉಡುಪಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯನ್ನು ರೇಷ್ಮ ಎಂದು ಗುರುತಿಸಲಾಗಿದೆ. ಬಿಎಸ್ಸಿ, ಎಂಎಸ್ಸಿ, ಎಂಬಿ.ಎ ಪದವಿ ಪಡೆದಿದ್ದ ಈಕೆ ಬೆಂಗಳೂರಿನ ಪ್ರತಿಷ್ಟಿತ ಕಂಪೆನಿಯಲ್ಲಿ ವೇತನ ಪಡೆಯುತ್ತಿದ್ದರು. ಮಗಳ ಈ ಸ್ಥಿತಿ ತಿಳಿದು ಹೆತ್ತವರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಇದೀಗ ಯುವತಿಯ ತಂದೆ ಪತ್ತೆಯಾಗಿದ್ದು, ಆಕೆಯನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಆಕೆಯನ್ನು ಕ್ಲಿಪ್ತ ಸಮಯದಲ್ಲಿ ರಕ್ಷಿಸಿದ್ದರಿಂದ ಸಂಭವನೀಯ ದುರಂತ ತಪ್ಪಿದೆ ಎಂದು ತಂದೆ ವಿಶುಶೆಟ್ಟಿಯವರಲ್ಲಿ ಹೇಳಿಕೆ ನೀಡಿದ್ದಾರೆ. ರಾತ್ರಿ ಹೊತ್ತು ದುರಂತ ತಪ್ಪಿಸಿ ಆಸ್ಪತ್ರೆಗೆ ದಾಖಲಿಸಿದ ವಿಶುಶೆಟ್ಟಿ ಪೋಲಿಸ್ ಹಾಗೂ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವಿಷಯ ತಿಳಿದ ಕೂಡಲೆ ಯುವತಿಯ ತಂದೆ ಕೇರಳದಿಂದ ಕಾರಿನ ಮೂಲಕ ತಕ್ಷಣ ಹೊರಟು ಉಡುಪಿಗೆ ಬಂದಿದ್ದಾರೆ. ಇದೀಗ ತುರ್ತು ಚಿಕಿತ್ಸೆಯನ್ನು ಬಾಳಿಗಾ ಆಸ್ಪತ್ರೆಯಲ್ಲಿ ಮುಂದುವರೆಸಿದ್ದಾರೆ.

ವಾರ್ತಾ ಭಾರತಿ 5 Dec 2025 8:13 pm

ಪೆರ್ಡೂರು | ಡಿ.7ರಂದು ರಾಜ್ಯಮಟ್ಟದ ಸಂಗೀತ ಸ್ಪರ್ಧೆಯ ಸೆಮಿಫೈನಲ್

ಪೆರ್ಡೂರು, ಡಿ.5: ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪೆರ್ಡೂರು, ಉದಯ ಕೃಷ್ಣಯ್ಯ ಶೆಟ್ಟ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಹೆಬ್ರಿ ಚಾಣಕ್ಯ ಮ್ಯೂಸಿಕ್ ಅಕಾಡೆಮಿ ನೇತೃತ್ವದಲ್ಲಿ ವಾಯ್ಸ್ ಆಫ್ ಚಾಣಕ್ಯ -2025 ರಾಜ್ಯ ಮಟ್ಟದ ಟ್ರ್ಯಾಕ್ ಸಂಗೀತ ಸಮರದ ಸೆಮಿಫೈನಲ್ ಡಿ.7ರಂದು ಮಧ್ಯಾಹ್ನ 1.30ರಿಂದ ಪೆರ್ಡೂರು ಎಪಿಟಿ ಶಾಲೆ ಎದುರಿರುವ ಅನಂತ ಸೌರಭ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭವನ್ನು ಪೆರ್ಡೂರು ಬಂಟರ ಸಂಘ ಅಧ್ಯಕ್ಷ ಕೆ.ಶಾಂತರಾಮ ಸೂಡ ಉದ್ಘಾಟಿಸಲಿದ್ದು, ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಸಂತೋಷ ಕುಲಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 30ಗಾಯಕರು ಸ್ಪರ್ಧಿಸಲಿದ್ದು, ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಣೆ ಹಾಗೂ ಕಾರ್ಯಕ್ರಮದ ನಡುವೆ ಚಾಣಕ್ಯ ಡ್ಯಾನ್ಸ್ ಅಕಾಡೆಮಿ ಪೆರ್ಡೂರು ತಂಡದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ತಾ ಭಾರತಿ 5 Dec 2025 8:09 pm

ಉಡುಪಿ | ಡಿ.13ರಂದು ವಿಶ್ವ ಶಾಂತಿ ಸಮಾವೇಶ

ಉಡುಪಿ, ಡಿ.5: ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠ ಆಶ್ರಯದಲ್ಲಿ ವಿಶ್ವಗೀತಾ ಪರ್ಯಾಯ ಮಹೋತ್ಸವದ ಪ್ರಯುಕ್ತ ವಿಶ್ವಶಾಂತಿ ಸಮಾವೇಶವನ್ನು ಡಿ.13ರಂದು ಬೆಳಗ್ಗೆ 10 ಗಂಟೆಗೆ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಮಠದ ಗೀತಾ ಮಂದಿರದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಅಮೇರಿಕಾದ ವರ್ಲ್ಡ್ ರಿಲೀಜಿಜಿಯಸ್ ಫಾರ್ ಪೀಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ವಿಲಿಯಂ ಎಫ್.ವಿಂಡ್ಲೆ, ಒನ್ ವರ್ಲ್ಡ್ ಒನ್ ಫ್ಯಾಮಿಲಿ ಸಂಸ್ಥಾಪಕ ಸದ್ಗುರು ಶ್ರೀಮಧುಸೂದನ ಸಾಯಿ, ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ.ಅಬ್ದುಲ್ ನಝೀರ್ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿರುವರು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರನ್ನು ಸನ್ಮಾನಿಸಲಾಗುವುದೆಂದು ಅವರು ಮಾಹಿತಿ ನೀಡಿದರು. ಕೋಟಿ ಗೀತಾ ಲೇಖನ ಯಜ್ಞಕ್ಕೆ ಸಂಬಂಧಿಸಿ ಭಕ್ತಾಧಿಗಳಿಂದ ಸಾಕಷ್ಟು ಬೇಡಿಕೆಗಳಿದ್ದು, ಈ ಯೋಜನೆ ಮುಂದಿನ ಎರಡು ವರ್ಷ ಕಾಲ ಮುಂದುವರಿಯಲಿದೆ. ಆನ್ಲೈನ್ ಗೀತಾ ರಸಪ್ರಶ್ನೆ ನಡೆಯುತ್ತಿದ್ದು, 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

ವಾರ್ತಾ ಭಾರತಿ 5 Dec 2025 8:06 pm

ತೆರೆಗೆ ಸರಿದ ಪ್ರಧಾನಿ ನರೇಂದ್ರ ಮೋದಿ ಆಪ್ತ ಹಿರೇನ್ ಜೋಶಿ: ವರದಿ

ಮಾಧ್ಯಮಗಳಲ್ಲಿ ಮೋದಿ ಇಮೇಜ್ ರೂಪಿಸುತ್ತಿದ್ದ ಪ್ರಭಾವಿ ಹಿರೇನ್ ಜೋಷಿ ಯಾರು ?

ವಾರ್ತಾ ಭಾರತಿ 5 Dec 2025 8:06 pm