SENSEX
NIFTY
GOLD
USD/INR

Weather

19    C
... ...View News by News Source

ಡೇ-ನೈಟ್ ಟೆಸ್ಟ್‌ನಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ವಿಶ್ವ ದಾಖಲೆ! ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್

ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯ ಡೇ-ನೈಟ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮಾರ್ನಸ್ ಲ್ಯಾಬುಶೇನ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ಸುದ್ದಿ18 5 Dec 2025 10:36 pm

ಗೂಗಲ್‌ ನಲ್ಲಿ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ಟಾಪ್-5 ಕ್ರೀಡಾ ತಂಡಗಳಲ್ಲಿ ಪಂಜಾಬ್‌ ಕಿಂಗ್ಸ್ ಗೆ ಸ್ಥಾನ

Photo Credit :PTI  ಹೊಸದಿಲ್ಲಿ, ಡಿ.5: ಪಂಜಾಬ್ ಕಿಂಗ್ಸ್ ತಂಡವು ಜಾಗತಿಕ ಮಟ್ಟದಲ್ಲಿ ಭಾರೀ ಮನ್ನಣೆ ಗಳಿಸಿದ್ದು, 2025ರಲ್ಲಿ ಗೂಗಲ್‌ ನಲ್ಲಿ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ಟಾಪ್-5 ಕ್ರೀಡಾ ತಂಡಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಈ ಫ್ರಾಂಚೈಸಿಯು ಐಪಿಎಲ್‌ ನಲ್ಲಿ ಅತ್ಯುನ್ನತ ಶ್ರೇಯಾಂಕ ಹೊಂದಿರುವ ತಂಡವಾಗಿದೆ. ಕಳೆದ ವರ್ಷ ತಂಡದ ಆಟಗಾರರು, ಪ್ರದರ್ಶನಗಳು ಹಾಗೂ ಬ್ರ್ಯಾಂಡ್ ಗುರುತಿನೊಂದಿಗೆ ಅಭಿಮಾನಿಗಳು ಎಷ್ಟೊಂದು ನಿಕಟ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಶ್ರೇಯಾಂಕವು ಎತ್ತಿ ತೋರಿಸುತ್ತಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡವು 2025ರ ಐಪಿಎಲ್‌ ನಲ್ಲಿ ಫೈನಲ್‌ಗೆ ತಲುಪಿತ್ತು. 2014ರ ನಂತರ ಮೊದಲ ಬಾರಿ ಫೈನಲ್‌ ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಫೈನಲ್‌ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಆರು ರನ್‌ಗಳಿಂದ ಸೋಲನುಭವಿಸಿ ಪ್ರಶಸ್ತಿ ವಂಚಿತವಾಗಿತ್ತು. ‘‘ಜಾಗತಿಕ ರ‍್ಯಾಂಕಿಂಗ್, ತಂಡವು ತನ್ನ ಬೆಂಬಲಿಗರೊಂದಿಗೆ ಹೊಂದಿರುವ ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಫ್ರಾಂಚೈಸಿಯು ಯಾವಾಗಲೂ ಮೈದಾನದಲ್ಲಿ ಗೆಲ್ಲುವ ಗುರಿಯನ್ನು ಹೊಂದಿದೆ’’ಎಂದು ಪಂಜಾಬ್ ಕಿಂಗ್ಸ್ ಮುಖ್ಯ ವಾಣಿಜ್ಯ ಅಧಿಕಾರಿ ಸೌರಭ್ ಅರೋರ ಹೇಳಿದ್ದಾರೆ. ಗೂಗಲ್‌ ನಲ್ಲಿ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ಟಾಪ್-5 ಕ್ರೀಡಾ ತಂಡಗಳು 1.ಪ್ಯಾರಿಸ್ ಸೇಂಟ್-ಜರ್ಮೈನ್ 2. ಎಸ್.ಎಲ್. ಬೆನ್ಫಿಕಾ 3. ಟೊರೊಂಟೊ ಬ್ಲ್ಯೂ ಜಯ್ಸ್ 4. ಪಂಜಾಬ್ ಕಿಂಗ್ಸ್ 5. ಡೆಲ್ಲಿ ಕ್ಯಾಪಿಟಲ್ಸ್

ವಾರ್ತಾ ಭಾರತಿ 5 Dec 2025 10:17 pm

ಭಾರತದ ಸಂಭಾವ್ಯ ಪ್ಲೇಯಿಂಗ್-11! ಯಾರೆಲ್ಲಾ ಔಟ್?, ಯಾರಿಗೆ ಸ್ಥಾನ?; ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್-11 ಹೇಗಿರಲಿದೆ? ಆಡುವ ಹನ್ನೊಂದರ ಬಳಗದಿಂದ ಯಾರೆಲ್ಲಾ ಔಟ್?, ಯಾರಿಗೆ ಸ್ಥಾನ? ಎಂಬುದುರ ಬಗ್ಗೆ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

ಸುದ್ದಿ18 5 Dec 2025 9:04 pm

ವಿರಾಟ್ ಹ್ಯಾಟ್ರಿಕ್ ಶತಕ ಫಿಕ್ಸ್! ವಿಶಾಖಪಟ್ಟಣಂ ಮೈದಾನ ಅಂದ್ರೆ ಕೊಹ್ಲಿಗೆ ಅಚ್ಚುಮೆಚ್ಚು

ಶನಿವಾರ ವಿಶಾಖಪಟ್ಟಣಂನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹ್ಯಾಟ್ರಿಕ್ ಶತಕ ಬಾರಿಸಲು ಸಜ್ಜಾಗಿದ್ದಾರೆ.

ಸುದ್ದಿ18 5 Dec 2025 8:23 pm

ಮದುವೆ ಮುಂದೂಡಿಕೆ ನಂತರ ಸ್ಮೃತಿ ಮೊದಲ ವಿಡಿಯೋ; ಫ್ಯಾನ್ಸ್ ಶಾಕ್ ಆಗಿದ್ಯಾಕೆ?

ಪಲಾಶ್ ಮುಚ್ಚಲ್ ಅವರೊಂದಿಗಿನ ವಿವಾಹ ಮುಂದೂಡಲ್ಪಟ್ಟ ನಂತರ ಸ್ಮೃತಿ ಮಂಧಾನಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೊದಲ ಬಾರಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಸ್ಮೃತಿ ಮಂಧಾನ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಸುದ್ದಿ18 5 Dec 2025 7:16 pm

ಟಿಕೆಟ್ ಖರೀದಿಗೆ ಬಂದವ್ರಿಗೆ ಖಾಕಿ ಶಾಕ್! ಗುಂಪು ಚದುರಿಸಲು ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಮೊದಲ ಪಂದ್ಯದ ಟಿಕೆಟ್ ಖರೀದಿಸಲು ಜಮಾಯಿಸಿದ ಸಾವಿರಾರು ಅಭಿಮಾನಿಗಳ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಸುದ್ದಿ18 5 Dec 2025 6:21 pm

ಕೊನೆಗೂ ಐಪಿಎಲ್ ನಿವೃತ್ತಿ ಬಗ್ಗೆ ಮೌನ ಮುರಿದ ಆಂಡ್ರೆ ರಸೆಲ್!

ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್ ಐಪಿಎಲ್‌ನಿಂದ ಹಠಾತ್ ನಿವೃತ್ತಿಯ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಸುದ್ದಿ18 5 Dec 2025 4:01 pm

ಇದು ಭಾರತ ತಂಡದ ಅತಿ ದೊಡ್ಡ ಸಮಸ್ಯೆ! ಬ್ಯಾಟಿಂಗ್ ವೇಳೆ ಆ ಕೆಲಸ ಮಾಡಬಲ್ಲ ಒಬ್ಬನೂ ತಂಡದಲ್ಲಿ ಇಲ್ಲ

ಕೆಳ ಕ್ರಮಾಂಕದಲ್ಲಿ ಆಡಲು ಆಟಗಾರರ ಕೊರತೆಯಿಂದಾಗಿ ಅಗ್ರ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಭಾರತಕ್ಕೆ ಸರಿಯಾದ ಫಿನಿಷರ್ ಸಿಗುತ್ತಿಲ್ಲ. ಹಾರ್ದಿಕ್ ಪಾಂಡ್ಯ ಆ ಸಮಸ್ಯೆಯನ್ನು ಪರಿಹರಿಸುತ್ತಿದ್ದರು. ಆದರೆ ಅವರು ಗಾಯಕ್ಕೆ ಒಳಗಾಗುತ್ತಿರುವುದರಿಂದ ಅಂತಹ ಸ್ಥಾನ ತುಂಬಬಲ್ಲವರು ಸಿಗುತ್ತಿಲ್ಲ. ಭಾರತ ಫಿನಿಷರ್‌ಗಳನ್ನು ತಯಾರು ಮಾಡಬೇಕಿದೆ. ಇಲ್ಲದಿದ್ದರೆ, ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಮತ್ತು ನಂತರದ ಏಕದಿನ ವಿಶ್ವಕಪ್‌ಗಳಲ್ಲಿ ಭಾರತ ಇಂತಹ ಹಲವು ಸೋಲುಗಳನ್ನ ಎದುರಿಸುವ ಸಮಸ್ಯೆಗೆ ಒಳಗಾಗಲಿದೆ.

ಸುದ್ದಿ18 5 Dec 2025 3:21 pm

ಏಕದಿನ ಸರಣಿ ಗೆಲುವಿನ ನಿರೀಕ್ಷೆಯಲ್ಲಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಹೊಡೆತ?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಶನಿವಾರ ನಿಗದಿಯಾಗಿದೆ. ಈ ಪಂದ್ಯಕ್ಕೂ ಮುನ್ನ ಇಬ್ಬರು ದಕ್ಷಿಣ ಆಫ್ರಿಕಾದ ಆಟಗಾರರು ಗಾಯಗೊಂಡಿದ್ದಾರೆ.

ಸುದ್ದಿ18 5 Dec 2025 3:19 pm

ಸಿಂಹ ಘರ್ಜನೆ, SMAT ಟೂರ್ನಿಯಲ್ಲಿ ಟೀಮ್ ಇಂಡಿಯಾ ವೇಗಿ ರುದ್ರತಾಂಡವ!

ಭಾರತ ತಂಡದಿಂದ ಹೊರಗುಳಿದ ಅನುಭವಿ ಭಾರತೀಯ ವೇಗಿ ಮೊಹಮ್ಮದ್ ಶಮಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಂಚಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಸೇರಲು ಶಮಿ ಹಾತೊರೆಯುತ್ತಿದ್ದಾರೆ.

ಸುದ್ದಿ18 4 Dec 2025 11:13 pm

ರೋಹಿತ್-ಕೊಹ್ಲಿ ತಂಟೆಗೆ ಹೋಗ್ಬೇಡಿ; ಟೀಕಾಕಾರರಿಗೆ ರವಿಶಾಸ್ತ್ರಿ ಖಡಕ್ ಎಚ್ಚರಿಕೆ!

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪರವಾಗಿ ಭಾರತ ತಂಡದ ಮಾಜಿ ಹೆಡ್​​ಕೋಚ್ ರವಿಶಾಸ್ತ್ರಿ ನಿಂತಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವವರಿಗೆ ಸ್ಪಷ್ಟ ಶಾಸ್ತ್ರಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿ18 4 Dec 2025 10:35 pm

ಆಸ್ಟ್ರೇಲಿಯ ನೆಲದಲ್ಲಿ ಮೊತ್ತ ಮೊದಲ ಬಾರಿ ಶತಕ ಸಿಡಿಸಿದ ಜೋ ರೂಟ್

 ಜೋ ರೂಟ್ | Photo Credit : AP PTI   ಪರ್ತ್: ಕಳೆದೊಂದು ದಶಕದಲ್ಲಿ ನಾಲ್ಕು ಬಾರಿ ಆಸ್ಟ್ರೇಲಿಯಕ್ಕೆ ಕ್ರಿಕೆಟ್ ಪ್ರವಾಸ ಕೈಗೊಂಡಿದ್ದ ಜೋ ರೂಟ್ 16 ಪಂದ್ಯಗಳು, 30 ಇನಿಂಗ್ಸ್‌ಗಳ ನಂತರ ಕೊನೆಗೂ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು. ಇಂಗ್ಲೆಂಡ್ ಬ್ಯಾಟರ್ ಗುರುವಾರ ಬ್ರಿಸ್ಬೇನ್‌ನಲ್ಲಿ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಮಣ್ಣಿನಲ್ಲಿ ತನ್ನ ಚೊಚ್ಚಲ ಶತಕ ದಾಖಲಿಸಿದರು. ಇಂಗ್ಲೆಂಡ್ ಸಂಕಷ್ಟದಲ್ಲಿದ್ದಾಗ ಆಸರೆಯಾದ ರೂಟ್ 181 ಎಸೆತಗಳಲ್ಲಿ ಶತಕದ ಮೈಲಿಗಲ್ಲು ತಲುಪಿದರು. ರೂಟ್ ಈ ಹಿಂದೆ ಆಸ್ಟ್ರೇಲಿಯ ನೆಲದಲ್ಲಿ 89 ರನ್ ಗಳಿಸಿದ್ದರು. ಆದರೆ ಅವರಿಗೆ ಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಜೋ ರೂಟ್ ಗುರುವಾರ ತನ್ನ ವೃತ್ತಿಜೀವನದ 40ನೇ ಶತಕ ಸಿಡಿಸಿದರು. ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್(41 ಶತಕಗಳು)ಗಿಂತ ಒಂದು ಶತಕದಿಂದ ಹಿಂದಿದ್ದಾರೆ. ರೂಟ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕಗಳನ್ನು ಸಿಡಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್(51), ಜಾಕಸ್ ಕಾಲಿಸ್(45)ಹಾಗೂ ರಿಕಿ ಪಾಂಟಿಂಗ್(41)ನಂತರ ನಾಲ್ಕನೇ ಸ್ಥಾನದಲ್ಲಿದ್ದಾರೆ.

ವಾರ್ತಾ ಭಾರತಿ 4 Dec 2025 10:28 pm

ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಎಡಗೈ ವೇಗಿ ಆಗಿ ಹೊರಹೊಮ್ಮಿದ ಮಿಚೆಲ್ ಸ್ಟಾರ್ಕ್

ಪಾಕಿಸ್ತಾನದ ಲೆಜೆಂಡ್ ವಸೀಂ ಅಕ್ರಂ ದಾಖಲೆ ಮುರಿದ ಆಸ್ಟ್ರೇಲಿಯದ ವೇಗಿ

ವಾರ್ತಾ ಭಾರತಿ 4 Dec 2025 10:25 pm

ಮುಹಮ್ಮದ್ ಶಮಿ ಎಲ್ಲಿದ್ದಾರೆ, ಅವರೇಕೆ ಆಡುತ್ತಿಲ್ಲ?: ಹರ್ಭಜನ್ ಸಿಂಗ್ ಪ್ರಶ್ನೆ

ಮುಹಮ್ಮದ್ ಶಮಿ | Photo Credit : PTI  ಹೊಸದಿಲ್ಲಿ: ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅನುಪಸ್ಥಿತಿಯಲ್ಲೂ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್‌ಗೆ ವಿನಂತಿಸಿರುವ ಲೆಜೆಂಡರಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಮುಹಮ್ಮದ್ ಶಮಿ ಎಲ್ಲಿದ್ದಾರೆ?, ಅವರು ಏಕೆ ಆಡುತ್ತಿಲ್ಲ? ಎಂದು ಪ್ರಶ್ನಿಸಿದರು. ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಬುಧವಾರ 359 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿ ಇತಿಹಾಸ ನಿರ್ಮಿಸಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು. ಭಾರತದ ಬೌಲರ್‌ಗಳು ಲೈನ್ ಹಾಗೂ ಲೆಂಗ್ತ್‌ನಲ್ಲಿ ಶಿಸ್ತು ಕಾಯ್ದುಕೊಳ್ಳಲು ಪರದಾಟ ನಡೆಸಿದ್ದರು. ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ವೇಳೆ ಇಬ್ಬನಿ ಪ್ರಮುಖ ಪಾತ್ರವಹಿಸಿತ್ತು. ಕುಲದೀಪ್ ಯಾದವ್, ವಾಶಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜ ಅವರ ಸ್ಪಿನ್ ದಾಳಿಯು ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳಿಗೆ ಸಮಸ್ಯೆಯಾಗಿ ಕಾಡಲಿಲ್ಲ. ವೇಗದ ಬೌಲರ್‌ಗಳಾದ ಹರ್ಷಿತ್ ರಾಣಾ ಹಾಗೂ ಪ್ರಸಿದ್ಧ ಕೃಷ್ಣ ದುಬಾರಿ ಎನಿಸಿಕೊಂಡಿದ್ದರು. ‘‘ಶಮಿ ಎಲ್ಲಿದ್ದಾರೆ? ಅವರು ಏಕೆ ಆಡುತ್ತಿಲ್ಲ ಎಂದು ನನಗೆ ಗೊತ್ತಿಲ್ಲ. ಪ್ರಸಿದ್ಧ ಕೃಷ್ಣ ಉತ್ತಮ ಬೌಲರ್. ಆದರೆ ಅವರು ಇನ್ನಷ್ಟು ಪಾಠ ಕಲಿಯಬೇಕಾಗಿದೆ. ನಮ್ಮಲ್ಲಿ ಉತ್ತಮ ಬೌಲರ್‌ಗಳಿದ್ದಾರೆ. ಅವರನ್ನು ನಿಧಾನವಾಗಿ ಮೂಲೆಗುಂಪು ಮಾಡಲಾಗುತ್ತದೆ. ಬುಮ್ರಾ ಇದ್ದರೆ ಇದೊಂದು ವಿಭಿನ್ನ ಬೌಲಿಂಗ್ ದಾಳಿಯಾಗಿರುತ್ತದೆ. ಬುಮ್ರಾ ಇಲ್ಲದಿದ್ದರೆ ಸಂಪೂರ್ಣ ಬೇರೆಯಾಗಿರುತ್ತದೆ. ಬುಮ್ರಾ ಇಲ್ಲದೆ ಪಂದ್ಯಗಳನ್ನು ಗೆಲ್ಲುವ ಕಲೆ ಸಿದ್ದಿಸಿಕೊಳ್ಳಬೇಕಾಗಿದೆ’’ ಎಂದು ಹರ್ಭಜನ್ ಹೇಳಿದ್ದಾರೆ. ಏಕದಿನ ತಂಡಕ್ಕೆ ವರುಣ್ ಚಕ್ರವರ್ತಿಯನ್ನು ಸೇರಿಸಿಕೊಳ್ಳಬೇಕೆಂದು ಆಯ್ಕೆಗಾರರಿಗೆ ಸಲಹೆ ನೀಡಿದ ಹರ್ಭಜನ್,‘‘ಇಂಗ್ಲೆಂಡ್‌ನಲ್ಲಿ ಬುಮ್ರಾ ಅನುಪಸ್ಥಿತಿಯಲ್ಲಿ ಮುಹಮ್ಮದ್ ಸಿರಾಜ್ ನಂಬಲಸಾಧ್ಯ, ಅಮೋಘ ಪ್ರದರ್ಶನ ನೀಡಿದ್ದರು. ಬುಮ್ರಾ ಇಲ್ಲದ ಎಲ್ಲ ಟೆಸ್ಟ್ ಪಂದ್ಯಗಳನ್ನು ಭಾರತ ತಂಡ ಗೆದ್ದಿತ್ತು. ಸೀಮಿತ ಓವರ್ ಪಂದ್ಯಗಳಲ್ಲೂ ವೇಗದ ಬೌಲಿಂಗ್ ಇಲ್ಲವೇ ಸ್ಪಿನ್ ವಿಭಾಗದಲ್ಲಿ ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲ ಬೌಲರ್‌ಗಳನ್ನು ಹುಡುಕಬೇಕಾಗಿದೆ. ಈಗಾಗಲೇ ಟಿ20 ಪಂದ್ಯಗಳಲ್ಲಿ ಆಡುತ್ತಿರುವ ವರುಣ್ ಚಕ್ರವರ್ತಿಯನ್ನು ಏಕದಿನ ತಂಡದಲ್ಲೂ ಸೇರಿಸಿಕೊಳ್ಳಬೇಕು’’ ಎಂದು ಹರ್ಭಜನ್ ಸಲಹೆ ನೀಡಿದರು.

ವಾರ್ತಾ ಭಾರತಿ 4 Dec 2025 10:22 pm

ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರಕ್ಕೆ ಸಚಿನ್ ತೆಂಡೂಲ್ಕರ್ ಮಗ ಕಂಗಾಲು

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರಕ್ಕೆ ಗೋವಾ ತಂಡದ ಬೌಲರ್ ಅರ್ಜುನ್ ತೆಂಡೂಲ್ಕರ್ ಕಂಗಾಲಾಗಿದ್ದಾರೆ.

ಸುದ್ದಿ18 4 Dec 2025 7:57 pm

ಆ ಇಬ್ಬರು ಮ್ಯಾಚ್​ ವಿನ್ನರ್ಸ್ ತಂಡದಲ್ಲಿದ್ದಿದ್ರೆ ಭಾರತಕ್ಕೆ ಸೋಲಾಗುತ್ತಿರಲಿಲ್ಲ; ಹರ್ಭಜನ್ ಸಿಂಗ್

ಭಾರತ ತಂಡದಲ್ಲಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬದಲಿಗೆ ಬದಲಿ ಬೌಲರ್ ಅವಶ್ಯತೆಯಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಸೋಲಿಗೆ ಪ್ರಮುಖ ಕಾರಣ ಬೌಲಿಂಗ್ ವೈಫಲ್ಯ ಎಂದು ಅವರು ಹೇಳಿದರು.

ಸುದ್ದಿ18 4 Dec 2025 7:51 pm

ದಾಖಲೆ ಪುಟ ಸೇರಿದ ಸುನಿಲ್ ನರೈನ್! ಟಿ20 ಎಲೈಟ್ ಕ್ಲಬ್​ಗೆ ವಿಂಡೀಸ್ ಸ್ಪಿನ್ ಮಾಂತ್ರಿಕ ಸೇರ್ಪಡೆ

ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನಿಲ್ ನರೈನ್ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ.

ಸುದ್ದಿ18 4 Dec 2025 6:49 pm

Rohit Sharma: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮಧ್ಯೆ ಹಿಟ್​​ಮ್ಯಾನ್ ಮಹತ್ವದ ನಿರ್ಧಾರ!

2024ರ ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್ ಕೇವಲ ಐಪಿಎಲ್ ಮಾತ್ರ ಆಡಿದ್ದಾರೆ. ಇದೀಗ 5 ತಿಂಗಳ ಬಳಿಕ ಮೊದಲ ಟಿ20 ಪಂದ್ಯವನ್ನಾಡುವ ಸಾಧ್ಯತೆ ಇದೆ.

ಸುದ್ದಿ18 4 Dec 2025 6:25 pm

ಆಸೀಸ್​​ ನೆಲದಲ್ಲೂ ರೂಟ್ ಅಬ್ಬರ! 13 ವರ್ಷದ ಬಳಿಕ ಚೊಚ್ಚಲ ಶತಕ ಸಿಡಿಸಿದ ಜೋ ರೂಟ್​

ಜೋ ರೂಟ್ ತಾವೂ ಟೆಸ್ಟ್ ಆಡಿರುವ ಎಲ್ಲಾ ದೇಶಗಳಲ್ಲಿ ಶತಕ ಸಿಡಿಸಿದ್ದರು. ಆದರೆ ಆಸ್ಟ್ರೇಲಿಯಾ ನೆಲದಲ್ಲಿ ಕಳೆದ ಒಂದೂವರೆ ದಶಕದಿಂದ ಒಂದೇ ಒಂದು ಶತಕ ಕೂಡ ಸಿಡಿಸಿರಲಿಲ್ಲ. ರೂಟ್ ಈ ಶತಕದ ಮೂಲಕ, ಸರಣಿಗೂ ಮುನ್ನ, ತಮ್ಮನ್ನ ವ್ಯಂಗ್ಯ ಮಾಡುತ್ತಿದ್ದ ಅನೇಕ ಆಸ್ಟ್ರೇಲಿಯಾದ ದಂತಕಥೆಗಳ ಬಾಯಿ ಮುಚ್ಚಿಸಿದ್ದಾರೆ.

ಸುದ್ದಿ18 4 Dec 2025 5:46 pm

Team India: ಆ ಇಬ್ಬರನ್ನ ತಂಡದಿಂದ ಕೈಬಿಟ್ಟರೆ ಮಾತ್ರ ಭಾರತ 3ನೇ ಪಂದ್ಯ ಗೆಲ್ಲೋಕೆ ಸಾಧ್ಯ!

ಮೂರನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆಗಳು ಅಗತ್ಯ ಮಾತ್ರವಲ್ಲ, ಅನಿವಾರ್ಯವಾಗಿದೆ. ಭಾರತ ಸರಣಿ ಗೆಲ್ಲಬೇಕಾದರೆ ಆ ಇಬ್ಬರನ್ನ ತಂಡದಲ್ಲಿ ಬದಲಾವಣೆ ಮಾಡಬೇಕು. ಇಲ್ಲವಾದರೆ ಟೆಸ್ಟ್ ಸರಣಿಯಂತೆ ಏಕದಿನ ಸರಣಿಯಲ್ಲೂ ಸೋಲಿನ ಮುಖಭಂಗ ಅನುಭವಿಸಲಿದೆ.

ಸುದ್ದಿ18 4 Dec 2025 5:21 pm

ನಾಯಕತ್ವ ತೊರೆದ ನಂತರ ಮತ್ತಷ್ಟು ಡೇಂಜರಸ್ ಆದ ವಿರಾಟ್​​! ಪಂದ್ಯದಿಂದ ಪಂದ್ಯಕ್ಕೆ ಕೊಹ್ಲಿ ಅಬ್ಬರ ಜೋರು!

ಏಕದಿನ ನಾಯಕತ್ವವನ್ನು ತ್ಯಜಿಸಿದ ನಂತರ ವಿರಾಟ್ ಕೊಹ್ಲಿ ಈ ಸ್ವರೂಪದಲ್ಲಿ ಇನ್ನಷ್ಟು ಡೇಂಜರ್ ಆಗಿದ್ದಾರೆ. ಇದನ್ನ ಅವರ ಬ್ಯಾಟಿಂಗ್ ಅಂಕಿ-ಅಂಶಗಳು ಹೇಳುತ್ತಿವೆ.

ಸುದ್ದಿ18 4 Dec 2025 5:07 pm

ವಿರಾಟ್ ಅತಿ ಹೆಚ್ಚು ಶತಕ ಸಿಡಿಸಿರೋದು ಭಾರತದ ಮೈದಾನದಲ್ಲಲ್ಲ! ಈ 2 ದೇಶಗಳ ಗ್ರೌಂಡ್​​ ಕೊಹ್ಲಿಗೆ ಫೇವರಿಟ್!

ವಿರಾಟ್ ಕೊಹ್ಲಿ ಜಗತ್ತಿನ ಯಾವ ಮೈದಾನದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ ಗೊತ್ತಾ? ಭಾರತದ ಗ್ರೌಂಡ್ ಅಂತೂ ಅಲ್ಲ! ಈ ಬಗ್ಗೆ ಇಲ್ಲಿದೆ ಕಂಪ್ಲೇಟ್ ಸ್ಟೋರಿ.

ಸುದ್ದಿ18 4 Dec 2025 4:03 pm

ಟೆಸ್ಟ್‌ ಕ್ರಿಕೆಟ್​​ನಲ್ಲಿ ಮಿಚೆಲ್ ಸ್ಟಾರ್ಕ್ ಹೊಸ ಮೈಲಿಗಲ್ಲು! ಲೆಜೆಂಡರಿ ಬೌಲರ್ ಹಿಂದಿಕ್ಕಿದ ಎಡಗೈ ವೇಗಿ

ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್ ಪಡೆಯುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ.

ಸುದ್ದಿ18 4 Dec 2025 3:15 pm

IND vs SA: ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತದ ಸೋಲಿಗೆ 5 ಕಾರಣಗಳಿವು

ರಾಯ್​ಪುರದಲ್ಲಿ ನಡೆದ 2ನೇ ಪಂದ್ಯದಲ್ಲಿ ಹರಿಣ ಪಡೆ 359 ರನ್‌ಗಳ ಗುರಿಯನ್ನ 4 ಬಾಲ್‌ಗಳು ಬಾಕಿ ಇರುವಂತೆ ತಲುಪಿತು. ಐಡನ್ ಮಾರ್ಕ್ರಮ್‌ರ 110 ರನ್‌, ಮ್ಯಾಥ್ಯೂ ಬ್ರೀಟ್ಜ್‌ಕೆಯ 68 ರನ್‌, ಡೆವಾಲ್ಡ್ ಬ್ರೆವಿಸ್‌ರ 34 ಬಾಲ್‌ಗಳಲ್ಲಿ 54 ರನ್‌ ಮತ್ತು ಕಾರ್ಬಿನ್ ಬಾಷ್‌ ಜವಾಬ್ದಾರಿಯುವ ಆಟ ತಂಡಕ್ಕೆ ನೆರವಾಯಿತು.

ಸುದ್ದಿ18 4 Dec 2025 3:06 pm

ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಉತ್ತಮ ಅವಕಾಶ, ನಿಮ್ಮ ಟ್ಯಾಲೆಂಟ್‌ಗೆ ಸಜ್ಜಾಗಿದೆ ಅಖಾಡ!

ಕರ್ನಾಟಕ ವಾಲಿಬಾಲ್ ತಂಡ ಆಯ್ಕೆ 08 ಡಿಸೆಂಬರ್ 2025 ರಂದು SAI NSSC ಬೆಂಗಳೂರಿನಲ್ಲಿ ನಡೆಯಲಿದೆ. ಆಯ್ಕೆಯಾದವರು ವಾರಣಾಸಿ ಚಾಂಪಿಯನ್‌ಶಿಪ್‌ಗೆ ಹಾಜರಾಗಬಹುದು.

ಸುದ್ದಿ18 4 Dec 2025 2:54 pm

Virat Kohli: ಏಕದಿನದಲ್ಲಿ ಕೊಹ್ಲಿ ಮುಡಿಗೆ ಮತ್ತೊಂದು ಕಿರೀಟ ! ಆಸೀಸ್ ಲೆಜೆಂಡ್​ ಮೈಕೆಲ್ ಬೆವೆನ್​ರನ್ನೇ

ಮೊದಲ ಎರಡು ಪಂದ್ಯಗಳಲ್ಲಿ ಅವರು ಶೂನ್ಯಕ್ಕೆ ಔಟಾಗಿದ್ದರು. ಅದಕ್ಕಾಗಿ ಅವರನ್ನು ತೀವ್ರವಾಗಿ ಟೀಕಿಸಲಾಯಿತು. ಆದಾಗ್ಯೂ, ಅವರು ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿ ಈಗಲೂ ತಂಡಕ್ಕೆ ತಾವೇ ನಂಬರ್ 1 ಬ್ಯಾಟರ್ ಎಂದು ಸಾಬೀತುಪಡಿಸಿದ್ದಾರೆ.

ಸುದ್ದಿ18 4 Dec 2025 1:16 pm

ಕಳಪೆ ಬೌಲಿಂಗ್ ಅಲ್ಲ, ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ 2 ಅಂಶಗಳೇ ಕಾರಣ! ಸೋಲಿನ ಹೊಣೆ ಹೊತ್ತ ರಾಹುಲ್

359 ರನ್​ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಅಪ್ರತಿಮ ಹೋರಾಟದ ಮನೋಭಾವವನ್ನು ಪ್ರದರ್ಶಿಸಿದರು ಮತ್ತು ಬೃಹತ್ ಗುರಿಯನ್ನು ಹೆಚ್ಚು ಕಷ್ಟವಿಲ್ಲದೆ ಬೆನ್ನಟ್ಟಿದರು.

ಸುದ್ದಿ18 4 Dec 2025 12:33 pm

IND vs SA: ‘ನಿನ್ನ ತಲೆ ಓಡಿಸಬೇಡ, ಹೇಳಿದನ್ನು ಮಾತ್ರ ಹಾಕು’; ಆನ್​​​ಫೀಲ್ಡ್​​​ ನಲ್ಲೇ ರಾಹುಲ್ ವಾರ್ನಿಂಗ್, ಸೋಲಿಗೆ ಕಾರಣರಾದ್ರಾ ಕನ್ನಡಿಗ?

ಎರಡನೇ ಏಕದಿನ ಪಂದ್ಯದಲ್ಲಿ ಗೆಲುವು ಪಡೆಯುವುದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಸಮಬಲ ಸಾಧಿಸಿದೆ. ಡಿಸೆಂಬರ್ 6ರಂದು ನಡೆಯುವ ಮೂರನೇ ಏಕದಿನ ಪಂದ್ಯವೂ ಫೈನಲ್ ಆಗಿದ್ದು, ಸರಣಿ ವಿಜೇತರು ಯಾರು ಎಂದು ನಿರ್ಧಾರ ಆಗಲಿದೆ.

ಸುದ್ದಿ18 4 Dec 2025 12:32 pm

ಟೀಮ್ ಇಂಡಿಯಾ ವಿರುದ್ಧ ದಾಖಲೆಯ ಮೊತ್ತ ಚೇಂಜ್ ಮಾಡಿ ಗೆದ್ದ ದಕ್ಷಿಣ ಆಫ್ರಿಕಾ

ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 358 ರನ್​ಗಳ ಗುರಿ ಬೆನ್ನಟ್ಟುವ ಮೂಲಕ ದಾಖಲೆ ಸೃಷ್ಟಿಸಿದೆ.

ಸುದ್ದಿ18 3 Dec 2025 11:09 pm

ವಿಶ್ವಚಾಂಪಿಯನ್​ ಈಗ ಖಡಕ್ ಪೊಲೀಸ್! ಬಂಗಾಳ ಡಿಎಸ್ಪಿ ಆದ ಆರ್​ಸಿಬಿ ವಿಕೆಟ್​ಕೀಪರ್

ಭಾರತ ಮಹಿಳಾ ತಂಡದ ಸ್ಟಾರ್ ಸ್ಟಾರ್ ವಿಕೆಟ್​ಕೀಪರ್ ರಿಚಾ ಘೋಷ್ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿಯಾಗಿ ಸೇರ್ಪಡೆಗೊಂಡಿದ್ದಾರೆ.

ಸುದ್ದಿ18 3 Dec 2025 10:50 pm

IND vs SA: ಕಳಪೆ ಬೌಲಿಂಗ್​ನಿಂದ ಭಾರತಕ್ಕೆ ವೈಟ್ ವಾಶ್ ಚಾನ್ಸ್ ಮಿಸ್

ರಾಯ್​ಪುರ್​ದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತವನ್ನು ದಕ್ಷಿಣ ಆಫ್ರಿಕಾ ಸೋಲಿಸಿತು.

ಸುದ್ದಿ18 3 Dec 2025 10:13 pm

ಹೆಚ್ಚು ಮೈದಾನಗಳಲ್ಲಿ ಶತಕ! ಒಂದೇ ದಿನ ಸಚಿನ್ ಹೆಸರಿನಲ್ಲಿದ್ದ ಹಲವು ವಿಶ್ವದಾಖಲೆ ಬ್ರೇಕ್ ಮಾಡಿದ ಕೊಹ್ಲಿ

ಏಕದಿನ ಕ್ರಿಕೆಟ್​​ನಲ್ಲಿ ಮಾಸ್ಟರ್ ಬ್ಲಾಸ್ಟರ್ 34 ವಿವಿಧ ಕ್ರೀಡಾಂಗಣದಲ್ಲಿ ಶತಕಗಳನ್ನು ಸಿಡಿಸಿದ್ದರು. ವಿರಾಟ್ ಕೊಹ್ಲಿ ರಾಯ್ಪುರದಲ್ಲಿ ಶತಕ ಗಳಿಸುವ ಮೂಲಕ ಸಚಿನ್ ದಾಖಲೆಯನ್ನು ಸರಿಗಟ್ಟಿದರು. ಸಚಿನ್ ಮತ್ತು ಕೊಹ್ಲಿ ವಿಭಿನ್ನ ಸ್ಥಳಗಳಲ್ಲಿ ತಲಾ 34 ಶತಕಗಳನ್ನು ಗಳಿಸಿದ್ದಾರೆ.

ಸುದ್ದಿ18 3 Dec 2025 9:26 pm

Mohit Sharma: ಐಪಿಎಲ್ ಸೇರಿ ಕ್ರಿಕೆಟ್​ನ ಎಲ್ಲಾ ಸ್ವರೂಪಕ್ಕೂ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾ ಬೌಲರ್

2013 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮೋಹಿತ್ ಶರ್ಮಾ, ಕೊನೆಯದಾಗಿ 2015 ರಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದರು. ಕಳೆದ ಎರಡು ಐಪಿಎಲ್​​ನಲ್ಲಿ ಗುಜರಾತ್ ಟೈಟನ್ಸ್ ಪ್ರತಿನಿಧಿಸಿದ್ದ ಮೋಹಿತ್ ಎಲ್ಲಾ ಮಾದರಿಗೂ ನಿವೃತ್ತಿ ಘೋಷಿಸಿದ್ದಾರೆ.

ಸುದ್ದಿ18 3 Dec 2025 8:58 pm

ಮುಂದಿನ ವರ್ಷದ ಟಿ20 ವಿಶ್ವಕಪ್‌ಗಾಗಿ ವಿನೂತನ ಜರ್ಸಿ ಬಿಡುಗಡೆ ಮಾಡಿದ ಬಿಸಿಸಿಐ

ಮುಂದಿನ ವರ್ಷದ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದ ಜೆರ್ಸಿಯನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ರಾಯ್‌ಪುರ ಏಕದಿನ ಪಂದ್ಯದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಸುದ್ದಿ18 3 Dec 2025 8:10 pm

Virat Kohli: ಒಂದೇ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕ! ಸಚಿನ್ ವಿಶ್ವದಾಖಲೆ ಬ್ರೇಕ್ ಮಾಡಿದ ಕಿಂಗ್ ಕೊಹ್ಲಿ

ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಭಾರತದ ದಂತಕಥೆ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಒಂದೇ ಸ್ವರೂಪದಲ್ಲಿ ಒಂದೇ ಬ್ಯಾಟಿಂಗ್ ಸ್ಥಾನದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಟಾಪ್ 5 ಆಟಗಾರರ ಪಟ್ಟಿಯಲ್ಲಿ ವಿರಾಟ್ ಅಗ್ರಸ್ಥಾನಕ್ಕೇರಿದ್ದಾರೆ.

ಸುದ್ದಿ18 3 Dec 2025 7:40 pm

ಪಾಂಡ್ಯ ಕಮ್​ಬ್ಯಾಕ್, ಫಿನಿಷರ್​​ಗೆ ಅನ್ಯಾಯ! ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಹೀಗಿದೆ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತೀಯ ತಂಡವನ್ನು ಬಿಸಿಸಿಐ ಬುಧವಾರ ಪ್ರಕಟಿಸಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಶುಭಮನ್ ಗಿಲ್ ಮರಳಿದ್ದಾರೆ.

ಸುದ್ದಿ18 3 Dec 2025 6:38 pm

ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದ ರೌದ್ರನರ್ತನ; ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಸನತ್ ಜಯಸೂರ್ಯ

ದಿತ್ವಾ ಚಂಡಮಾರುತದಿಂದ ದ್ವೀಪ ರಾಷ್ಟ್ರ ಶ್ರೀಲಂಕಾ ತತ್ತರಿಸುತ್ತಿರುವಾಗ ಬೆಂಬಲವಾಗಿ ನಿಂತಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಭಾರತದ ಜನರಿಗೆ ಶ್ರೀಲಂಕಾ ಕ್ರಿಕೆಟ್ ದಂತಕಥೆ ಸನತ್ ಜಯಸೂರ್ಯ ಸಾರ್ವಜನಿಕವಾಗಿ ಧನ್ಯವಾದ ಹೇಳಿದ್ದಾರೆ.

ಸುದ್ದಿ18 3 Dec 2025 6:25 pm

ಗಾಯಕ್ವಾಡ್, ಕೊಹ್ಲಿ ಭರ್ಜರಿ ಶತಕ! ದಕ್ಷಿಣ ಆಫ್ರಿಕಾಗೆ 2ನೇ ಪಂದ್ಯದಲ್ಲೂ ಬೃಹತ್ ಗುರಿ ನೀಡಿದ ಭಾರತ

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಋತುರಾಜ್ ಗಾಯಕ್ವಾಡ್ ಸಿಡಿಸಿದ ಶತಕಗಳ ನೆರವಿನಿಂದ ಟೀಮ್ ಇಂಡಿಯಾ 358 ರನ್​ಗಳಿಸಿದೆ.

ಸುದ್ದಿ18 3 Dec 2025 5:25 pm