SENSEX
NIFTY
GOLD
USD/INR

Weather

19    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಕುಳಿತು ಕೆಲ್ಸ ಮಾಡಿ ಬೆನ್ನು-ಕತ್ತು ನೋವಾಗ್ತಿದ್ಯಾ? ಹಾಗಾದ್ರೆ ಕುಳಿತಲ್ಲೇ ಈ 10 ಟ್ರಿಕ್ಸ್ ಟ್ರೈ ಮಾಡಿ

Stretching Exercises: ನೀವು ಹೆಚ್ಚು ಸಮಯ ಕುಳಿತೇ ಇರುವವರಾದರೆ ನಿಮ್ಮ ಕುತ್ತಿಗೆ, ಭುಜ, ಹಿಂಭಾಗ, ಬೆನ್ನಿಗೆ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ನೀಡಬೇಕಾಗುತ್ತದೆ.ಹೀಗಾಗಿ ನಿಮಗಾಗಿ ನಾವು ಕೆಲವೊಂದು ಸ್ಟ್ರೆಚಿಂಗ್ ವ್ಯಾಯಾಮಗಳು ತಿಳಿಸಿಕೊಡ್ತೇವೆ.

ಸುದ್ದಿ18 3 Dec 2025 11:30 pm

ಹಿಮೋಗ್ಲೋಬಿನ್ ಕೌಂಟ್ ಕಡಿಮೆ ಇದ್ದ ತಕ್ಷಣ ಆಹಾರದಲ್ಲಿ ಬದಲಾವಣೆ ಬೇಕೆ?

ಸಾಂದರ್ಭಿಕ ಚಿತ್ರ | Photo Credit : freepik ರಕ್ತ ಪರೀಕ್ಷೆಯಲ್ಲಿ ಕಬ್ಬಿಣದಂಶ ಕಡಿಮೆ ಇದೆ ಅಥವಾ ಹಿಮೋಗ್ಲೋಬಿನ್ ಕಡಿಮೆ ಎಂದಾಕ್ಷಣ ಬಹಳಷ್ಟು ಮಂದಿ ಪೂರಕ ಔಷಧಿಗಳನ್ನು ಸೇವಿಸುತ್ತಾರೆ ಅಥವಾ ಕಬ್ಬಿಣದಂಶ ಹೆಚ್ಚಾಗುವಂತೆ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಆದರೆ ಇಂತಹ ಬದಲಾವಣೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಆಧುನಿಕ ಇಂಟರ್ನೆಟ್ ಕಾಲದಲ್ಲಿ ಬಹಳಷ್ಟು ಮಂದಿ ಸ್ವಯಂ ವೈದ್ಯರಾಗಿ ಔಷಧಿಗಳನ್ನು ಸೇವಿಸುವುದಿದೆ. ವಿಟಮಿನ್ಗಳು ಅಥವಾ ಕಬ್ಬಿಣದಂಶಗಳು ಕಡಿಮೆ ಇದೆ ಎಂದು ರಕ್ತ ಪರೀಕ್ಷೆಯಲ್ಲಿ ತಿಳಿದ ತಕ್ಷಣ ಸ್ವಯಂ ವೈದ್ಯರಾಗಿಬಿಡುತ್ತಾರೆ. ಗೂಗಲ್ ಮಾಡಿ ತಕ್ಷಣ ಆಹಾರದಲ್ಲಿ ಬದಲಾವಣೆ ಮಾಡಿಬಿಡುತ್ತಾರೆ. ಆದರೆ ವೈದ್ಯರ ಸಲಹೆಯಿಲ್ಲದೆ ಆಹಾರದಲ್ಲಿ ಇಂತಹ ಬದಲಾವಣೆ ಮಾಡುವುದು ಅಥವಾ ಪೂರಕ ಔಷಧಿಗಳನ್ನು ಸೇವಿಸುವುದು ಅಪಾಯಕಾರಿ. ಕಬ್ಬಿಣದಂಶ ಕಡಿಮೆ ಎಂದರೇನು? ಹಿಮೋಗ್ಲೋಬಿನ್ ಪುರುಷರಲ್ಲಿ 13 ಮತ್ತು ಮಹಿಳೆಯರಲ್ಲಿ 11ರ ಆಸುಪಾಸಿನಲ್ಲಿದ್ದರೆ, ದೇಹದಲ್ಲಿ ಸೂಕ್ತ ಪ್ರಮಾಣದಲ್ಲಿ ಕಬ್ಬಿಣದಂಶವಿದೆ ಎಂದು ಪರಿಗಣಿಸಲಾಗುತ್ತದೆ. ಬಾರ್ಡರ್ಲೈನ್ ಎಂದರೆ 13/11ರ ಆಸುಪಾಸಿನಲ್ಲಿರಬೇಕಾಗುತ್ತದೆ. ಆದರೆ ಹಿಮೋಗ್ಲೋಬಿನ್ ಕೌಂಟ್ 6-5ರ ಸಮೀಪಕ್ಕೆ ಬಂದರೆ ಕಬ್ಬಿಣದಂಶ ಕಡಿಮೆಯಾಗಲು ಬೇರೆ ಕಾರಣಗಳಿವೆಯೇ ಎಂದು ಪರಿಶೀಲಿಸುವುದು ಅಗತ್ಯವಾಗಿರುತ್ತದೆ. ಆಹಾರಶೈಲಿಯಲ್ಲಿ ತಕ್ಷಣದ ಬದಲಾವಣೆ ಬೇಡ ರಕ್ತ ಪರೀಕ್ಷೆಯಲ್ಲಿ ಕಬ್ಬಿಣದಂಶ ಕಡಿಮೆ ಇದೆ ಅಥವಾ ಹಿಮೋಗ್ಲೋಬಿನ್ ಕಡಿಮೆ ಎಂದಾಕ್ಷಣ ಬಹಳಷ್ಟು ಮಂದಿ ಪೂರಕ ಔಷಧಿಗಳನ್ನು ಸೇವಿಸುತ್ತಾರೆ ಅಥವಾ ಕಬ್ಬಿಣದಂಶ ಹೆಚ್ಚಾಗುವಂತೆ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಆದರೆ ಕಬ್ಬಿಣದಂಶ ಕಡಿಮೆಯಾಗಲು ಬೇಕಾದಷ್ಟು ಕಾರಣಗಳು ಇರಬಹುದು ಎನ್ನುತ್ತಾರೆ ವೈದ್ಯರು. ಮಾರಕ ಸೋಂಕುಗಳು, ಆಂತರಿಕ ರಕ್ರಸ್ರಾವ, ಋತುಚಕ್ರದಲ್ಲಿ ಅತಿಯಾದ ಸ್ರಾವ, ಗರ್ಭಧಾರಣೆ, ಸಿಲಿಯಾಕ್ ರೋಗ (ಹೊಟ್ಟೆ ಪೊಳ್ಳಿನ ರೋಗ), ಉರಿಯೂತದ ಕರುಳಿನ ರೋಗ ಅಥವಾ ಚಹಾ/ಕಾಫಿ ಅತಿಯಾಗಿ ಸೇವನೆಯಿಂದ (ಕಬ್ಬಿಣದಂಶ ಹೀರುವಿಕೆಯನ್ನು ತಡೆಯುತ್ತದೆ) ಕಬ್ಬಿಣದಂಶ ಕಡಿಮೆ ಇರುವ ಸಾಧ್ಯತೆಯೂ ಇರುತ್ತದೆ. ಬೆಂಗಳೂರಿನಲ್ಲಿ ವೈದ್ಯರಾಗಿರುವ ಚೈತನ್ಯ ಹೇಳುವ ಪ್ರಕಾರ, “ಹಿಮೋಗ್ಲೋಬಿನ್ ಬಾರ್ಡರ್ ಲೈನ್ಗಿಂತ ಕಡಿಮೆ ಇದ್ದರೆ ಆಹಾರದಲ್ಲಿ ಬದಲಾವಣೆಗೆ ಸೂಚಿಸುತ್ತೇವೆ. ಬಹಳ ಸುಸ್ತು, ತಲೆಸುತ್ತು ಅಥವಾ ತೀವ್ರ ಋತುಸ್ರಾವದ ಸಮಸ್ಯೆ ಇದ್ದಾಗ ಮಾತ್ರ ಚಿಹ್ನೆಗಳನ್ನು ಗಮನಿಸಿ ಕಬ್ಬಿಣದಂಶಕ್ಕೆ ಸಂಬಂಧಿಸಿದ ಔಷಧಿ ನೀಡಲಾಗುತ್ತದೆ.” ಕಬ್ಬಿಣದಂಶ ಅತಿಯಾದರೂ ಅಪಾಯ ಕೆಲವು ಪ್ರಕರಣಗಳಲ್ಲಿ ಕಬ್ಬಿಣದಂಶ ಅತಿಯಾದರೂ ಅಪಾಯ. ಹೊಟ್ಟೆಯುರಿ, ಮಲಬದ್ಧತೆ ಮತ್ತು ಕಬ್ಬಿಣದಂಶ ಅತಿಯಾಗಿ ಇರುವ ಹೀಮೋಕ್ರೊಮಟೊಸಿಸ್ನಂತಹ ರೋಗವೂ ಬರುವ ಸಾಧ್ಯತೆ ಇರುತ್ತದೆ. ಕಬ್ಬಿಣದಂಶ ಹೆಚ್ಚಿಸಬಹುದಾದ ಆಹಾರ ಹಿಮೋಗ್ಲೋಬಿನ್ ಕೊರತೆ ಇರುವ ಬಹಳಷ್ಟು ಮಂದಿಗೆ ಪಾಲಾಕ್, ಬೀಟ್ರೂಟ್, ಧಾನ್ಯಗಳು, ಬೀನ್ಸ್, ಕಡಲೆಗಳು, ಇಡೀಧಾನ್ಯಗಳು, ಮೊಟ್ಟೆಗಳು ಮತ್ತು ಲೀನ್ ಮೀಟ್ಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ವಿಟಮಿನ್ ಸಿ ಇರುವ ಲಿಂಬೆ, ಕಿತ್ತಳೆ ಅಥವಾ ಟೊಮೆಟೊಗಳ ಜೊತೆಗೆ ಸೇವಿಸಿದರೆ ಹೀರಿಕೊಳ್ಳುವಿಕೆಗೆ ಅನುಕೂಲವಾಗಿಬಿಡುತ್ತದೆ. ಹೀಗಾಗಿ ಸ್ವಯಂ ವೈದ್ಯರಾಗುವ ಅಪಾಯ ತಂದುಕೊಳ್ಳದೆ ವೈದ್ಯರ ಸಲಹೆಯ ನಂತರ ಆಹಾರದಲ್ಲಿ ಬದಲಾವಣೆ ತಂದುಕೊಳ್ಳುವುದು ಒಳಿತು. ಕೃಪೆ: indianexpress.com

ವಾರ್ತಾ ಭಾರತಿ 3 Dec 2025 6:51 pm

Drinks: ‘ಎಣ್ಣೆ’ ಹೊಡೆಯುವಾಗ ಇವನ್ನೆಲ್ಲಾ ತಿಂತೀರಾ? ಹಾಗಾದ್ರೆ ಹುಷಾರ್!

ಮದ್ಯಪಾನ, ಹೆಚ್ಚು ಉಪ್ಪು, ಹುರಿದ ಅಥವಾ ಸಿಹಿ ಆಹಾರವನ್ನು ಸೇವಿಸುವುದರಿಂದ ಯಕೃತ್ತು ಮತ್ತು ಜೀರ್ಣಕ್ರಿಯೆಗೆ ಹಾನಿಯಾಗುತ್ತದೆ. ಕಾಫಿ ಅಥವಾ ಶಕ್ತಿ ಪಾನೀಯಗಳು ನಿರ್ಜಲೀಕರಣವನ್ನು ಹೆಚ್ಚಿಸಬಹುದು. ಆದ್ದರಿಂದ ನೀವು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ತಿಳಿದಿದ್ದರೆ, ನೀವು ಗಂಭೀರ ಕಾಯಿಲೆ ತಪ್ಪಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಸುದ್ದಿ18 2 Dec 2025 10:59 pm

Aids day: ಎಚ್ಐವಿ vs ಏಡ್ಸ್! ಇಲ್ಲಿ ಮಿಸ್ ಮಾಡುತ್ತಿರುವ ಅತಿ ದೊಡ್ಡ ಸತ್ಯ ಏನು ಗೊತ್ತಾ?

ಜನರು ಸಾಮಾನ್ಯವಾಗಿ ಎಚ್ಐವಿ ಮತ್ತು ಏಡ್ಸ್ ಅನ್ನು ಒಂದು ವಿಷಯ ಎಂದು ತಪ್ಪಾಗಿ ಭಾವಿಸುತ್ತಾರೆ, ಆದರೆ ವೈದ್ಯಕೀಯ ದೃಷ್ಟಿಕೋನದಿಂದ, ಈ ಎರಡು ಸ್ಥಿತಿಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಒಂದು ರೋಗದ ಆರಂಭವನ್ನು ಪ್ರತಿನಿಧಿಸಿದರೆ, ಇನ್ನೊಂದು ಅದರ ತೀವ್ರ ಹಂತವನ್ನು ಪ್ರತಿನಿಧಿಸುತ್ತದೆ. ಹೌದು, ಡಿಸೆಂಬರ್ 1 ರಂದು ಆಚರಿಸಲಾಗುವ 2025 ರ ವಿಶ್ವ ಏಡ್ಸ್ ದಿನದಂದು ಡಾ. ಪ್ರಭಾತ್ ರಂಜನ್ ಸಿನ್ಹಾ ಅವರೊಂದಿಗೆ ಈ ವಿಷಯವನ್ನು ಅನ್ವೇಷಿಸೋಣ.

ಸುದ್ದಿ18 1 Dec 2025 10:13 am

ಈ ಸಿಂಪಲ್‌ ಟ್ರಿಕ್‌ ಬಳಸಿ ಮಕ್ಕಳನ್ನು ಚಳಿಯ ಭೂತದಿಂದ ದೂರವಿಡಿ! ರೋಗ ತಡೆಗಟ್ಟಲು ಈ ಉಪಾಯ ಪರಿಣಾಮಕಾರಿ

ಚಳಿಗಾಲದ ಆರಂಭದಲ್ಲೇ ಮಕ್ಕಳಲ್ಲಿ ಶೀತ–ಜ್ವರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಲಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ.

ಸುದ್ದಿ18 28 Nov 2025 1:19 pm

Milk-Dates: ರಾತ್ರಿ ಮಲಗುವ ಮುನ್ನ ಹಾಲಿನೊಂದಿಗೆ ಇದನ್ನು ಹಾಕಿ ಕುಡಿಯಿರಿ, ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಮತ್ತು ಚೈತನ್ಯಪೂರ್ಣವಾಗಿಡಲು ಸಹಾಯ ಮಾಡುವ ಒಣ ಹಣ್ಣುಗಳನ್ನು ನಾವು ಹೆಚ್ಚು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ಈ ಸೂಪರ್‌ಫುಡ್‌ಗಳಲ್ಲಿ ಖರ್ಜೂರವೂ ಒಂದು. ಚಳಿಗಾಲದಲ್ಲಿ ರಾತ್ರಿ ಹಾಲಿನೊಂದಿಗೆ ಬೆರೆಸಿದ ಒಣಗಿದ ಖರ್ಜೂರ ಸೇವಿಸುವುದರಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ.

ಸುದ್ದಿ18 22 Nov 2025 7:28 pm

New Medicine For Glowing | ಈ ಮಾತ್ರೆ ಸೇವನೆಯಿಂದ 150 ವರ್ಷ ಬದುಕೋದು ಪಕ್ಕಾ! | N18V | 4k

New Medicine For Glowing | ಈ ಮಾತ್ರೆ ಸೇವನೆಯಿಂದ 150 ವರ್ಷ ಬದುಕೋದು ಪಕ್ಕಾ! | N18V | 4k

ಸುದ್ದಿ18 16 Nov 2025 5:41 pm

ಕಂಬಳ ಓಟಗಾರರ ಫಿಟ್‌ನೆಸ್‌ ರಹಸ್ಯ ಗೊತ್ತೇ? ಇದು ಗದ್ದೆಗಿಳಿವ ಬಾಹುಬಲಿಗಳ ಮೈಕಟ್ಟಿಗೆ ಫಿದಾ ಆಗದವರುಂಟೇ?!

ಕಂಬಳದಲ್ಲಿ ರವಿಕುಮಾರ್, ನಿಶಾಂತ್ ಶೆಟ್ಟಿ, ಶ್ರೀನಿವಾಸ ಗೌಡ ತಮ್ಮ ನೈಸರ್ಗಿಕ ಶಕ್ತಿಯಿಂದ ದಾಖಲೆ ಸಾಧನೆ ಮಾಡಿದ್ದಾರೆ. ಈ ಋತುವಿನಲ್ಲಿ ಕೋಣಗಳು ಮತ್ತು ಓಟಗಾರರು ಮತ್ತಷ್ಟು ಮಿಂಚುತ್ತಿದ್ದಾರೆ.

ಸುದ್ದಿ18 15 Nov 2025 6:08 pm