SENSEX
NIFTY
GOLD
USD/INR

Weather

32    C
...

ರಾಯಚೂರಿಗೂ ಪರಿಣಾಮ ಬೀರಿದ ಯುದ್ಧ

ಆತಂಕದಲ್ಲಿ ಅಕ್ಕಿ, ಹತ್ತಿ ವರ್ತಕರು

ವಾರ್ತಾ ಭಾರತಿ 13 Mar 2026 3:02 pm

ಕಾಸರಗೋಡು: ಮಗನ ಸಾವಿನ ಬಳಿಕ ಖಿನ್ನತೆ: ದಂಪತಿ ಆತ್ಮಹತ್ಯೆ

ಕಾಸರಗೋಡು: ಪುತ್ರನ ಸಾವಿನ ದುಃಖವನ್ನು ತಾಳಲಾರದೆ ದಂಪತಿಗಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇಲ್ಪರಂಬ ಠಾಣಾ ವ್ಯಾಪ್ತಿಯ ಪೊಯಿನಾಚಿಯಲ್ಲಿ ನಡೆದಿದೆ. ಪೊಯಿನಾಚಿ ಪರಂಬದ ವೇಣುಗೋಪಾಲನ್ ನಾಯರ್ (55) ಮತ್ತು ಅವರ ಪತ್ನಿ ಸ್ಮಿತಾ (45) ಮೃತಪಟ್ಟವರು. ಇವರ ಏಕೈಕ ಪುತ್ರ ಎಂ. ಶಿವಾನಂದನ್ (19) ಮಂಗಳೂರಿನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಕಳೆದ ಡಿಸೆಂಬರ್ 29ರಂದು ಬೇಕಲ್ ಉತ್ಸವದ ವೇಳೆ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಮಗನ ಸಾವಿನ ಬಳಿಕ ದಂಪತಿಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಿಗ್ಗೆ 9 ಗಂಟೆಯಾದರೂ ಮನೆಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ನೆರೆಮನೆಯವರು ಅನುಮಾನಗೊಂಡು ಪರಿಶೀಲಿಸಿದಾಗ, ಕೋಣೆಯೊಳಗೆ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ವೇಣುಗೋಪಾಲನ್ ನಾಯರ್ ನಂತರ ಪೊಯಿನಾಚಿಯಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದರು. ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 13 Mar 2026 2:52 pm

ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವುದು ಮಹಿಳೆಯರ ವೃತ್ತಿಜೀವನಕ್ಕೆ ಹಾನಿಯನ್ನುಂಟು ಮಾಡಬಹುದು: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಎಲ್ಲ ಸಂಸ್ಥೆಗಳಲ್ಲಿ ಮಹಿಳೆಯರಿಗೆ ವೇತನಸಹಿತ ಮುಟ್ಟಿನ ರಜೆಯನ್ನು ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಿಲೇವಾರಿ ಮಾಡಿತು. ಸಂಬಂಧಪಟ್ಟ ಎಲ್ಲರ ಜೊತೆ ಸಮಾಲೋಚಿಸಿ ಮುಟ್ಟಿನ ರಜೆ ನೀತಿಯನ್ನು ರೂಪಿಸಲು ಈ ರಿಟ್ ಅರ್ಜಿಯನ್ನು ಪರಿಗಣಿಸುವಂತೆ ಅದು ಕೇಂದ್ರ ಸರಕಾರಕ್ಕೆ ಸೂಚಿಸಿತು. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಶಾಸನದ ಮೂಲಕ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವುದು ಮಹಿಳೆಯರ ಉದ್ಯೋಗದ ಮೇಲೆ ಅನುದ್ದೇಶಿತ ಪರಿಣಾಮಗಳನ್ನು ಬೀರಬಹುದು ಎಂದು ಕಳವಳವನ್ನು ವ್ಯಕ್ತಪಡಿಸಿತು. ರಜೆ ಕಡ್ಡಾಯವು ಉದ್ಯೋಗದಾತರು ಮಹಿಳೆಯರನ್ನು ನೇಮಿಸಿಕೊಳ್ಳುವುದನ್ನು ನಿರುತ್ತೇಜಿಸಬಹುದು,ತನ್ಮೂಲಕ ಕಾರ್ಯಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ನ್ಯಾಯಾಲಯವು ಬೆಟ್ಟು ಮಾಡಿತು. ಯಾವುದೇ ಮಹಿಳೆಯು ಈ ವಿಷಯದಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿಲ್ಲ ಎನ್ನುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ.ಜಾಯಮಾಲ್ಯ ಬಾಗ್ಚಿ ಅವರ ಪೀಠವು, ಅರ್ಜಿದಾರ ಶೈಲೇಂದ್ರ ಮಣಿ ತ್ರಿಪಾಠಿಯವರ ಅಧಿಕಾರ ಸ್ಥಾನವನ್ನು ಪ್ರಶ್ನಿಸಿತು. ಇದು ಈ ವಿಷಯದಲ್ಲಿ ಸಲ್ಲಿಸಲಾದ ಮೂರನೇ ರಿಟ್ ಅರ್ಜಿಯಾಗಿದೆ. ಫೆ.2023ರಲ್ಲಿ ಮೊದಲ ಅರ್ಜಿಯನ್ನು ವಿಲೇವಾರಿ ಮಾಡಿದ್ದ ನ್ಯಾಯಾಲಯವು,ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯದ ಮುಂದೆ ಅಹವಾಲು ಸಲ್ಲಿಸಲು ಅವಕಾಶ ನೀಡಿತ್ತು. 2024ರಲ್ಲಿ ಮತ್ತೆ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದ ಅರ್ಜಿದಾರರು,ತನ್ನ ಅಹವಾಲಿಗೆ ಸಚಿವಾಲಯವು ಪ್ರತಿಕ್ರಿಯಿಸಿಲ್ಲ ಎಂದು ತಿಳಿಸಿದ್ದರು. ಜು.2024ರಲ್ಲಿ ಸದ್ರಿ ಅರ್ಜಿಯನ್ನು ವಿಲೇವಾರಿ ಮಾಡಿದ್ದ ನ್ಯಾಯಾಲಯವು,ನೀತಿ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿತ್ತು. ಪ್ರಸಕ್ತ ಅರ್ಜಿಯಲ್ಲಿ ಮಹಿಳೆಯರು ಎದುರಿಸುವ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿದ್ದ ಅರ್ಜಿದಾರರು,ಇವುಗಳನ್ನು ಗುರುತಿಸುವ ಕಾನೂನು/ನೀತಿಗಳು/ಸರಕಾರಿ ಆದೇಶಗಳನ್ನು ಹೊರಡಿಸಲು ಹಾಗೂ ಸಂವಿಧಾನದ 14 ಮತ್ತು 21ನೇ ವಿಧಿಗಳಿಗೆ ಅನುಗುಣವಾಗಿ ರಜೆ ಸೇರಿದಂತೆ ಅಗತ್ಯ ಪರಿಹಾರಗಳನ್ನು ಒದಗಿಸಲು ಕೇಂದ್ರ,ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದರು. ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಎಂ.ಆರ್.ಶಂಶಾದ್ ಅವರು ಕರ್ನಾಟಕ ಸರಕಾರವು ಮಾತ್ರ ಮುಟ್ಟಿನ ರಜೆಗೆ ಅವಕಾಶ ನೀಡುವ ನೀತಿಯನ್ನು ರೂಪಿಸಿದೆ ಎಂದು ತಿಳಿಸಿದರು. ಆದಾಗ್ಯೂ ವಿಷಯವನ್ನು ಪರಿಗಣಿಸಲು ಪೀಠವು ಒಲವು ವ್ಯಕ್ತಪಡಿಸಲಿಲ್ಲ. ಮುಟ್ಟಿನ ರಜೆಯು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಿದ ನ್ಯಾ.ಸೂರ್ಯಕಾಂತ,‌ ನೀವು ನಿಜವಾಗಿಯೂ ಕಳಕಳಿಯನ್ನು ಹೊಂದಿರುವ ಅರ್ಜಿದಾರರಲ್ಲ. ಇದು ಮೂಲತಃ ಯುವತಿಯರಲ್ಲಿ ನಿಮಗೆ ಈಗಲೂ ಕೆಲವು ನೈಸರ್ಗಿಕ ಸಮಸ್ಯೆಗಳಿವೆ ಮತ್ತು ನೀವು ಪುರುಷರಿಗೆ ಸಮಾನರಲ್ಲ ಹಾಗೂ ನಿರ್ದಿಷ್ಟ ಸಮಯದಲ್ಲಿ ನೀವು ಪುರುಷರಂತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಮೂಡಿಸುವ ಏಕೈಕ ಉದ್ದೇಶದಿಂದ ಸಲ್ಲಿಸಿರುವ ಅರ್ಜಿಯಾಗಿದೆ ಎಂದು ಹೇಳಿದರು.

ವಾರ್ತಾ ಭಾರತಿ 13 Mar 2026 2:47 pm

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ, ಅವರೇ ಬೆಂಗಳೂರಿಗೆ ಬಂದಿದ್ದಾರೆ : ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ನಾನು ಒಡಿಶಾ ಶಾಸಕರನ್ನು ಕರೆಸಿಲ್ಲ, ಅವರೇ ಬೆಂಗಳೂರಿಗೆ ಬಂದಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಒಡಿಶಾ ಶಾಸಕರು ರಾಮನಗರದ ರೆಸಾರ್ಟ್ ನಲ್ಲಿದ್ದು, ನೀವೇ ಅವರನ್ನು ಕರೆಸಿದ್ದೀರಿ ಎಂದು ಕೇಳಿದಾಗ ಅವರು ಈ ರೀತಿ ಉತ್ತರಿಸಿದರು. ಅವರು ಯಾವ ಕಾರಣಕ್ಕೆ ಬಂದಿದ್ದಾರೆ ಎಂದು ಗೊತ್ತಿಲ್ಲ. ಆ ರಾಜ್ಯದ ನಮ್ಮ ಪಿಸಿಸಿ ಅಧ್ಯಕ್ಷರು ಕರೆ ಮಾಡಿ ನಮ್ಮ ಶಾಸಕರು ಬರುತ್ತಿದ್ದಾರೆ ಎಂದು ಹೇಳಿದರು. ಪಕ್ಷದ ವಿಚಾರ ಇರಬೇಕು, ನಾನೇ ಹೋಗಿ ಭೇಟಿ ಮಾಡುವೆ ಎಂದು ಹೇಳಿದ್ದೇನೆ. ಅವರಿಗೆ ಮೈಸೂರು ನೋಡುವ ಆಸೆ ಇದೆ. ಅವರು ನಾವು ಬರುತ್ತೇವೆ ಎಂದು ತಿಳಿಸಿದಾಗ, ನಾನು ಬನ್ನಿ ಎಂದು ಹೇಳಿದೆ. ಆರಾಮಾಗಿ ಇರುವ ಜಾಗಬೇಕು ಎಂದು ಕೇಳಿದರು, ಹೀಗಾಗಿ ಅವರಿಗೆ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು. ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡಮತದಾನವಾಗದಂತೆ ತಡೆಯಲು ನಿಮಗೆ ಪಕ್ಷ ಟಾಸ್ಕ್ ನಿಡಿದೆಯೇ ಎಂದು ಕೇಳಿದಾಗ, “ಪಕ್ಷ ಹೇಳಿದ್ದನ್ನು ಮಾಡಬೇಕು. ಎಲ್ಲಾ ರಾಜ್ಯಗಳಲ್ಲೂ ಈ ರೀತಿ ನಡೆಯುತ್ತಿರುತ್ತದೆ. ಇದು ಹೊಸತೇನಲ್ಲ. ನನ್ನ ಭೇಟಿಗೆ ಸಮಯ ಕೇಳಿದರು. ನಾನು ಅಧಿವೇಶನ ನಡೆಯುತ್ತಿದೆ. ಇಲ್ಲಿಗೆ ಬರಬೇಡಿ ಕಲಾಪ ಮುಗಿಸಿಕೊಂಡು ನಾನೇ ಬರುತ್ತೇನೆ ಎಂದು ಹೇಳಿರುವೆ ಎಂದು ಹೇಳಿದೆ. ಆಪರೇಷನ್ ಕಮಲ ತಪ್ಪಿಸಲು ಈ ಪ್ರಯತ್ನವೇ ಎಂದು ಕೇಳಿದಾಗ, “ನನಗೆ ಈ ಬಗ್ಗೆ ಗೊತ್ತಿಲ್ಲ. ಬೆಂಗಳೂರು ಸುರಕ್ಷಿತ ಹೀಗಾಗಿ ಅವರು ಇಲ್ಲಿಗೆ ಬಂದು ವೀಕ್ಷಣೆ ಮಾಡಬೇಕು ಎಂದು ಹೇಳಿದರು, ನಾನು ಅವರನ್ನು ಭೇಟಿಯಾಗಿಲ್ಲ. ಅವರು ನಮ್ಮ ಸಹೋದ್ಯೋಗಿಗಳು, ಅವರು ಬರುತ್ತಾರೆ ಎಂದಾಗ ಹಾಗೂ ಪಿಸಿಸಿ ಅಧ್ಯಕ್ಷರು ನನಗೆ ಈ ವಿಚಾರವಾಗಿ ಕೇಳಿದಾಗ, ನಾನು ಬನ್ನಿ ಎಂದು ಹೇಳಿರುವೆ. ಅವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನಾನು ಇದನ್ನು ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದ ಸಮಯದಿಂದಲೂ ಮಾಡಿಕೊಂಡು ಬರುತ್ತಿರುವೆ. ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ, ಮಧ್ಯಪ್ರದೇಶ ಸೇರಿದಂತೆ ಅನೇಕ ಬಾರಿ ಈ ಕೆಲಸ ಮಾಡಿದ್ದೇನೆ ಎಂದರು. ಪಕ್ಷಕ್ಕೆ ಈ ರೀತಿ ಟ್ರಬಲ್ ಆದಾಗೆಲ್ಲಾ ನೀವೇ ತಲೆ ಕೊಡುತ್ತೀರಿ, ನಿಮ್ಮ ಸಮಸ್ಯೆ ಬಗೆಹರಿಯುತ್ತಿಲ್ಲವಲ್ಲ ಎಂದು ಕೇಳಿದಾಗ, ಕಾಲ ನಿರ್ಣಯ ಮಾಡುತ್ತದೆ ಎಂದು ತಿಳಿಸಿದರು. ಪಕ್ಷ ಈ ವಿಚಾರದಲ್ಲಿ ನಿಮಗೆ ಜವಾಬ್ದಾರಿ ನೀಡಿದೆಯೇ ಎಂದು ಕೇಳಿದಾಗ, “ಯಾವುದೇ ರೀತಿಯ ಜವಾಬ್ದಾರಿ ನೀಡಿಲ್ಲ. ನಮ್ಮ ಪಿಸಿಸಿ ಅಧ್ಯಕ್ಷರು ಶಾಸಕರು ಬರುತ್ತಿದ್ದಾರೆ ಎಂದು ಹೇಳಿದ್ದು, ನೀವು ನಮ್ಮ ಅತಿಥಿಗಳು ಬನ್ನಿ” ಎಂದು ತಿಳಿಸಿದರು. ಸಚಿವ ಸಂಪುಟ ಪುನಾರಚನೆಗೆ ಒತ್ತಡ ಹೆಚ್ಚುತ್ತಿರುವ ಬಗ್ಗೆ ಕೇಳಿದಾಗ, “ಮಂತ್ರಿಯಾಗುವ ಆಸೆ ಇರುತ್ತದೆ. ನಾನು ಮೊದಲ ಬಾರಿಗೆ ಮಂತ್ರಿಯಾಗಿದ್ದೆ. ಈಗ ನಮಗೆ ವಯಸ್ಸಾಗಿದೆ. ಹಿರಿಯ ನಾಗರೀಕರಾಗಿದ್ದೇವೆ. ಅವರಿಗೂ ಆಸೆ ಇದೆ” ಎಂದರು. ಬಜೆಟ್ ಕುರಿತಾಗಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರ ಅಸಮಾಧಾನ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಜಿಲ್ಲಾ ನ್ಯಾಯಾಲಯ ಬೇಕು ಎಂದು ಕೇಳಿದ್ದರು, ನಾವು ಅದನ್ನು ನೀಡಿದ್ದೇವೆ. ಬೇಕಾದಷ್ಟು ಕೆಲಸವನ್ನು ನೀಡಿದ್ದೇವೆ. ಅವುಗಳನ್ನು ಘೋಷಣೆ ಮಾಡುತ್ತೇವೆ” ಎಂದು ತಿಳಿಸಿದರು.

ವಾರ್ತಾ ಭಾರತಿ 13 Mar 2026 2:41 pm

Karnataka Weather: ಭಾನುವಾರದಿಂದ ಮಾರ್ಚ್‌.18 ರವರೆಗೂ ಮಳೆ ಮುನ್ಸೂಚನೆ: ಬಿಸಿಲಿಂದ ಕಂಗೆಟ್ಟಿರುವ ಕರಾವಳಿಗರಿಗೆ ಸಿಹಿಸುದ್ದಿ

ಬಿರು ಬೇಸಿಗೆಯ ಬಿಸಿಲ ಝಳಕ್ಕೆ ಕರಾವಳಿ ಜನ ಕಂಗೆಟ್ಟಿದ್ದಾರೆ. ಕೃಷಿಕರು ಹಗಲಲ್ಲಿ ಕೆಲಸ ಮಾಡಲಾಗದೆ, ಬಿಸಿಲಿಗೆ ಬೇಸತ್ತು ಹೋಗಿದ್ದಾರೆ. ಉತ್ತರ ಕರ್ನಾಟಕದ ಹಲವುಜಿಲ್ಲೆಗಳೂ ಬಿಸಿಗೆ ಕುದಿಯುತ್ತಿವೆ. ಇದೀಗ ಬೇಸಿಗೆ ಮಳೆಯ ಸಿಹಿಸುದ್ದಿ ಸಿಕ್ಕಿದ್ದು, ಯಾವ ದಿನ ಎಲ್ಲೆಲ್ಲಿ ಮಳೆಯಾಗಲಿದೆ ಎಂಬ ವಿವರ ಇಲ್ಲಿದೆ ಓದಿ.

ವಿಜಯ ಕರ್ನಾಟಕ 13 Mar 2026 2:37 pm

ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಹೊಸ ಸ್ಥಳ ಗುರುತು; ನಗರದಿಂದ 19 ಕಿ.ಮೀ ದೂರ; 3 ಜಿಲ್ಲೆಗಳಿಗೆ ಅನುಕೂಲ: ಎಂಬಿ ಪಾಟೀಲ

ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ಹಿಂದೆ ಗುರುತಿಸಿದ್ದ ಜಾಗದ ಬದಲು ಹೊಸ ಜಾಗ ನಿಗದಿ ಪಡಿಸಿದೆ. ಇದು ನಗರದಿಂದ 19 ಕಿ.ಮೀ ದೂರದಲ್ಲಿದ್ದು, 3 ಜಿಲ್ಲೆಗೆ ಅನುಕೂಲವಾಗಲಿದೆ ಎಂದು ಮೂಲಸೌಕರ್ಯ ಸಚಿವ ಎಂಬಿ ಪಾಟೀಲ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಕೇಳಿದ ಪ್ರಶ್ನೆಗೆ ಸಚಿವರು ವಿವರವಾಗಿ ಮಾಹಿತಿ ನೀಡಿರು. ಹೊಸ ಜಾಗ ಯಾಕೆ? ಹಳೆ ಜಾಗದ ಸಮಸ್ಯೆಗಳೇನು? ಏನೆಲ್ಲಾ ಅನುಕೂಲ? ಈ ಬಗ್ಗೆ ವಿವರ ಇಲ್ಲಿದೆ.

ವಿಜಯ ಕರ್ನಾಟಕ 13 Mar 2026 2:35 pm

ಶ್ರೀರಾಮಪ್ಪ ಶಾಲೆ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ: ಶ್ರೀರಾಮಪ್ಪ ಎಜುಕೇಶನ್ ಟ್ರಸ್ಟ್ (ರಿ.), ಕಾರ್ಕಳ ಹಾಗೂ ವಿದ್ಯಾಭಾರತಿ ಸಂಯೋಜಿತ ಶ್ರೀರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪುಲ್ಕೇರಿ, ಕಾರ್ಕಳ ಇದರ ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ನಡೆಯಲಿರುವ ಅಮೃತ ಮಹೋತ್ಸವ ಸಂಭ್ರಮ ಹಾಗೂ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕೃಷ್ಣ ಕ್ಷೇತ್ರ, ಆನೆಕೆರೆ, ಕಾರ್ಕಳದಲ್ಲಿ ಬಿಡುಗಡೆ ಮಾಡಲಾಯಿತು. ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿ ಕೆ. ಉಮೇಶ್ ರಾವ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಕ್ಷೇತ್ರದ ಪ್ರಧಾನ ಅರ್ಚಕರಾದ ಸದಾನಂದ ಶಾಂತಿ, ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀಧರ್ ಎನ್. ಸುವರ್ಣ, ಕೋಶಾಧಿಕಾರಿ ಸಂತೋಷ್ ಹೆಗ್ಡೆ, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಹೆಗ್ಡೆ, ಸಮಿತಿ ಅಧ್ಯಕ್ಷ ಡಾ. ಜ್ಞಾನೇಶ್ ಕಾಮತ್, ಕಾರ್ಯದರ್ಶಿ ಹರೀಶ್ ಅಂಚನ್, ಅಮೃತ ಮಹೋತ್ಸವ ಕಾರ್ಯಕ್ರಮದ ಸಂಯೋಜಕ ಪ್ರಕಾಶ್ ರಾವ್, ನಿವೃತ್ತ ಅಧ್ಯಾಪಕ ಅಣ್ಣು ಮಾಸ್ಟ್ರು, ಅಧ್ಯಾಪಕ ಸುಧಾಕರ್ ಹಾಗೂ ಸಮಿತಿಯ ಸದಸ್ಯರಾದ ವಸಂತ್ ಎಂ., ಸಂತೋಷ್ ರಾವ್ ಮತ್ತು ತಾರನಾಥ ಕೋಟ್ಯಾನ್ ಉಪಸ್ಥಿತರಿದ್ದರು. ಅಮೃತ ಮಹೋತ್ಸವ ಸಮಿತಿ ಸಂಚಾಲಕ ಪ್ರಕಾಶ್ ರಾವ್ ಸ್ವಾಗತಿಸಿ ವಂದನಾರ್ಪಣೆ ಸಲ್ಲಿಸಿದರು.

ವಾರ್ತಾ ಭಾರತಿ 13 Mar 2026 2:34 pm

ಪ್ರಶ್ನೋತ್ತರ ಕಲಾಪದ ವೇಳೆ ಪೇಚಿಗೆ ಸಿಲುಕಿದ ಎಸ್ ಎಸ್ ಮಲ್ಲಿಕಾರ್ಜುನ್: ತರಾಟೆಗೆ ತೆಗೆದುಕೊಂಡ ಬಿಜೆಪಿ ಶಾಸಕ ಸುನಿಲ್ ಕುಮಾರ್

ಬೆಂಗಳೂರು ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ತಪ್ಪು ಅಂಕಿ-ಅಂಶ ನೀಡಿದ್ದ ಹಿನ್ನೆಲೆಯಲ್ಲಿ ಪೇಚೆಗೆ ಸಿಲುಕಿದ ಘಟನೆ ನಡೆಯಿತು. ಈ ಸಂಬಂಧ ಎಸ್‌ಎಲ್‌ ಮಲ್ಲಿಕಾರ್ಜುನ್ ಅವರನ್ನ ಬಿಜೆಪಿ ಶಾಸಕ ಸುನಿಲ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯ ಕರ್ನಾಟಕ 13 Mar 2026 2:32 pm

ಷೇರು ಮಾರುಕಟ್ಟೆಯಲ್ಲಿ ಮತ್ತೆ ತಲ್ಲಣ, ದೊಡ್ಡ ಮಟ್ಟದಲ್ಲಿ ಕುಸಿತ ಕಂಡ ಭಾರತೀಯ ಷೇರುಪೇಟೆ | Stock Market

ಭಾರತದ ಷೇರು ಮಾರುಕಟ್ಟೆಗೆ ಮಧ್ಯಪ್ರಾಚ್ಯ ಸಂಘರ್ಷ ದೊಡ್ಡ ಆಘಾತ ನೀಡುತ್ತಿದೆ, ಕಳೆದ ಕೆಲವು ದಿನಗಳಿಂದ ಭಾರತದ ಷೇರುಪೇಟೆ ಸೂಚ್ಯಂಕಗಳು ಹಾಗೂ ಷೇರುಗಳು ಭಾರಿ ದೊಡ್ಡ ಮಟ್ಟದ ಕುಸಿತ ದಾಖಲಿಸಿ ಹೂಡಿಕೆದಾರರ ಎದೆಯಲ್ಲಿ ಭಯ ಮೂಡಿಸಿದೆ. ಅಮೆರಿಕ ಹಾಗೂ ಇಸ್ರೇಲ್ ಒಂದಾಗಿ ಈ ಯುದ್ಧ ಆರಂಭಿಸಿದ್ದು, ಇರಾನ್ ಸರ್ವನಾಶ ಮಾಡೇ ಮಾಡುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಅವರು ಹಾಗೂ

ಒನ್ ಇ೦ಡಿಯ 13 Mar 2026 2:30 pm

Explained: ಡಾಲರ್ ಎದುರು ರೂಪಾಯಿ ಪತನ, 10 ತಿಂಗಳ ಗರಿಷ್ಠ ಮಟ್ಟಕ್ಕೇರಿದ ಹಣದುಬ್ಬರ: ಜಾಗತಿಕ ಅನಿಶ್ಚಿತತೆ ನಡುವೆ ಮನೆ ಬಜೆಟ್‌ ಹೊರೆ ಹೆಚ್ಚಸಲಿದ್ಯಾ ಈ ಟ್ರೇಂಡ್?‌

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ಜಾಗತಿಕವಾಗಿ ತೈಲ ಬೆಲೆಯಲ್ಲಿನ ಏರಿಕೆಯಿಂದಾಗಿ ಅನಿಶ್ಚಿತತೆ ಎದುರಾಗಿದ್ದು, ಭಾರತಕ್ಕೂ ಇದರ ಎಫೆಕ್ಟ್‌ ತಟ್ಟಿದೆ. ತೈಲ ಬೆಲೆ ಏರಿಕೆ ಹಾಗೂ ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಡಾಲರ್‌ ಎದುರು ರೂಪಾಯಿ ಪತನಗೊಂಡಿದ್ದು, ಇದರೊಂದಿಗೆ ದೇಶದಲ್ಲಿ ಹಣದುಬ್ಬರವು ಸಹ 10 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಹಾಗಾದ್ರೆ, ರೂಪಾಯಿ ದುರ್ಬಲಗೊಳ್ಳುತ್ತಿರೊದೇಕೆ? ಈ ಜಾಗತಿಕ ಅನಿಶ್ಚಿತತೆ ಮುಂದುವರೆದರೆ, ಭವಿಷ್ಯದಲ್ಲಿ ನಮ್ಮ ಮನೆಯ ಬಜೆಟ್‌ ಮೇಲೆ ಆರ್ಥಿಕವಾಗಿ ಏನೆಲ್ಲಾ ಹೊರೆ ಹೆಚ್ಚಾಗಲಿದೆ? ರೂಪಾಯಿ ಮೌಲು ಕುಸಿತಕ್ಕೂ ಹಣದುಬ್ಬರಕ್ಕೂ ಇರುವ ಸಂಬಂಧವೇನು? ಈ ಎಲ್ಲಾ ವಿಚಾರಗಳ ಕುರಿತ ಮಾಹಿತಿ ಇಲ್ಲಿದೆ..

ವಿಜಯ ಕರ್ನಾಟಕ 13 Mar 2026 2:19 pm

ಇರಾನ್ ನೂತನ ಸರ್ವಾಧಿಕಾರಿ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಹತ್ವದ ಹೇಳಿಕೆ | Donald Trump

ಅಮೆರಿಕ ಹಾಗೂ ಇಸ್ರೇಲ್ ಒಟ್ಟಾಗಿ ಕೊಡುತ್ತಿರುವ ಏಟಿಗೆ ಈಗ ಇರಾನ್ ನಲುಗಿ ಹೋಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಇರಾನ್ ಮಾತ್ರ ತಾನು ಇನ್ನೂ ಸೈಲೆಂಟ್ ಆಗಿಲ್ಲ, ಅಮೆರಿಕ ಮೇಲೆ ಸೇಡಿಗೆ ಸೇಡು ಗ್ಯಾರಂಟಿ ಅನ್ನುತ್ತಿದೆ. ಈ ಮೂಲಕ ಅಮೆರಿಕ ಮತ್ತು ಇರಾನ್ ನಡುವೆ ಘೋರವಾಗಿ ಯುದ್ಧ ನಡೆಯುವ ಸನ್ನಿವೇಶ ನಿರ್ಮಾಣ ಆಗುತ್ತಿದೆ. ಈಗಾಗಲೇ ಶುರುವಾಗಿರುವ ಯುದ್ಧ

ಒನ್ ಇ೦ಡಿಯ 13 Mar 2026 2:14 pm

ಒಮಾನ್ ನಲ್ಲಿ ಡ್ರೋನ್ ಪತನ; ಇಬ್ಬರು ವಿದೇಶಿ ಪ್ರಜೆಗಳು ಮೃತ್ಯು

ಮಸ್ಕತ್: ಒಮಾನ್ ನ ಸೊಹಾರ್ ಪ್ರಾಂತ್ಯದ ಅಲ್–ಅವಾಹಿ ಕೈಗಾರಿಕಾ ಪ್ರದೇಶದಲ್ಲಿ ಡ್ರೋನ್ ಪತನಗೊಂಡ ಪರಿಣಾಮ ಅದರ ಅವಶೇಷ ಬಿದ್ದು ಇಬ್ಬರು ಮೃತಪಟ್ಟಿದ್ದು, ಇತರರು ಗಾಯಗೊಂಡಿದ್ದಾರೆ ಎಂದು ಒಮಾನ್ ನ ಸರಕಾರಿ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ aljazeera.com ವರದಿ ಮಾಡಿದೆ. ಭದ್ರತಾ ಮೂಲವನ್ನು ಉಲ್ಲೇಖಿಸಿದ ವರದಿಯ ಪ್ರಕಾರ, ಸೊಹಾರ್ ಪ್ರಾಂತ್ಯದ ಅಲ್–ಅವಾಹಿ ಕೈಗಾರಿಕಾ ಪ್ರದೇಶದಲ್ಲಿ ಡ್ರೋನ್ ಪತನಗೊಂಡ ಘಟನೆ ನಡೆದಿದೆ. ಈ ಘಟನೆಯಲ್ಲಿ ಡ್ರೋನ್ ಅವಶೇಷ ಬಿದ್ದು ಇಬ್ಬರು ಮೃತಪಟ್ಟಿದ್ದು, ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿದೆ. ಮೃತರಾದ ಇಬ್ಬರೂ ವಿದೇಶಿ ಪ್ರಜೆಗಳು ಎಂದು ಸಂಸ್ಥೆ ವರದಿ ಮಾಡಿದೆ. ಇದೇ ವೇಳೆ, ಸೊಹಾರ್ ಪ್ರಾಂತ್ಯದಲ್ಲಿ ಮತ್ತೊಂದು ಡ್ರೋನ್ ಅನ್ನು ಸಹ ಹೊಡೆದುರುಳಿಸಲಾಗಿದೆ ಎಂದು ಒಮಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಾರ್ತಾ ಭಾರತಿ 13 Mar 2026 2:09 pm

ಲೋಹಿಯಾ ಚಿಂತನೆಗೆ ಮುಖಾಮುಖಿಯಾಗುವ ‘ರಾಮ ಕೃಷ್ಣ ಶಿವ’

ನಾಟಕ: ರಾಮ-ಕೃಷ್ಣ-ಶಿವ ಮೂಲ: ಲೋಹಿಯಾ ಬರಹಗಳು ಕನ್ನಡಕ್ಕೆ: ಕೆ.ವಿ. ಸುಬ್ಬಣ್ಣ ಸಂಗೀತ ಸಹಾಯ: ಶುಭಕರ ಪುತ್ತೂರು, ಕೃಷ್ಣ ಅಟ್ಟದಮನಿ ಮಳ್ಳಿ ವಸ್ತ್ರವಿನ್ಯಾಸ: ಮಂಜು ಕಾಸರಗೋಡು ಬೆಳಕು: ಪೃಥ್ವಿನ್ ಉಡುಪಿ ರಂಗ ಪರಿಕರ: ಗೋಪಿನಾಥ ಸಾಗರ, ನಾಗರಾಜ ಶಿವಸಿಂಪಿ ರಂಗರೂಪ, ವಿನ್ಯಾಸ, ಸಂಗೀತ, ನಿರ್ದೇಶನ: ಗಣೇಶ್ ಮಂದಾರ್ತಿ ತಂಡ: ಕರಾವಳಿ ನಿರ್ದಿಗಂತ ಕಲಾವಿದರು: ಮಂಜು ಕಾಸರಗೋಡು, ಅಜಿತ್ ಸಿಂಹ, ನಯನಾ ಸಿ., ರಾಧಾ ರಾಮಚಂದ್ರನ್, ಮಾಧವ ಜೋಗಿ ಈಗಾಗಲೇ ‘ವಾಲಿವಧೆ’, ‘ದ್ರೌಪದಿ ಹೇಳ್ತವ್ಳೆ’ ನಾಟಕಗಳ ಮೂಲಕ ಗಮನ ಸೆಳೆದಿರುವ ಗಣೇಶ್ ಮಂದಾರ್ತಿ ಅವರ ಹೊಸ ನಾಟಕ ‘ರಾಮ ಕೃಷ್ಣ ಶಿವ’ ಇದು ರಾಮಮನೋಹರ ಲೋಹಿಯಾ ಅವರ ಲೇಖನಗಳನ್ನು ಆಧರಿಸಿದ ನಾಟಕ. ಶೇಷಗಿರಿಯ ಕಲಾತಂಡಕ್ಕೆ ‘ವಾಲಿವಧೆ’ ನಾಟಕ ನಿರ್ದೇಶಿಸಿದ ನಂತರ ಕಾಲೇಜಿನ ವಿದ್ಯಾರ್ಥಿಗಳಿಗೆ ವಾಚಾನಾಭಿನಯದ ಮೂಲಕ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ತಲುಪಿಸಿದ ಹೆಗ್ಗಳಿಕೆ ಅವರದು. ಸದ್ಯ ಕರಾವಳಿ ನಿರ್ದಿಗಂತ ತಂಡಕ್ಕೆ ಗಣೇಶ್ ಅವರು ‘ರಾಮ ಕೃಷ್ಣ ಶಿವ’ ನಾಟಕವಾಗಿಸಿ, ಸಂಗೀತ ನೀಡಿ ಸಮರ್ಥವಾಗಿ ನಿರ್ದೇಶಿಸಿದ್ದಾರೆ. ಲೋಹಿಯಾ ಅವರ ಚಿಂತನೆಗಳೊಂದಿಗೆ ಮುಖಾಮುಖಿಯಾಗುವ ಈ ನಾಟಕದಲ್ಲಿ ಮಂಜು ಕಾಸರಗೋಡು, ಅಜಿತ್ ಸಿಂಹ, ನಯನಾ, ರಾಧಾ ರಾಮಚಂದ್ರನ್ ಹಾಗೂ ಮಾಧವ ಜೋಗಿ ಅವರು ತಮ್ಮ ಪಾತ್ರಗಳ ತಲ್ಲೀನತೆಯಿಂದಾಗಿ ಗೆಲ್ಲಿಸುತ್ತಾರೆ. ಈ ಐವರೇ ಎರಡು ಗಂಟೆಗಳ ನಾಟಕವನ್ನು ಮುನ್ನಡೆಸುತ್ತಾರೆ. ಈ ನಾಟಕ ನೋಡಲು ಮುಖ್ಯವಾಗಿ ಪ್ರೇಕ್ಷಕರಿಗೆ ತಾಳ್ಮೆ ಬೇಕು. ನಾಟಕದ ಆರಂಭದಲ್ಲಿ ಲೋಹಿಯಾ ಕುರಿತ ಮಾತು ಗಮನ ಸೆಳೆಯುತ್ತದೆ- ‘ಮಾನವಪ್ರೇಮಿಯಾಗಿದ್ದ ಡಾಕ್ಟರ್ ರಾಮ ಮನೋಹರ ಲೋಹಿಯಾ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡ ಒಬ್ಬ ಗಾಂಧಿವಾದಿ. ಮಹಾತ್ಮಾ ಗಾಂಧಿಯವರ ನೇರ ಶಿಷ್ಯ ಮತ್ತು ಮಾನಸಪುತ್ರನೆನೆಸಿಕೊಂಡಿದ್ದರು. ಗಾಂಧೀಜಿಯವರ ನಡೆ-ನುಡಿಗಳನ್ನು ಟೀಕಿಸುತ್ತಲೇ ಪ್ರೀತಿಸಿದ ಒಬ್ಬ ಸಮಾಜವಾದಿ. ರಾಮ, ಕೃಷ್ಣ, ಶಿವ ಮೊದಲಾದ ಸಾಂಸ್ಕೃತಿಕ ಅಥವಾ ಪೌರಾಣಿಕ ವ್ಯಕ್ತಿತ್ವಗಳನ್ನು ಕುರಿತಂತೆ ಲೋಹಿಯಾ ಚಿಂತನೆಗೂ ಆ ಕಾಲದ ಗಾಂಧಿ, ಅಂಬೇಡ್ಕರ್ ಅಥವಾ ಪೆರಿಯಾರ್ ನಿಲುವುಗಳಿಗೂ ಒಂದು ಕುತೂಹಲಕರವಾದ ವ್ಯತ್ಯಾಸವಿದೆ. ಗಾಂಧೀಜಿಗೆ ಪೌರಾಣಿಕ ಪಾತ್ರಗಳ ಆಧ್ಯಾತ್ಮಿಕ ಮುಖದ ಬಗ್ಗೆ ಅತೀವ ಆರಾಧನೆಯಿದ್ದರೆ ಅಂಬೇಡ್ಕರ್ ಅಥವಾ ಪೆರಿಯಾರರಲ್ಲಿ ಈ ಪೌರಾಣಿಕ ವ್ಯಕ್ತಿತ್ವಗಳೇ ಭಾರತದಲ್ಲಿ ಧಾರ್ಮಿಕ ದಬ್ಬಾಳಿಕೆಗಳ ಸಾಧನವಾದದ್ದರ ಬಗ್ಗೆ ಅಪಾರ ವ್ಯಗ್ರತೆಯಿದೆ. ಆದರೆ ಲೋಹಿಯಾಗೆ ಮಾತ್ರ ರಾಮ, ಕೃಷ್ಣ, ಶಿವರೆಂಬ ಈ ಪೌರಾಣಿಕ ಪಾತ್ರಗಳೆಲ್ಲ ಸಮಕಾಲೀನರು. ಆದ್ದರಿಂದಲೇ ಈ ಮೂವರ ನೈತಿಕ-ಅನೈತಿಕ ವರ್ತನೆ, ರಾಜಕೀಯ ನಡೆ, ಆ ವ್ಯಕ್ತಿತ್ವಗಳ ಶಕ್ತಿ-ದೌರ್ಬಲ್ಯ ಎಲ್ಲ. ಎಲ್ಲವೂ ಲೋಹಿಯಾಗೆ ಮುಖ್ಯ’ ಎನ್ನುವುದು ನಾಟಕಕ್ಕೆ ಪೀಠಿಕೆಯಾಗಿದೆ. ‘ರಾಮ, ಕೃಷ್ಣ ಮತ್ತು ಶಿವ ಇವು ಇಂಡಿಯಾದ ಮಹತ್ ಸ್ವಪ್ನಗಳು. ಮಹತ್ ದುಃಖಗಳು ಕೂಡ. ಇಂಡಿಯಾದ ಮಹಾಪುರಾಣಗಳ ಈ ಮೂರು ನಾಯಕ ಮಣಿಗಳು ಎಂದಾದರೂ ವಾಸ್ತವವಾಗಿ ಇದ್ದುದುಂಟೆ ಅಥವಾ ಇಲ್ಲವೇ ಎಂಬ ಪ್ರಶ್ನೆ ದೇಶದ ಸಾಂಸ್ಕೃತಿಕ ಇತಿಹಾಸಕ್ಕೆ ತುಲನಾತ್ಮಕವಾಗಿ ಅಷ್ಟೇನೂ ಅಗತ್ಯವಿಲ್ಲದ ವಿವರ’ ಹೀಗೆ ಹೇಳುವ ಲೋಹಿಯಾ ‘ಇನ್ನಷ್ಟು ಸೂಕ್ಷ್ಮದಲ್ಲಿ ಪುರಾಣಗಳು ಅನಕ್ಷರಸ್ಥರನ್ನೂ ಸುಸಂಸ್ಕೃತಗೊಳಿಸಬಲ್ಲವು. ಹಾಗೆ ಅನುಭವದ ರೂಪ ತೀವ್ರ ಬದಲಾಗುವ ಕಾಲದಲ್ಲಿ ಜನರ ಬದುಕನ್ನು ನಿಂತ ನೀರಾಗಿಸಿ ನಾರುವಂತೆಯೂ ಮಾಡಿಬಿಡಬಲ್ಲವು’ ಎನ್ನುತ್ತಾರೆ. ಹೀಗೆ ಮೇಳವು ನಾಟಕದ ವಿವರಗಳನ್ನು, ಮುಂದಿನ ನಡೆಯನ್ನು ಹೇಳುತ್ತ ಸಾಗುತ್ತದೆ. ಮೊದಲಿಗೆ ರಾಮನ ಕುರಿತ ನಾಟಕದಲ್ಲಿ ‘ರಾಮ ಅತ್ತದ್ದನ್ನು ಚಂದ್ರ ನೋಡಿದ. ರಾಮ ಯಾವ ಕಾರಣಕ್ಕೆ ಅತ್ತನೋ ಆ ಅದೇ ಕಾರಣಕ್ಕೆ ಕಾಲಾಂತರದಲ್ಲಿ ಕೃಷ್ಣ ನಕ್ಕಿದ್ದನ್ನೂ ಚಂದ್ರ ನೋಡಿದ. ರಾಮಕೃಷ್ಣರ ಈ ಸೀಮಿತ-ಸಮೃದ್ಧ ವ್ಯಕ್ತಿತ್ವಗಳ ನಡುವಣ ಅಗಾಧ ವ್ಯತ್ಯಾಸವನ್ನು ಬಹುಶಃ ಮೊತ್ತಮೊದಲ ಬಾರಿಗೆ ಕಂಡು ಗುರುತಿಸಿ ಬೆರಗಾದವನು ಚಂದ್ರನೇ ಇರಬೇಕು. ಇದನ್ನು ದರ್ಶಿಸಲು ಲೋಹಿಯಾ ಆರಿಸಿಕೊಂಡದ್ದು ಸೀತಾಪಹರಣ ಸಂದರ್ಭದ ರಾಮನ ಶೋಕತಪ್ತ ಕಥೆಯನ್ನು. ಈ ಸನ್ನಿವೇಶವನ್ನು ಕುವೆಂಪು ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ‘ರಾಮವಿಲಾಪ’ ಪ್ರಸಂಗದ ಮೂಲಕ ಕಲಾವಿದರು ಪ್ರಸ್ತುತಪಡಿಸುತ್ತಾರೆ. ನಂತರ ಶೂರ್ಪನಖಿಯ ಪ್ರವೇಶ, ವಾಲಿ-ಸುಗ್ರೀವರ ಯುದ್ಧದ ನಂತರ ಮೇಳವು ಲೋಹಿಯಾರ ಮಾತನ್ನು ಉಲ್ಲೇಖಿಸುತ್ತದೆ ‘ಸಾಮೂಹಿಕ ಕೊಲೆ, ಅತ್ಯಾಚಾರಗಳ ತಪ್ಪಿಸಲು ವಾಲಿಯಂಥವನ ಕೊಂದೆ ಎಂದನೆ ರಾಮ? ರಾಮನಂಥ ಮನುಷ್ಯ ನಿಯಮವನ್ನು ಉಲ್ಲಂಘಿಸಬಾರದಿತ್ತು. ನಿಯಮ ಅಲ್ಪವೊ? ಮಹತ್ವವೊ ಅದು ಮುಖ್ಯ ಅಲ್ಲ. ಉಲ್ಲಂಘಿಸಿದ್ದು ಜೀವನದಲ್ಲಿ ಒಮ್ಮೆ ಮಾತ್ರ ಇದ್ದಿರಬಹುದು ಅಥವಾ ಉನ್ನತ ರಾಜಕೀಯ ಸ್ಥಾಪನೆಗಾಗಿ ಕೊಲೆ ಮಾಡಿದೆ ಎನ್ನಬಹುದು. ಏನೇ ಅನ್ನಿ, ರಾಮನಂಥವನಿಗೆ ಇಂತಹ ಸಮರ್ಥನೆ ತಕ್ಕುದಲ್ಲ. ಅಪರಾಧ ಮಹಾಪರಾಧ. ಒಂದು ಕೊಲೆಗೆ ಸಮರ್ಥನೆ ಕೊಡುವುದಾದರೆ ರಾಮ ಪಕ್ಷಕ್ಕೆ ಗೌರವ ಗತಿ ಉಳಿದೀತೆ?’ ರಾಮ ಪಟ್ಟಕ್ಕೇರಿದ ಮೇಲೂ ಇಂಥದ್ದೇ ಇನ್ನೊಂದು ಕೊಲೆಗೆ ಕೈ ಹಾಕಿ ಹೆಸರು ಕೆಡಿಸಿಕೊಳ್ಳಬೇಕಾಯಿತು. ಅದು ಶೂದ್ರ ತಪಸ್ವಿ ‘ಶಂಭೂಕ’ನ ಕಥೆಯಲ್ಲಿ ಅನಾವರಣಗೊಳ್ಳುತ್ತದೆ. ನಂತರ ಸೀತೆಯು ರಾಮನನ್ನು ಕೇಳುವ ಪ್ರಶ್ನೆ ಗಮನಾರ್ಹವಾದುದು- ‘ಕಲ್ಲಾಗಿದ್ದ ಅಹಲ್ಯೆಗೆ ಗೌತಮಾಲಿಂಗನವ ನೀಡಿದ ಮಹಾಪುರುಷ ನೀನು ಎಂಬ ಕಾರಣಕ್ಕೆ ಹೆಮ್ಮೆಯಲಿ ಬೀಗಿದ್ದ ನೀ ಮಿಥಿಲೆಗೆ ಸ್ವಯಂವರಕ್ಕೆ ಬಂದಾಗ. ಅದೇ ನೀನು ಕಾಲಾಂತರದಲ್ಲಿ ನಿನ್ನ ಕೈಯಾರೆ ಮತ್ತೊಬ್ಬ ಅಹಲ್ಯೆಯ ಸೃಷ್ಟಿಸಿದೆ ಎಂಬುದು ನಿನ್ನರಿವಿಗೆ ಬಂತೊ? ಅಧಿಕಾರ ಇಷ್ಟು ಕುರುಡೆ? ಶಬರಿ ಯಾರು? ಬೇಡತಿ, ಶೂದ್ರೆ ತಾನೆ? ಅವಳು ನಿನ್ನನ್ನು ಆರಾಧಿಸಿದಳು. ಆಕೆಯ ತಪಸ್ಸು ತಪ್ಪಲ್ಲ. ಅದೇ ಆ ಶಂಭೂಕನನ್ನು? ಶೂದ್ರ ತಪಸ್ವಿ ಎಂಬ ಕಾರಣಕ್ಕೆ ಕೊಂದೆಯಂತೆ! ಇದೇ ಏನು ಮುಂದೆ ಮಕ್ಕಳು ಆಳ್ವಿಕೆ ಮಾಡಬೇಕಾದ ನಿನ್ನಯ ಅಯೋಧ್ಯಾ ನೀತಿ? ಅದೇ ಇರಲಿ, ಗರ್ಭದಲ್ಲಿರುವಾಗಲೇ ಮಕ್ಕಳನ್ನು ತೊರೆದ ನಿನಗೆ ಅವರ ಮೇಲಿನ್ನು ಹಕ್ಕಿಲ್ಲ. ತೊಟ್ಟಿಲು ತೂಗಿದವನಲ್ಲ, ತಟ್ಟಿ ಮಲಗಿಸಿದವನಲ್ಲ, ತುತ್ತು ಉಣಿಸಿದವನಲ್ಲ, ಎತ್ತಿ ಆಡಿಸಿದವನೂ ಅಲ್ಲ. ಅವರಿಗೆ ನಾನೇ ಅಮ್ಮ, ನಾನೇ ಅಪ್ಪ, ಬಂಧುಬಳಗ ಎಲ್ಲ. ಅಪ್ಪ ಅಪರಿಚಿತ ನನ್ನ ಮಕ್ಕಳಿಗೆ. ಅದು ಹಾಗೇ ಉಳಿಯಲಿ, ಬೆಳೆಯಲಿ, ಸಾಯಲಿ. ರಾಮ, ನೀನು ರಾಜನಾಗಿಯೂ ಸೋತೆ, ಗಂಡನಾಗಿಯೂ ಸೋತೆ. ಈಗ ಅಪ್ಪನಾಗಿಯೂ ಸೋತೆ. ಕೇಳು, ಅಂದು ನೀನು ನನ್ನನ್ನು ತಿರಸ್ಕರಿಸಿದೆ. ಇಕಾ! ಇಂದು ನಾನೇ ನಿನ್ನನ್ನು ತಿರಸ್ಕರಿಸುತ್ತಿದ್ದೇನೆ! ನಡೆ ಇಲ್ಲಿಂದ’ ಎನ್ನುತ್ತಾಳೆ. ಹೀಗೆ ಲೋಹಿಯಾರ ಮಾತುಗಳನ್ನು, ಪೌರಾಣಿಕ ಕಥೆಯನ್ನು ಮುರಿದು ಕಟ್ಟುವಲ್ಲಿ ಗಣೇಶ್ ಮಂದಾರ್ತಿ ಯಶಸ್ವಿಯಾಗಿದ್ದಾರೆ. ಈಮೂಲಕ ರಾಮನ ವ್ಯಕ್ತಿತ್ವವನ್ನು ಒರೆಗೆ ಹಚ್ಚುತ್ತಾರೆ. ಮುಂದೆ ಕೃಷ್ಣನ ಕುರಿತು ನಾಟಕ ಅನಾವರಣಗೊಳ್ಳುತ್ತದೆ. ಕೃಷ್ಣ-ಸುಧಾಮರ ಭೇಟಿ, ವಾನಪ್ರಸ್ಥಕ್ಕೆ ಹೊರಟ ಕುಂತಿ, ಕರ್ಣ-ಕುಂತಿಯರ ಮಾತುಕತೆ, ಧರ್ಮಾಧಿಕಾರಿ ಧರ್ಮರಾಯನ ಸನ್ನಿವೇಶದಲ್ಲಿ ಪ್ರಸ್ತುತ ರಾಜ್ಯದ ಧರ್ಮಾಧಿಕಾರಿಯೊಬ್ಬರ ನೆನಪಾಗುವುದು. ಹಾಗೆಯೇ ರಾಮಕೃಷ್ಣರ ಕುರಿತು ಲೋಹಿಯಾ ‘ಅಂಶಾವತಾರಿ ರಾಮ ದೇಶದಾಚೆಗೂ ಸದ್ದಿಲ್ಲದೆ ಪ್ರಭುತ್ವ ವಿಸ್ತರಿಸಿ ರಾಜಕಾರಣದಲ್ಲಿ ಪವಾಡವನ್ನೇ ಸಾಧಿಸಿದ. ಪೂರ್ಣಾವತಾರಿಯಾದ ಕೃಷ್ಣನ ರಾಜಕೀಯ ಸಾಧನೆ ಮಾತ್ರ ನೀರಿಗಿಂತ ಹೆಚ್ಚು ನೊರೆಯಾಗಿಬಿಟ್ಟಿತು’ ಎಂದು ವಿಮರ್ಶಿಸುತ್ತಾರೆ. ಕೊನೆಗೆ ಶಿವನ ಕುರಿತ ಚಿತ್ರಣ. ಲೋಹಿಯಾ ಅವರು ಶಿವನನ್ನು ದೇವರು ಎನ್ನುವುದಕ್ಕಿಂತ ಗಾತ್ರಾತೀತ ಎನ್ನುತ್ತಾರೆ. ಇಂಥ ಗಾತ್ರಾತೀತತೆಯ ಕಥಾಕಲ್ಪನೆಯ ದೃಷ್ಟಿಯಿಂದ ಇವನ ಹತ್ತಿರಕ್ಕೆ ಬರಬಹುದಾದ ಕಲ್ಪನೆ ಇನ್ನೊಂದಿಲ್ಲ ಎಂಬುದಂತೂ ನಿಶ್ಚಿತ ಎನ್ನುತ್ತಾರೆ. ಇದಕ್ಕೆ ಬ್ರಹ್ಮ ಮತ್ತು ವಿಷ್ಣುರಲ್ಲಿ ಯಾರು ಶ್ರೇಷ್ಠರು ಎನ್ನುವ ಕಾರಣಕ್ಕೆ ನಡೆದ ಜಟಾಪಟಿಯನ್ನು ಕಲಾವಿದರು ದೃಶ್ಯದ ಮೂಲಕ ಪರಿಣಾಮಕಾರಿ ಹಿಡಿದಿಡುತ್ತಾರೆ. ಆಮೇಲೆ ಏಳುಕೊಳ್ಳದ ಎಲ್ಲಮ್ಮನ ಕುರಿತ ಹಾಡು, ಶಿವ-ರಾವಣರ ಭೇಟಿ, ಶಿವ-ಗಣೇಶನ ದೃಶ್ಯ, ಋಷಿಗಳು ಶಿವನನ್ನು ಪ್ರಶ್ನಿಸುವುದು. ಕೊನೆಗೆ ಶಿವ ‘ರಾಮನನ್ನೋ ಕೃಷ್ಣನನ್ನೋ ಶಿವನನ್ನೋ ಪೂಜಿಸಿಯೂ ನೀವಿನ್ನೂ ಶ್ರೇಷ್ಠತೆಯ ವ್ಯಸನಗಳಲ್ಲೇ ಕೊಳೆಯುತ್ತಿದ್ದೀರಿ ಎಂದಾದರೆ ಅಂಥ ಪೂಜಾಕಾರ್ಯಗಳಿಂದೇನು ಪ್ರಯೋಜನವಾದಂತಾಯಿತು? ಲಿಂಗ ಭಾವವನ್ನೊಡೆದು ನಿಮ್ಮೊಳಗೆ ಇರುವ ನಿಜವನ್ನು ಹುಡುಕುವ ಪ್ರಯತ್ನವನ್ನು ನಡೆಸದೆ ಹೋದಲ್ಲಿ, ಪ್ರಜ್ಞೆ ಅರಳದೆ ಹೋದಲ್ಲಿ, ಎಷ್ಟು ಲಿಂಗ ಪೂಜೆಗಳಿಂದೇನು ಪ್ರಯೋಜನ?’ ಎಂದು ಕೇಳುತ್ತ ಶಿಶುನಾಳ ಶರೀಫರ ತತ್ವಪದವನ್ನು ಮೇಳದವರು ಹಾಡುತ್ತಾರೆ. ಕೇಳ ಜಾಣ ಶಿವ ಧ್ಯಾನವ ಮಾಡಣ್ಣ ನಿನ್ನೊಳಗ ನೀನು ತಿರುಗಿ ನೋಡಣ್ಣ ಅಂತಿಮವಾಗಿ ನಮ್ಮನ್ನು ನಾವು ಅರಿಯುವುದು ಮುಖ್ಯ ಎನ್ನುವ ಮೇಳವು ‘ನಮಗೆ ಶಿವನ ಮನಸ್ಸನ್ನೂ ಕೃಷ್ಣನ ಹೃದಯವನ್ನೂ ರಾಮನ ಕಾರ್ಯ-ಪ್ರಪಂಚವನ್ನೂ ಕೊಡು. ಪ್ರಮಾಣಾತೀತವಾದ ಮನಸ್ಸು, ಸಮೃದ್ಧವಾದ ಹೃದಯ. ಆದರೆ ಸೀಮಿತವಾದ ಬದುಕು ಇವುಗಳಿಂದ ನಮ್ಮನ್ನು ನಿರ್ಮಿಸು’ ಎಂದು ಕೇಳುತ್ತ ಶಿಶುನಾಳ ಶರೀಫರ ತತ್ವಪದದೊಂದಿಗೆ ನಿರ್ಗಮಿಸುತ್ತಾರೆ. ಹೀಗೆ ಪೌರಾಣಿಕ ಕಥೆಯನ್ನು ಸಮಕಾಲೀನಗೊಳಿಸುವಲ್ಲಿ ಗಣೇಶ್ ಮಂದಾರ್ತಿ ಯಶಸ್ವಿಯಾಗಿದ್ದಾರೆ. ಮೇಳದ ಮೂಲಕ ಲೋಹಿಯಾ ಅವರ ಮಾತುಗಳನ್ನು, ಕಥೆಯನ್ನು ಮುಂದುವರಿಸುತ್ತ ಬೋರಾಗದ ಹಾಗೆ ನೋಡಿಕೊಂಡಿದ್ದಾರೆ. ಈ ಮೂಲಕ ‘ರಾಮ ಕೃಷ್ಣ ಶಿವ’ ಅವರ ಗೊಂದಲಗಳು ಏನು ಎಂಬುದನ್ನು ತಿಳಿಸುತ್ತಲೇ ಇವರನ್ನು ನೋಡುವ ಬಗೆ ಹೇಗೆ ಎಂಬುದನ್ನು ಚಿತ್ರಿಸುತ್ತ, ಹೀಗೂ ನೋಡಬಹುದು ಎಂದು ಹೇಳುತ್ತ, ವೈಚಾರಿಕಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಸೂಕ್ಷ್ಮವಾಗಿ ತಿಳಿಹೇಳುವ ನಾಟಕವಿದು. ಈ ನಾಟಕ ಹೆಚ್ಚೆಚ್ಚು ಪ್ರದರ್ಶನಗೊಳ್ಳಬೇಕು. ಆಸಕ್ತರು 9845697231/7619642358 ಸಂಪರ್ಕಿಸಬಹುದು.

ವಾರ್ತಾ ಭಾರತಿ 13 Mar 2026 2:06 pm

Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ

ಬೆಂಗಳೂರು: ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದಲ್ಲಿ ಉಂಟಾಗಿರುವ ಅಡುಗೆ ಅನಿಲ ಸಮಸ್ಯೆ ಮುಂದಿನ 08-10 ದಿನಗಳಲ್ಲಿ ಇತ್ಯರ್ಥವಾಗಲಿದೆ. ಹೋಟೆಲ್ ಉದ್ಯಮದವರು ತಾಳ್ಮೆ ಕಾಯ್ದುಕೊಳ್ಳಬೇಕು. ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಕ್ರಮಕ್ಕೆ ಸೂಚಿಸಲಾಗಿದೆ. ಇನ್ನೂ ಅಡುಗೆ ಅನಿಲ ಮೇಲೆ ರಾಜ್ಯ ಸರ್ಕಾರದ ಶೇ.55 ರಷ್ಟು ತೆರಿಗೆ ಹಾಕುತ್ತಿರುವ ಬಗ್ಗೆ ಮಾಹಿತಿ ನೀಡಲಾಗುವುದೆಂದು ರಾಜ್ಯ ಆಹಾರ ಮತ್ತು ನಾಗರಿಕ ವ್ಯವಹಾರ ಖಾತೆ

ಒನ್ ಇ೦ಡಿಯ 13 Mar 2026 1:32 pm

ದೇಶದ ಇತಿಹಾಸದಲ್ಲಿ ಇದೇ ಮೊದಲು : ಸ್ಪೀಕರ್ ಆಯ್ತು, ಈಗ ವಿಪಕ್ಷಗಳಿಂದ ಸಿಇಸಿ ಪದಚ್ಯುತಿಗೆ ನೋಟಿಸ್?

After Speaker Now CEC : ಇಂಡಿಯಾ ಮೈತ್ರಿಕೂಟವು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಪದಚ್ಯುತಿಗೆ ನೋಟಿಸ್ ನೀಡಿದಂತೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನೂ ಪದಚ್ಯುತಗೊಳಿಸಬೇಕೆನ್ನುವ ನೋಟಿಸ್ ನೀಡಲು ಎಲ್ಲಾ ಸಿದ್ದತೆಯನ್ನು ಮಾಡಿಕೊಂಡಿದೆ. ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಂಸದರು ಈ ನೋಟಿಸ್’ಗೆ ಸಹಿ ಮಾಡಿದ್ದಾರೆ.

ವಿಜಯ ಕರ್ನಾಟಕ 13 Mar 2026 1:21 pm

ಅದಾನಿ ಫೌಂಡೇಶನ್ ಮಹತ್ವದ ಕಾರ್ಯ, 10 ಲಕ್ಷ ಮಹಿಳಾ ಉದ್ಯಮಿಗಳನ್ನು ಬೆಳೆಸುವ ಗುರಿ | Swabhimaan Programme

ಅದಾನಿ ಫೌಂಡೇಶನ್ ವತಿಯಿಂದ ಮಹಿಳಾ ಸಬಲೀಕರಣಕ್ಕೆ ನಡೆಸುತ್ತಿರುವ ಸ್ವಾಭಿಮಾನ ಕಾರ್ಯಕ್ರಮ, ಇದೀಗ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ವಿಸ್ತರಿಸುವುದಾಗಿ ಘೋಷಣೆ ಮಾಡಲಾಗಿದೆ. ಕಾರ್ಯಕ್ರಮ ಭಾರತದಲ್ಲಿ 10 ಲಕ್ಷ ಮಹಿಳಾ ಉದ್ಯಮಿಗಳ ಬೆಳೆಸುವ ಗುರಿ ಹೊಂದಿದೆ. ಮುಂಬೈ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ನಡೆದ ಸ್ವಾಭಿಮಾನ - ದಿ ರೈಸ್ ಆಫ್ ಶೀ ಕಾರ್ಯಕ್ರಮದಲ್ಲಿ ಈ ಮಹತ್ವದ ಘೋಷಣೆ

ಒನ್ ಇ೦ಡಿಯ 13 Mar 2026 1:13 pm

ನಾರಸಿಂಹನ ರೌದ್ರತೆ ಕುರಿತು ವಿಜಯದಾಸರ ರಚನೆ: ಹಾಡು ಹಳತು ಭಾವ ನವೀನ- 128

ಅಂಕಣಕಾರರಾದ ಅಮೆರಿಕನ್ನಡಿಗ ಶ್ರೀನಾಥ್ ಭಲ್ಲೆ ಅವರು, ಕನ್ನಡದ ಅನೇಕ ಸಾಹಿತ್ಯಗಳ ಕುರಿತು ಕೆಲಸ ಮಾಡಿದ್ದು, ಈ ದಿನ ವಿಜಯದಾಸರ ರಚನೆಯನ್ನು ಸುಲಭವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ.

ವಿಜಯ ಕರ್ನಾಟಕ 13 Mar 2026 1:09 pm

ಹೂಡಿಕೆದಾರರನ್ನು ಆಕರ್ಷಿಸದ ಚಿನ್ನ; ಕಾರಣವೇನು?

ಅಮೆರಿಕದಲ್ಲಿ ತೈಲ ಬೆಲೆಯಲ್ಲಿ ವಿಪರೀತ ಏರಿಕೆಯಿಂದಾಗಿ ಬಡ್ಡಿದರ ಕಡಿತ ಮಾಡಲು ಸಾಧ್ಯವೇ ಎನ್ನುವ ಅನುಮಾನ ಮೂಡಿದೆ. ಫೆಬ್ರವರಿಯಲ್ಲಿ ಹೆಚ್ಚು ಏರಿಳಿತ ಕಾಣದ ಶುದ್ಧ ಚಿನ್ನದ ಬೆಲೆ ಮಾರ್ಚ್ 01ರಂದು ಪ್ರತಿ ಗ್ರಾಂಗೆ 17 ಸಾವಿರ ದಾಟಿತ್ತು. ಆದರೆ ನಂತರ ಕಳೆದ ಸೋಮವಾರದಿಂದ ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿದೆ. ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿತ್ತು. ಮಂಗಳವಾರ ಮತ್ತೆ ತುಸು ಕುಸಿದಿದೆ. ಬುಧವಾರ ತೀವ್ರವಾಗಿ ಕುಸಿದ ನಂತರ ಗುರುವಾರ ಮತ್ತು ಶುಕ್ರವಾರವೂ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಆದರೆ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಹಠಾತ್ ಏರಿಕೆ ಕಂಡುಬಂದಿತ್ತು. ಮಾರ್ಚ್ 09 ಸೋಮವಾರ ಮತ್ತೆ ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಮತ್ತೆ ಸತತ ಏರಿಕೆಯಾಗಿದ್ದು, ಮತ್ತೆ 16 ಸಾವಿರದ ಮಿತಿ ಮೀರಿ ಬೆಳೆದಿದೆ. ಇದೀಗ ಗುರುವಾರ ಮತ್ತು ಶುಕ್ರವಾರ ಮತ್ತೆ ಚಿನ್ನದ ಬೆಲೆ ಅಲ್ಪ ಮಟ್ಟಿಗೆ ಕುಸಿದಿದೆ. ಚಿನ್ನ-ಬೆಳ್ಳಿ ಬೆಲೆ ಏರಿಳಿತಕ್ಕೆ ಕಾರಣವೇನು? ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿಪರೀತ ಏರದೆ ಸ್ಥಿರವಾಗಿವೆ. ಅಮೆರಿಕದಲ್ಲಿ ತೈಲ ಬೆಲೆಯಲ್ಲಿ ವಿಪರೀತ ಏರಿಕೆಯಿಂದಾಗಿ ಬಡ್ಡಿದರ ಕಡಿತ ಮಾಡಲು ಸಾಧ್ಯವೇ ಎನ್ನುವ ಅನುಮಾನ ಮೂಡಿದೆ. ಹೀಗಾಗಿ ಹೂಡಿಕೆದಾರರು ಅಮೆರಿಕದ ಹಣದುಬ್ಬರದ ದತ್ತಾಂಶಕ್ಕಾಗಿ ಕಾಯುತ್ತಿದ್ದಾರೆ. ಫೆಬ್ರವರಿಗೆ ಅಮೆರಿಕದ ವ್ಯಕ್ತಿಗತ ಉಪಭೋಗ ವೆಚ್ಚ ಸೂಚ್ಯಂಕದ ಜೊತೆಗೆ ಗ್ರಾಹಕ ಬೆಲೆ ಸೂಚ್ಯಂಕ ಬಿಡುಗಡೆಗೂ ಕಾಯಲಾಗುತ್ತಿದೆ. ಈ ಸೂಚ್ಯಂಕಗಳು ಮತ್ತು ವರದಿಗಳು ಶುಕ್ರವಾರ ಬಿಡುಗಡೆಯಾಗಲಿವೆ. ಹೀಗಾಗಿ ಸದ್ಯದ ಮಟ್ಟಿಗೆ ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿಲ್ಲ ಅಥವಾ ಹೂಡಿಕೆಯನ್ನು ಹಿಂತೆಗೆಯುತ್ತಿಲ್ಲ. ಅದೇ ಕಾರಣದಿಂದ ಚಿನ್ನ-ಬೆಳ್ಳಿ ಬೆಲೆಗಳು ಅಲ್ಪ ಏರಿಳಿತ ಕಾಣುತ್ತಿವೆ. ಇಂದಿನ ಚಿನ್ನದ ದರ ಹೇಗಿದೆ? ಮಾರ್ಚ್ 13ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗುರುವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 98 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,61,240 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 90 ರೂ. ಕುಸಿತವಾಗಿ ಹತ್ತು ಗ್ರಾಂಗೆ 1,47,800 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 74 ರೂ. ಕುಸಿದು ಹತ್ತು ಗ್ರಾಂಗೆ 1,20,930 ರೂ. ಗೆ ತಲುಪಿದೆ. ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ? ಮಾರ್ಚ್ 13ರಂದು ಶುಕ್ರವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಕುಸಿತ ಕಂಡುಬಂದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,124 (-98) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 14,780 (-90) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,093 (-74) ರೂ. ಬೆಲೆಗೆ ತಲುಪಿದೆ. ಸ್ಥಿರವಾದ ಬೆಳ್ಳಿ ದರ ಮಾರ್ಚ್ 02ರಂದು ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಕಳೆದ ಬುಧವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ. ಗೆ ತಲುಪಿತ್ತು. ನಂತರ ಗುರುವಾರ, ಶುಕ್ರವಾರ ಮತ್ತು ಶನಿವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ಮಾರ್ಚ್ 09ರಂದು ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದ ಬೆಳ್ಳಿ ಪ್ರತಿ ಕೆಜಿಗೆ 2,80,000 ರೂ. ಗೆ ತಲುಪಿತ್ತು. ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,90,000 ರೂ.ಗೆ ಆಗಿತ್ತು. ಬುಧವಾರ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದ್ದ ಪ್ರತಿ ಗ್ರಾಂ ಬೆಳ್ಳಿಯ ಬೆಲೆ ಗುರುವಾರ 10 ರೂ. ಕುಸಿದು ಮತ್ತೆ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ತಲುಪಿದೆ. ಶುಕ್ರವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ? ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,139 (-98) ರೂ., 22 ಕ್ಯಾರೆಟ್ ಚಿನ್ನದ ದರ 14,793 (-92) ರೂ. ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,124 (-98) ರೂ., 22 ಕ್ಯಾರೆಟ್ ಚಿನ್ನದ ದರ 14,780 (-90) ರೂ. ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,129 (-98) ರೂ., 22 ಕ್ಯಾರೆಟ್ ಚಿನ್ನದ ದರ 14,783 (-92) ರೂ. ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,256 (-75) ರೂ., 22 ಕ್ಯಾರೆಟ್ ಚಿನ್ನದ ದರ 14,900 (-70) ರೂ. ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,124 (-98) ರೂ., 22 ಕ್ಯಾರೆಟ್ ಚಿನ್ನದ ದರ 14,780 (-90) ರೂ. ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,124 (-98) ರೂ., 22 ಕ್ಯಾರೆಟ್ ಚಿನ್ನದ ದರ 14,780 (-90) ರೂ. ಜೈಪುರ: 24 ಕ್ಯಾರೆಟ್ ಚಿನ್ನದ ದರ 16,139 (-98) ರೂ., 22 ಕ್ಯಾರೆಟ್ ಚಿನ್ನದ ದರ 14,793 (-92) ರೂ. ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,139 (-98) ರೂ., 22 ಕ್ಯಾರೆಟ್ ಚಿನ್ನದ ದರ 14,793 (-92) ರೂ. ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,139 (-98) ರೂ., 22 ಕ್ಯಾರೆಟ್ ಚಿನ್ನದ ದರ 14,793 (-92) ರೂ.

ವಾರ್ತಾ ಭಾರತಿ 13 Mar 2026 12:56 pm

ಚನ್ನರಾಯಪಟ್ಟಣ : ಮಾಜಿ ಸೈನಿಕನಿಂದ ಮೂವರ ಮೇಲೆ ಮಾರಣಾಂತಿಕ ಹಲ್ಲೆ

ಚನ್ನರಾಯಪಟ್ಟಣ, ಮಾ.13: ತಾಲ್ಲೂಕಿನ ಬಾಗೂರು ಗ್ರಾಮದಲ್ಲಿ ಗುರುವಾರ ಹಾಡಹಗಲೇ ಮಾಜಿ ಸೈನಿಕನೊಬ್ಬ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಗ್ರಾಮದ ನಿವಾಸಿಗಳಾದ ಶ್ರೀಶೇಖರ್, ಅವರ ಪತ್ನಿ ಪ್ರೇಮಕುಮಾರಿ ಹಾಗೂ ಪುತ್ರ ವೆಂಕಟೇಶ್ ಅವರನ್ನು ಸಂಬಂಧಿಕರ ವಿಚಾರವಾಗಿ ಮಾತನಾಡುವ ನೆಪದಲ್ಲಿ ಮನೆಗೆ ಕರೆಸಿಕೊಂಡ ಮಾಜಿ ಸೈನಿಕ ವೆಂಕಟೇಶ್ ಏಕಾಏಕಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ಮೂವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ತಕ್ಷಣವೇ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ವಾರ್ತಾ ಭಾರತಿ 13 Mar 2026 12:49 pm

ಕುರಾನ್‌ನ ಕೆಲ ಅಂಶಗಳು ಸಂವಿಧಾನ ವಿರೋಧಿ ಎಂಬ ಬಗ್ಗೆ 4 ಪ್ರಶ್ನೆ ಕೇಳಿದ ಬಿಜೆಪಿ ಶಾಸಕ: ಸರ್ಕಾರ ಕೊಟ್ಟ ಉತ್ತರವೇನು?

ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಪಾಠ ಮಾಡುವ ಬಗ್ಗೆ, ಸರಕಾರಕ್ಕೆ ಅದರ ಕುರಿತು ಇರುವ ನಿಲುವುಗಳ ಬಗ್ಗೆ ಶಾಸಕ ಎನ್ ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ.

ವಿಜಯ ಕರ್ನಾಟಕ 13 Mar 2026 12:46 pm

Video Viral: ಗ್ರಾಹಕರೇ ಹುಷಾರ್! ಎಲ್‌ಪಿಜಿ ಸಿಲಿಂಡರ್ ಕಳ್ಳರಿದ್ದಾರೆ ಎಚ್ಚರಿಕೆ: ಕಳ್ಳರ ಕೈಚಳಕದ ಸಿಸಿಟಿವಿ ದೃಶ್ಯಗಳು ವೈರಲ್

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್‌ ಪೂರೈಕೆ ಕೊರತೆ ಸಮಸ್ಯೆಯು ಬೆಂಗಳೂರು, ಕರ್ನಾಟಕದಾದ್ಯಂತ ಸದ್ದು ಮಾಡುತ್ತಿದೆ. ಮೂರು ಪಟ್ಟು ಹಣ ನೀಡಿ ಅಡುಗೆ ಅನಿಲ ಕೊಳ್ಳುವ ಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸಿಲಿಂಡರ್‌ ಕಳ್ಳತನಗಳು ನಡೆಯುತ್ತಿವೆ. ದರ ಹೆಚ್ಚಾಯಿತೆಂದು ತಲೆ ಕೆಡಿಸಿಕೊಂಡ ಗ್ರಾಹಕರಿಗೆ ಈ ಕಳ್ಳರು ತಮ್ಮ ಕೈ ಚಳಕ ತೋರಿಸಿ ಆಘಾತ ನೀಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಒನ್ ಇ೦ಡಿಯ 13 Mar 2026 12:33 pm

ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್‌ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ

IPL SRH Kavya Maran: 2026ರ 'ದಿ ಹಂಡ್ರೆಡ್' ಕ್ರಿಕೆಟ್ ಹರಾಜಿನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಸನ್‌ರೈಸರ್ಸ್ ಲೀಡ್ಸ್ ಖರೀದಿಸಿದ ನಂತರ, ತಂಡದ ಸಹ-ಮಾಲೀಕರಾದ ಕಾವ್ಯಾ ಮಾರನ್ ಅವರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಐಪಿಎಲ್‌ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕತ್ವ ಹೊಂದಿರುವ 'ಸನ್ ಗ್ರೂಪ್', 'ಸನ್‌ರೈಸರ್ಸ್ ಲೀಡ್ಸ್' ಎಂಬ ಹೆಸರಿನಲ್ಲಿ ಪಾಕಿಸ್ತಾನದ

ಒನ್ ಇ೦ಡಿಯ 13 Mar 2026 12:28 pm

ಬೀದರ್ | ಕಲಾವಿದರ ಆಯ್ಕೆಗಾಗಿ ಅರ್ಜಿ ಆಹ್ವಾನ

ಬೀದರ್ : ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಚನ ಕಲ್ಯಾಣ ಎಂಬ ಅಹೋರಾತ್ರಿ ನಾಟಕವನ್ನು ಸಿದ್ಧಪಡಿಸಿ, ನಾಡಿನಾದ್ಯಂತ ಪ್ರದರ್ಶನ ಮಾಡಲು ಇಲಾಖೆ ಉದ್ದೇಶಿಸಿರುವುದರಿಂದ ನುರಿತ ಹಾಗೂ ಆಸಕ್ತ ಯುವಕ, ಯುವತಿಯರು, ಅನುಭವಿ ರಂಗಕಲಾವಿದರು ಹಾಗೂ ಗಾಯಕರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಯೋಮಿತಿ 18 ರಿಂದ 40 ವರ್ಷ ಒಳಗಿರಬೇಕು. ರಂಗಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಅರ್ಜಿಯ ನಮೂನೆಯನ್ನು ಕನ್ನಡ ಸಂಸ್ಕೃತಿ ಇಲಾಖೆಯ ವೆಬ್ ಸೈಟ್ kannadasiri.karnataka.gov.in ನಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳು ಮಾ.20ರ ಒಳಗಾಗಿ ಸದಸ್ಯ ಕಾರ್ಯದರ್ಶಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056. ಇಲ್ಲಿಗೆ ನೇರವಾಗಿ, ಅಂಚೆ ಮೂಲಕ ಅಥವಾ ಮೇಲ್ ವಿಳಾಸ : kanakaresearchcentre@gmail.com ದ ಮೂಲಕ ಸಲ್ಲಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಚನ ಕಲ್ಯಾಣ ನಾಟಕದ ನಿರ್ದೇಶಕ ಸಿ. ಬಸವಲಿಂಗಯ್ಯ ಮೊಬೈಲ್ ಸಂಪರ್ಕ ಸಂಖ್ಯೆ : 94485 38620 ಸಂಪರ್ಕ ಮಾಡಬಹುದು. ಸಂದರ್ಶನಕ್ಕೆ ಹಾಜರಾಗುವ ಕಲಾವಿದರಿಗೆ ಇಲಾಖೆಯು ಯಾವುದೇ ಭತ್ಯೆ ನೀಡಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ಭಾರತಿ 13 Mar 2026 11:51 am

ವೈಟ್‌ಫೀಲ್ಡ್‌ನಲ್ಲಿ ಮಹಿಳಾ ದಿನಾಚರಣೆ: ಸಮಾಜ ಸೇವೆಯಲ್ಲಿ ತೊಡಗಿರುವ ಮೂವರು ಮಹಿಳೆಯರಿಗೆ ಸನ್ಮಾನ

ಬೆಂಗಳೂರು: ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್, ವೈಟ್‌ಫೀಲ್ಡ್ ಹಾಗೂ ತೊದಲ್‌ನುಡಿ ಕನ್ನಡ ಮಾಸಪತ್ರಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮಾ.8 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುವಾದಕಿ ಹಾಗೂ ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ವಹಿಸಿದ್ದರು. ಕಾರ್ಯಕ್ರಮವನ್ನು ಕಾಡುಗೋಡಿ ಪ್ರಗತಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ  ಚಂದ್ರಕಾಂತ ನಾಯ್ಕ ಉದ್ಘಾಟಿಸಿದರು. ಆರ್ಟ್ ಆಫ್ ಲಿವಿಂಗ್ ಆಚಾರ್ಯ ಶ್ರೀನಿವಾಸ್ ಹಾಗೂ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ. ಶಂಕರ್ ಶುಭಾಶಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಮೂವರು ಮಹಿಳೆಯರನ್ನು ಸನ್ಮಾನಿಸಲಾಯಿತು. ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಲಕ್ಷ್ಮಮ್ಮ ಕೆ., ಇಮ್ಮಡಿಹಳ್ಳಿ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಅಂಜಲಿ ಹಾಗೂ ಬಿಬಿಎಂಪಿ ನಾಗರಿಕ ಸ್ವಚ್ಛತಾ ಕಾರ್ಯಕರ್ತೆ  ಪದ್ಮಮ್ಮ ಅವರನ್ನು ಸ್ಮರಣಿಕೆ, ಪ್ರಶಂಸಾಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸಮಾಜದ ದಿನನಿತ್ಯದ ಜೀವನದಲ್ಲಿ ಮಹತ್ವದ ಪಾತ್ರ ವಹಿಸುವ ಇಂತಹ ಮಹಿಳೆಯರ ಅಮೂಲ್ಯ ಸೇವೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಈ ಸನ್ಮಾನದ ಮುಖ್ಯ ಉದ್ದೇಶವಾಗಿತ್ತು ಎಂದು ಡಾ. ಸುಷ್ಮಾ ಶಂಕರ್ ಹೇಳಿದರು. ವಿಶೇಷವಾಗಿ ಕೋವಿಡ್ ನಂತಹ ಸಂದರ್ಭಗಳಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾಯಿತು.   ಕಾರ್ಯಕ್ರಮದ ಅಂಗವಾಗಿ ಪೋಷಕರು, ವಿದ್ಯಾರ್ಥಿಗಳು, ಕನ್ನಡ ಕಲಿಯುವವರು ಹಾಗೂ ಸನ್ಮಾನಿತರು ಒಟ್ಟಾಗಿ ಕೇಕ್ ಕತ್ತರಿಸಿ ಮಿಠಾಯಿ ಹಂಚಿಕೊಂಡು ಮಹಿಳಾ ದಿನಾಚರಣೆಯನ್ನು ಸಂಭ್ರಮಿಸಿದರು. ಮೂಲತಃ ಮಲಯಾಳಿಯಾದ 'ತೊದಲ್‌ನುಡಿ' ಮಾಸಪತ್ರಿಕೆಯ ಸಂಪಾದಕಿಯಾಗಿರುವ ಡಾ. ಸುಷ್ಮಾ ಶಂಕರ್ ಮಾತನಾಡಿ, ತೊದಲ್‌ನುಡಿ ಪತ್ರಿಕೆಯ ವತಿಯಿಂದ ಇದು 12ನೇ ಮಹಿಳಾ ದಿನಾಚರಣೆಯಾಗಿದೆ ಎಂದು ತಿಳಿಸಿದರು. ಇವರು ಹದಿನೇಳು ವರ್ಷಗಳಿಂದ ಉಚಿತವಾಗಿ ಅನ್ಯಭಾಷಿಕರಿಗೆ ಕನ್ನಡ ಹೇಳಿಕೊಡುತ್ತಿರುವುದುವಿಶೇಷವಾಗಿದೆ.   ಪ್ರೊ. ರಾಕೇಶ್ ವಿ. ಎಸ್ ಸ್ವಾಗತ ಭಾಷಣ ಮಾಡಿದರು ಹಾಗೂ ರೆಬಿನ್ ರವೀಂದ್ರನ್ ಧನ್ಯವಾದ ಸಲ್ಲಿಸಿದರು.        

ವಾರ್ತಾ ಭಾರತಿ 13 Mar 2026 11:51 am

ವೈಟ್‌ಫೀಲ್ಡ್‌| ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಸಮಾಜ ಸೇವಕಿಯರಿಗೆ ಸನ್ಮಾನ

ಬೆಂಗಳೂರು: ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್, ವೈಟ್‌ಫೀಲ್ಡ್ ಹಾಗೂ ತೊದಲ್‌ನುಡಿ ಕನ್ನಡ ಮಾಸಪತ್ರಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮಾ.8 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುವಾದಕಿ ಹಾಗೂ ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ವಹಿಸಿದ್ದರು. ಕಾರ್ಯಕ್ರಮವನ್ನು ಕಾಡುಗೋಡಿ ಪ್ರಗತಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ  ಚಂದ್ರಕಾಂತ ನಾಯ್ಕ ಉದ್ಘಾಟಿಸಿದರು. ಆರ್ಟ್ ಆಫ್ ಲಿವಿಂಗ್ ಆಚಾರ್ಯ ಶ್ರೀನಿವಾಸ್ ಹಾಗೂ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ. ಶಂಕರ್ ಶುಭಾಶಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಮೂವರು ಮಹಿಳೆಯರನ್ನು ಸನ್ಮಾನಿಸಲಾಯಿತು. ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಲಕ್ಷ್ಮಮ್ಮ ಕೆ., ಇಮ್ಮಡಿಹಳ್ಳಿ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಅಂಜಲಿ ಹಾಗೂ ಬಿಬಿಎಂಪಿ ನಾಗರಿಕ ಸ್ವಚ್ಛತಾ ಕಾರ್ಯಕರ್ತೆ  ಪದ್ಮಮ್ಮ ಅವರನ್ನು ಸ್ಮರಣಿಕೆ, ಪ್ರಶಂಸಾಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸಮಾಜದ ದಿನನಿತ್ಯದ ಜೀವನದಲ್ಲಿ ಮಹತ್ವದ ಪಾತ್ರ ವಹಿಸುವ ಇಂತಹ ಮಹಿಳೆಯರ ಅಮೂಲ್ಯ ಸೇವೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಈ ಸನ್ಮಾನದ ಮುಖ್ಯ ಉದ್ದೇಶವಾಗಿತ್ತು ಎಂದು ಡಾ. ಸುಷ್ಮಾ ಶಂಕರ್ ಹೇಳಿದರು. ವಿಶೇಷವಾಗಿ ಕೋವಿಡ್ ನಂತಹ ಸಂದರ್ಭಗಳಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾಯಿತು.   ಕಾರ್ಯಕ್ರಮದ ಅಂಗವಾಗಿ ಪೋಷಕರು, ವಿದ್ಯಾರ್ಥಿಗಳು, ಕನ್ನಡ ಕಲಿಯುವವರು ಹಾಗೂ ಸನ್ಮಾನಿತರು ಒಟ್ಟಾಗಿ ಕೇಕ್ ಕತ್ತರಿಸಿ ಮಿಠಾಯಿ ಹಂಚಿಕೊಂಡು ಮಹಿಳಾ ದಿನಾಚರಣೆಯನ್ನು ಸಂಭ್ರಮಿಸಿದರು. ಮೂಲತಃ ಮಲಯಾಳಿಯಾದ 'ತೊದಲ್‌ನುಡಿ' ಮಾಸಪತ್ರಿಕೆಯ ಸಂಪಾದಕಿಯಾಗಿರುವ ಡಾ. ಸುಷ್ಮಾ ಶಂಕರ್ ಮಾತನಾಡಿ, ತೊದಲ್‌ನುಡಿ ಪತ್ರಿಕೆಯ ವತಿಯಿಂದ ಇದು 12ನೇ ಮಹಿಳಾ ದಿನಾಚರಣೆಯಾಗಿದೆ ಎಂದು ತಿಳಿಸಿದರು. ಇವರು ಹದಿನೇಳು ವರ್ಷಗಳಿಂದ ಉಚಿತವಾಗಿ ಅನ್ಯಭಾಷಿಕರಿಗೆ ಕನ್ನಡ ಹೇಳಿಕೊಡುತ್ತಿರುವುದುವಿಶೇಷವಾಗಿದೆ.   ಪ್ರೊ. ರಾಕೇಶ್ ವಿ. ಎಸ್ ಸ್ವಾಗತ ಭಾಷಣ ಮಾಡಿದರು ಹಾಗೂ ರೆಬಿನ್ ರವೀಂದ್ರನ್ ಧನ್ಯವಾದ ಸಲ್ಲಿಸಿದರು.        

ವಾರ್ತಾ ಭಾರತಿ 13 Mar 2026 11:51 am

LPG ಕೊರತೆ ಬಗ್ಗೆ ಜನರಲ್ಲಿ ಆತಂಕ ಸೃಷ್ಟಿಸೋರ ವಿರುದ್ದ ಪ್ರಧಾನಿ ಮೋದಿ ಕಿಡಿ: ಬ್ಲಾಕ್‌ ಮಾರ್ಕೆಟ್‌ ದಂಧೆಗೆ ಬ್ರೇಕ್‌ ಹಾಕಲು ರಾಜ್ಯಗಳಿಗೆ ಸೂಚನೆ

ಮಧ್ಯಪ್ರಾಚ್ಯದಲ್ಲಿನ ಯುದ್ದದಿಂದಾಗಿ ಸದ್ಯ ದೇಶದಲ್ಲಿ LPG ಪೂರೈಕೆಯಲ್ಲಿನ ವ್ಯತ್ಯಯಗಳನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಗ್ರಾಹಕರಲ್ಲಿ ಭೀತಿಯನ್ನುಂಟು ಮಾಡುವ ಕಾರ್ಯಕ್ಕೆ ಮುಂದಾಗುತ್ತಿದ್ದು, ಇಂತವರಿಂದ ದೇಶಕ್ಕೆ ಹಾನಿಯುಂಟಾಗುತ್ತಿದೆ ಎಂದು ಪ್ರಧಾನಿ ಮೋದಿಯವರು ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲದೆ,ಈ ಸಮಯವನ್ನು ಉಪಯೋಗಿಸಿಕೊಂಡು ಕಪ್ಪು ಮಾರುಕಟ್ಟೆಯಲ್ಲಿನ ದಂಧೆಯಲ್ಲಿ ತೊಡಗಿಸಿಕೊಳ್ಳುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಯುದ್ದದಿಂದಾಗಿ ಎಲ್ಲಾ ದೇಶಗಳೂ ಸಹ ಪ್ರಭಾವಿತವಾಗಿದ್ದು, ಭಾರತದ ಇಂಧನ ಭದ್ರತೆಯನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯ ಕರ್ನಾಟಕ 13 Mar 2026 11:50 am

ಹುಲಸೂರ್ ತಾಲೂಕಿನಲ್ಲಿ ನೀರಿನ ಸಮಸ್ಯೆಗೆ ಸಹಾಯವಾಣಿ ಬಿಡುಗಡೆ : ಮಹಾದೇವ ಜಮ್ಮು

ಹುಲಸೂರ್ : ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನರಿಗೆ ಈ ಸಾಲಿನ ಬೇಸಿಗೆ ಕಾಲದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಹಾಯವಾಣಿ ಬಿಡುಗಡೆ ಮಾಡಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು ಅವರು ತಿಳಿಸಿದ್ದಾರೆ. ತಾಲೂಕಿನ 7 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ಸಾರ್ವಜನಿಕರು ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಅಥವಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಸಹಾಯವಾಣಿ ಸಂಖ್ಯೆಗಳು : ತಾಲೂಕು ಪಂಚಾಯತ್ ಹುಲಸೂರ್ : 94481 96205, ಹುಲಸೂರ್ ಪಿಡಿಒ ವಿನಾಯಕುಮಾರ್ : 73535 17731, ಗಡಿಗೌಡಗಾಂವ್ ಪಿಡಿಒ ಬಸವರಾಜ್ : 95380 82666, ತೋಗಲೂರ್ ಪಿಡಿಒ ಜ್ಯೋತಿ : 84312 69177, ಬೇಲೂರ್ ಪಿಡಿಒ ಬಸವರಾಜ್ : 91644 62601, ಮಿರಖಲ್ ಪಿಡಿಒ ಸಿದಲಿಂಗ್ : 97315 57611, ಮುಚಳಂಬ ಪಿಡಿಒ ಮಹಾರುದ್ರ: 99724 75314, ಗೋರಟಾ(ಬಿ) ಪಿಡಿಒ ಸಿದಲಿಂಗ್ : 97315 57611 ಈ ಗ್ರಾಮ ಪಂಚಾಯಿತ್ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿ ಸಮಸ್ಯೆ ತಿಳಿಸಲು ಅವರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ವಾರ್ತಾ ಭಾರತಿ 13 Mar 2026 11:48 am

ಸೌಹಾರ್ದದ ಕೊಂಡಿಯಾಗುತ್ತಿರುವ ಇಫ್ತಾರ್ ಕೂಟಗಳು

ದೇಶದಾದ್ಯಂತ ರಮಝಾನ್ ಪವಿತ್ರ ಮಾಸದ ಸಡಗರ ಮನೆಮಾಡಿದೆ. ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿದ್ದ ಉಪವಾಸದ ಪಾರಣೆ (ಇಫ್ತಾರ್), ಇಂದು ಜಾತಿ-ಧರ್ಮಗಳ ಹಂಗು ಮೀರಿ ಸಮಾಜವನ್ನು ಒಗ್ಗೂಡಿಸುವ ‘ಸೌಹಾರ್ದ ಕೊಂಡಿ’ಯಾಗಿ ರೂಪಾಂತರಗೊಳ್ಳುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಾಗೂ ರಾಜ್ಯದ ಬೀದರ್‌ನಿಂದ ಚಾಮರಾಜನಗರದವರೆಗೆ ಆಯೋಜನೆಯಾಗುತ್ತಿರುವ ಸೌಹಾರ್ದ ಇಫ್ತಾರ್ ಕೂಟಗಳು ಇಂದು ಹಿಂದೂ-ಮುಸ್ಲಿಮ್ ಬಾಂಧವ್ಯದ ಹೊಚ್ಚ ಹೊಸ ಕೊಡಿಗಳಾಗಿ ಚಿಗುರುತ್ತಿವೆ. ಗೋಗೇರಿಯಲ್ಲಿ ಮೆರೆದ ಮನುಷ್ಯತ್ವ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮವು ಇಂದು ರಾಜ್ಯಕ್ಕೇ ಮಾದರಿಯಾಗಿದೆ. ಅಲ್ಲಿನ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟವು ಮೈತ್ರಿಯನ್ನು ನವೀಕರಿಸಿದೆ. ‘ಶರಣರ ಬರುವಿಕೆಗೆ ಪ್ರಾಣ ಜೀವಾಳವಯ್ಯ’ ಎಂಬ ವಚನದ ಸಾಲುಗಳ ಅಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಮ್ ಸಮುದಾಯದವರು ಪ್ರಾರ್ಥನೆ ಸಲ್ಲಿಸಿ, ಉಪವಾಸ ತೊರೆದಿದ್ದು ಭಾವೈಕ್ಯದ ಹೊಸ ಆಯಾಮವನ್ನು ತೆರೆದಿಟ್ಟಿತು. ರಾಜ್ಯದ ಉದ್ದಗಲಕ್ಕೂ ಸಾಮರಸ್ಯದ ಸಿಂಚನ ಬೀದರ್‌ನ ಬಿಸಿಲಿನಿಂದ ಚಾಮರಾಜನಗರದ ಹಸಿರಿನವರೆಗೆ ಈ ಇಫ್ತಾರ್ ಕೂಟಗಳು ಮನುಷ್ಯತ್ವದ ಸಂದೇಶ ಸಾರುತ್ತಿವೆ: ಕಲಬುರಗಿ-ಬೀದರ್: ಸೂಫಿ-ಶರಣರ ಈ ನಾಡಿನಲ್ಲಿ ದರ್ಗಾ ಮತ್ತು ಶರಣರ ಅನುಭವ ಮಂಟಪದ ತತ್ವಗಳು ಒಂದಾಗಿವೆ. ಇಲ್ಲಿನ ಹಿಂದೂ ಬಾಂಧವರು ಮುಸ್ಲಿಮ್ ನೆರೆಹೊರೆಯವರಿಗಾಗಿ ಇಫ್ತಾರ್ ಆಯೋಜಿಸುವ ಮೂಲಕ ‘ಗಂಗಾ-ಜಮುನಾ’ ಸಂಸ್ಕೃತಿಯನ್ನು ಜೀವಂತವಾಗಿರಿಸಿದ್ದಾರೆ. ವಿಜಯಪುರ: ಆದಿಲ್‌ಶಾಹಿಗಳ ನಾಡಿನ ಪರಂಪರೆಯಂತೆ ಇಂದಿಗೂ ಇಲ್ಲಿ ಹಿಂದೂ-ಮುಸ್ಲಿಮ್ ಸಹೋದರರು ಭಾವೈಕ್ಯದಿಂದ ಬಾಳುತ್ತಿದ್ದಾರೆ. ಮಸೀದಿ-ದರ್ಗಾಗಳಲ್ಲಿ ಹಿಂದೂಗಳು ಮತ್ತು ದೇವಸ್ಥಾನಗಳ ಹಬ್ಬಗಳಲ್ಲಿ ಮುಸ್ಲಿಮರು ಸಕ್ರಿಯವಾಗಿ ಪಾಲ್ಗೊಳ್ಳುವ ಸಂಪ್ರದಾಯ ಇಫ್ತಾರ್ ಮೂಲಕ ಮತ್ತಷ್ಟು ಗಟ್ಟಿಯಾಗುತ್ತಿದೆ. ಮಂಗಳೂರು-ಚಾಮರಾಜನಗರ: ಕರಾವಳಿಯ ಧಾರ್ಮಿಕ ಕೇಂದ್ರಗಳು ಹಾಗೂ ಮಲೆ ಮಹದೇಶ್ವರನ ನಾಡಿನ ವಿವಿಧ ಸಮಿತಿಗಳು ಮುಸ್ಲಿಮ್ ಬಾಂಧವರಿಗಾಗಿ ಇಫ್ತಾರ್ ಆಯೋಜಿಸಿವೆ. ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ನೇತೃತ್ವದಲ್ಲಿ ನಡೆದ ಕೂಟದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮೀಜಿ ಪಾಲ್ಗೊಂಡು, ‘‘ಎಲ್ಲರ ಮನಸ್ಸು ಒಗ್ಗೂಡಿದರೆ ಶಾಂತಿ ತನ್ನಿಂದ ತಾನೇ ಬರುತ್ತದೆ’’ ಎಂದು ಹಾರೈಸಿದರು. ಬೆಂಗಳೂರು: ಐಟಿ ಹಬ್‌ನ ಫ್ರೇಝರ್ ಟೌನ್ ಮತ್ತು ಶಿವಾಜಿನಗರದ ಮಾರುಕಟ್ಟೆಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರ್‌ಗಳಿಂದ ಹಿಡಿದು ಕೂಲಿ ಕಾರ್ಮಿಕರವರೆಗೆ ಎಲ್ಲರೂ ಒಂದೇ ಪಂಕ್ತಿಯಲ್ಲಿ ಕುಳಿತು ಇಫ್ತಾರ್ ಸವಿಯುತ್ತಿರುವುದು ನಗರದ ಬೆರೆತು ಬದುಕುವ ಗುಣಕ್ಕೆ ಸಾಕ್ಷಿಯಾಗಿದೆ. ಶಹಾಪುರ:ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಳ್ಳಿ ಗ್ರಾಮದಲ್ಲಿ ಡಾ. ಭೀಮಣ್ಣ ಮೇಟಿ ಅವರ ನೇತೃತ್ವದಲ್ಲಿ ವಿಶೇಷ ಇಫ್ತಾರ್ ಕೂಟ ಜರುಗಿತು. ಜಾತಿ-ಮತಗಳ ಭೇದ ಮರೆತು ಗ್ರಾಮಸ್ಥರು ಒಂದೆಡೆ ಸೇರಿ ಉಪವಾಸ ತೊರೆದರು. ‘‘ರಮಝಾನ್ ಮಾಸವು ತ್ಯಾಗ, ಸಹನೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕ. ಇಂತಹ ಕೂಟಗಳು ಸಮಾಜದಲ್ಲಿ ಒಗ್ಗಟ್ಟು ಬೆಳೆಸಲು ಸಹಕಾರಿ ಎಂದು’’ ಡಾ. ಮೇಟಿ ಅಭಿಪ್ರಾಯಪಟ್ಟರು. ದೇಶವನ್ನೇ ಬೆಸೆದ ಪ್ರೀತಿಯ ಇಫ್ತಾರ್ ಕಾಶ್ಮೀರದ ಹಿಮಪದರಗಳಿಂದ ಕನ್ಯಾಕುಮಾರಿಯ ಕಡಲತೀರದ ವರೆಗೆ ಭಾರತದ ವೈವಿಧ್ಯ ಇಲ್ಲಿ ಅನಾವರಣಗೊಂಡಿದೆ. ವಾರಣಾಸಿಯ ಗಂಗೆಯ ತಟದಿಂದ ಭೀಮಾತೀರದವರೆಗೆ ಹಿಂದೂಗಳು ಮುಸ್ಲಿಮರಿಗಾಗಿ ಇಫ್ತಾರ್ ವ್ಯವಸ್ಥೆ ಮಾಡುವ ಮೂಲಕ ‘ವಸುಧೈವ ಕುಟುಂಬಕಂ’ ತತ್ವಕ್ಕೆ ಜೀವ ತುಂಬುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಮಾಜದಲ್ಲಿ ಸೃಷ್ಟಿಯಾಗು ತ್ತಿರುವ ಬಿರುಕುಗಳ ನಡುವೆ, ಇಂತಹ ಇಫ್ತಾರ್ ಕೂಟಗಳು ಮದ್ದು ಅರೆಯುವ ಕೆಲಸ ಮಾಡುತ್ತಿವೆ. ಇವು ಕೇವಲ ಹೊಟ್ಟೆ ತುಂಬಿಸುವ ಕಾರ್ಯಕ್ರಮಗಳಲ್ಲ, ಬದಲಿಗೆ ಪರಸ್ಪರರ ಸಂಸ್ಕೃತಿಯ ಬಗ್ಗೆ ಗೌರವ ಮೂಡಿಸುವ ಸೌಹಾರ್ದದ ಬೆಲೆಕಟ್ಟಲಾಗದ ಕೊಂಡಿಗಳು.

ವಾರ್ತಾ ಭಾರತಿ 13 Mar 2026 11:46 am

Gold Rate Fall: ಡಾಲರ್ ಮೌಲ್ಯ ಹೆಚ್ಚಳದಿಂದ, 1.47 ಲಕ್ಷಕ್ಕೆ ಇಳಿದ ಆಭರಣ ಚಿನ್ನದ ಬೆಲೆ: ಬೆಳ್ಳಿ ಬೆಲೆ ತಟಸ್ಥ

ಚಿನ್ನ ಬೆಳ್ಳಿ ದರದಲ್ಲಿ ಸತತ ಎರಡನೇ ದಿನವೂ ಇಳಿಕೆಯಾಗಿದ್ದು, ಆಭರಣ ಚಿನ್ನದ ಬೆಲೆ ಈಗ 1 ಲಕ್ಷದ 47ಕ್ಕೆ ಇಳಿದಿದೆ.

ವಿಜಯ ಕರ್ನಾಟಕ 13 Mar 2026 11:40 am

Renewable Energy : ಭಾರತದ ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿ - ಅಗ್ರಸ್ಥಾನಕ್ಕೇರಿದ ಹಸಿರು ಇಂಧನ

Renewable energy in India : ಭಾರತದ ಒಟ್ಟು ಸ್ಥಾಪಿತ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನ' ಮೂಲಗಳ ಪಾಲು 2,63,189 ಮೆಗಾವ್ಯಾಟ್. ವರ್ಷದಿಂಡ ವರ್ಷಕ್ಕೆ ಸ್ಥಾಪಿತ ವಿದ್ಯುತ್ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದು ದೇಶ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ಕೊಡಬಹುದಾದ ಉದಾಹರಣೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯ ಪಟ್ಟಿದ್ದಾರೆ.

ವಿಜಯ ಕರ್ನಾಟಕ 13 Mar 2026 11:16 am

Gold Rate March 13: ಟ್ರಂಪ್ ಹೇಳಿಕೆ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ

Gold Rate March 13: ಚಿನ್ನದ ಬೆಲೆಯು ಸತತ ಎರಡನೇ ದಿನವೂ ಇಳಿಕೆಯಾಗಿದೆ. ಮಧ್ಯಪ್ರಾಚ್ಯಾದಲ್ಲಿ ಯುದ್ಧದ ತೀವ್ರತೆ ಕಡಿಮೆಯಾಗುತ್ತಿರುವುದು ಹಾಗೂ ಯಾವುದೇ ಕ್ಷಣದಲ್ಲಾದರೂ ಇರಾನ್ Vs ಇಸ್ರೇಲ್ ಯುದ್ಧ ನಿಲ್ಲಬಹುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದಾರೆ. ಇದು ಸೇರಿದಂತೆ ಹಲವು ಕಾರಣಗಳಿಗೆ ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಕಳೆದ ಕೆಲವು

ಒನ್ ಇ೦ಡಿಯ 13 Mar 2026 11:11 am

ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion

ಇಸ್ರೇಲ್ ಸೇನೆ ಹಾಗೂ ಇಸ್ರೇಲ್ ದೇಶದ ಗುಪ್ತಚರ ಇಲಾಖೆಗಳು ಮತ್ತೊಂದು ದೊಡ್ಡ ಆಘಾತವನ್ನು ತನ್ನ ಶತ್ರು ಇರಾನ್‌ಗೆ ನೀಡಿವೆ. ಇರಾನ್ ದೇಶವನ್ನು ಹೇಗಾದರೂ ಮಾಡಿ ಹಿಡಿತಕ್ಕೆ ತೆಗೆದುಕೊಂಡು ಅಲ್ಲಿನ ಆಡಳಿತ ನಿಯಂತ್ರಿಸಬೇಕು ಎಂಬುದು ಇಸ್ರೇಲ್ ಹಾಗೂ ಅಮೆರಿಕದ ಉದ್ದೇಶ ಎಂಬ ಆರೋಪ ಇದೆ. ಆದರೆ ಇರಾನ್ ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಇದ್ದು, ಅದನ್ನು ತೊಲಗಿಸಲು ನಾವು ಈ

ಒನ್ ಇ೦ಡಿಯ 13 Mar 2026 11:07 am

ಕಾಬೂಲ್‌ ಸೇರಿ ವಿವಿಧ ಪ್ರದೇಶಗಳ ಮೇಲೆ ಪಾಕಿಸ್ತಾನ ದಾಳಿ, 4ಜನ ಸಾವು: ಪಾಕ್‌ ದಾಳಿಗೆ ತಾಲಿಬಾನ್‌ ನಿಂದ ತಕ್ಕ ಶಾಸ್ತಿಯ ಎಚ್ಚರಿಕೆ!

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದ ಅಘ್ಪಾನ್ ರಾಜಧಾನಿ ಕಾಬೂಲ್‌ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ಪಾಕ್‌ ವೈಮಾನಿಕ ಬಾಂಬ್‌ ದಾಳಿ ನಡೆಸಿದ್ದು, ಇದರಿಂದಾಗಿ 4 ಜನ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆಂದು ಅಫ್ಘಾನ್‌ ತಿಳಿಸಿದೆ. ಈ ದಾಳಿಗಳ ಕುರಿತು ಮಾಹಿತಿ ನೀಡುತ್ತಾ ಪಾಕ್‌ ಮಾಹಿತಿ ಸಚಿವ ಈವರೆಗಿನ ದಾಳಿಗಳಲ್ಲಿ ಅಫ್ಘಾನಿಸ್ತಾನದ 641 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದು, ಇದೆಲ್ಲಾ ಸುಳ್ಳು ಹಾಗೂ ಆಧಾರರಹಿತ ಎಂದು ತಾಲಿಬಾನಿ ಖಂಡನೆ ವ್ಯಕ್ತಪಡಿಸಿದ್ದು, ಈ ದಾಳಿಗಳಿಗೆ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದೆ.

ವಿಜಯ ಕರ್ನಾಟಕ 13 Mar 2026 10:48 am

ತಮಿಳುನಾಡು ಚುನಾವಣೆ: ದ್ರಾವಿಡ v/s ರಾಷ್ಟ್ರೀಯವಾದಿ ಸಿದ್ಧಾಂತದ ಹಣಾಹಣಿ

ಒಕ್ಕೂಟ ಸರಕಾರದ ಹೂಟ ತಮಿಳುನಾಡಿನಲ್ಲಿ ನಡೆಯಬಾರದು; ಪೆರಿಯಾರ್ ಜಾಡು, ವಿಚಾರವಾದ-ಸ್ವಾಭಿಮಾನ ಚಳವಳಿ ಹಾಗೂ ಕಟ್ಟರ್ ಭಾಷಾ ಪ್ರೇಮಿಗಳಾದ ತಮಿಳರು ಹಿಂದಿ ಹೇರಿಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಅಲ್ಪಸಂಖ್ಯಾತರ ದ್ವೇಷ ಹಾಗೂ ಕೋಮುವಾದಕ್ಕೆ ಸಮರ್ಥವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಆಶಿಸೋಣ. ತಮಿಳುನಾಡು ವಿಧಾನಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿವೆ. ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ, ನಟ ವಿಜಯ್ ಅವರನ್ನು ಕರೂರು ಕಾಲ್ತುಳಿತ ಹಾಗೂ ವಿಚ್ಛೇದನ ಪ್ರಕರಣಗಳು ಕಾಡುತ್ತಿವೆ. ಎಐಎಡಿಎಂಕೆ ನಿಶ್ಯಕ್ತವಾಗಿದೆ ಮತ್ತು ಬಿಜೆಪಿಯ ಕೋಮುವಾದಿ ಸಂಕಥನಗಳಿಗೆ ಜನ ಮರುಳಾದಂತೆ ಕಾಣುತ್ತಿಲ್ಲ. ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರಕಾರ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳಕ್ಕೆ ವರ್ಗಾಯಿಸಿದೆ. ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ(ಎಸ್‌ಪಿಎ)ವು ಕಾಂಗ್ರೆಸ್‌ಗೆ 28 ವಿಧಾನಸಭೆ ಹಾಗೂ ಒಂದು ರಾಜ್ಯಸಭೆ ಸ್ಥಾನ ನೀಡಲು ಸಮ್ಮತಿಸಿದೆ. ಎಐಸಿಸಿ ತಮಿಳುನಾಡು ಉಸ್ತುವಾರಿ ಗಿರೀಶ್ ಜೋಡನ್ಕರ್ ಅವರ ‘‘ಟಿವಿಕೆ ನಾಯಕ ವಿಜಯ್‌ಗೆ ಕಾಂಗ್ರೆಸ್ ಶಕ್ತಿ ಏನು ಎಂಬುದು ಗೊತ್ತಿದೆ’’ ಎಂಬ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಡಿಎಂಕೆ, ಮಾತುಕತೆ ಸ್ಥಗಿತಗೊಳಿಸಿತ್ತು. ಮಧ್ಯಪ್ರವೇಶಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕಿ ಸೋನಿಯಾ ಗಾಂಧಿ, ಸಂಧಾನದ ಹೊಣೆಯನ್ನು ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ವಹಿಸಿದ್ದರು. ಕಾಂಗ್ರೆಸ್‌ಗೆ 2016ರಲ್ಲಿ 41 ಮತ್ತು 2021ರಲ್ಲಿ 25 ಸ್ಥಾನ ನೀಡಲಾಗಿತ್ತು. 234 ಸದಸ್ಯ ಬಲದ ಶಾಸನಸಭೆ; 16ನೇ ವಿಧಾನಸಭೆಯಲ್ಲಿ ಎಸ್‌ಪಿಎ 158(ಡಿಎಂಕೆ 133, ಕಾಂಗ್ರೆಸ್ 17, ವಿಸಿಕೆ 4, ಸಿಪಿಐ(ಎಂ) ಮತ್ತು ಸಿಪಿಐ ತಲಾ 2), ಪ್ರತಿಪಕ್ಷಗಳು 67(ಎಐಎಡಿಎಂಕೆ 60, ಬಿಜೆಪಿ 4, ಪಿಎಂಕೆ 3) ಮತ್ತು ಇಬ್ಬರು ಪಿಎಂಕೆ(ಆರ್) ಶಾಸಕರಿದ್ದು, 7 ಸ್ಥಾನಗಳು ಖಾಲಿ ಇವೆ. ಪ್ರಗತಿಪರ ರಾಜ್ಯ ತಮಿಳುನಾಡು ಅತ್ಯಂತ ಪ್ರಗತಿಪರ ರಾಜ್ಯ ಹಾಗೂ ದೇಶದ 2ನೇ ಅತಿ ದೊಡ್ಡ ಆರ್ಥಿಕತೆ. ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮವನ್ನು ಪ್ರಾರಂಭಿಸಿದ ಶ್ರೇಯಸ್ಸು ಕೂಡ ರಾಜ್ಯಕ್ಕೆ ಸಲ್ಲುತ್ತದೆ (ಜುಲೈ 2017ರಲ್ಲಿ ಎಂ.ಜಿ. ರಾಮಚಂದ್ರನ್ ಆರಂಭಿಸಿದರು). ರಾಜ್ಯ ಮುಂದಿನ ಹಂತಕ್ಕೆ ಸ್ಥಿತ್ಯಂತರಗೊಳ್ಳಬೇಕೆಂದರೆ, ಸಂಶೋಧನೆ-ಅಭಿವೃದ್ಧಿಯಲ್ಲಿ ನಿರಂತರ ಹೂಡಿಕೆ ಹಾಗೂ ರಫ್ತಿನಲ್ಲಿ ವೈವಿಧ್ಯೀಕರಣ ಅಗತ್ಯವಿದೆ. ಇದು ಉತ್ತಮ ಆಡಳಿತ ಹಾಗೂ ಹಣಕಾಸು ಸ್ವಾಯತ್ತೆಯಿಂದ ಮಾತ್ರ ಸಾಧ್ಯ. ಕುಟುಂಬ ರಾಜಕಾರಣ, ಕ್ರೋನಿ ಬಂಡವಾಳಶಾಹಿ ಮತ್ತು ಉಚಿತ ಕೊಡುಗೆಗಳ ನಡುವೆಯೂ ಕೈಗಾರಿಕೀಕರಣ ಹಾಗೂ ಅಭಿವೃದ್ಧಿಯನ್ನು ಒಳಗೊಂಡ ಆಡಳಿತ ಮಾದರಿಯೊಂದು ಇದೆ. 2024ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿಎ(ಡಿಎಂಕೆ, ಕಾಂಗ್ರೆಸ್, ವಿಸಿಕೆ ಮತ್ತು ಎಡ ಪಕ್ಷಗಳ ಮೈತ್ರಿ ಕೂಟ), ಎಲ್ಲ 39 ಸ್ಥಾನ ಗೆದ್ದಿತ್ತು. ಈ ಮೈತ್ರಿಕೂಟ ರಾಜ್ಯದಲ್ಲಿ ಮಾತ್ರವಲ್ಲ; ರಾಷ್ಟ್ರಮಟ್ಟದಲ್ಲೂ ಕೇಂದ್ರೀಕರಣ, ಹಿಂದುತ್ವ ಹಾಗೂ ಬಹುತ್ವವಾದವನ್ನು ಪ್ರೋತ್ಸಾಹಿಸುವ ಬಿಜೆಪಿ ವಿರೋಧಿ ಗುಂಪಿನ ಪ್ರಮುಖ ಕೊಂಡಿ. ಒಂದು ವೇಳೆ ಮೈತ್ರಿಗೆ ಒಪ್ಪಿಕೊಳ್ಳದೆ ಹೋಗಿದ್ದರೆ, ಹೆಚ್ಚು ನಷ್ಟ ಆಗುತ್ತಿದ್ದುದು ಕಾಂಗ್ರೆಸ್‌ಗೆ. ರಾಜ್ಯದಲ್ಲಿ ದ್ರಾವಿಡ ಚಳವಳಿ, ವಿಚಾರವಾದಿ ಚಳವಳಿ, ಸ್ವಾಭಿಮಾನ ಚಳವಳಿ ಹಾಗೂ ಸಿನೆಮಾ/ಸಂಗೀತ ಹಾಗೂ ಜನಪ್ರಿಯ ಸಂಸ್ಕೃತಿಯಿಂದ ರೂಪುಗೊಂಡ ಜಾಗೃತ ಮತದಾರರು ಇದ್ದಾರೆ. ಉತ್ತರ ಮತ್ತು ಪಶ್ಚಿಮದ ರಾಜ್ಯಗಳಲ್ಲಿ ಚುನಾವಣೆಯನ್ನು ಗೆಲ್ಲಲು ಒಂದಿಷ್ಟು ಉಚಿತ ಕೊಡುಗೆಗಳು ಹಾಗೂ ಅಲ್ಪಸಂಖ್ಯಾತರ ದೂಷಣೆ ಸಾಕಾಗಬಹುದು; ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಒದಗಣೆ, ಶಿಕ್ಷಣ-ಆರೋಗ್ಯ ರಕ್ಷಣೆ ಇತ್ಯಾದಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಾಧನೆ ಮತ್ತು ಸಾಂಸ್ಥಿಕ ನೈತಿಕತೆ ಇಲ್ಲದಿದ್ದರೂ ಗೆಲ್ಲಬಹುದೇನೋ. ತಮಿಳುನಾಡು ಕೋಮುವಾದಿ ಸಂಕಥನಗಳನ್ನು ತಡೆದಿದೆ. ರಾಜ್ಯದಲ್ಲಿ ಅಧಿಕಾರ ಡಿಎಂಕೆ ಮತ್ತು ಎಐಎಡಿಂಕೆ ನಡುವೆ ಬದಲಾಗುತ್ತಿರುತ್ತದೆ. ಎಸ್‌ಪಿಎ ಮೈತ್ರಿ ಕೂಟಕ್ಕೆ ದಿವಂಗತ ವಿಜಯಕಾಂತ್ ಅವರ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ(ಡಿಎಂಡಿಕೆ) ಮತ್ತು ಒ. ಪನ್ನೀರ್‌ಸೆಲ್ವನ್ ಸೇರ್ಪಡೆಯಾಗಿದ್ದಾರೆ. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಪನ್ನೀರ್‌ಸೆಲ್ವನ್, ಸೈದ್ಧಾಂತಿಕ ಬದ್ಧತೆ ಇಲ್ಲದ ಮತ್ತು ಬಿಜೆಪಿಯನ್ನು ಆಧರಿಸಿದ್ದ ರಾಜಕಾರಣಿ. ಟಿವಿಕೆ ಮತ್ತು ಸೆನ್‌ತಮಿಳನ್ ಸೀಮನ್ ನೇತೃತ್ವದ ನಾಮ್ ತಮಿಳ್ ಕಚ್ಚಿ ಮತ ಸೆಳೆಯುವ ಸಾಧ್ಯತೆ ಇರುವಾಗ ಮತ್ತು ಗೆಲುವು ಮುಖ್ಯವಾಗಿರುವಾಗ, ಇಂಥ ಸೇರ್ಪಡೆ ಸರಿ ಎನ್ನಿಸಬಹುದು. ಆದರೆ, ಇದರಿಂದ ಮೈತ್ರಿಕೂಟ ತನ್ನ ಸೈದ್ಧಾಂತಿಕ ವೈಶಿಷ್ಟ್ಯವನ್ನು ಕಳೆದುಕೊಳ್ಳುತ್ತದೆ. ಟಿವಿಕೆ ಸಮಸ್ಯೆ ಸಿ.ಎನ್. ಅಣ್ಣಾದುರೈ, ಎಂ.ಜಿ. ರಾಮಚಂದ್ರನ್, ಎಂ. ಕರುಣಾನಿಧಿ ಮತ್ತು ಜೆ. ಜಯಲಲಿತಾ ಸಿನೆಮಾದಿಂದ ರಾಜಕಾರಣಕ್ಕೆ ಬಂದವರು. ರಾಜಕೀಯ ಪ್ರವೇಶಕ್ಕೆ ಪ್ರಯತ್ನಿಸಿದ ರಜನಿಕಾಂತ್, ಕೊನೆಗೆ ಹಿಂಜರಿದರು. ಈ ಸಾಲಿಗೆ ಸೇರ್ಪಡೆ- ವಿಜಯ್. ಅಕ್ಟೋಬರ್ 2024ರಲ್ಲಿ ‘’ನಮ್ಮ ನಾಯಕತ್ವವನ್ನು ಒಪ್ಪಿಕೊಳ್ಳುವ ಪಕ್ಷದೊಂದಿಗೆ ಅಧಿಕಾರ ಹಂಚಿಕೊಳ್ಳಲು ಸಿದ್ಧವಿದ್ದೇವೆ’’ ಎಂದು ವಿಜಯ್ ಹೇಳಿದ್ದರು. ಡಿಎಂಕೆ ನೇತೃತ್ವದ ಎಸ್‌ಪಿಎ ಅನ್ನು ಮುರಿಯುವುದು ಅವರ ಉದ್ದೇಶವಾಗಿತ್ತು. ಫೆಬ್ರವರಿ 3, 2026ರಂದು ‘ತಮ್ಮ ಹೇಳಿಕೆ ರಾಜಕೀಯ ಬಾಂಬ್. ಇದರಿಂದ ಡಿಎಂಕೆಯಿಂದ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಎಐಎಡಿಎಂಕೆ ಅಧಿಕಾರದಲ್ಲಿ ಪಾಲು ಕೇಳುತ್ತಿವೆ’ ಎಂದು ನುಡಿದಿದ್ದರು. ಇತ್ತೀಚೆಗೆ ತಂಜಾವೂರಿನಲ್ಲಿ ನಡೆದ ಸಭೆಯಲ್ಲಿ, ‘‘ಸ್ಟಾಲಿನ್ ಅವರ 2ನೇ ಬಾರಿ ಮುಖ್ಯಮಂತ್ರಿ ಆಗುವ ಕನಸು ನನಸಾಗುವುದಿಲ್ಲ. ಕರುಣಾನಿಧಿ ಅವರಿಗೂ ಇದು ಸಾಧ್ಯವಾಗಿಲ್ಲ. ಡಿಎಂಕೆ ರಾಜ್ಯವನ್ನು ದಿವಾಳಿ ಅಂಚಿಗೆ ತಂದಿದೆ’’ ಎಂದು ನುಡಿದಿದ್ದರು. ವಿಜಯ್‌ಗೆ ಕಾಂಗ್ರೆಸ್ ಜೊತೆಗೆ ಮೈತ್ರಿ ಬೇಕಿತ್ತು. ಕಾಂಗ್ರೆಸ್ ರಾಜ್ಯದಲ್ಲಿ 1967ರಲ್ಲಿ ಅಧಿಕಾರ ಕಳೆದುಕೊಂಡಿದ್ದು, ಟಿವಿಕೆ ಜೊತೆಗೆ ಮೈತ್ರಿಯಿಂದ ಪಕ್ಷದ ಪುನರುಜ್ಜೀವನ ಸಾಧ್ಯ ಎಂದು ಕೆಲವು ಸ್ಥಳೀಯ ಮುಖಂಡರು ಅಭಿಪ್ರಾಯಪಟ್ಟಿದ್ದರು. ಎಐಎಡಿಎಂಕೆ ಮೈತ್ರಿಗೆ ಹಲವು ಬಾರಿ ಪ್ರಯತ್ನಿಸಿದರೂ, ವಿಜಯ್ ಸ್ಪಂದಿಸಿರಲಿಲ್ಲ. ಜನಸಂಪರ್ಕದ ಕೊರತೆ, 2ನೇ ಹಂತದ ನಾಯಕರು ಮತ್ತು ತಳಮಟ್ಟದಲ್ಲಿ ಕಾರ್ಯಕರ್ತರ ಕೊರತೆ, ಕರೂರು ಕಾಲ್ತುಳಿತ ದುರಂತದಲ್ಲಿ 41 ಮಂದಿ ಸಾವು ಹಾಗೂ ಸಿಬಿಐ ತನಿಖೆ, ಕೊನೆಯ ಚಿತ್ರ ‘ಜನನಾಯಗನ್’ ಎದುರಿಸುತ್ತಿರುವ ಕಾನೂನು ಸಮಸ್ಯೆಗಳು ಅವರಿಗೆ ಮುಳುವಾಗಿವೆ. ಎನ್‌ಡಿಎ ವಿಜಯ್ ಅವರ ಮೇಲೆ ಒತ್ತಡ ಹೇರಲು ಸಿಬಿಐ ತನಿಖೆ ಬಳಸಿಕೊಳ್ಳುತ್ತಿದೆ ಎಂಬ ಆರೋಪವಿದೆ. ಈ ದುರಂತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಬಡವರು ಮತ್ತು ಬದಿಗೊತ್ತಲ್ಪಟ್ಟ ಸಮುದಾಯಕ್ಕೆ ಸೇರಿದವರು. ‘‘ವಿಜಯ್ ಬೇಕೆಂದೇ ತಡವಾಗಿ ಬಂದರು; ನಿರೀಕ್ಷಿಸಿದ್ದ 10 ಸಾವಿರಕ್ಕೆ ಬದಲು 25 ಸಾವಿರ ಮಂದಿ ನೆರೆದರು; ನೀರು, ಊಟ ಇಲ್ಲದೆ ಕಾಯುತ್ತಿದ್ದವರನ್ನು ಉದ್ದೇಶಿಸಿ ಕೆಲವು ನಿಮಿಷ ಮಾತನ್ನಾಡಿ ಹೋದರು’’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲಿಲ್ಲ; ದುರಂತದ ಜವಾಬ್ದಾರಿ ಹೊರುವ ಬದಲು ತಮ್ಮ ವಿರುದ್ಧ ‘ಸಂಚು’ ನಡೆದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದರು. ಮದ್ರಾಸ್ ಹೈಕೋರ್ಟ್ ಅಕ್ಟೋಬರ್ 2025ರಲ್ಲಿ ನೇಮಿಸಿದ್ದ ವಿಶೇಷ ತನಿಖಾ ತಂಡವು ಟಿವಿಕೆ ವಿರುದ್ಧ ನಿರ್ದಿಷ್ಟ ಆರೋಪ ಮಾಡಿದಾಗ, ಸುಪ್ರೀಂ ಕೋರ್ಟ್ ಮೊರೆಹೋದರು. ಜನವರಿ 2026ರಂದು ವಿಚಾರಣೆ ವೇಳೆ ಘಟನೆಗೆ ತಾವು ಕಾರಣರಲ್ಲ ಎಂದು ಹೇಳಿದರು. ಟಿವಿಕೆಗೆ ಯಾವುದೇ ಸಿದ್ಧಾಂತ ಇಲ್ಲ; ನಾಯಕ ನಟನೊಬ್ಬನ ಸುತ್ತ ಸಮೂಹಸನ್ನಿ ಸೃಷ್ಟಿಸಲಾಗಿದೆ. ಸಭೆಯಲ್ಲಿ ಪೆರಿಯಾರ್, ಅಂಬೇಡ್ಕರ್, ಕಾಮರಾಜ್ ಫೋಟೊ ತೋರಿಕೆಗೆ ಇರುತ್ತದಷ್ಟೇ. ಸಣ್ಣ ಪಕ್ಷಗಳ ಸಮಸ್ಯೆ 2021ರ ಚುನಾವಣೆಯಲ್ಲಿ ಕಮಲ್‌ಹಾಸನ್ ನೇತೃತ್ವದ ಮಕ್ಕಳ್ ನೀತಿ ಮಯ್ಯಂ ಹಾಗೂ ಟಿ.ಟಿ.ವಿ. ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ ತಲಾ ಶೇ.2.4 ಮತ ಗಳಿಸಿದ್ದವು. ಕಮಲ್‌ಹಾಸನ್ ಈಗ ರಾಜ್ಯಸಭೆಗೆ ನೇಮಕಗೊಂಡಿದ್ದಾರೆ. ಸೀಮನ್ ನೇತೃತ್ವದ ನಾಮ್ ತಮಿಳ್ ಕಚ್ಚಿ 2010ರಲ್ಲಿ ಸ್ಥಾಪನೆಯಾದ ತಮಿಳು ರಾಷ್ಟ್ರೀಯವಾದಿ ಪಕ್ಷ. ತಮಿಳರನ್ನು ಇತರ ಭಾಷಾ ಗುಂಪುಗಳ ವಿರುದ್ಧ ಎತ್ತಿಕಟ್ಟುತ್ತದೆ. ದ್ರಾವಿಡ ಚಳವಳಿ ‘ಬೋಗಸ್’ ಎನ್ನುತ್ತದೆ. 2012ರ ವಿಧಾನಸಭೆ ಚುನಾವಣೆಯಲ್ಲಿ ಶೇ.6.7 ಮತ ಗಳಿಸಿ, ಕೆಲವು ಕ್ಷೇತ್ರಗಳಲ್ಲಿ ಡಿಎಂಕೆ, ಎಐಎಡಿಎಂಕೆ ನಂತರದ ಸ್ಥಾನ ಪಡೆದಿತ್ತು. 2016ರಲ್ಲಿ ಶೇ.1 ಮತ್ತು 2021ರಲ್ಲಿ ಶೇ.6.7ರಷ್ಟು ಮತಗಳಿಕೆ ಮಾಡಿತ್ತು. ಆದರೆ, ಯಾವುದೇ ಸ್ಥಾನ ಗೆಲ್ಲಲಿಲ್ಲ. ಶ್ರೀಲಂಕಾದಲ್ಲಿರುವ ತಮಿಳು ಭಾಷಿಕರ ಹಿತ ಕಾಯುತ್ತಿಲ್ಲ ಎಂದು ಸೀಮನ್, 2019ರ ಲೋಕಸಭೆ ಚುನಾವಣೆಯಲ್ಲಿ ಯುಪಿಎ-ಡಿಎಂಕೆ ವಿರುದ್ಧ ಪ್ರಚಾರ ನಡೆಸಿದ್ದರು; ಈ ಚುನಾವಣೆ ಯಲ್ಲಿ ಶೇ.4 ಮತ ಗಳಿಸಿತು. ವಿಡುತಲೈ ಚಿರತೆಗಳ್ ಕಚ್ಚಿ(ವಿಸಿಕೆ)ಯ ತೋಳ್ ತಿರುಮಾವಲವನ್(ಚಿದಂಬರಂ ಲೋಕಸಭೆ ಕ್ಷೇತ್ರದಿಂದ ಆಯ್ಕೆ) ಅವರ ಸ್ಥಾನವನ್ನು ತುಂಬಲು ಸೀಮನ್ ಪ್ರಯತ್ನಿಸುತ್ತಿದ್ದಾರೆ. ಅವರು ದಕ್ಷಿಣ ತಮಿಳುನಾಡಿನ ಪ್ರಮುಖ ಒಬಿಸಿ ಗುಂಪು ನಾಡಾರ್ ಸಮುದಾಯಕ್ಕೆ ಸೇರಿದವರು. ಅನುಯಾಯಿಗಳಿಂದ ಕ್ಯಾಪ್ಟನ್ ಎಂದು ಕರೆಸಿಕೊಳ್ಳುತ್ತಿದ್ದ ನಟ ಅಳಗರ್‌ಸ್ವಾಮಿ ವಿಜಯರಾಜ್ ಅಲಿಯಾಸ್ ವಿಜಯಕಾಂತ್, ದ್ರಾವಿಡ ಪಕ್ಷಗಳ ರಾಜಕೀಯಕ್ಕೆ ಪರ್ಯಾಯ ಇದೆ ಎಂದು ಸಾಧಿಸಿ ತೋರಿಸಿದವರು. ಅವರ ಪಕ್ಷವಾದ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ(ಡಿಎಂಡಿಕೆ) ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಶೇ. 8.38 ಮತ ಗಳಿಸಿತು(2006ರಲ್ಲಿ). ವಿಜಯಕಾಂತ್ ವಿರುಧಾಚಲಂ ಕ್ಷೇತ್ರದಿಂದ ಆಯ್ಕೆಯಾದರು. 2009ರ ಲೋಕಸಭೆ ಚುನಾವಣೆಯಲ್ಲಿ ಶೇ.10.3 ಮತ ಗಳಿಕೆ. 2011ರ ವಿಧಾನಸಭೆ ಚುನಾವಣೆಯಲ್ಲಿ ಪತ್ನಿ ಪ್ರೇಮಲತಾ ಮತ್ತು ಭಾಮೈದ ಸುಧೀಶ್ ಒತ್ತಾಯದಿಂದ ಎಐಎಡಿಎಂಕೆ ಜೊತೆ ಸೇರಿದರು; ಶೇ.7.9 ಮತಗಳೊಂದಿಗೆ 29 ಸ್ಥಾನ ಗಳಿಸಿದರು. ಮೈತ್ರಿ ಮಾಡಿಕೊಂಡಿದ್ದರೂ ಆಡಳಿತ ಪಕ್ಷಕ್ಕೆ ಮಗ್ಗುಲು ಮುಳ್ಳಾಗಿದ್ದ ಅವರನ್ನು ಜಯಲಲಿತಾ ಹಣಿದರು; 7 ಶಾಸಕರು ಪಕ್ಷ ತೊರೆದರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು, ಶೇ.5.1 ಮತ ಹಾಗೂ 2 ಸ್ಥಾನ ಗಳಿಸಿದರು. 2016ರ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಒಕ್ಕೂಟಕ್ಕೆ ಸೇರ್ಪಡೆಯಾಗಿ, ಶೇ.2.4 ಮತ ಗಳಿಸಿದರು. ಚುನಾವಣೆಯಲ್ಲಿ ಡಿಎಂಕೆ ಸೋಲುಂಡಿತು. ಡಿಸೆಂಬರ್ 2023ರಲ್ಲಿ ಮರಣ ಹೊಂದಿದರು. ಪತ್ನಿ ಪ್ರೇಮಲತಾ ಅವರು ಫೆ.19, 2026ರಂದು ಎಸ್‌ಪಿಎ ಜೊತೆ ಕೈಜೋಡಿಸಿದ್ದಾರೆ. ಪ್ರತೀ ಚುನಾವಣೆ ಯಲ್ಲೂ ಮನಸೋಇಚ್ಛೆ ಪಕ್ಷ ಬದಲಾವಣೆಯಿಂದ ವಿಶ್ವಾಸಾರ್ಹತೆ ನಾಶವಾಗಿದೆ. ಎಂಡಿಎಂಕೆಯ ಸುವರ್ಣ ಯುಗ ಅಂತ್ಯಗೊಂಡಿದೆ. ಎಐಎಡಿಎಂಕೆಯಿಂದ ಆರಂಭವಾದ ಒ. ಪನ್ನೀರ್‌ಸೆಲ್ವಂ ರಾಜಕೀಯ ಪ್ರಯಾಣ, ಡಿಎಂಕೆ ಮೈತ್ರಿಕೂಟಕ್ಕೆ ಸೇರ್ಪಡೆಯಿಂದ ಇನ್ನೊಂದು ಘಟ್ಟ ಮುಟ್ಟಿದೆ. 1991ರಲ್ಲಿ ಜಯಲಲಿತಾ ಮುಖ್ಯಮಂತ್ರಿ ಆದ ಬಳಿಕ ಪಕ್ಷ-ಸರಕಾರದಲ್ಲಿ ವಿ.ಕೆ. ಶಶಿಕಲಾ ಅವರ ಪ್ರಭಾವ ಹೆಚ್ಚಿತು. ಡಿಸೆಂಬರ್ 5,2016ರಲ್ಲಿ ಜಯಲಲಿತಾ ಮರಣ ಹೊಂದಿದರು. ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ಶಶಿಕಲಾ ಅವರ ಕನಸನ್ನು ಭಗ್ನಗೊಳಿಸಿದ್ದು ಸುಪ್ರೀಂ ಕೋರ್ಟಿನ ಫೆ.14, 2017ರ ಆದೇಶ; ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಸೆರೆವಾಸ ವಿಧಿಸಿತು. ಬೆಂಗಳೂರಿನ ಪರಪ್ಪನ ಅಗ್ರಹಾರ ಸೆರೆಮನೆಯಿಂದ ಜನವರಿ 27, 2021ರಂದು ಹೊರಬಂದರು. ಅವರ ಪತನ ಫೆ.7, 2017ರಲ್ಲಿ ಪನ್ನೀರ್‌ಸೆಲ್ವಂ ಬಂಡಾಯದಿಂದ ಆರಂಭವಾಯಿತು; ಮುಖ್ಯಮಂತ್ರಿ ಸ್ಥಾನಕ್ಕೆ ಶಶಿಕಲಾ ಆಯ್ಕೆಮಾಡಿದ್ದ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಬಣಗಳು ಒಗ್ಗೂಡಿದವು. ಶಶಿಕಲಾ ಮತ್ತು ಅವರ ಸೋದರ ಸಂಬಂಧಿ ಟಿ.ಟಿ.ವಿ. ದಿನಕರನ್ ಅವರನ್ನು ಪಕ್ಷದಿಂದ ಹೊರಗೆ ಹಾಕಲಾಯಿತು. ಶಶಿಕಲಾ ಮಾರ್ಚ್ 3, 2021ರಲ್ಲಿ ದಿಢೀರ್ ರಾಜಕೀಯ ನಿವೃತ್ತಿ ಘೋಷಿಸಿದರು. ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಎಡಪ್ಪಾಡಿ ಪಳನಿಸ್ವಾಮಿ, ಈಗ ಪ್ರತಿಪಕ್ಷ ನಾಯಕರಾಗಿದ್ದಾರೆ. ವಯ್ಯಾಪುರಿ ಗೋಪಾಲಸ್ವಾಮಿ ಅಲಿಯಾಸ್ ವೈಕೋ ನೇತೃತ್ವದ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಚುಕ್ಕಾಣಿ ಈಗ ಪುತ್ರ ದುರೈ ವೈಕೋ ಕೈಯಲ್ಲಿದೆ. ಅವರು ತಿರುಚಿರಾಪಳ್ಳಿ ಕ್ಷೇತ್ರದ ಸಂಸದ. ಡಾ. ಎಸ್. ರಾಮದಾಸ್ ನೇತೃತ್ವದ ಪಟ್ಟಾಳಿ ಮಕ್ಕಳ್ ಕಚ್ಚಿ ವಣ್ಣಿಯಾರ್ ಸಮುದಾಯವನ್ನು ಆಧರಿಸಿದ ಪಕ್ಷ; ಪುತ್ರ ಅನ್ಬುಮಣಿ ರಾಮದಾಸ್ ಪಿಎಂಕೆಯ ಇನ್ನೊಂದು ತುಣುಕಿನ ಮುಖ್ಯಸ್ಥ. ಎನ್‌ಡಿಎ ಜೊತೆ ಇದ್ದಾರೆ. ಇವೆಲ್ಲವೂ ಸೀಮಿತ ಪ್ರಭಾವ ಇರುವ ಪಕ್ಷಗಳು. ಬಿಜೆಪಿ ಏಕೆ ಸ್ವೀಕೃತವಲ್ಲ? ತಮಿಳುನಾಡಿನ ಮೇಲೆ ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ ಸ್ವಾಭಿಮಾನ ಚಳವಳಿ-ವಿಚಾರವಾದ, ಜಾತಿ ವಿರೋಧ, ಹೆಣ್ಣುಮಕ್ಕಳ ರಕ್ಷಣೆ-ಸಬಲೀಕರಣ ಪ್ರಯತ್ನಗಳು ಬೀರಿದ ಪರಿಣಾಮ ಅಚ್ಚಳಿಯದೆ ಉಳಿದುಕೊಂಡಿವೆ. ತಮಿಳರು ಭಕ್ತಿ ಚಳವಳಿ-ಸಾಹಿತ್ಯ, ಬೃಹತ್ ದೇವಾಲಯಗಳು ಮತ್ತು ಸಂಗಂ ಕಾವ್ಯದ ಸವಿಯುಂಡ ಧಾರ್ಮಿಕ ಪ್ರವೃತ್ತಿಯ ಜನ; ದ್ರಾವಿಡ ಚಳವಳಿಯ ಲಾಭ ಪಡೆದ ಹಲವು ರಾಜಕಾರಣಿಗಳು ಕೂಡ ವೈಯಕ್ತಿಕ ಜೀವನದಲ್ಲಿ ಧಾರ್ಮಿಕರು. ಹೀಗಿದ್ದರೂ ತಮಿಳರನ್ನು ರಾಜಕೀಯ ಹಿಂದೂಗಳಾಗಿಸುವುದು ಬಿಜೆಪಿಗೆ ಸಾಧ್ಯವಾಗಿಲ್ಲ. ಭಕ್ತಿ-ಸ್ವಾಭಿಮಾನ ಚಳವಳಿಗಳು ಬ್ರಾಹ್ಮಣರ ಆಚರಣೆ-ಸಂಪ್ರದಾಯ ಮತ್ತು ಸಂಸ್ಕೃತವನ್ನು ಆಧರಿಸಿದ ಪೂಜಾ ವಿಧಾನಗಳನ್ನು ವಿರೋಧಿಸಿದ್ದವು. ತಮಿಳರು ಹಿಂದೂ ಎಂಬ ಏಕೀಕೃತ, ಪ್ರತ್ಯೇಕಗೊಂಡ ಗುಂಪಿನಲ್ಲಿ ಗುರುತಿಸಿಕೊಳ್ಳಲು ನಿರಾಕರಿಸುತ್ತಾರೆ. ಕಾಂಚೀಪುರದ ವರದರಾಜ ಪೆರುಮಾಳ್ ದೇವಾಲಯದಲ್ಲಿ ವೈಷ್ಣವರ ವಡಗಲೈ-ತೆಂಕಲೈ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್, ನಿವೃತ್ತ ನ್ಯಾಯಾಧೀಶರನ್ನು ನೇಮಿಸಿದ್ದು ಬಣಗಳ ಅಸ್ಮಿತೆಯ ಆಂತರಿಕ ಕಲಹದ ನಿದರ್ಶನ. ಅಲ್ಲದೆ, ವೈಷ್ಣವರು ಮತ್ತು ಶೈವರ ನಡುವೆಯೂ ತೀವ್ರ ಭಿನ್ನಾಭಿಪ್ರಾಯವಿದೆ. ದ್ರಾವಿಡ ಚಳವಳಿಯ ಬೇರು ಬ್ರಾಹ್ಮಣರು ಮತ್ತು ಕೃಷಿಯನ್ನು ಆಧರಿಸಿದ್ದ ವೆಲ್ಲಾಲ ಸಮುದಾಯದ ನಡುವಿನ ಚಾರಿತ್ರಿಕ ಸಂಘರ್ಷದಲ್ಲಿದೆ. ಶೈವ ಪಂಥಕ್ಕೆ ಸೇರಿದ ವೆಲ್ಲಾಲರು ದ್ರಾವಿಡ ಚಳವಳಿಗೆ ಬುನಾದಿ ಹಾಕಿದರು; ಸ್ವಾಭಿಮಾನ ಚಳವಳಿಯನ್ನು ಬೆಂಬಲಿಸಿದರು. ಆದರೆ, ಪೆರಿಯಾರ್ ತಮ್ಮ ‘ಕುಡಿಯರಸು’ ವಾರಪತ್ರಿಕೆಯಲ್ಲಿ 63 ಶೈವ ಸಂತರ ಜೀವನಚರಿತ್ರೆ ‘ಪೆರಿಯ ಪುರಾಣಂ’ನ್ನು ಗೇಲಿ ಮಾಡಿ ಸರಣಿ ಲೇಖನ ಪ್ರಕಟಿಸಿದಾಗ ವೆಲ್ಲಾಲರು ಸಿಟ್ಟಿಗೆದ್ದರು(ಮೂಲ: ದ್ರಾವಿಡ ಇಯಕ್ಕಂ ವೆಲ್ಲಾಲರಂ. ಲೇಖಕ-ಎ.ಆರ್. ವೆಂಕಟಾಚಲಪತಿ). ಆರಂಭದ ವರ್ಷಗಳಲ್ಲಿ ಡಿಎಂಕೆಯನ್ನು ‘ದ್ರಾವಿಡ ಮುದಲಿಯಾರ್ ಕಳಗಂ’ ಎಂದು ಕರೆಯಲಾಗುತ್ತಿತ್ತು. ಸಾಮಾಜಿಕ ಶ್ರೇಣಿಯಲ್ಲಿ 2ನೇ ಸ್ಥಾನದಲ್ಲಿದ್ದ ಮುದಲಿಯಾರ್ ಸಮುದಾಯದವರು ಪಕ್ಷದಲ್ಲಿಯೂ ತುಂಬಿಕೊಂಡಿದ್ದರು. ರಾಜ್ಯದಲ್ಲಿ ಪಕ್ಷವನ್ನು ಚಿಗುರಿಸಲು ಬಿಜೆಪಿ ಸಾಕಷ್ಟು ಶ್ರಮಿಸಿದೆ. ಐಪಿಎಸ್‌ಗೆ 2019ರಲ್ಲಿ ರಾಜೀನಾಮೆ ನೀಡಿದ ಕುಪ್ಪುಸ್ವಾಮಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಿತು. ಎಲ್. ಮುರುಗನ್ ಅವರಿಂದ ಜುಲೈ 2021ರಲ್ಲಿ ಅಧಿಕಾರ ಸ್ವೀಕರಿಸಿದ ಅಣ್ಣಾಮಲೈ, ವಿಧಾನಸಭೆ ಚುನಾವಣೆಯಲ್ಲಿ ಠುಸ್ ಪಟಾಕಿ ಆದರು. 2024ರ ಲೋಕಸಭೆ ಚುನಾವಣೆಯಲ್ಲೂ ಅವರಿಗೆ ಯಶಸ್ಸು ಸಿಗಲಿಲ್ಲ. ಕೊನೆಗೆ, ವೈನಾರ್ ನಾಗೇಂದ್ರ ಅವರಿಗೆ ಜಾಗ ಬಿಟ್ಟುಕೊಟ್ಟರು. ರಾಜ್ಯದಲ್ಲಿ ಎರಡು ದ್ರಾವಿಡ ಪಕ್ಷಗಳಿರುವುದು ಬಿಜೆಪಿಗೆ ತಡೆಯೊಡ್ಡಿದೆ. ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತ ಎಂಜಿಆರ್ ಹಾಗೂ ಅಯೋಧ್ಯೆಗೆ ಇಟ್ಟಿಗೆ ರವಾನಿಸಿದ ಜೆ. ಜಯಲಲಿತಾ ಅವರ ಮೃದು ಹಿಂದುತ್ವದಿಂದ ಬಿಜೆಪಿ ಬೆಳೆಯಲು ಆಗಿಲ್ಲ. ಒಂದುವೇಳೆ ಎಂಜಿಆರ್ ಡಿಎಂಕೆಯಲ್ಲೇ ಉಳಿದಿದ್ದರೆ, ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿರುತ್ತಿತ್ತು. ಆಗ ಬಿಜೆಪಿ, ಕಾಂಗ್ರೆಸನ್ನು ಸುಲಭವಾಗಿ ಸ್ಥಳಾಂತರಿಸಬಹುದಿತ್ತು. ದೇವಾಲಯಗಳಿಗೆ ಬ್ರಾಹ್ಮಣೇತರರನ್ನು ಅರ್ಚಕರಾಗಿ ನೇಮಿಸುವುದನ್ನು ಬಿಜೆಪಿ ವಿರೋಧಿಸಿತ್ತು. ಪ್ರಧಾನಿ ಸೆಂಗೋಲ್‌ನ್ನು ಸಂಸತ್ತಿನಲ್ಲಿ ಇರಿಸಿದರೂ, ಚುನಾವಣೆಯಲ್ಲಿ ಫಲ ನೀಡಲಿಲ್ಲ. ಹಾಗೆಂದ ತಕ್ಷಣ ಬಿಜೆಪಿ ಸುಮ್ಮನಿಲ್ಲ; ಇರುವುದೂ ಇಲ್ಲ. ಕೋಮು ಧ್ರುವೀಕರಣದ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ; ಮದುರೈ ಪಕ್ಕದ ತಿರುಪ್ಪರನ್‌ಕುಂದ್ರಂ ಬೆಟ್ಟದ ಮೇಲಿನ 14ನೇ ಶತಮಾನದ ದರ್ಗಾದಲ್ಲಿ ದೀಪ ಬೆಳಗುವ ಪ್ರಯತ್ನವನ್ನು 1994ರಲ್ಲಿ ಸಂಘ ಪರಿವಾರದ ಗುಂಪೊಂದು ಮಾಡಿತ್ತು. ಸಿಕಂದರ್ ಬಾದುಷಾ ಔಲಿಯಾ ದರ್ಗಾ ಹಿಂದೂ, ಮುಸ್ಲಿಮ್ ಹಾಗೂ ಜೈನ ಸಮುದಾಯ ನಡೆದುಕೊಳ್ಳುವ ಸ್ಥಳ. ಇಲ್ಲಿ ಇತ್ತೀಚೆಗೆ ಮತ್ತೊಮ್ಮೆ ನಡೆದ ದೀಪ ಹಚ್ಚುವ ಪ್ರಯತ್ನವನ್ನು ಪೊಲೀಸರು ತಡೆದರು. ದರ್ಗಾದಲ್ಲಿ ಎರಡು ದಿನ ಮಾತ್ರ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೈಕೋರ್ಟ್ ಹೇಳಿತ್ತು. ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ. ಮುಂದೊಂದು ದಿನ ಸಂಘ ಪರಿವಾರ ಇಲ್ಲಿ ಮತ್ತೊಮ್ಮೆ ಬೆಂಕಿ ಹಚ್ಚಲು ಪ್ರಯತ್ನಿಸಲಿದೆ. ಒಕ್ಕೂಟ ಸರಕಾರದ ಹೂಟ ತಮಿಳುನಾಡಿನಲ್ಲಿ ನಡೆಯಬಾರದು; ಪೆರಿಯಾರ್ ಜಾಡು, ವಿಚಾರವಾದ-ಸ್ವಾಭಿಮಾನ ಚಳವಳಿ ಹಾಗೂ ಕಟ್ಟರ್ ಭಾಷಾ ಪ್ರೇಮಿಗಳಾದ ತಮಿಳರು ಹಿಂದಿ ಹೇರಿಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಅಲ್ಪಸಂಖ್ಯಾತರ ದ್ವೇಷ ಹಾಗೂ ಕೋಮುವಾದಕ್ಕೆ ಸಮರ್ಥವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಆಶಿಸೋಣ.

ವಾರ್ತಾ ಭಾರತಿ 13 Mar 2026 10:34 am

ಇರಾನ್ ನೂತನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿಯ ಒಂದು ಕಾಲು ಕಟ್, ಕೋಮಾ ಸ್ಥಿತಿ? ದಾಳಿ ಬಗ್ಗೆ ಸಿಗದ ಸ್ಪಷ್ಟನೆ!

ಇರಾನ್ ನೂತನ ನಾಯಕನ ಮೇಲೂ ವಾಯುದಾಳಿಯಾಗಿದ್ದು, ಒಂದು ಅಥವಾ ಎರಡೂ ಕಾಲು ಕಟ್ ಆಗಿರುವ ಸಾಧ್ಯತೆ ಇದೆ, ಕೋಮಾ ಸ್ಥಿತಿಯಲ್ಲಿರುವ ಅವರಿಗೆ ಟೆಹ್ರಾನ್‌ನಲ್ಲಿ ಬಿಗಿ ಭದ್ರತೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

ವಿಜಯ ಕರ್ನಾಟಕ 13 Mar 2026 10:33 am

ಒಂದೇ ಕೊಠಡಿಯ ಅಭ್ಯರ್ಥಿಗಳ ಆಯ್ಕೆ: 'ಕೆಪಿಎಸ್‌ಸಿ ಶುದ್ಧೀಕರಿಸಿ ಇಲ್ಲವೇ ರದ್ದುಪಡಿಸಿ' - ವಿಧಾನಸಭೆಯಲ್ಲಿ ಗಂಭೀರ ಚರ್ಚೆ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ವಿಳಂಬ, ಅಕ್ರಮ, ಭ್ರಷ್ಟಾಚಾರ ಆರೋಪಗಳ ಕುರಿತು ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಸರ್ಕಾರಿ ಹುದ್ದೆಗಳಿಗೆ ಅರ್ಹರನ್ನು ಪಾರದರ್ಶಕವಾಗಿ ಮತ್ತು ಕಾಲಮಿತಿಯಲ್ಲಿ ನೇಮಿಸುವ ಸಂಸ್ಥೆಯಾಗಬೇಕಾದ ಕೆಪಿಎಸ್‌ಸಿ ತನ್ನ ಕಾರ್ಯವೈಖರಿಯಿಂದ ವಿವಾದಕ್ಕೆ ಗುರಿಯಾಗುತ್ತಿದೆ. ಕೆಪಿಎಸ್‌ಸಿ ಶುದ್ದೀಕರಣವಾಗಬೇಕು ಇಲ್ಲವೆ ರದ್ದಾಗಬೇಕು ಎಂಬ ಚರ್ಚೆ ಸದನದಲ್ಲಿ ಜರುಗಿತು.

ವಿಜಯ ಕರ್ನಾಟಕ 13 Mar 2026 10:30 am

ಇರಾನ್‌ನಲ್ಲಿ ಪ್ರಸ್ತುತ 9,000 ಭಾರತೀಯ ಪ್ರಜೆಗಳಿದ್ದಾರೆ : ರಾಜ್ಯಸಭೆಗೆ ತಿಳಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ : ಪ್ರಸ್ತುತ ಇರಾನ್‌ನಲ್ಲಿ ವಿದ್ಯಾರ್ಥಿಗಳು, ಉದ್ಯಮಿಗಳು, ಕಾರ್ಮಿಕರು, ಯಾತ್ರಿಕರು, ನಾವಿಕರು ಮತ್ತು ಮೀನುಗಾರರು ಸೇರಿದಂತೆ ಸುಮಾರು 9,000 ಭಾರತೀಯ ಪ್ರಜೆಗಳಿದ್ದಾರೆ ಎಂದು ಸರಕಾರ ಗುರುವಾರ ಸಂಸತ್ತಿಗೆ ತಿಳಿಸಿದೆ. ಇರಾನ್‌ನಲ್ಲಿರುವ  ಭಾರತೀಯ ನಾಗರಿಕರ ವಿವರಗಳು ಮತ್ತು ಅವರ ಸುರಕ್ಷತೆಗೆ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪ್ರಶ್ನೆ ಕೇಳಲಾಗಿತ್ತು. ರಾಜ್ಯಸಭೆಯಲ್ಲಿ ಈ ಕುರಿತು ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರ ಮಾರ್ಗರಿಟಾ, ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಸ್ಥಳೀಯ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ನಿರಂತರವಾಗಿ ಗಮನಿಸಬೇಕು ಮತ್ತು ಅಗತ್ಯವಿದ್ದರೆ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಭಾರತೀಯ ರಾಯಭಾರಿ ಕಚೇರಿ ಸಲಹೆ ನೀಡಿದೆ ಎಂದು ಹೇಳಿದ್ದಾರೆ. ಭಾರತೀಯ ರಾಯಭಾರ ಕಚೇರಿಯಿಂದ ತುರ್ತು ಸಹಾಯವಾಣಿಗಳನ್ನು ಸಕ್ರಿಯಗೊಳಿಸಲಾಗಿದೆ. ಭಾರತೀಯರ ರಕ್ಷಣೆಗೆ ಸಂಬಂಧಿಸಿ ಇರಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಸಚಿವರು ರಾಜ್ಯಸಭೆಗೆ ತಿಳಿಸಿದ್ದಾರೆ.

ವಾರ್ತಾ ಭಾರತಿ 13 Mar 2026 10:08 am

ಹಾರ್ಮುಜ್ ಜಲಸಂಧಿ ದಾಟಲು ಭಾರತದ ಹಡಗುಗಳಿಗೆ ಅನುಮತಿ ಸಿಕ್ಕಿರುವ ವರದಿ ‘ಪ್ರೀಮೆಚ್ಯೂರ್’ ಎಂದ ಕೇಂದ್ರ ಸರ್ಕಾರ!

‘ಹಾರ್ಮುಜ್ ಜಲಸಂಧಿ ದಾಟಲು ಭಾರತದ ಹಡಗುಗಳಿಗೆ ಇರಾನ್ ಅನುಮತಿ ನೀಡಿದೆ’ ಎಂಬ ವರದಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ, ಈ ವರದಿಯನ್ನ ಭಾರತೀಯ ವಿದೇಶಾಂಗ ಸಚಿವಾಲಯ ಖಚಿತ ಪಡಿಸಿಲ್ಲ. ‘ಈ ವರದಿಗಳ ಬಗ್ಗೆ ಈಗಲೇ ಮಾತಾಡುವುದು ಪ್ರೀಮೆಚ್ಯೂರ್‌ ಆಗುತ್ತದೆ’ ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ವಿಜಯ ಕರ್ನಾಟಕ 13 Mar 2026 10:05 am

ಯಾರು ಈ ಆಲಿ ಜಾಫರಿ? ಇರಾನ್ ಸೋಲಿಸಲು ಅಸಾಧ್ಯವಾಗಿಸುತ್ತಿರುವ 'ಮೊಸಾಯಿಕ್ ಡಿಫೆನ್ಸ್' ಮಾಸ್ಟರ್‌ ಮೈಂಡ್!

Mohammad Ali Jafari : ಇರಾನ್ - ಇಸ್ರೇಲ್ - ಅಮೆರಿಕ ನಡುವಿನ ಯುದ್ದದ ಈ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯನ್ನು ಮಾಡುತ್ತಿರುವ ಹೆಸರು ಆಲಿ ಜಾಫರಿ. ಇವರು IRGCಯ ಮಾಜಿ ಕಮಾಂಡರ್ - ಇನ್ -ಚೀಫ್. ಹಿಂದೆ ಇರಾಕ್ ದೇಶದ ಜೊತೆಗೆ ಯುದ್ದ ನಡೆದಾಗ ಸುಮಾರು ಹನ್ನೆರಡು ವರ್ಷ ಇರಾನ್ ಮಿಲಿಟರಿ ಪಡೆಯ ಮುಖ್ಯಸ್ಥರಾಗಿದ್ದವರು. ಈಗಿನ ಯುದ್ದದ ವೇಳೆ, ಇರಾನ್ ಸೋಲಿಸುವುದು ಅಷ್ಟು ಸುಲಭವಲ್ಲ ಎನ್ನುವ ರಣತಂತ್ರವನ್ನು ಇವರು ರೂಪಿಸಿದ್ದಾರೆ.

ವಿಜಯ ಕರ್ನಾಟಕ 13 Mar 2026 9:59 am

ಚನ್ನಪಟ್ಟಣದ ಗೊಂಬೆ ಉದ್ಯಮಕ್ಕೂ ತಟ್ಟಿದ ವಾರ್‌ ಎಫೆಕ್ಟ್: ರಫ್ತಾಗದೆ ಕಾರ್ಖಾನೆಯಲ್ಲೇ ಉಳಿದ ಗೊಂಬೆಗಳು, ಸಂಕಷ್ಟದಲ್ಲಿ ಉದ್ಯಮಿಗಳು!

ಮಧ್ಯಪ್ರಾಚ್ಯದಲ್ಲಿ ಯುದ್ದ ತಾರಕಕ್ಕೇರಿದ್ದು, ಇದರ ಎಫೆಕ್ಟ್‌ ಸದ್ಯ ಭಾರತದ ಬಹುತೇಕ ಎಲ್ಲಾ ಉದ್ಯಮಗಳ ಮೇಲೂ ಒಂದಲ್ಲ ಒಂದು ರೀತಿಯಾಗಿ ತಟ್ಟುತ್ತಿದೆ. ಈಗಾಗಲೇ ಇಂಧನ ವಲಯದಲ್ಲಿ ಸಾಕಷ್ಟು ವ್ಯತ್ಯಯಗಳು ಉಂಟಾಗಿ ತೊಂದರೆ ಎದುರಿಸುತ್ತಿದ್ದು, ಈ ಮಧ್ಯೆ ವಿಶ್ವವಿಖ್ಯಾತ ಚನ್ನಪಟ್ಟಣದ ಗೊಂಬೆ ಉದ್ಯಮ ತಟ್ಟಿದ್ದು, ಯುದ್ದದಿಂದಾಗಿ ವಿದೇಶಗಳಿಗೆ ರಫ್ತಾಗಬೇಕಿದ್ದ ಗೊಂಬೆಗಳು ಕಾರ್ಖಾನೆಗಳಲ್ಲೇ ಉಳಿಯುವಂತೆ ಆಗಿದೆ. ಇದರಿಂದ ಗೊಂಬೆ ಕಾರ್ಮಿಕರು ಹಾಗು ಉದ್ಯಮಿಗಳಲ್ಲಿ‌ ಭಾರಿ ನಷ್ಟದ ಆತಂಕದ ಸೃಷ್ಟಿಯಾಗಿದೆ.

ವಿಜಯ ಕರ್ನಾಟಕ 13 Mar 2026 9:53 am

ಸಂಸತ್ ಅವಿಶ್ವಾಸ ಗೊತ್ತುವಳಿ: ಪ್ರತಿಪಕ್ಷಗಳ ತಂತ್ರಗಾರಿಕೆ ಕೊರತೆ, ಕ್ಲೂಲೆಸ್ ರಾಜಕೀಯಕ್ಕೀಗ ಅವಕಾಶ ಇಲ್ಲ: ರಾಜಾರಾಂ ತಲ್ಲೂರು ಬರಹ

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆ ವೇಳೆ ರಾಜಕೀಯ ಹೈಡ್ರಾಮಾವೇ ನಡೆದಿದೆ. ಈ ಬಗ್ಗೆ ಸಂಸತ್ ಅವಿಶ್ವಾಸ ಗೊತ್ತುವಳಿ: ಪ್ರತಿಪಕ್ಷಗಳ ತಂತ್ರಗಾರಿಕೆ ಕೊರತೆ, ಕ್ಲೂಲೆಸ್ ರಾಜಕೀಯಕ್ಕೀಗ ಅವಕಾಶ ಇಲ್ಲ ಎನ್ನುವ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಸಂಸತ್ತಿನಲ್ಲಿ ಸ್ಪೀಕರ್ ಮೇಲೆ ಅವಿಶ್ವಾಸ ಗೊತ್ತುವಳಿ ಮಂಡನೆ-ಚರ್ಚೆ-ಫಲಿತಾಂಶ ಮತ್ತದರ

ಒನ್ ಇ೦ಡಿಯ 13 Mar 2026 9:49 am

ಅನಿಲ ಪೂರೈಕೆ ವ್ಯತ್ಯಯ: ಅಡುಗೆ ಮನೆಗೆ ಮರಳಿದ ಸೀಮೆಎಣ್ಣೆ, ಇದ್ದಿಲು!

ಹೊಸದಿಲ್ಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೈಲ ಮತ್ತು ಅಡುಗೆ ಅನಿಲ ಕೊರತೆ ದೇಶದಲ್ಲಿ ವ್ಯಾಪಕವಾದ ಬೆನ್ನಲ್ಲೇ, ಹೋಟೆಲ್ ಗಳಿಗೆ ಸೀಮಿತ ರೀತಿಯಲ್ಲಿ ಪೂರೈಕೆ ಮಾಡುವುದಾಗಿ ಸರ್ಕಾರ ಪ್ರಕಟಿಸಿದೆ. ಜತೆಗೆ ತಾತ್ಕಾಲಿಕವಾಗಿ ಸೀಮೆ ಎಣ್ಣೆ ಮತ್ತು ಇದ್ದಿಲನ್ನು ಅಡುಗೆ ಆಯ್ಕೆಯಾಗಿ ಮರು ಪರಿಚಯಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮದಿಂದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೈಲ ಮಾರುಕಟ್ಟೆ ಕಂಪನಿಗಳ ಮೂವರು ಸದಸ್ಯರ ಸಮಿತಿ, ಹೋಟೆಲ್ ಗಳು ಸರಾಸರಿ ಮಾಸಿಕ ಬಳಕೆಯ ಶೇಕಡ 20ರಷ್ಟು ಪೂರೈಕೆಯನ್ನು ಪಡೆಯಲು ಅವಕಾಶ ನೀಡಿದೆ. ಜತೆಗೆ ಗ್ರಾಮೀಣ ಗ್ರಾಹಕರು ಒಂದು ಸಿಲಿಂಡರ್ ಬುಕ್ಕಿಂಗ್ ಮಾಡಿದ ಬಳಿಕ ಮತ್ತೊಂದು ಸಿಲಿಂಡರ್ ಬುಕ್ ಮಾಡುವ ಅವಧಿಯನ್ನು 25 ರಿಂದ 45 ದಿನಗಳಿಗೆ ಹೆಚ್ಚಿಸಿದೆ. ರಾಜ್ಯಗಳಿಗೆ ಹಾಲಿ ವಿತರಿಸುತ್ತಿರುವ ಒಂದು ಲಕ್ಷ ಕಿಲೋಲೀಟರ್ ಗಳಿಗೆ ಹೆಚ್ಚುವರಿಯಾಗಿ ಅಡುಗೆ ಇಂಧನವಾಗಿ ಬಳಸಲು ಅನುವಾಗುವಂತೆ 48 ಸಾವಿರ ಕಿಲೋಲೀಟರ್ (ಕೆಎಲ್) ಸೀಮೆಎಣ್ಣೆಯನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಪ್ರಕಟಿಸಿದೆ. ಇದನ್ನು ಬಳಸಲು ಅನುಮತಿ ನೀಡುವಂತೆ ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಕೋರಲಾಗಿದೆ. ಜತೆಗೆ ಸ್ಥಳೀಯ ಸಂಸ್ಥೆಗಳು, ಕೈಗಾರಿಕಾ ಹಾಗೂ ವಾಣಿಜ್ಯ ತ್ಯಾಜ್ಯಗಳಿಂದ ಉತ್ಪಾದಿಸಲಾದ ಆರ್ ಡಿಎಫ್ ಪ್ಯಾಲೆಟ್ ಗಳು ಮತ್ತು ಇದ್ದಿಲನ್ನು ಒಂದು ತಿಂಗಳ ಅವಧಿಗೆ ಆತಿಥ್ಯ ಉದ್ಯಮ ಮತ್ತು ರೆಸ್ಟೋರೆಂಟ್ ಗಳಲ್ಲಿ ಬಳಸಲು ಅನುಮತಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ವಾರ್ತಾ ಭಾರತಿ 13 Mar 2026 9:45 am

Hosur Airport: ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ

Hosur Airport: ಕರ್ನಾಟಕದ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ತಮಿಳುನಾಡಿನ ಹೊಸೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರವು ಕೆಲವೊಂದು ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಇದೀಗ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರವು ಚರ್ಚೆಯ ಮುನ್ನೆಲೆಗೆ ಬಂದಿದೆ. ಇದೇ ಸಂದರ್ಭದಲ್ಲಿ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಕೃಷಿ ಭೂಮಿಯನ್ನು

ಒನ್ ಇ೦ಡಿಯ 13 Mar 2026 9:04 am

12 ವರ್ಷ ಕಸಿದುಕೊಂಡ ಒಂದು ಪಾನಿಪುರಿ!

ಐದನೇ ಪಾನಿಪುರಿ ಕೊಟ್ಟಿಲ್ಲ ಎಂದು ಸಲ್ಲಿಸಿದ್ದ ದೂರು

ವಾರ್ತಾ ಭಾರತಿ 13 Mar 2026 8:40 am

Santosh Lad: ಸಂತೋಷ್ ಲಾಡ್ ಅಂದರೆ ಫೈವ್ ಸ್ಟಾರ್ ಇದ್ದಂಗೆ; ಸಂತೋಷ್ ಲಾಡ್ ಹಾಡಿ ಹೊಗಳಿದ ಶಾಸಕ ಕೋನರೆಡ್ಡಿ

ಬೆಂಗಳೂರು: ಸಂತೋಷ್‌ ಲಾಡ್ ಎಂದರೆ ಫೈವ್‌ ಸ್ಟಾರ್ ಇದ್ದಂಗೆ ಎಂದು ಸಂತೋಷ್‌ ಲಾಡ್ ಅವರನ್ನು ಶಾಸಕ ಕೋನರೆಡ್ಡಿ ಅವರು ಹಾಡಿ ಹೊಗಳಿದ್ದಾರೆ. ವಿಧಾನಸಭೆಯ ಕಲಾಪದಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರ ಕಾರ್ಯವೈಖರಿಯನ್ನು ನವಲಗುಂದ ಶಾಸಕರಾದ ಎನ್‌ ಎಚ್‌ ಕೋನರೆಡ್ಡಿ ಅವರು ಮನತುಂಬಿ ಪ್ರಶಂಸಿಸಿದರು. ಸಂತೋಷ್‌ ಲಾಡ್‌ ಎಂದರೆ ಫೈವ್‌ ಸ್ಟಾರ್‌ ಇದ್ದಂಗೆ. ಕಳೆದ ಮೂವತ್ತು ವರ್ಷಗಳಿಂದ

ಒನ್ ಇ೦ಡಿಯ 13 Mar 2026 8:10 am

ಹೋಟೆಲ್‌ ಬಂದ್‌ ಇಲ್ಲ, ಮೆನು ಕಟ್‌: ಮಾಲೀಕರ ಸಂಘದ ಮಹತ್ವದ ತೀರ್ಮಾನ

ಗ್ಯಾಸ್ ಕೊರತೆಯಿಂದ ಈಗಾಗಲೇ 10-15 ಕ್ಕೂ ಹೆಚ್ಚು ಹೋಟೆಲ್‌ಗಳು ಮುಚ್ಚಿವೆ, ಆದರೆ ಕೆಲವೆಡೆ 1-2 ದಿನಕ್ಕಾಗುವಷ್ಟು ಗ್ಯಾಸ್ ಇದೆ. ಒಂದು ವೇಳೆ ಮುಗಿದರೂ ಹೋಟೆಲ್ ಬಂದ್ ಮಾಡುವ ಬದಲು ಎಲೆಕ್ಟ್ರಿಕ್ ಸ್ಟವ್ ಬಳಕೆಗೆ ಹೋಟೆಲ್ ಮಾಲೀಕರ ಸಂಘ ತೀರ್ಮಾನಿಸಿದೆ.

ವಿಜಯ ಕರ್ನಾಟಕ 13 Mar 2026 7:38 am

Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್

Rain in Karnataka: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಳೆದ 15 ದಿನಗಳಿಂದ ಭಾರೀ ಬಿಸಿಲಿನ ವಾತಾವರಣವಿದೆ. ಇದೀಗ ಕರ್ನಾಟಕದ ವಿವಿಧ ಭಾಗದಲ್ಲಿ ಮಾರ್ಚ್ 15ರ ಭಾನುವಾರದಿಂದ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಕರ್ನಾಟಕದ ಯಾವ ಭಾಗದಲ್ಲಿ ಮಳೆ ಆಗಲಿದೆ, ಕರ್ನಾಟಕದಲ್ಲಿ ಇಂದಿನ ಹವಾಮಾನ ಹೇಗಿದೆ ಎನ್ನುವ ಸಂಪೂರ್ಣ ವಿವರ

ಒನ್ ಇ೦ಡಿಯ 13 Mar 2026 7:17 am

ಇರಾನ್ ವಿರುದ್ಧದ ಯುದ್ಧಕ್ಕೆ ಅಮೆರಿಕದಲ್ಲಿ ಜನಬೆಂಬಲವಿಲ್ಲ: ಸಮೀಕ್ಷೆಗಳು

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಯುದ್ಧಕ್ಕೆ ದೇಶದೊಳಗೆ ಹೆಚ್ಚಿನ ಜನಬೆಂಬಲ ದೊರೆಯುತ್ತಿಲ್ಲ ಎಂಬುದು ಹಲವು ಸಮೀಕ್ಷೆಗಳ ಮೂಲಕ ತಿಳಿದುಬಂದಿದೆ. ಇತ್ತೀಚಿನ ದಶಕಗಳಲ್ಲಿ ಆರಂಭದಲ್ಲೇ ಜನರಲ್ಲಿ ಹೆಚ್ಚು ವಿರೋಧ ಕಂಡ ಮೊದಲ ಪ್ರಮುಖ ಸಂಘರ್ಷ ಇದಾಗಿದೆ ಎಂದು ವಿಶ್ಲೇಷಣೆಗಳು ಸೂಚಿಸಿವೆ ಎಂದು Aljazeera ವರದಿ ಮಾಡಿದೆ. ಮಾರ್ಚ್ 9ರಂದು ಕ್ವಿನ್ನಿಪಿಯಾಕ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಸಮೀಕ್ಷೆಯ ಪ್ರಕಾರ, ಶೇಕಡಾ 53ರಷ್ಟು ಅಮೆರಿಕ ಮತದಾರರು ಇರಾನ್ ವಿರುದ್ಧ ಮಿಲಿಟರಿ ದಾಳಿ ನಡೆಸುವುದನ್ನು ವಿರೋಧಿಸಿದ್ದಾರೆ. ಜೊತೆಗೆ, ಅಮೆರಿಕ ಸೇನೆಯನ್ನು ನೇರ ದಾಳಿಗೆ ನಿಯೋಜಿಸುವ ಕ್ರಮಕ್ಕೆ ಶೇಕಡಾ 74ರಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಇಪ್ಸೊಸ್ ನಡೆಸಿದ ಮತ್ತೊಂದು ಸಮೀಕ್ಷೆಯಲ್ಲಿ, ಶೇಕಡಾ 43ರಷ್ಟು ಅಮೆರಿಕನ್ನರು ಅಮೆರಿಕದ ದಾಳಿಗಳನ್ನು ವಿರೋಧಿಸಿದ್ದು, ಶೇಕಡಾ 29ರಷ್ಟು ಜನರು ಮಾತ್ರ ಬೆಂಬಲಿಸಿದ್ದಾರೆ. ಉಳಿದವರು ತಮ್ಮ ಅಭಿಪ್ರಾಯದ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಲ್ಲಿಯೂ ಯುದ್ಧದ ಬಗ್ಗೆ ಭಿನ್ನಾಭಿಪ್ರಾಯಗಳು ಕಂಡುಬಂದಿವೆ. ರಾಷ್ಟ್ರೀಯ ಭದ್ರತೆಗಾಗಿ ಸೈನಿಕ ಕ್ರಮ ಅಗತ್ಯವೆಂದು ಟ್ರಂಪ್ ಸಮರ್ಥಿಸಿಕೊಂಡಿದ್ದರೂ, ಕೆಲವು ಕನ್ಸರ್ವೇಟಿವ್ ರಾಜಕೀಯ ನಾಯಕರು ಅದನ್ನು ಪ್ರಶ್ನಿಸಿದ್ದಾರೆ. ಟಾಕ್ ಶೋ ನಿರೂಪಕ ಟಕರ್ ಕಾರ್ಲ್ಸನ್ ಯುದ್ಧವನ್ನು ತೀವ್ರವಾಗಿ ಟೀಕಿಸಿ, ಟ್ರಂಪ್ ಅವರನ್ನು ಅವರ ಸಲಹೆಗಾರರು ತಪ್ಪು ದಾರಿಗೆ ಒಯ್ದಿರಬಹುದು ಎಂದು ಹೇಳಿದ್ದಾರೆ. ಎಬಿಸಿ ನ್ಯೂಸ್‌ ಗೆ ನೀಡಿದ ಸಂದರ್ಶನದಲ್ಲಿ ಕಾರ್ಲ್ಸನ್, ಈ ಯುದ್ಧವನ್ನು ತೀವ್ರವಾಗಿ ವಿರೋಧಿಸಬೇಕಾದದ್ದು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ತಮ್ಮ “ಮೇಕ್ ಅಮೆರಿಕಾ ಗ್ರೇಟ್ ಎಗೇನ್” (MAGA) ಚಳವಳಿಯೊಂದಿಗೆ ತಾವು ಹೊಂದಾಣಿಕೆಯಾಗಿರುವುದಾಗಿ ಹೇಳಿ, ಕಾರ್ಲ್ಸನ್ ಅವರ ಟೀಕೆಯನ್ನು ತಳ್ಳಿ ಹಾಕಿದರು. ಆದರೂ, ಈ ಯುದ್ಧಕ್ಕೆ ಸಾರ್ವಜನಿಕ ಬೆಂಬಲ ಪಡೆಯುವುದು ಟ್ರಂಪ್ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಸೈನಿಕ ಕ್ರಮ ಏಕೆ ಅಗತ್ಯವಾಯಿತು ಎಂಬುದನ್ನು ಆಡಳಿತ ಹಲವು ಕಾರಣಗಳ ಮೂಲಕ ಸಮರ್ಥಿಸುತ್ತಿದೆ. ಟ್ರಂಪ್ ಒಂದು ಸಾರ್ವಜನಿಕ ಭಾಷಣದಲ್ಲಿ, ಇರಾನ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ “ಪರಮಾಣು ಯುದ್ಧ ಸಂಭವಿಸಬಹುದಿತ್ತು” ಎಂದು ಎಚ್ಚರಿಸಿದ್ದಾರೆ. ಜೊತೆಗೆ, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಕಡಿಮೆ ಮಾಡಲು ನಡೆದ ಮಾತುಕತೆಗಳು ಫಲ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಕೆಲವು ಅಧಿಕಾರಿಗಳು ಈ ಮಾತುಕತೆಗಳು ಒಪ್ಪಂದದ ಹಂತಕ್ಕೆ ಸಮೀಪಿಸಿದ್ದವು ಎಂದು ಹಿಂದೆ ಹೇಳಿದ್ದರು. ಇದಕ್ಕೂ ಮೊದಲು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಇರಾನ್ ವಿರುದ್ಧ ಇಸ್ರೇಲ್ ಕ್ರಮ ಕೈಗೊಳ್ಳಲಿದೆ ಎಂಬ ಮಾಹಿತಿ ಅಮೆರಿಕಕ್ಕೆ ಇದ್ದುದರಿಂದಲೇ ದಾಳಿ ಆರಂಭಿಸಲಾಯಿತು ಎಂದು ಹೇಳಿದ್ದರು. ಆದರೆ ನಂತರ ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿದರು. ಯುದ್ಧ ಆರಂಭವಾದ ಬಳಿಕ ಏಳು ಅಮೆರಿಕ ಸೇನಾ ಸದಸ್ಯರು ಸಾವನ್ನಪ್ಪಿದ್ದಾರೆ. ಜೊತೆಗೆ ಸುಮಾರು 1,348 ಇರಾನಿಯನ್ನರು ಹಾಗೂ 15 ಇಸ್ರೇಲ್ ಪ್ರಜೆಗಳು ಮೃತಪಟ್ಟಿದ್ದಾರೆ. ಹತ್ತಿರದ ಗಲ್ಫ್ ರಾಷ್ಟ್ರಗಳಲ್ಲಿ ಇನ್ನೂ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ವಾರ್ತಾ ಭಾರತಿ 13 Mar 2026 6:17 am

ಇರಾನ್ ವಿರುದ್ಧ ಯುದ್ಧ | ಪಶ್ಚಿಮ ಇರಾಕ್‌ ನಲ್ಲಿ ಅಮೆರಿಕದ KC-135 ವಿಮಾನ ಅಪಘಾತ; ರಕ್ಷಣಾ ಕಾರ್ಯಾಚರಣೆ ಆರಂಭ

ವಾಷಿಂಗ್ಟನ್: ಇರಾನ್ ವಿರುದ್ಧ ಇಸ್ರೇಲ್ ಜೊತೆ ನಡೆಯುತ್ತಿರುವ ಜಂಟಿ ಮಿಲಿಟರಿ ಕಾರ್ಯಾಚರಣೆಗಳ ನಡುವೆಯೇ ಪಶ್ಚಿಮ ಇರಾಕ್‌ ನಲ್ಲಿ ಅಮೆರಿಕದ ಇಂಧನ ತುಂಬುವ ವಿಮಾನವೊಂದು ಅಪಘಾತಕ್ಕೀಡಾಗಿದೆ ಎಂದು ಅಮೆರಿಕ ಸೇನೆ ಗುರುವಾರ ದೃಢಪಡಿಸಿದೆ. ಘಟನೆಯ ನಂತರ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ತಿಳಿಸಿದೆ ಎಂದು Aljazeera ವರದಿ ಮಾಡಿದೆ. ಮಧ್ಯಪ್ರಾಚ್ಯ ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವ ಸೆಂಟ್ರಲ್ ಕಮಾಂಡ್ ಬಿಡುಗಡೆ ಮಾಡಿದ ಸಂಕ್ಷಿಪ್ತ ಪ್ರಕಟಣೆಯ ಪ್ರಕಾರ, ಈ ಘಟನೆ ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯ ವೇಳೆ ಸಂಭವಿಸಿದೆ. ಅಪಘಾತಕ್ಕೀಡಾದ ವಿಮಾನವು ಅಮೆರಿಕದ KC–135 ಮಾದರಿಯ ಇಂಧನ ತುಂಬುವ ವಿಮಾನವಾಗಿದ್ದು, ಅಮೆರಿಕ ಮತ್ತು ಅದರ ಮಿತ್ರ ಪಡೆಗಳ ನಿಯಂತ್ರಣದಲ್ಲಿರುವ ವಾಯುಪ್ರದೇಶದಲ್ಲೇ ಈ ಘಟನೆ ನಡೆದಿದೆ ಎಂದು ಹೇಳಿದೆ. ಘಟನೆಯ ವೇಳೆ ಎರಡು ವಿಮಾನಗಳು ಹಾರಾಟದಲ್ಲಿದ್ದವು. ಅವುಗಳಲ್ಲಿ ಒಂದು ವಿಮಾನ ಸುರಕ್ಷಿತವಾಗಿ ಇಳಿದಿದ್ದು, ಮತ್ತೊಂದು ವಿಮಾನ ಅಪಘಾತಕ್ಕೀಡಾಗಿದೆ. ಎರಡೂ ವಿಮಾನಗಳು ಅತ್ಯಂತ ಸಮೀಪದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಡಿಕ್ಕಿ ಹೊಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇದುವರೆಗೆ ಸಾವುನೋವುಗಳು ಅಥವಾ ಬದುಕುಳಿದವರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ಪಡೆಗಳು ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿಸಿರುವುದಾಗಿ ಸೆಂಟ್ರಲ್ ಕಮಾಂಡ್ ಹೇಳಿದೆ. 'ಅಮೆರಿಕದ KC-135 ಇಂಧನ ತುಂಬುವ ವಿಮಾನ ಅಪಘಾತಕ್ಕೀಡಾದ ಬಗ್ಗೆ ಅಮೆರಿಕ ಸೆಂಟ್ರಲ್ ಕಮಾಂಡ್ ಮಾಹಿತಿ ನೀಡಿದೆ. ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆ ವೇಳೆ, ಅಮೆರಿಕ ಮತ್ತು ಅದರ ಮಿತ್ರ ಪಡೆಗಳ ನಿಯಂತ್ರಣದಲ್ಲಿರುವ ವಾಯುಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ’ ಎಂದು ಪ್ರಕಟನೆ ತಿಳಿಸಿದೆ. ಈ ಅಪಘಾತ ಶತ್ರು ಪಡೆಗಳ ದಾಳಿ ಅಥವಾ ಮಿತ್ರ ಪಡೆಗಳ ತಪ್ಪು ಗುಂಡಿನ ದಾಳಿಯಿಂದ ಸಂಭವಿಸಿಲ್ಲ ಎಂದು ಅಮೆರಿಕ ಸೇನೆ ಸ್ಪಷ್ಟಪಡಿಸಿದೆ. ಇದರ ನಡುವೆ, ಇರಾನ್ ವಿರುದ್ಧ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಈಗಾಗಲೇ 7 ಮಂದಿ ಅಮೆರಿಕದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಸೇನೆ ವರದಿ ಮಾಡಿದೆ. ಒಟ್ಟು 140 ಮಂದಿ ಗಾಯಗೊಂಡಿದ್ದು, ಅವರಲ್ಲಿ ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್ ತಿಳಿಸಿದ್ದಾರೆ. ಫೆಬ್ರವರಿ 28ರಂದು ಇರಾನ್ ವಿರುದ್ಧ ಅಮೆರಿಕ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದ ಬಳಿಕ ಸಂಭವಿಸಿದ ಇತ್ತೀಚಿನ ಸೇನಾ ಅಪಘಾತ ಇದಾಗಿದೆ. ಯುದ್ಧ ಆರಂಭವಾದ ಒಂದು ದಿನದ ಬಳಿಕ, ಮಾರ್ಚ್ 1ರಂದು ಮೂರು ಎಫ್–15ಇ ಸ್ಟ್ರೈಕ್ ಈಗಲ್ಸ್ ಫೈಟರ್ ಜೆಟ್‌ ಗಳನ್ನು ಕುವೈತ್ ವಾಯು ರಕ್ಷಣಾ ಪಡೆಗಳು ತಪ್ಪಾಗಿ ಹೊಡೆದುರುಳಿಸಿದ ಘಟನೆ ನಡೆದಿದೆ. ಇರಾನ್ ಮಧ್ಯಪ್ರಾಚ್ಯದ ಹಲವೆಡೆ ಪ್ರತೀಕಾರದ ದಾಳಿಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತು ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಆ ಘಟನೆಯಲ್ಲಿ ಫೈಟರ್ ಜೆಟ್‌ ಗಳಲ್ಲಿ ಇದ್ದ ಆರು ಮಂದಿ ವಿಮಾನ ಸಿಬ್ಬಂದಿ ಸುರಕ್ಷಿತವಾಗಿ ಜಿಗಿದು ಬದುಕುಳಿದಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 13 Mar 2026 6:11 am

LPG Gas: ಎಲ್‌ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ

LPG Gas:ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಎಲ್‌ಪಿಜಿ (ಅಡುಗೆ ಅನಿಲ) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕದ ನಡುವೆಯೇ, ಸರ್ಕಾರವು ದೇಶೀಯ ಗ್ಯಾಸ್ ರಿಫಿಲ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಹಾಗೂ ಅನಿಲ ವಿತರಣೆಯಲ್ಲಿನ ದೂರುಗಳನ್ನು ಸಲ್ಲಿಸಲು ಸಹಾಯವಾಣಿಗಳನ್ನು ಬಿಡುಗಡೆ ಮಾಡಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ತೈಲ ಮತ್ತು ಅನಿಲ ಪೂರೈಕೆಯ ಮಾರ್ಗಗಳಿಗೆ ಅಡ್ಡಿ

ಒನ್ ಇ೦ಡಿಯ 13 Mar 2026 6:05 am

ಯುದ್ಧ ಪರಿಣಾಮ, ಭಾರಿ ಏರಿದ ಅಡುಗೆ ಎಣ್ಣೆ ಬೆಲೆ: ಎಣ್ಣೆಯ ಕೃತಕ ಅಭಾವ? ತಾಳೆ, ಸೂರ್ಯಕಾಂತಿ ಎಣ್ಣೆ 15 ದಿನಕ್ಕಾಗುವಷ್ಟು ದಾಸ್ತಾನು

ಸೂರ್ಯಕಾಂತಿ ಎಣ್ಣೆ, ತಾಳೆ ಎಣ್ಣೆ ಯುದ್ದದಿಂದಾಗಿ ಲಭ್ಯತೆ ಇಲ್ಲ ಎನ್ನಲಾಗ್ತಿದೆ. ಈಗ ಕೇವಲ 15 ದಿನದ ದಾಸ್ತಾನು ಇದೆ ಎನ್ನುತ್ತಿರುವ ವ್ಯಾಪಾರಗಳು, ಇನ್ನೊಂದೆಡೆ ಭಾರಿ ಬೆಲೆ ಏರಿಕೆ ಮಾಡಿದ್ದಾರೆ.

ವಿಜಯ ಕರ್ನಾಟಕ 13 Mar 2026 5:41 am

ಭಾರತದ ಧ್ವಜವಿರುವ ಟ್ಯಾಂಕರ್‌ ಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಗೆ ಅವಕಾಶ?: ವರದಿ

ಹೊಸದಿಲ್ಲಿ, ಮಾ.12: ಭಾರತದ ಕಚ್ಚಾ ತೈಲ ಆಮದುಗಳಲ್ಲಿ ಸುಮಾರು 40 ಶೇಕಡಾ ಸಾಗಣೆ ನಡೆಯುವ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಭಾರತದ ಧ್ವಜ ಹೊತ್ತ ಟ್ಯಾಂಕರ್‌ ಗಳಿಗೆ ಸಾಗಣೆಗೆ ಇರಾನ್ ಅವಕಾಶ ನೀಡಬಹುದು ಎಂದು ಭಾರತೀಯ ಸರ್ಕಾರಿ ಮೂಲವೊಂದು ಗುರುವಾರ ತಿಳಿಸಿದೆ. ಆದರೆ, ಇರಾನಿನ ಮೂಲವೊಂದು ಇಂತಹ ಯಾವುದೇ ಒಪ್ಪಂದ ಇಲ್ಲ ಎಂದು ಹೇಳಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರು ಮೂರು ಬಾರಿ ಮಾತುಕತೆ ನಡೆಸಿದ್ದಾರೆ ಎಂದು ಭಾರತ ತಿಳಿಸಿದೆ. ಈ ವಾರ ನಡೆದ ಇತ್ತೀಚಿನ ಮಾತುಕತೆಯಲ್ಲಿ ಹಡಗುಗಳ ಸುರಕ್ಷತೆ ಹಾಗೂ ಭಾರತದ ಇಂಧನ ಭದ್ರತೆ ಸಂಬಂಧಿತ ವಿಷಯಗಳು ಚರ್ಚೆಯಾಗಿವೆ ಎನ್ನಲಾಗಿದೆ. ಈ ಕುರಿತು ವಾರದ ಮಾಧ್ಯಮ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ‘ಇದಕ್ಕಿಂತ ಹೆಚ್ಚಿನ ವಿವರಗಳನ್ನು ಈಗ ಹೇಳುವುದು ಅಕಾಲಿಕ’ ಎಂದು ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕಾರವಿಲ್ಲದ ಕಾರಣ ಭಾರತೀಯ ಮೂಲವೊಂದು ತನ್ನ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಮತ್ತೊಂದೆಡೆ, ವಿಷಯ ಸೂಕ್ಷ್ಮವಾಗಿರುವುದರಿಂದ ಯಾವುದೇ ಒಪ್ಪಂದ ಇಲ್ಲ ಎಂದು ಇರಾನಿನ ಮೂಲವೊಂದು ಹೇಳಿದೆ. ಈ ನಡುವೆ, ಸೌದಿ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಸೂಯೆಜ್‌ ಮ್ಯಾಕ್ಸ್ ವರ್ಗದ ‘ಶೆನ್‌ಲಾಂಗ್’ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ದಾಟಿದ ಬಳಿಕ ಮುಂಬೈನ ಬಂದರಿಗೆ ತಲುಪಿದೆ. ಫೆಬ್ರವರಿ ಅಂತ್ಯದಲ್ಲಿ ಇರಾನ್–ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧ ಆರಂಭವಾದ ಬಳಿಕ ಮಧ್ಯಪ್ರಾಚ್ಯದಿಂದ ಭಾರತ ತಲುಪಿದ ಮೊದಲ ಕಚ್ಚಾ ತೈಲ ಟ್ಯಾಂಕರ್ ಇದಾಗಿದೆ ಎಂದು LSEG ದತ್ತಾಂಶ ತಿಳಿಸಿದೆ. ಈ ಸಾಗಣೆಯ ಗ್ರಾಹಕ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (BPCL) ಎಂದು ಮೂಲಗಳು ತಿಳಿಸಿವೆ. ಭಾರತಕ್ಕೆ ತೆರಳುತ್ತಿದ್ದ ಇನ್ನೂ ಎರಡು ವಿದೇಶಿ ಧ್ವಜ ಹೊತ್ತ ಟ್ಯಾಂಕರ್‌ ಗಳು ಇತ್ತೀಚೆಗೆ ಜಲಸಂಧಿಯನ್ನು ದಾಟಿವೆ. ಮಂಗಳವಾರ ತಡರಾತ್ರಿ ಭಾರತ ಮತ್ತು ಇರಾನ್ ವಿದೇಶಾಂಗ ಮಂತ್ರಿಗಳ ನಡುವಿನ ದೂರವಾಣಿ ಮಾತುಕತೆಯ ಬಳಿಕ ಭಾರತೀಯ ಧ್ವಜ ಹೊತ್ತ ಹಡಗುಗಳಿಗೆ ಸುರಕ್ಷಿತ ಮಾರ್ಗದ ಭರವಸೆ ನೀಡಲಾಗಿದೆ ಎಂದು ಭಾರತೀಯ ಮೂಲಗಳು ಹೇಳಿವೆ. ಆದರೆ, ಇರಾನ್ ಆಡಳಿತದ ವಿವಿಧ ಹಂತಗಳಲ್ಲಿ ಸೂಚನೆಗಳು ಹೇಗೆ ಜಾರಿಯಾಗುತ್ತಿವೆ ಎಂಬುದರ ಬಗ್ಗೆ ಸ್ಪಷ್ಟತೆ ಕಡಿಮೆ ಇರುವುದರಿಂದ ಪರಿಸ್ಥಿತಿ ಇನ್ನೂ ಅಸ್ಥಿರವಾಗಿದೆ ಎಂದು ಮೂಲಗಳು ಹೇಳಿವೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅವರ ಇರಾನಿನ ಪ್ರತಿರೂಪ ಸಯ್ಯದ್ ಅಬ್ಬಾಸ್ ಅರಾಘ್ಚಿ ನಡುವಿನ ಮಾತುಕತೆಯ ಬಳಿಕ ನೀಡಿದ ಹೇಳಿಕೆಯಲ್ಲಿ, ಪರ್ಷಿಯನ್ ಕೊಲ್ಲಿಯಲ್ಲಿ ಉಂಟಾಗಿರುವ ಅಸುರಕ್ಷಿತ ಪರಿಸ್ಥಿತಿ ಹಾಗೂ ಸಾಗಣೆಗೆ ಉಂಟಾಗುತ್ತಿರುವ ಸಮಸ್ಯೆಗಳಿಗೆ ಅಮೆರಿಕವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿದೆ. ಆದರೆ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗದ ಕುರಿತು ಯಾವ ಒಪ್ಪಂದವಿದೆ ಎಂದು ಎರಡೂ ಕಡೆಯವರು ಅಧಿಕೃತವಾಗಿ ಹೇಳಿಲ್ಲ. ಭಾರತೀಯ ಧ್ವಜ ಹೊತ್ತ 28 ಹಡಗುಗಳು ಹಾರ್ಮುಜ್ ಜಲಸಂಧಿಯ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 778 ಭಾರತೀಯ ನಾವಿಕರು ಇದ್ದಾರೆ ಎಂದು ಭಾರತ ಬುಧವಾರ ತಿಳಿಸಿದೆ. ‘‘ಭಾರತೀಯ ನಾವಿಕರ ಸುರಕ್ಷತೆಗಾಗಿ ಅಧಿಕಾರಿಗಳು, ಹಡಗು ನಿರ್ವಹಣಾ ಸಂಸ್ಥೆಗಳು ಹಾಗೂ ನಾವಿಕರನ್ನು ನೇಮಿಸುವ ಏಜೆನ್ಸಿಗಳು ಭಾರತೀಯ ರಾಯಭಾರ ಕಚೇರಿಗಳು ಮತ್ತು ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸುತ್ತಿವೆ’ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಇರಾನಿನ ನಾವಿಕರಿಗೆ ಭಾರತ ಆಶ್ರಯ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾದ ಬಳಿಕ ಭಾರತ ಬಂದರಿಗೆ ತಲುಪಿದ ಹಡಗಿನಿಂದ 183 ಇರಾನಿನ ನಾವಿಕರಿಗೆ ಭಾರತ ಆಶ್ರಯ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ನೌಕಾ ವ್ಯಾಯಾಮ ಮುಗಿಸಿ ಹಿಂದಿರುಗುತ್ತಿದ್ದ ಮೂರು ಇರಾನಿನ ಹಡಗುಗಳಿಗೆ ಭಾರತ ಪ್ರವೇಶ ಅವಕಾಶ ನೀಡಿತ್ತು. ನಂತರ ಅವುಗಳಲ್ಲಿ ಒಂದನ್ನು ಅಂತರರಾಷ್ಟ್ರೀಯ ನೀರಿನಲ್ಲಿ ಅಮೆರಿಕದ ಜಲಾಂತರ್ಗಾಮಿ ಮುಳುಗಿಸಿತು. ಮತ್ತೊಂದು ಹಡಗು ಶ್ರೀಲಂಕಾದ ನೆರವು ಕೋರಿತು. ಫೆಬ್ರವರಿ ಅಂತ್ಯದಿಂದ ಹಾರ್ಮುಜ್ ಜಲಸಂಧಿಯಲ್ಲಿ ಕನಿಷ್ಠ 16 ಹಡಗುಗಳ ಮೇಲೆ ದಾಳಿ ನಡೆದಿವೆ. ಸಂಘರ್ಷ ಮುಂದುವರೆದರೆ ತೈಲದ ಬೆಲೆ ಬ್ಯಾರೆಲ್‌ ಗೆ 200 ಡಾಲರ್ ವರೆಗೆ ಏರಬಹುದು ಎಂದು ಟೆಹ್ರಾನ್ ಎಚ್ಚರಿಸಿದೆ. ಇದೇ ವೇಳೆ, ಭಾರತದ ಪಶ್ಚಿಮ ಬಂದರಾದ ಕಾಂಡ್ಲಾ ಕಡೆಗೆ ತೆರಳುತ್ತಿದ್ದ ಥಾಯ್ ಹಡಗಿನ ಮೇಲೆ ಬುಧವಾರ ಜಲಸಂಧಿಯಲ್ಲಿ ದಾಳಿ ನಡೆದಿದ್ದು, ಇದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ‘ಸಂಘರ್ಷದ ಮಧ್ಯೆ ವಾಣಿಜ್ಯ ಸಾಗಣೆಯನ್ನು ಮಿಲಿಟರಿ ದಾಳಿಯ ಗುರಿಯಾಗಿಸಲಾಗುತ್ತಿರುವುದನ್ನು ಭಾರತ ಖಂಡಿಸುತ್ತದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಈ ದಾಳಿಯಲ್ಲಿ ಭಾರತೀಯ ನಾಗರಿಕರೂ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಹಾರ್ಮುಜ್ ಜಲಸಂಧಿ ಬಹುತೇಕ ಮುಚ್ಚಲ್ಪಟ್ಟಿರುವುದರಿಂದ ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಸಂಕಷ್ಟ ಉಂಟಾಗಿದ್ದು, ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವಂತಹ ಪರ್ಯಾಯಗಳತ್ತ ಗಮನ ಹರಿಸಲಾಗುತ್ತಿದೆ.

ವಾರ್ತಾ ಭಾರತಿ 13 Mar 2026 5:37 am

ಮಧ್ಯಪ್ರಾಚ್ಯ ಉದ್ವಿಗ್ನತೆ ಕುರಿತು ಇರಾನ್ ಅಧ್ಯಕ್ಷ ಮಾಸೂದ್ ಪೆಜೆಶ್ಕಿಯಾನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಗಳ ಉಲ್ಬಣ ಹಾಗೂ ನಾಗರಿಕರ ಜೀವಹಾನಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಮೋದಿ

ವಾರ್ತಾ ಭಾರತಿ 13 Mar 2026 5:28 am

ಅಡುಗೆ ಅನಿಲ ಪೂರೈಕೆ ವ್ಯತ್ಯಯ | ಕೋವಿಡ್ ಕಾಲದ ಸ್ಥಿತಿಗೆ ತಳ್ಳಿದರೆ ಆಶ್ಚರ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ಕೇಂದ್ರ ಸರಕಾರವೇ ವಾಣಿಜ್ಯ ಬಳಕೆಯ ಎಲ್‍ಪಿಜಿ ಮತ್ತು ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಏರಿಸಿದೆ. ಮೋದಿಯವರ ‘ಹಿಹಿಹಿಹಿಹಿ ಫಾರಿನ್ ಪಾಲಿಸಿ’ಯು ಜನರನ್ನು ಮತ್ತೊಮ್ಮೆ ಗರಿಷ್ಠ ಮೊತ್ತದ ನೋಟ್ ರದ್ದತಿ, ಕೋವಿಡ್ ಕಾಲದ ಸ್ಥಿತಿಗೆ ತಳ್ಳಿದರೆ ಯಾವುದೇ ಆಶ್ಚರ್ಯವಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ. ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಕೇಂದ್ರ ಸರಕಾರ ಮಾತಲ್ಲಿ ‘ಸಬ್ ಚೆಂಗಾಸಿ’ ಎನ್ನುತ್ತಿದೆ, ಕೃತಿಯಲ್ಲಿ ವಾಸ್ತವದ ಆತಂಕ ವ್ಯಕ್ತವಾಗುತ್ತಿದೆ. ಎರಡು ತಿಂಗಳಿಗೆ ಬೇಕಾದ ಇಂಧನ ತೈಲ ಹಾಗೂ ಅಡುಗೆ ಅನಿಲದ ಶೇಖರಣೆ ಇದೆ, ನಾವೆಲ್ಲವನ್ನೂ ನಿಭಾಯಿಸುತ್ತೇವೆ ಎನ್ನುತ್ತಿದ್ದ ಕೇಂದ್ರ ಸರ್ಕಾರ, ಎಸ್ಮಾ ಜಾರಿಗೊಳಿಸಿ, ಜನರ ಅಗತ್ಯದ ವಸ್ತುಗಳ ಉತ್ಪಾದನೆ, ಪೂರೈಕೆ ಮತ್ತು ವಿತರಣೆಯನ್ನು ನಿಯಂತ್ರಿಸಲು ಹೊರಟಿದೆ’ ಎಂದು ಟೀಕಿಸಿದ್ದಾರೆ. ‘ಎಲ್‍ಪಿಜಿ ಸಿಲಿಂಡರ್ ವ್ಯತ್ಯಯದ ಕಾರಣ ದೇಶದಲ್ಲಿನ ಹೋಟೆಲ್ ಮುಚ್ಚಬೇಕಾಗಬಹುದೆಂದು ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ. ಕೇಂದ್ರ ಸರಕಾರ ಎಲ್‍ಪಿಜಿ ಗ್ಯಾಸ್ ರಿಫಿಲ್ ಅವಧಿಯನ್ನು 25ದಿನಗಳಿಗೆ ವಿಸ್ತರಿಸಿದೆ, ಜನ ಸಿಲಿಂಡರ್ ಗಳಿಗಾಗಿ ಪರದಾಡುವ ದೃಶ್ಯಗಳು ದಾರಾಳವಾಗಿವೆ, ನೋಟ್ ನಿಷೇಧದ ಸಮಯದಲ್ಲಿ ಎಟಿಎಂ ಮುಂದೆ ಪರದಾಡಿದಂತೆಯೇ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಮಾತಲ್ಲಿ ಸಬ್ ಚೆಂಗಾಸಿ ಎನ್ನುತ್ತಿದೆ, ಕೃತಿಯಲ್ಲಿ ವಾಸ್ತವದ ಆತಂಕ ವ್ಯಕ್ತವಾಗುತ್ತಿದೆ. - ಎರಡು ತಿಂಗಳಿಗೆ ಬೇಕಾದ ಇಂಧನ ತೈಲ ಹಾಗೂ ಅಡುಗೆ ಅನಿಲದ ಶೇಖರಣೆ ಇದೆ, ನಾವೆಲ್ಲವನ್ನೂ ನಿಭಾಯಿಸುತ್ತೇವೆ ಎನ್ನುತ್ತಿದ್ದ ಕೇಂದ್ರ ಸರ್ಕಾರ, ಎಸ್ಮಾ (Essential Commodities Act, 1955 - ECA) ಜಾರಿಗೊಳಿಸಿ, ಜನರ ಅಗತ್ಯದ… pic.twitter.com/AwntIN4C5d — Priyank Kharge / ಪ್ರಿಯಾಂಕ್ ಖರ್ಗೆ (@PriyankKharge) March 12, 2026

ವಾರ್ತಾ ಭಾರತಿ 13 Mar 2026 12:27 am

ವಿಜಯನಗರ | ಜಿಲ್ಲೆಯಲ್ಲಿ ಅಡುಗೆ ಅನಿಲ ಕೊರತೆ ಇಲ್ಲ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ

ವಿಜಯನಗರ : ಇತ್ತೀಚೆಗೆ ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ಸುಳ್ಳು ವದಂತಿಗಳು ಹರಿದಾಡುತ್ತಿವೆ. ಆದರೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಅನಿಲ ಕೊರತೆಯಾಗದೇ ಎಂದಿನಂತೆ ಪೂರೈಕೆ ನಡೆಯಲಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸ್ಪಷ್ಟಪಡಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಅಡುಗೆ ಅನಿಲ ಪೂರೈಕೆಗೆ ಸಂಬಂಧಿಸಿದಂತೆ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಾಶ್ಚಿಮಾತ್ಯ ದೇಶಗಳಲ್ಲಿ ಯುದ್ಧದ ಸನ್ನಿವೇಶವನ್ನು ಮುಂದಿಟ್ಟುಕೊಂಡು ಅನಿಲದ ಕೊರತೆ ಉಂಟಾಗಲಿದೆ ಎಂಬ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಜಿಲ್ಲೆಯಲ್ಲಿ ಯಾವುದೇ ರೀತಿಯ ಅನಿಲ ಕೊರತೆ ಇಲ್ಲ. ಸರ್ಕಾರದ ನಿಯಮಾನುಸಾರ ಅನಿಲ ವಿತರಕ ಸಂಸ್ಥೆಗಳ ಮೂಲಕ ಪೂರೈಕೆ ಎಂದಿನಂತೆ ಸುಗಮವಾಗಿ ನಡೆಯಲಿದೆ ಎಂದು ತಿಳಿಸಿದರು. ಯಾರಾದರೂ ಅಕ್ರಮವಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಅನಿಲ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣವೇ ಸಂಬಂಧಿತ ಅನಿಲ ವಿತರಕ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗಬಾರದು ಎಂದು ಸಲಹೆ ನೀಡಿದರು. ಈ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಅನಿಲ ಪೂರೈಕೆ ಉದ್ಯಮದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಾರ್ತಾ ಭಾರತಿ 12 Mar 2026 11:59 pm

ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆ: ಶುಕ್ರವಾರ ರಾಜ್ಯದ 41.40 ಲಕ್ಷ ರೈತರ ಖಾತೆಗೆ ನೇರ ಹಣ ವರ್ಗಾವಣೆ

ಬೆಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಅಡಿಯಲ್ಲಿ 22ನೆ ಕಂತಿನ ಆರ್ಥಿಕ ನೆರವನ್ನು ಬಿಡುಗಡೆ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ ನಾಳೆ (ಮಾ.13) ಸಂಜೆ 5 ಗಂಟೆಗೆ ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಾದ ಬೃಹತ್ ಸಮಾರಂಭದಲ್ಲಿ ದೇಶಾದ್ಯಂತದ ರೈತರಿಗೆ ಹಣ ಬಿಡುಗಡೆಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕದ ಒಟ್ಟು 41,40,106 ರೈತ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಕೇಂದ್ರ ಸರಕಾರವು ರಾಜ್ಯದ ರೈತರಿಗಾಗಿ ಒಟ್ಟು 828.02ಕೋಟಿ ರೂ.ಗಳ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಿದೆ. ಮಾ.13ರಂದು ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ‘ಪಿ.ಎಂ. ಕಿಸಾನ್ ಉತ್ಸವ ದಿವಸ’ ಎಂದು ಆಚರಿಸಲಾಗುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಅರ್ಹ ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‍ಸೈಟ್ pmkisan.gov.inಗೆ ಭೇಟಿ ನೀಡಬಹುದು ಎಂದು ಅಪರ ಕೃಷಿ ನಿರ್ದೇಶಕರು(ಮಾಹಿತಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ತಾ ಭಾರತಿ 12 Mar 2026 11:58 pm

ಕಲ್ಲು ಬಂಡೆ ಸ್ಪೋಟ: ಬೆಚ್ಚಿಬಿದ್ದ ಹರಪನಹಳ್ಳಿ ಜನರು

30ಕ್ಕೂ ಅಧಿಕ ಮನೆಗಳಿಗೆ ಹಾನಿ

ವಾರ್ತಾ ಭಾರತಿ 12 Mar 2026 11:55 pm

ಯುದ್ಧದ ನಡುವೆ ಅವಧಿ ಮೀರಿದ ವೀಸಾಗಳಿಗೆ ಸಡಿಲಿಕೆ ಘೋಷಿಸಿದ ಯುಎಇ: ವರದಿ

ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿರುವ ನಡುವೆಯೇ ವಿದೇಶಗಳಲ್ಲಿ ಸಿಲುಕಿಕೊಂಡಿರುವ ನಿವಾಸಿಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರ ಸಡಿಲಿಕೆ ಘೋಷಿಸಿದೆ. ಫೆಬ್ರವರಿ 28ರಿಂದ ವಿದೇಶಗಳಲ್ಲಿ ಉಳಿದುಕೊಂಡಿರುವಾಗಲೇ ನಿವಾಸಿ ವೀಸಾ ಅವಧಿ ಮುಗಿದಿರುವವರು ತಮ್ಮ ದೀರ್ಘಾವಧಿಯ ವಾಸ್ತವ್ಯ ವೀಸಾಗಳನ್ನು ನವೀಕರಿಸಿಕೊಳ್ಳಲು ಮಾರ್ಚ್ 31ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ. ಇರಾನ್–ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ಎರಡು ವಾರಗಳಿಂದ ಯುಎಇ ಪ್ರದೇಶವು ಇರಾನ್‌ ನಿಂದ ಬರುವ ಕ್ಷಿಪಣಿಗಳು ಮತ್ತು ಡ್ರೋನ್‌ ಗಳ ಅಲೆಗಳನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯಿಂದಾಗಿ ಅನೇಕರು ವಿದೇಶಗಳಲ್ಲಿ ಸಿಲುಕಿಕೊಂಡಿದ್ದು, ಅವರ ವೀಸಾ ಅವಧಿ ಮುಗಿದಿರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ತಾತ್ಕಾಲಿಕ ಸಡಿಲಿಕೆಯನ್ನು ನೀಡಿದೆ. ಇದರ ಮೂಲಕ ಪ್ರಭಾವಿತ ನಿವಾಸಿಗಳು ಯಾವುದೇ ದಂಡ ಅಥವಾ ಕಾನೂನು ತೊಂದರೆ ಎದುರಿಸದೆ ತಮ್ಮ ದೀರ್ಘಾವಧಿಯ ವಾಸ್ತವ್ಯ ವೀಸಾಗಳನ್ನು ನವೀಕರಿಸಿಕೊಳ್ಳಲು ಅವಕಾಶ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ತಾ ಭಾರತಿ 12 Mar 2026 11:53 pm

ಕಾರ್ಪೊರೇಷನ್ ಬ್ಯಾಂಕ್‌ನ 120ನೇ ಸ್ಥಾಪಕರ ದಿನಾಚರಣೆ

ಉಡುಪಿ: ಕಾರ್ಪೊರೇಷನ್ ಬ್ಯಾಂಕ್‌ನ 120ನೇ ಸ್ಥಾಪಕರ ದಿನಾಚರಣೆ ಪ್ರಯುಕ್ತ ಹಾಜಿ ಅಬ್ದುಲ್ಲಾ ಸಂಗ್ರಹಾಲಯ ದಲ್ಲಿರುವ ಸ್ಥಾಪಕರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಂತರ ಹಾಜಿ ಅಬ್ದುಲ್ಲಾ ಆಡಿಟೋರಿಯಂನಲ್ಲಿ ಇಂದು ಸಭೆ ನಡೆಸಲಾಯಿತು. ಕಾರ್ಪೊರೇಷನ್ ಬ್ಯಾಂಕಿನ ನಿವೃತ್ತ ಸದಸ್ಯರು ಮತ್ತು ಮಂಗಳೂರಿನಿಂದ ಮಯ್ಯ ಮತ್ತು ನಿವೃತ್ತ ಸದಸ್ಯರು  ಬ್ಯಾಂಕಿನ ಸಂಸ್ಥಾಪಕರಾದ ಹಾಜಿ ಅಬ್ದುಲ್ಲಾ ಅವರ ವಾಸಸ್ಥಳವಾದ ಉಡುಪಿ ಶಾಖೆಯ ಆವರಣದಲ್ಲಿ ಸಭೆ ಸೇರಿದರು. ವಾಸುದೇವ ಶೆಣೈ ಅವರ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ನಾಗರಾಜ ಶೆಟ್ಟಿ ವಹಿಸಿದ್ದರು. ಮಂಗಳೂರಿನಿಂದ ಬಂದಿದ್ದ ಹಿರಿಯ ನಾಯಕರಾದ ಮಯ್ಯ, ದಯಾನಂದ್ ಮತ್ತು ಪವಿತ್ರ ಕುಮಾರ್ ಅವರು ಬ್ಯಾಂಕಿನ ಆಗುಹೋಗುಗಳ ಬಗ್ಗೆ ತಿಳಿಸಿದರು. ಕೃಷ್ಣಯ್ಯ, ನಾರಾಯಣ ಮಡಿ ಮತ್ತು ಶ್ರೀಪತಿ ಪಟ್ಲ ಅವರು ಹಾಜಿ ಅಬ್ದುಲ್ಲಾರ ಗುಣಗಾನ ಮಾಡಿದರು. ಈ ಸಂದರ್ಭ ವಾರಂಬಳ್ಳಿ ಶಾಖೆಯಿಂದ ನಿವೃತ್ತರಾಗಿದ್ದ ರಮೇಶ ಅವರಿಗೆ ಧನಸಹಾಯ ಮಾಡಲಾಯಿತು. ವಾಸುದೇವ ಶೆಣೈ ವಂದಿಸಿದರು. ಸುಮಾರು 75 ಮಂದಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ವಾರ್ತಾ ಭಾರತಿ 12 Mar 2026 11:52 pm

ಕೊಪ್ಪಳ | ಕೌಟುಂಬಿಕ ಕಲಹ : ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ಯಲಬುರ್ಗಾ: ತಾಲ್ಲೂಕಿನ ಮಾರನಾಳ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗುರುವಾರ ನಡೆದಿದೆ. ಮೃತರನ್ನು ಬಾಳವ್ವ ಕುರಿ (35)  ಹುಲಿಗಮ್ಮ (9) ಮತ್ತು ವಿಜಯಮ್ಮ (8) ಎಂದು ಗುರುತಿಸಲಾಗಿದೆ. ಪತಿ ಶರಣಪ್ಪ ಮತ್ತು ಬಾಳವ್ವ ನಡುವೆ ನಡೆದ ಸಣ್ಣ ಜಗಳವು ತೀವ್ರ ಸ್ವರೂಪ ಪಡೆದು, ಮನನೊಂದು ಬಾಳವ್ವ ಈ ದಾರುಣ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಪತಿಯ ನಿರಂತರ ಕಿರುಕುಳವೇ ಈ ಘಟನೆಯ ಪ್ರಮುಖ ಕಾರಣವಾಗಿರಬಹುದು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೋಲೀಸರು ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಯಿ ಮತ್ತು ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪತಿ ಶರಣಪ್ಪ ವಿಚಾರಣೆಗೆ ಒಳಗಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ವಾರ್ತಾ ಭಾರತಿ 12 Mar 2026 11:46 pm

‘ಸನ್ನಡತೆ’ಯ ಆಧಾರದ ಮೇಲೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 31 ಕೈದಿಗಳ ಬಿಡುಗಡೆ: ರಾಜ್ಯ ಸರಕಾರ ಆದೇಶ

ಬೆಂಗಳೂರು: ರಾಜ್ಯದ 9 ಕೇಂದ್ರ ಕಾರಾಗೃಹಗಳಲ್ಲಿ ದೀರ್ಘಕಾಲದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 31 ಮಂದಿ ಕೈದಿಗಳನ್ನು ಅವರ ‘ಸನ್ನಡತೆ’ಯ ಆಧಾರದ ಮೇಲೆ ಅವಧಿಪೂರ್ವವಾಗಿ ಬಿಡುಗಡೆಗೊಳಿಸಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ. ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಯು ಈ ಆದೇಶವನ್ನು ಹೊರಡಿಸಿದ್ದು, ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದ ಕೈದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಮಾನವೀಯ ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 14 ಮಂದಿ, ಮೈಸೂರು 2, ಬೆಳಗಾವಿ 2, ಕಲಬುರಗಿ 2, ಶಿವಮೊಗ್ಗ 1, ವಿಜಯಪುರ 5, ಬಳ್ಳಾರಿ 3, ಧಾರವಾಡ 1 ಹಾಗೂ ಶಿವಮೊಗ್ಗ ಕಾರಾಗೃಹದಲ್ಲಿ ಒಬ್ಬರನ್ನು ಬಿಡುಗಡೆಗೆ ನಿರ್ಣಯಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಬಿಡುಗಡೆಯಾಗುತ್ತಿರುವ ಕೈದಿಗಳು: ಶ್ರೀನಿವಾಸ್ ಯಾನೆ ಡ್ರೈವರ್ ಶ್ರೀನಿವಾಸ್, ಬಾಲರಾಜು, ವೆಂಕಟೇಶ್, ರಂಜಿತ್ ಕೆ. ಯಾನೆ ಭಟ್ಟ, ಭುವನೇಶ್ವರ ಟಿ.ಪಿ., ಛತ್ರಪತಿ ನಾಯ್ಕ ಯಾನೆ ಆಕಾಶ, ಶ್ರೀನಿವಾಸಮೂರ್ತಿ, ಲಿಂಗರಾಜು, ಯಮನಪ್ಪ, ನಿಲಕಂಠಾಚಾರ್, ಬಾಬು, ರಾಜಾಚಾರಿ, ನಾರಾಯಣಗೌಡ, ವೆಂಕಟೇಶ್, ಚಂದ್ರಮ್ಮ, ತಿಮ್ಮಣ್ಣ, ತುಕಾರಾಮ್, ಜಯಮ್ಮ, ಸುಭಾಷ್‌, ತಿಮ್ಮಪ್ಪ, ಅಶೋಕ್, ಶಿವಪ್ಪ, ಆನಂದ, ಪ್ರಕಾಶ್, ಸುರೇಶ್, ಎಚ್.ಕೆ.ರವಿಕುಮಾರ್, ಜಿ.ಎಲ್.ಮೋಹನ್ ಕುಮಾರ್, ಮಂಜಾನಾಯ್ಕ್, ಲಕ್ಷ್ಮೀಕಾಂತ್ ಹಾಗೂ ಸರಸ್ವತಿ ಸಹಿತ 31 ಮಂದಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗುತ್ತಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಾರ್ತಾ ಭಾರತಿ 12 Mar 2026 11:41 pm

ಬಳ್ಳಾರಿ | ಕಲಿಕಾ ಹಬ್ಬವು ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುತ್ತದೆ : ಅಯೋಧ್ಯ ವೆಂಕಟೇಶ

ಬಳ್ಳಾರಿ / ಕಂಪ್ಲಿ: ಕಲಿಕಾ ಹಬ್ಬಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಂದು ಅವರ ಕಲಿಕೆಯ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಅಯೋಧ್ಯ ವೆಂಕಟೇಶ ಹೇಳಿದರು. ಸ್ಥಳೀಯ 8ನೇ ವಾರ್ಡ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ವಾರ್ಡ್ ಸಮೂಹ ಸಂಪನ್ಮೂಲ ಕೇಂದ್ರದಿಂದ ಗುರುವಾರ ಆಯೋಜಿಸಿದ್ದ ಎಫ್‌ಎಲ್‌ಎನ್ ಆಧರಿತ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ, ಆತ್ಮವಿಶ್ವಾಸ ಮತ್ತು ಸಕ್ರೀಯ ಕಲಿಕೆ ಬೆಳೆಸುವುದೇ ಕಲಿಕಾ ಹಬ್ಬದ ಮುಖ್ಯ ಉದ್ದೇಶ ಎಂದು ತಿಳಿಸಿದರು. ನಂತರ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಎ.ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಕಲಿಕೆಯ ಮೇಲಿನ ಆಸಕ್ತಿ ಹೆಚ್ಚಿಸಲು ಎಫ್‌ಎಲ್‌ಎನ್ ಕಲಿಕಾ ಹಬ್ಬಗಳು ಮಹತ್ವದ್ದಾಗಿವೆ ಎಂದು ಹೇಳಿದರು. ಹಿಂದುಳಿದ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ಜೊತೆಗೆ ಅವರಲ್ಲಿರುವ ಪ್ರತಿಭೆಗಳನ್ನು ಹೊರತರುವಲ್ಲಿ ಸಹಕಾರಿ ಎಂದು ವಿವರಿಸಿದರು. ಕಲಿಕಾ ಹಬ್ಬದ ಏಳು ವಿವಿಧ ಚಟುವಟಿಕೆಗಳಲ್ಲಿ 8 ಶಾಲೆಗಳ 64 ಮಕ್ಕಳು ಭಾಗವಹಿಸಿದ್ದರು. 14 ಜನ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದು, ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ, ಮುಖಂಡರಾದ ನಡವಿ ಮಲ್ಲಿಕಾರ್ಜುನ, ಈರಣ್ಣ, ಇಸಿಒ ರೇವಣ್ಣ, ಎನ್‌ಪಿಎಸ್ ರಾಜ್ಯಾಧ್ಯಕ್ಷ ನಾಗನಗೌಡ ಎಂ.ಎ., ಸಿಆರ್‌ಪಿ ರೇಣುಕಾರಾಧ್ಯ, ವಿಕಲಚೇತನ ಸಂಘದ ಅಧ್ಯಕ್ಷ ಜೋಗಿ ರುದ್ರಪ್ಪ, ಮುಖ್ಯಶಿಕ್ಷಕಿ ಸುಮಿತ್ರ, ಸಾವಿತ್ರಿ ಬಾಯಿಪುಲೆ ಅಧ್ಯಕ್ಷೆ ಸುನಿತಾ ಪೂಜಾರಿ, ಕಂಪ್ಲಿ-ಕೋಟೆಯ ಸ.ಹಿ.ಪ್ರಾ ಶಾಲೆಯ ಮುಖ್ಯಗುರು ಹೊಸಗೇರಪ್ಪ, ಸಹ ಶಿಕ್ಷಕರಾದ ಪರಶುರಾಮ, ಪಂಪಾಪತಿ ಸೇರಿದಂತೆ ಶಿಕ್ಷಕ ವೃಂದದವರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 12 Mar 2026 11:38 pm

ಬಳ್ಳಾರಿ | ಪವಿತ್ರ ಚಾರಿಟೆಬಲ್‌ ಸಂಸ್ಥೆಯಿಂದ ಮಹಿಳೆಯರ ಸ್ವಾವಲಂಬನೆ : ಎಂ.ರಜನಿ

ಬಳ್ಳಾರಿ / ಕಂಪ್ಲಿ:  ಪವಿತ್ರ ಚಾರಿಟೆಬಲ್‌ ಸಂಸ್ಥೆಯು ತರಬೇತಿ ನೀಡುವ ಮೂಲಕ ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಆಸರೆಯಾಗಿದೆ ಎಂದು ಮುಖಂಡೆ ಎಂ.ರಜನಿ ಹೇಳಿದ್ಧಾರೆ. ಪಟ್ಟಣದ ಎಂ.ಡಿ.ಕ್ಯಾಂಪಿನ ಶಿರಡಿ ಸಾಯಿಬಾಬ ದೇವಸ್ಥಾನ ಸಮೀಪದ ಪವಿತ್ರ ಚಾರಿಟೆಬಲ್‌ ಕಚೇರಿಯಲ್ಲಿ ಸಂಸ್ಥೆಯ ಅಧ್ಯಕ್ಷೆ ವಿ.ಪವಿತ್ರಗೌಡರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಟ್ರಸ್ಡ್ ಉಪಾಧ್ಯಕ್ಷ ವಿ.ಶಿವನಗೌಡ, ಸದಸ್ಯ ವಿ.ವಿವೇಕ್‌ಗೌಡ, ಸಿಬ್ಬಂದಿಗಳಾದ ಎಂ.ರಜನಿ, ಶಿವರಾಜ, ಉದಯಮೇರಿ, ಶೈಲಜಾ, ಪಾರ್ವತಿ, ವಾಣಿ ಇತರರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 12 Mar 2026 11:35 pm

Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು

Gas Bill: ಇರಾನ್‌ -ಇಸ್ರೇಲ್‌ ಯುದ್ಧದ ಪರಿಣಾಮ ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ಹಲವು ರಾಜ್ಯಗಳ ಪ್ರಮುಖ ನಗರದಲ್ಲಿ ಅಡುಗೆ ಅನಿಲದ ಅಭಾವ ಉಂಟಾಗಿದೆ. ಇದರ ಪರಿಣಾಮ ಗ್ರಾಹಕರಿಗೂ ತಟ್ಟುತ್ತಿದ್ದು, ರೆಸ್ಟೋರೆಂಟ್‌ವೊಂದರಲ್ಲಿ ಬ್ರೇಕ್‌ಫಾಸ್ಟ್‌ ಮಾಡಿದವರಿಗೆ ಗ್ಯಾಸ್‌ ಶುಲ್ಕ ಸೇರಿಸಿ ಬಿಲ್‌ ನೀಡಲಾಗಿದೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಹಕರೊಬ್ಬರು ರೆಸ್ಟೋರೆಂಟ್‌ಗೆ

ಒನ್ ಇ೦ಡಿಯ 12 Mar 2026 11:30 pm

HD ಕುಮಾರಸ್ವಾಮಿ - IPS ಅಧಿಕಾರಿ ಚಂದ್ರಶೇಖರ್‌ ಜಟಾಪಟಿ: ಮಧ್ಯಸ್ಥಿಕೆದಾರರನ್ನು ನೇಮಿಸಲು ಹೈಕೋರ್ಟ್‌ ಇಂಗಿತ

ಎಚ್‌ಡಿ ಕುಮಾರಸ್ವಾಮಿ - ಹಿರಿಯ ಐಪಿಎಸ್‌ ಅಧಿಕಾರಿ ಚಂದ್ರಶೇಖರ್‌ ನಡುವಿನ ಜಗಳ ಪ್ರಕರಣವನ್ನು ಇತ್ಯರ್ಥಕ್ಕೆ ಮಧ್ಯಸ್ಥಿಕೆದಾರರ ನೇಮಿಸಲು ಹೈಕೋರ್ಟ್‌ ಇಂಗಿತ ಪಟ್ಟಿದೆ. ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರ ಪೀಠವು ಕೇಸ್‌ ವಿಚಾರಣೆ ನಡೆಸಿ ವೃತ್ತಿಪರ ಮಧ್ಯಸ್ಥಿಕೆದಾರರನ್ನು ನೇಮಿಸುವ ಸಲಹೆಯನ್ನು ಪರಿಗಣಿಸಬೇಕು ಎಂದು ಪೀಠ ಹೇಳಿಕೆ.

ವಿಜಯ ಕರ್ನಾಟಕ 12 Mar 2026 11:21 pm

ಗಂಗಾವತಿ | ಗ್ಯಾಸ್ ಸಿಲಿಂಡರ್ ನೆಪ: ವಿದ್ಯಾರ್ಥಿಗಳಿಗೆ ಸಮಯಕ್ಕೆ ಊಟ ನೀಡದ ಆರೋಪ: ಎಸ್‌ಎಫ್‌ಐನಿಂದ ಪ್ರತಿಭಟನೆ

ಗಂಗಾವತಿ: ಬಿ.ಸಿ.ಎಂ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ನೆಪ ಹೇಳಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಊಟ ನೀಡಲಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಶರಣಬಸವ ಬದನಟ್ಟಿ, ವಸತಿ ನಿಲಯಪಾಲಕರ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಮಧ್ಯಾಹ್ನ 4 ಗಂಟೆಯವರೆಗೆ ಊಟವಿಲ್ಲದೆ ಉಪವಾಸದಿಂದ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಆರೋಪಿಸಿದರು. ಅಧಿಕಾರಿಗಳಿಂದ “ಉಡಾಫೆಯಿಂದ ಮಾಡಿದದ್ದನ್ನು ತಿನ್ನಿ” ಎಂಬ ರೀತಿಯ ಪ್ರತಿಕ್ರಿಯೆ ನೀಡಿರುವುದು ಖಂಡನೀಯ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ವಸತಿ ನಿಲಯದ ಕಾರ್ಯನಿರ್ವಹಣಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಿ ವಿಷಯವನ್ನು ಸಿಇಒ ಗಮನಕ್ಕೆ ತಂದು ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಊಟ ವ್ಯವಸ್ಥೆ ಮಾಡಲಾಯಿತು. ಹೋರಾಟದ ವೇಳೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಬಸಯ್ಯ ಹಿರೇಮಠ್, ಜಿಲ್ಲಾ ಸಮಿತಿ ಸದಸ್ಯ ಶರಣಬಸವ ಬಿ., ಮೌನೇಶ್ ಮತ್ತು ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ವಾರ್ತಾ ಭಾರತಿ 12 Mar 2026 11:20 pm

ಗಾಂಜಾ ಮಾರಾಟ ಪ್ರಕರಣ: ಇಬ್ಬರ ಬಂಧನ

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ಕೋಟೆಕಾರ್ ಗ್ರಾಮದ ಬಗಂಬಿಲ ಸಮೀಪದ ಗೌಂಡ್ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಉಪ್ಪಳದ ಶೇಕ್ ಅರ್ಬಾಜ್ ಮತ್ತು ರಶೀದ್ ಆಲ್ವಿನ್ ಎಂದು ಗುರುತಿಸಲಾಗಿದೆ. ಇವರು ಮಾದಕ ವಸ್ತು ಗಾಂಜಾವನ್ನು ತಂದು ತನ್ನ ಗಿರಾಕಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳಿಂದ 51,500 ರೂ. ಮೌಲ್ಯದ 1.110 ಕೆಜಿ ಗಾಂಜಾ , 520 ರೂ . ನಗದು, ಮೊಬೈಲ್ ,  ಹಾಗೂ ಇತರೆ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಭಾರತಿ 12 Mar 2026 11:17 pm

Kodagu | ಕಾಡಾನೆ ದಾಳಿಗೆ ಸಿಲುಕಿ ಕಾಫಿ ಬೆಳೆಗಾರ ಬಲಿ

ಮಡಿಕೇರಿ: ಕಾಡಾನೆ ದಾಳಿಗೆ ಸಿಲುಕಿ ಕಾಫಿ ಬೆಳೆಗಾರರೊಬ್ಬರು ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಹೈಸ್ಕೂಲ್ ಪೈಸಾರಿ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಚೌರಿರ ಡಿ.ಗಣಪತಿ (49) ಎಂಬವರೇ ಆನೆ ದಾಳಿಗೆ ಸಿಲುಕಿ ಬಲಿಯಾದ ಬೆಳೆಗಾರ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಕಾಡಾನೆ ದಾಳಿಗೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯೆಯೊಬ್ಬರು ಮೃತಪಟ್ಟ ಘಟನೆ ಸಮೀಪದ ಬಾಳೆಗುಂಡಿಯಲ್ಲಿ ನಡೆದಿತ್ತು. ಇದೀಗ ಬೆಳೆಗಾರರೊಬ್ಬರು ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿರುವುದು ಈ ವ್ಯಾಪ್ತಿಯ ಗ್ರಾಮಸ್ಥರ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ. ಇಂದು ಬೆಳಗ್ಗೆ ಗಣಪತಿ ಅವರು ಕಾಫಿ ತೋಟಕ್ಕೆ ತೆರಳಿದ ಸಂದರ್ಭ ಕಾಡಾನೆ ದಾಳಿ ನಡೆಸಿದ್ದು, ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಗಣಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಫಿ ತೋಟದಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದರೂ ಆನೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ವಿರಾಜಪೇಟೆ ವಲಯ ಅರಣ್ಯಾಧಿಕಾರಿ, ಸಿದ್ದಾಪುರ ಠಾಣಾಧಿಕಾರಿ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಸುತ್ತಮುತ್ತಲ ನೂರಾರು ಗ್ರಾಮಸ್ಥರು ಆಗಮಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಅವರು ಭೇಟಿ ನೀಡಿ, ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಾಪಂಡ ರವಿ ಕಾಳಪ್ಪ, ಕಾಡಾನೆ ಸೇರಿದಂತೆ ವಿವಿಧ ವನ್ಯಜೀವಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಜನ ಜಾನುವಾರುಗಳು ಬಲಿಯಾಗುತ್ತಿವೆ. ಹೀಗಿದ್ದೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಟೀಕಿಸಿದರು. ಸಿದ್ದಾಪುರದಲ್ಲಿ ಸೇರಿದ ಬೆಳೆಗಾರರು ಸಂಜೆಯವರೆಗು ಕಾಡಾನೆ ಹಾವಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆಗಿಳಿದರು. 

ವಾರ್ತಾ ಭಾರತಿ 12 Mar 2026 11:15 pm

ಎರಡು ವರ್ಷಗಳ ಸೇವೆ ಪೂರೈಸಿದ ಕಲಬುರಗಿ–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್

ಕಲಬುರಗಿ: ಪ್ರಯಾಣಿಕರಿಗೆ ಸೇವೆ ನೀಡುತ್ತಿರುವ ಕಲಬುರಗಿ–ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಾ.12ರಂದು ತನ್ನ ಎರಡು ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದೆ. ಇದು ಆಧುನಿಕ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಸೌಕರ್ಯದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಈ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2024ರ ಮಾ.12 ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ್ದರು ಮತ್ತು ಫ್ಲ್ಯಾಗ್ ಶಿಪ್ ಮಾಡಿದ್ದರು ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕದ ರಾಜಧಾನಿ ಮತ್ತು ಐಟಿ ಕೇಂದ್ರ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ ನಡುವೆ ವೇಗದ ಮತ್ತು ವಿಶ್ವ ದರ್ಜೆಯ ರೈಲು ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ ಇದನ್ನು ಪ್ರಾರಂಭಿಸಲಾಯಿತು, ಇದು ಕಲ್ಯಾಣ ಕರ್ನಾಟಕ ಪ್ರದೇಶ ಮತ್ತು ರಾಜ್ಯ ರಾಜಧಾನಿಯ ನಡುವಿನ ವೇಗದ ಮತ್ತು ಆರಾಮದಾಯಕ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಈ ರೈಲು ಪ್ರಯಾಣದ ಸಮಯವನ್ನು ಕಡಿಮೆ ಮಾಡಿದೆ ಮತ್ತು ಅನುಕೂಲಕರ ಪ್ರಯಾಣವನ್ನು ಸಕ್ರಿಯಗೊಳಿಸಿದೆ, ಇದು ವ್ಯಾಪಾರ ಪ್ರಯಾಣಿಕರು, ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರಿಗೆ ಬಹು ಪ್ರಯೋಜನವನ್ನು ನೀಡಿದೆ. ಕಳೆದೆರಡು ವರ್ಷಗಳಲ್ಲಿ, ಇದು ಬೆಂಗಳೂರಿಗೆ ಆರ್ಥಿಕ, ಶೈಕ್ಷಣಿಕ ಮತ್ತು ಆರೋಗ್ಯ ಸಂಪರ್ಕವನ್ನು ಬಲಪಡಿಸಿದೆ, ಐಟಿ ಕೇಂದ್ರ ಮತ್ತು ಉತ್ತರ ಕರ್ನಾಟಕದ ಮಾರುಕಟ್ಟೆಗಳ ನಡುವಿನ ವ್ಯಾಪಾರವನ್ನು ಸಹ ಬೆಂಬಲಿಸುವುದರ ಜೊತೆಗೆ ರೋಗಿಗಳಿಗೆ ವೇಗದ ವೈದ್ಯಕೀಯ ಪ್ರಯಾಣವನ್ನು ಸುಗಮಗೊಳಿಸಿದೆ. ಈ ಸೇವೆಯು ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಮುಂತಾದ ಪ್ರಮುಖ ಪಟ್ಟಣಗಳಿಗೆ ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸಿದೆ. ಜೊತೆಗೆ ಮಂತ್ರಾಲಯ ಮತ್ತು ಪುಟ್ಟಪರ್ತಿಯಂತಹ ಸ್ಥಳಗಳಿಗೆ (ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮೂಲಕ) ಸುಲಭ ಪ್ರವೇಶವನ್ನು ಒದಗಿಸುವ ಮೂಲಕ ತೀರ್ಥಯಾತ್ರೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಿದೆ. ರೈಲು ಸಂಖ್ಯೆ 22231/22232 ಕಲಬುರಗಿ-SMVT ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಕೇವಲ 8 ಗಂಟೆಗಳಲ್ಲಿ 561 ಕಿಮೀ ದೂರವನ್ನು ಕ್ರಮಿಸುತ್ತದೆ, ಅಸ್ತಿತ್ವದಲ್ಲಿರುವ ಸೂಪರ್‌ಫಾಸ್ಟ್ ಸೇವೆಗಳು 10 ರಿಂದ 12 ಗಂಟೆಗಳಿಗೆ ಹೋಲಿಸಿದರೆ, ಇದರಿಂದಾಗಿ ಸುಮಾರು 2 ರಿಂದ 4 ಗಂಟೆಗಳ ಪ್ರಯಾಣದ ಸಮಯವನ್ನು ಉಳಿಸುತ್ತದೆ. ಪ್ರಸ್ತುತ, ರೈಲು ವಾರದಲ್ಲಿ ಆರು ದಿನಗಳು ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ಗುಂತಕಲ್, ಅನಂತಪುರ, ಸಾಯಿ ಪಿ ನಿಲಯಂ ಮತ್ತು ಯಲಹಂಕದಲ್ಲಿ ನಿಲುಗಡೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. 8 ಬೋಗಿಗಳ ವಂದೇ ಭಾರತ್ ರೈಲು ಸೆಟ್ ಅನ್ನು ಹೊಂದಿರುವ ಈ ರೈಲು 400 ಚೇರ್ ಕಾರ್ (CC) ಸೀಟುಗಳು ಮತ್ತು 52 ಎಕ್ಸಿಕ್ಯುಟಿವ್ ಚೇರ್ ಕಾರ್ (EC) ಸೀಟುಗಳನ್ನು ಒಳಗೊಂಡ ಒಟ್ಟು 452 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ. ರೈಲಿನ ಅಪಾರ ಜನಪ್ರಿಯತೆಯು ಅದರ ಗಮನಾರ್ಹ ಕಾರ್ಯಕ್ಷಮತೆಯಲ್ಲಿ ಪ್ರತಿಫಲಿಸುತ್ತದೆ, ಫೆಬ್ರವರಿ 2026 ರವರೆಗೆ ಒಟ್ಟು 5,72,566 ಪ್ರಯಾಣಿಕರನ್ನು ಸಾಗಿಸಿದ್ದು, 2026 ರಲ್ಲಿ 103.52% ರಷ್ಟು ಪ್ರಭಾವಶಾಲಿ ಆಕ್ಯುಪೆನ್ಸಿಯನ್ನು ಹೊಂದಿದೆ. ಕಲಬುರಗಿ-SMVT ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಎರಡು ವರ್ಷಗಳಲ್ಲಿ ಯಶಸ್ವಿಯಾಗಿ ಪ್ರಾದೇಶಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಸಂಪರ್ಕಕ್ಕೆ ಗಮನಾರ್ಹ ಕೊಡುಗೆ ನೀಡುವುದರೊಂದಿಗೆ ಆಧುನೀಕರಣ, ಪ್ರಯಾಣಿಕರ ಸೌಕರ್ಯ, ವೇಗ, ಸುರಕ್ಷತೆ ಮತ್ತು ಸುಸ್ಥಿರ ಸಾರಿಗೆಯ ಕಡೆಗೆ ಭಾರತೀಯ ರೈಲ್ವೆಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಸೋಲಾಪುರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ವಾರ್ತಾ ಭಾರತಿ 12 Mar 2026 11:13 pm

ವಾಡಿ | ಭೀಮ ಗಾಯನ ಹೆಸರಲ್ಲಿ ಇತಿಹಾಸ ಮರೆಮಾಚಿರುವ ಆರೋಪ

ವಾಡಿ: ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಭೇಟಿ ನೀಡಿದ ಹತ್ತು ಊರುಗಳಲ್ಲಿ ‘ಭೀಮ ಗಾಯನ’ ಕಾರ್ಯಕ್ರಮ ಹಮ್ಮಿಕೊಳ್ಳುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ಅಂಬೇಡ್ಕರ್ ಭೇಟಿ ನೀಡಿದ್ದ ವಾಡಿ, ಕಲಬುರಗಿ ಪಟ್ಟಣವನ್ನು ಮರೆತು ಜಿಲ್ಲಾ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಇತಿಹಾಸ ಮರೆಮಾಚುವಂತಾಗಿದೆ ಎಂದು ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಕ್ರಮ್ ತೇಜಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಅಂಬೇಡ್ಕರ್ ಅವರು 1944ರ ಸೆಪ್ಟೆಂಬರ್ 20 ಹಾಗೂ 1952ರ ಏಪ್ರಿಲ್ 27ರಂದು ಎರಡು ಬಾರಿ ವಾಡಿ ಪಟ್ಟಣಕ್ಕೆ ಐತಿಹಾಸಿಕ ಭೇಟಿ ನೀಡಿದ್ದರು. ಆದರೆ ಈ ಬಗ್ಗೆ ಜನರಿಗೆ ಕನಿಷ್ಠ ಅರಿವು ಇಲ್ಲದಿರುವುದು ದುಃಖಕರವಾಗಿದೆ. ಇದು ವಾಡಿ ಜನತೆಗೆ ಮಾಡಿದ ಅನ್ಯಾಯವಾಗಿದ್ದು, ಅಂಬೇಡ್ಕರ್ ಭೇಟಿ ನೀಡಿದ ಇತಿಹಾಸವನ್ನು ತಿರುಚುವ ಕೆಲಸವಾಗಿದೆ ಎಂದು ಹೇಳಿದರು. ವಾಡಿ ಪಟ್ಟಣಕ್ಕೆ ಅಂಬೇಡ್ಕರ್ ಭೇಟಿ ನೀಡಿದ್ದ ನೆನಪಿಗಾಗಿ ‘ಭೀಮ ಗಾಯನ’ ಶೀರ್ಷಿಕೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಸ್ಥಳೀಯ ಜನತೆಗೆ ಸರಿಯಾದ ಮಾಹಿತಿ ನೀಡಿಲ್ಲ. ಅಂಬೇಡ್ಕರ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಅಮೃತರಾವ ಕೋಮಟೆ ಅವರ ಪುತ್ರ ಹಾಗೂ ವಾಡಿ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅವರಿಗೆ ಆಹ್ವಾನ ನೀಡಿ ಅವರಿಂದ ಇತಿಹಾಸದ ಕುರಿತು ಮಾಹಿತಿ ಹಂಚಿಕೊಳ್ಳಬಹುದಿತ್ತು ಎಂದು ಅವರು ಹೇಳಿದರು. ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆ ನಡೆಸದೆ ಕೇವಲ ಸರ್ಕಾರದ ಆದೇಶದ ಮೇರೆಗೆ ಕಾಟಾಚಾರದ ಕಾರ್ಯಕ್ರಮ ನಡೆಸಲಾಗಿದೆ ಎಂದು ಅವರು ಆರೋಪಿಸಿದರು. ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ ಡಾ. ಅಂಬೇಡ್ಕರ್ ಪದವಿ ಕಾಲೇಜು ವಾಡಿ ಸಹಾಯಕ ಪ್ರಾಧ್ಯಾಪಕರಾದ ಅರುಣ ಜೋಳದಕೂಡ್ಲಗಿ ಮಾತ್ರ ಅಂಬೇಡ್ಕರ್ ಅವರ ವಾಡಿ ಭೇಟಿಯ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಇತರ ಅಧಿಕಾರಿಗಳಿಗೆ ಈ ಕುರಿತು ಸಮರ್ಪಕ ತಿಳುವಳಿಕೆ ಇಲ್ಲದಿರುವುದು ನೋವಿನ ಸಂಗತಿ ಎಂದು ಹೇಳಿದರು. ಇದಲ್ಲದೆ ಸ್ಥಳೀಯ ಕಲಾವಿದರಾದ ಸಿದ್ಧಾರ್ಥ ಚಿಮ್ಮ ಇದಲಾಯಿ, ದಲಿತ ಕಲಾ ಮಂಡಳಿ ಸೇರಿದಂತೆ ಹಲವು ಕಲಾ ತಂಡಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಕಡೆಗಣಿಸಿರುವುದು ಅನ್ಯಾಯವಾಗಿದೆ ಎಂದು ಅವರು ದೂರಿದರು.

ವಾರ್ತಾ ಭಾರತಿ 12 Mar 2026 11:09 pm

ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ವೈಭವದ ಮನ್ಮಹಾರಥೋತ್ಸವ

ಕುಂದಾಪುರ: ಇತಿಹಾಸ ಪ್ರಸಿದ್ದವಾದ ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನದ ವೈಭವದ ಮನ್ಮ ಹಾರಥೋತ್ಸವ ಗುರುವಾರ ವೈಭವದಿಂದ ಸಂಪನ್ನಗೊಂಡಿದೆ. ಮೂಕಾಂಬಿಕಾ ದೇವಿಯ ವಿಜೃಂಭಣೆಯ ಉತ್ಸವಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಅಲ್ಲದೇ ವಿದೇಶದಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಸಾಕ್ಷಿಯಾದರು. ದೇಗುಲದ ಹಿರಿಯ ಅರ್ಚಕ ಕೆ.ಎನ್.ಗೋವಿಂದ ಅಡಿಗ ಅವರ ನೇತೃತ್ವದಲ್ಲಿ ರಥೋತ್ಸವದ ಅಂಗವಾಗಿ ದೇವಸ್ಥಾನ ದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.ಬೆಳಗ್ಗೆ ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ ಜೋಡಿ ಉತ್ಸವ ಮೂರ್ತಿ ಗಳನ್ನು ಗರ್ಭಗುಡಿಯಿಂದ ಹೊರತಂದು, ಸುತ್ತ ಪೌಳಿಯಲ್ಲಿ ಮೂರು ಸುತ್ತು ಉತ್ಸವ ನಡೆಸಿ, ಬಳಿಕ ಓಡು ಬಲಿ ಸೇವೆಗಾಗಿ ಸೌಪರ್ಣಿಕ ನದಿ ತೀರಕ್ಕೆ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಗರ್ಭಗುಡಿಯಿಂದ ತರಲಾದ ಜೋಡಿ (ಎರಡು) ಉತ್ಸವ ಮೂರ್ತಿ ಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥ ಪೂಜೆ ನಡೆಸಿದ ಬಳಿಕ, ಸಾವಿರಾರು ಭಕ್ತರ ಜಯಘೋಷದ ನಡುವೆ, ಬೀದಿ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ರಥೋತ್ಸವ ನಡೆಸಲಾಯಿತು. ಸಂಜೆ 5 ಗಂಟೆಯ ಬಳಿಕ ಬ್ರಹ್ಮರಥದಲ್ಲಿ ದೇವರನ್ನು ಕುಳ್ಳಿರಿಸಿ ರಥಬೀದಿಯಲ್ಲಿ ಶಂಕರಾಶ್ರಮದವರೆಗೆ ಬ್ರಹ್ಮರಥ ಕೊಂಡೊಯ್ಯಲಾಯಿತು. ಪರಂಪರೆಯಂತೆ ರಥಬೀದಿಯ ಸಂಭ್ರಮದ ಉತ್ಸವಾಚರಣೆಯ ಬಳಿಕ ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಒಳಗೆ ಕೊಂಡೊಯ್ಯಲಾಯಿತು. ದೇವಸ್ಥಾನದ ಖುತ್ವೀಜರಾದ ಎನ್.ನರಸಿಂಹ ಅಡಿಗ, ಶ್ರೀಧರ ಅಡಿಗ, ತಂತ್ರಿ ನಿತ್ಯಾನಂದ ಅಡಿಗ, ಅರ್ಚಕರಾದ ರಾಮಚಂದ್ರ ಅಡಿಗ, ಸುಬ್ರಹ್ಮಣ್ಯ ಅಡಿಗ, ವಿಘ್ನೇಶ್ ಅಡಿಗ, ಮೂರ್ತಿ ಕಾಳಿದಾಸ್ ಭಟ್, ಸುರೇಶ್ ಭಟ್, ಶ್ರೀಶ ಭಟ್, ಗಜಾನನ ಜೋಯಿಸ್, ಸುದರ್ಶನ್ ಜೋಯಿಸ್, ಶಿವಾನಂದ ಜೋಯಿಸ್, ಅಶ್ವಿನ್ ಭಟ್ ದಳಿ ಇದ್ದರು. ವೈಭವದ ರಥೋತ್ಸವದಲ್ಲಿ ಚೆಂಡೆ ವಾದನ, ತಟ್ಟಿರಾಯ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳಿದ್ದವು. ದೇವಸ್ಥಾನದ ಹೊರ ಹಾಗೂ ಒಳಾವರಣವನ್ನು ಹೂವು ಹಾಗೂ ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬ್ರಹ್ಮರಥ ಸಾಗುವ ಸುಮಾರು ಮುಕ್ಕಾಲು ಕಿ.ಮೀ ದೂರದ ರಥ ಬೀದಿಯಲ್ಲಿ ಹೂವಿನ ಹಾಸುಗಳಿಂದ ಅಲಂಕರಿಸಲಾಗಿತ್ತು. ಮಾ.5ರಂದು ಪ್ರಾರಂಭವಾದ ಕ್ಷೇತ್ರದ ವಾರ್ಷಿಕ ಉತ್ಸವಾಚರಣೆಯ ಅಂಗವಾಗಿ ಪ್ರತಿ ದಿನವೂ ವಿಶೇಷ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿತ್ತು. ಉತ್ಸವದ ಅಂಗವಾಗಿ ದೇಗುಲದ ಆವರಣದಲ್ಲಿ ಪ್ರತಿದಿನ ಸಂಜೆ ದೇಶದ ವಿವಿಧ ಭಾಗದ ಕಲಾತಂಡಗಳು ಹಾಗೂ ಕಲಾವಿದರಿಂದ ಸೇವಾ ರೂಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ ಶೆಟ್ಟಿ, ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು.ರಾಜೇಶ್ ಕಾರಂತ್, ಡಾ.ಅಭಿಲಾಶ್ ಪಿ.ವಿ , ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ್ , ಸುರೇಂದ್ರ ಶೆಟ್ಟಿ, ಧನಾಕ್ಷಿ ವಿಶ್ವನಾಥ್ ಪೂಜಾರಿ, ಕೆ.ಸುಧಾ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಸದಾಶಿವ ಪ್ರಭು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮುಜರಾಯಿ ಇಲಾಖೆ ಹಿರಿಯ ಅಧಿಕಾರಿಗಳಾದ ಎಸ್.ಪಿ.ಬಿ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.  

ವಾರ್ತಾ ಭಾರತಿ 12 Mar 2026 10:40 pm

ರಾಯಚೂರು | ಸರಕಾರಿ ಶಾಲೆ ಉಳಿಸುವಂತೆ ಎಐಡಿಎಸ್ಒ ಅಭಿಯಾನ, ಪೋಸ್ಟರ್ ಬಿಡುಗಡೆ

ರಾಯಚೂರು: ಸರ್ಕಾರಿ ಶಾಲೆಗಳನ್ನು ಉಳಿಸಲು ನಡೆಯುತ್ತಿರುವ ಕಲ್ಯಾಣ ಕರ್ನಾಟಕ ವಲಯ ಮಟ್ಟದ ಸಮಾವೇಶದ ಭಾಗವಾಗಿ ಪೋಸ್ಟರ್ ಅನ್ನು ರಾಯಚೂರು ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ರಾಯಚೂರಿನಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ಗುರುವಾರ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡರು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಮೀಸಲಾಗಿರುವ ಕೆಕೆಆರ್‌ಡಿಬಿ ನಿಧಿಯನ್ನು ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಳಸುತ್ತಿರುವುದು ರಾಜ್ಯ ಸರ್ಕಾರ ಈ ಭಾಗದ ಜನರಿಗೆ ಮಾಡುತ್ತಿರುವ ದೊಡ್ಡ ದ್ರೋಹ ಎಂದು ಆರೋಪಿಸಿದರು. ಕರ್ನಾಟಕದಾದ್ಯಂತ ಜನರ ತೀವ್ರ ವಿರೋಧದ ನಡುವೆಯೂ ಈ ಬಾರಿ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಕೆಪಿಎಸ್ ಶಾಲೆಗಳ ಸ್ಥಾಪನೆ ಕುರಿತು ಘೋಷಣೆ ಮಾಡಿದ್ದು, ಕಲ್ಯಾಣ ಕರ್ನಾಟಕದಲ್ಲಿ ಈ ಶಾಲೆಗಳನ್ನು ಸ್ಥಾಪಿಸಲು ಕೆಕೆಆರ್‌ಡಿಬಿ ನಿಧಿಯನ್ನು ಬಳಸುವುದಾಗಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಹೊಸ ಶಾಲೆಗಳ ಸ್ಥಾಪನೆಗಾಗಿ ಈ ಹಣವನ್ನು ಬಳಸಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ಅವರು ಹೇಳಿದರು. ಆದರೆ 2025ರ ಅಕ್ಟೋಬರ್ 15ರಂದು ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ ಶಾಲೆ ಸ್ಥಾಪಿಸಿ ಅದರ ಸುತ್ತಮುತ್ತ 3 ರಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ಮುಚ್ಚುವ ಯೋಜನೆ ಇದೆ ಎಂದು ಅವರು ದೂರಿದರು. ಈ ಕ್ರಮದಿಂದ ಕೇವಲ ಸುಮಾರು 6 ಸಾವಿರ ಶಾಲೆಗಳನ್ನು ಉಳಿಸಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ಪರಿಸ್ಥಿತಿ ಉಂಟಾಗಬಹುದು ಎಂದು ಆರೋಪಿಸಿದರು. ಪ್ರತಿಯೊಂದು ಮಗುವಿಗೂ ಉಚಿತ ಶಿಕ್ಷಣ ದೊರೆಯಬೇಕು ಎಂಬ ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ, ಈಶ್ವರಚಂದ್ರ ವಿದ್ಯಾಸಾಗರ್ ಮುಂತಾದ ಮಹಾನ್ ವ್ಯಕ್ತಿಗಳ ಆಶಯಗಳಿಗೆ ವಿರುದ್ಧವಾಗಿ ಈ ನೀತಿ ಸಾಗುತ್ತಿದೆ ಎಂದು ಅವರು ಹೇಳಿದರು. ಈ ಅನ್ಯಾಯದ ವಿರುದ್ಧ ಹಾಗೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ರಾಜ್ಯದಾದ್ಯಂತ ಹೋರಾಟಗಳು ನಡೆಯುತ್ತಿವೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ನೂರಾರು ಹಳ್ಳಿಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ತಿಳಿಸಿದರು. ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ಹಾಗೂ ವಿವಿಧ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳ ನೇತೃತ್ವದಲ್ಲಿ ಮಾರ್ಚ್ 14ರಂದು ಕಲ್ಯಾಣ ಕರ್ನಾಟಕ ವಲಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಚಂದನ, ಯಶವಂತ, ನಂದಗೋಪಾಲ್, ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜ, ವಿದ್ಯಾರ್ಥಿ ಸಂತೋಷ, ಸಮೀರ್, ರಾಘವೇಂದ್ರ ಪಾಲ್ಗೊಂಡಿದ್ದರು.

ವಾರ್ತಾ ಭಾರತಿ 12 Mar 2026 10:38 pm

ಜುಬೈಲ್|‌ ‘ರೈಟ್ ಚಾಯ್ಸ್’ ಕಂಪೆನಿಯಿಂದ ಸಂಭ್ರಮದ ಇಫ್ತಾರ್‌ ಕೂಟ

ಜುಬೈಲ್: ‘ರೈಟ್ ಚಾಯ್ಸ್’ ಕಂಪೆನಿ ವತಿಯಿಂದ ತಮ್ಮ ಸಿಬ್ಬಂದಿಗಳಿಗಾಗಿ ಹಮ್ಮಿಕೊಂಡಿದ್ದ ಇಫ್ತಾರ್ ಕೂಟವು ಜುಬೈಲ್‌ನ ಪುಲಿ ರೆಸ್ಟೋರೆಂಟ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಯಾಝ್ ಕೈಕಂಬ‌, ಅಲ್ ಮುಝೈನ್ ಸಂಸ್ಥೆಯ ಸಿಐಒ ಝಕರಿಯಾ ಜೋಕಟ್ಟೆ, ಝಹೀರ್ ಝಕರಿಯಾ, ನಝೀರ್, ಮಂಗಳೂರು ಸಿಸಿಬಿಯ ಇನ್ಸ್ಪೆಕ್ಟರ್ ರಫೀಕ್, ಜಬ್ಬಾರ್ ಸೇರಿದಂತೆ ಹಲವಾರು ಗಣ್ಯ ಅತಿಥಿಗಳು ಭಾಗವಹಿಸಿ ಇಫ್ತಾರ್ ಕೂಟಕ್ಕೆ ವಿಶೇಷ ಮೆರುಗು ನೀಡಿದರು. ರಮಝಾನ್ ತಿಂಗಳು ಮಾನವೀಯತೆ, ಸಹಾನುಭೂತಿ ಮತ್ತು ಹಂಚಿಕೊಳ್ಳುವಿಕೆಯ ಸಂದೇಶ ನೀಡುವ ಪವಿತ್ರ ಸಮಯ, ಉಪವಾಸಿಗರಿಗೆ ಉಪವಾಸ ಮುರಿಯಲು ವ್ಯವಸ್ಥೆ ಮಾಡುವುದು ನಿಜಕ್ಕೂ ಮಹತ್ವದ, ಪುಣ್ಯದ ಕಾರ್ಯವಾಗಿದೆ. ಇಂತಹ ಇಫ್ತಾರ್ ಕೂಟಗಳು ಸಮಾಜ ಮತ್ತು ಸಮುದಾಯದಲ್ಲಿ ಸಹೋದರತ್ವ, ಸ್ನೇಹ ಮತ್ತು ಮಾನವೀಯ ಮೌಲ್ಯಗಳನ್ನು ಇನ್ನಷ್ಟು ಬಲಪಡಿಸುವಂತಾಗಲಿ ಎಂದು ಗಣ್ಯರು ಹಾರೈಸಿದರು.

ವಾರ್ತಾ ಭಾರತಿ 12 Mar 2026 10:38 pm

ಕೌಂಟರ್‌ ನಲ್ಲಿ ಟಿಕೆಟ್ ಖರೀದಿಸುವ ಗ್ರಾಹಕರಿಗೂ ರೈಲ್ವೆ ವಿಮೆ ನೀಡಲೇಬೇಕು: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಆನ್‌ ಲೈನ್‌ ನಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸುವವರಿಗೆ ವಿಮೆ ಸೌಲಭ್ಯ ಪಡೆಯುವ ಅವಕಾಶ ಇರುವಾಗ, ಕೌಂಟರ್‌ ನಲ್ಲಿ ಟಿಕೆಟ್ ಖರೀದಿಸುವ ಪ್ರಯಾಣಿಕರಿಗೂ ವಿಮೆ ಸೌಲಭ್ಯದ ಅವಕಾಶ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ನ್ಯಾ. ಆರ್. ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠ, ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಮೊತ್ತ ತೆತ್ತು ವಿಮೆ ಸೌಲಭ್ಯ ಪಡೆಯುವ ಅವಕಾಶವಿದೆ. ಆದರೆ, ರೈಲ್ವೆ ಟಿಕೆಟ್ ಕೌಂಟರ್‌ಗಳಲ್ಲಿ ಖುದ್ದಾಗಿ ಟಿಕೆಟ್ ಖರೀದಿಸುವ ಪ್ರಯಾಣಿಕರಿಗೆ ಇದೇ ಆಯ್ಕೆಯಿಲ್ಲ ಎಂಬ ಸಂಗತಿಯನ್ನು ಗಮನಕ್ಕೆ ತೆಗೆದುಕೊಂಡಿತು. ಅಮಿಕಸ್ ಕ್ಯೂರಿಯಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಶಿಖಿಲ್ ಸೂರಿ, ಈ ತಾರತಮ್ಯದ ಕುರಿತು ವ್ಯಕ್ತವಾಗಿರುವ ಕಳವಳಗಳ ಬಗ್ಗೆ ರೈಲ್ವೆ ಯಾವುದೇ ಸ್ಪಂದನೆ ವ್ಯಕ್ತಪಡಿಸಿಲ್ಲ ಎಂಬುದರತ್ತ ನ್ಯಾಯಾಲಯದ ಗಮನ ಸೆಳೆದರು. ಇದಕ್ಕೆ ಪ್ರತಿಯಾಗಿ, “ಕೌಂಟರ್‌ಗಳಲ್ಲಿ ಟಿಕೆಟ್ ಖರೀದಿಸುವ ಪ್ರಯಾಣಿಕರನ್ನು ಗುರುತಿಸುವ ಯಾಂತ್ರಿಕತೆಯನ್ನು ಅಭಿವೃದ್ಧಿಪಡಿಸಲು ರೈಲ್ವೆ ಕಾರ್ಯನಿರತವಾಗಿದೆ. ಇದರಿಂದ ಅಂತಹ ಪ್ರಯಾಣಿಕರಿಗೆ ವಿಮೆ ಪ್ರಮಾಣಪತ್ರಗಳನ್ನು ವಿತರಿಸಬಹುದು ಹಾಗೂ ಅವರ ಹಕ್ಕುದಾರಿಕೆಯನ್ನು ವಿಲೇವಾರಿ ಮಾಡಬಹುದು,” ಎಂದು ಕೇಂದ್ರ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಂಜಿತ್ ಬ್ಯಾನರ್ಜಿ ತಿಳಿಸಿದರು. ಇಂತಹ ಪ್ರಕರಣಗಳಲ್ಲಿ ಗುರುತಿನ ವಿವರಗಳ ಲಭ್ಯತೆ ಇಲ್ಲದಿರುವುದರಿಂದ ವಿಮೆ ಪ್ರಮಾಣಪತ್ರಗಳ ಭಾರಿ ದುರ್ಬಳಕೆ ಹಾಗೂ ವಿಮಾದಾರರ ಪರವಾಗಿ ವಂಚನೆಯ ಪ್ರತಿಪಾದನೆಗಳನ್ನು ಮಾಡುವ ಸಾಧ್ಯತೆ ಇದೆ ಎಂದು ಅವರು ವಾದಿಸಿದರು. ಆದರೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರ ವಾದವನ್ನು ತಳ್ಳಿ ಹಾಕಿದ ನ್ಯಾಯಾಲಯ, ಇಂತಹ ಕಾರಣಗಳಿಗಾಗಿ ಒಂದು ವರ್ಗದ ಪ್ರಯಾಣಿಕರಿಗೆ ವಿಮಾ ಸೌಲಭ್ಯ ನಿರಾಕರಿಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಈ ಹಿಂದೆ ನ್ಯಾಯಾಲಯವು ರೈಲ್ವೆ ಸುರಕ್ಷತೆ ಮತ್ತು ಪ್ರಯಾಣಿಕರ ಕಲ್ಯಾಣದ ಕುರಿತು ನೀಡಿರುವ ಸೂಚನೆಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ರೈಲ್ವೆ ತನ್ನ ವೆಚ್ಚದ ಆದ್ಯತೆಗಳ ವಿವರಗಳನ್ನು ಮಂಡಿಸಿರುವ ರೀತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅನುದಾನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಹಾಗೂ ಬಳಕೆ ಮಾಡಲಾಗುತ್ತಿದೆ ಎಂಬುದನ್ನು ವಿವರಿಸುವ ಸ್ಪಷ್ಟವಾದ ಪ್ರಮಾಣಪತ್ರವನ್ನು ಸಲ್ಲಿಸುವಂತೆ ರೈಲ್ವೆಗೆ ನಿರ್ದೇಶನ ನೀಡಿತು. ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಎಪ್ರಿಲ್ 1, 2026ಕ್ಕೆ ಮುಂದೂಡಲಾಗಿದೆ.

ವಾರ್ತಾ ಭಾರತಿ 12 Mar 2026 10:34 pm

ಈದ್ ಹಬ್ಬದ ಶಾಂತಿ ಸಭೆಯ ವೇಳೆ ಇಸ್ರೇಲ್–ಇರಾನ್ ಯುದ್ಧದ ಬಗ್ಗೆ ಸಮಸ್ಯೆ ಇದ್ದರೆ ಇರಾನ್‌ ಗೆ ಹೋಗಿ ಹೋರಾಡಿ ಎಂದ ಸಂಭಲ್ ಡಿಎಸ್ಪಿ!

ಸಂಭಲ್ (ಉತ್ತರ ಪ್ರದೇಶ), ಮಾ.12: ಈದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲಿಸುವ ಸಭೆಯ ವೇಳೆ ಸಂಭಲ್ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಕುಲದೀಪ್ ಕುಮಾರ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇಸ್ರೇಲ್–ಇರಾನ್ ಯುದ್ಧದ ಕುರಿತು ಮಾತನಾಡುವವರನ್ನು ಉದ್ದೇಶಿಸಿ ಅವರು ಮಾಡಿದ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ಸ್ಥಳೀಯ ನಿವಾಸಿಗಳೊಂದಿಗೆ ಭದ್ರತಾ ಪರಿಶೀಲನಾ ಸಭೆ ನಡೆಸಿದ್ದರು. ಸಭೆಯಲ್ಲಿ ಮುಸ್ಲಿಂ ಸಮುದಾಯದ ಸದಸ್ಯರು ಸೇರಿದಂತೆ ಹಲವಾರು ಸ್ಥಳೀಯರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಸಭೆಯಲ್ಲಿ ಮಾತನಾಡಿದ ಕುಲದೀಪ್ ಕುಮಾರ್, ವಿದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ನೆಪವಾಗಿ ಬಳಸಿಕೊಂಡು ಸ್ಥಳೀಯವಾಗಿ ಅಶಾಂತಿ ಉಂಟುಮಾಡುವ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇಸ್ರೇಲ್–ಇರಾನ್ ಯುದ್ಧದ ಬಗ್ಗೆ ಕೆಲವರು ಪದೇ ಪದೇ ಮಾತನಾಡುತ್ತಿದ್ದು, ಅದರ ಸುತ್ತ ಚರ್ಚೆಗಳನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎಂದು ಹೇಳಿದರು. “ಇಸ್ರೇಲ್–ಇರಾನ್ ಯುದ್ಧದ ಬಗ್ಗೆ ನಿಮಗೆ ಸಮಸ್ಯೆ ಇದ್ದರೆ, ಸಿಲುಕಿರುವ ಭಾರತೀಯರನ್ನು ರಕ್ಷಿಸಲು ತೆರಳುವ ವಿಮಾನ ಹತ್ತಿ ಇರಾನ್‌ ಗೆ ಹೋಗಿ ಹೋರಾಡಿ,” ಎಂದು ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ವಿದೇಶಗಳಲ್ಲಿ ನಡೆಯುತ್ತಿರುವ ಯುದ್ಧಗಳ ಕುರಿತು ಭಾರತದಲ್ಲಿ ಅಶಾಂತಿ ಉಂಟುಮಾಡುವ ರೀತಿಯ ಚಟುವಟಿಕೆಗಳನ್ನು ಸಹಿಸಲಾಗುವುದಿಲ್ಲ. ಯಾವುದಾದರೂ ಒಂದು ಪಕ್ಷವನ್ನು ಬೆಂಬಲಿಸುವ ನೆಪದಲ್ಲಿ ಸ್ಥಳೀಯವಾಗಿ ಪ್ರತಿಭಟನೆಗಳು ನಡೆಸುವುದು ಅಥವಾ ಕೋಮು ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದರು. ಈ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಟೀಕೆಗಳು ವ್ಯಕ್ತವಾಗಿವೆ. ಪೊಲೀಸ್ ಅಧಿಕಾರಿಯೊಬ್ಬರು ಬಳಸಿದ “ಇರಾನ್‌ ಗೆ ಹೋಗಿ ಹೋರಾಡಿ” ಎಂಬ ಪದಪ್ರಯೋಗ ಸೂಕ್ತವಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಂತೆ ಕಾಣುತ್ತದೆ ಎಂಬ ಆರೋಪವೂ ಕೇಳಿಬಂದಿದೆ.

ವಾರ್ತಾ ಭಾರತಿ 12 Mar 2026 10:31 pm

ತೈಲ ಬೆಲೆ ಏರಿಕೆಯಾದರೆ ಅಮೆರಿಕ ಹೆಚ್ಚು ಆದಾಯ ಗಳಿಸಬಹುದು: ಡೊನಾಲ್ಡ್‌ ಟ್ರಂಪ್

ವಾಶಿಂಗ್ಟನ್, ಮಾ.12: ಮಧ್ಯಪ್ರಾಚ್ಯ ಯುದ್ಧದ ಜೊತೆಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ತೈಲ ಬಿಕ್ಕಟ್ಟನ್ನು ಎದುರಿಸಲು ಜಗತ್ತು ಪರದಾಡುತ್ತಿರುವ ಸಂದರ್ಭದಲ್ಲಿ, `ತೈಲ ಬೆಲೆ ಏರಿದರೆ ಅಮೆರಿಕ ಹೆಚ್ಚು ಆದಾಯ ಗಳಿಸಬಹುದು' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. `ಅಮೆರಿಕ ವಿಶ್ವದ ಅತೀ ದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿದೆ. ಆದ್ದರಿಂದ ತೈಲ ಬೆಲೆಗಳು ಹೆಚ್ಚಾದಾಗ ನಾವು ಬಹಳಷ್ಟು ಹಣ ಮಾಡಬಹುದು' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. `ಆದರೆ ಹೆಚ್ಚುತ್ತಿರುವ ತೈಲ ಬೆಲೆಗಳಿಗಿಂತ ಇರಾನ್‍ನ ಪರಮಾಣು ಶಸ್ತ್ರಾಸ್ತ್ರಗಳನ್ನು ತಡೆಯುವುದು ಹೆಚ್ಚು ಮುಖ್ಯವಾಗಿದೆ. ಇರಾನ್ ಎಂಬ ದುಷ್ಟ ಸಾಮ್ರಾಜ್ಯ ಪರಮಾಣು ಶಸ್ತ್ರಾಸ್ತ್ರವನ್ನು ಪಡೆದು ಮಧ್ಯಪ್ರಾಚ್ಯ ಮತ್ತು ಜಗತ್ತನ್ನೇ ನಾಶಪಡಿಸುವುದನ್ನು ತಡೆಯುವುದು ಅಧ್ಯಕ್ಷನಾಗಿ ನನಗೆ ಹೆಚ್ಚಿನ ಆಸಕ್ತಿಯ ಮತ್ತು ಪ್ರಾಮುಖ್ಯದ ವಿಷಯವಾಗಿದೆ' ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ವಾರ್ತಾ ಭಾರತಿ 12 Mar 2026 10:27 pm

ಭಾರತದಲ್ಲಿ ಮೂತ್ರಪಿಂಡ ರೋಗ ಪೀಡಿತರ ಸಂಖ್ಯೆ 13.80 ಕೋಟಿಗೂ ಅಧಿಕ : ವರದಿ

ಹೊಸದಿಲ್ಲಿ, ಮಾ.12: ಭಾರತದಲ್ಲಿ ಮೂತ್ರಪಿಂಡ ರೋಗ ಪೀಡಿತರ ಪ್ರಮಾಣವು ಗಣನೀಯವಾಗಿ ಏರಿಕೆಯಾಗುತ್ತಿದ್ದು 2023ರಲ್ಲಿ 13.80 ಕೋಟಿ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಮೂತ್ರಾಶಯ ದಿನಾಚರಣೆಯ ಹಿನ್ನೆಲೆಯಲ್ಲಿ ಗುರುವಾರ ಬಿಡುಗಡೆಯಾದ ತಜ್ಞರ ವರದಿಯೊಂದು ತಿಳಿಸಿದೆ. ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಮೂತ್ರಾಂಗಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗಿರುವ ಜನರ ವೈದ್ಯಕೀಯ ತಪಾಸಣೆಗೊಳಪಡಿಸುವ ತುರ್ತು ಅಗತ್ಯವಿದೆಯೆಂದು ತಜ್ಞರು ತಿಳಿಸಿದ್ದಾರೆ. ಸೋಂಕು ರಹಿತ ರೋಗಗಳ ನಿಯಂತ್ರಣ ಮಾರ್ಗಸೂಚಿ ಕುರಿತ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ದೀರ್ಘಾವಧಿಯ ಮೂತ್ರಪಿಂಡ ರೋಗವನ್ನು ಸೇರ್ಪಡೆಗೊಳಿಸಬೇಕೆಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರನ್ನು ಇಂಡಿಯನ್ ಸೊಸೈಟಿ ಆಫ್ ನೆಫ್ರಾಲಜಿ(ಐಎಸ್‌ಎನ್) ತಿಳಿಸಿದೆ. ಭಾರತದಲ್ಲಿ ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆ ಪೀಡಿತರ ಪ್ರಮಾಣವು ಕಳವಳಕಾರಿ ಮಟ್ಟದಲ್ಲಿ ಅಂದರೆ ಶೇ.16ರಷ್ಟು ಹೆಚ್ಚಳವಾಗಿದೆ. ಈ ಪ್ರವೃತ್ತಿ ಹೀಗೆ ಮುಂದುವರಿದಲ್ಲಿ 2040ರ ವೇಳೆಗೆ ಭಾರತದಲ್ಲಿ ಸಾವಿಗೆ ಕಾರಣವಾಗುವ ಐದು ಪ್ರಮುಖ ಕಾರಣಗಳಲ್ಲಿ ಮೂತ್ರಪಿಂಡದ ಕಾಯಿಲೆಯೂ ಒಂದೆನಿಸಲಿದೆ ಎಂದು ವರದಿ ಹೇಳಿದೆ. ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆಯು ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ, ಬಾಣಂತನದ ಆರೋಗ್ಯ ಸಮಸ್ಯೆಗಳು, ಪಾರಿಸರಿಕ ತೊಂದರೆಗಳು,ಮೂತ್ರಪಿಂಡಕ್ಕೆ ಗಾಯ ಇತ್ಯಾದಿ ತೊಂದರೆಗಳ ಜೊತೆ ನಿಕಟ ನಂಟನ್ನು ಹೊಂದಿದೆ ಎಂದು ಐಎಸ್‌ಎನ್ ತಿಳಿಸಿದೆ. ಮೂತ್ರಪಿಂಡ ಕಾಯಿಲೆಯು ಉಲ್ಬಣಾವಸ್ಥೆಗೆ ತಲುಪುವರೆಗೂ ಅದನ್ನು ವೈದ್ಯಕೀಯ ತಪಾಸಣೆಗೊಳಗಾಗದೆ ಇರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ಮೂತ್ರಾಂಗಶಾಸ್ತ್ರ ಹಾಗೂ ಮೂತ್ರಪಿಂಡ ಕಸಿ ಸಂಸ್ತೆಯ ಹಿರಿಯ ನಿರ್ದೇಶಕ ಡಾ.ಶ್ಯಾಮ್ ಬಿಹಾರಿ ಬನ್ಸಾಲ್ ತಿಳಿಸಿದ್ದಾರೆ.

ವಾರ್ತಾ ಭಾರತಿ 12 Mar 2026 10:24 pm

ರಶ್ಯ-ಉಕ್ರೇನ್‍ ನಡುವೆ ಮುಂದುವರಿದ ಸಂಘರ್ಷ : ನಾಲ್ವರು ಮೃತ್ಯು, 27 ಮಂದಿಗೆ ಗಾಯ

ಕೀವ್, ಮಾ.12: ರಶ್ಯ ಮತ್ತು ಉಕ್ರೇನ್‍ನ ನಡುವೆ ಸಂಘರ್ಷ ಮತ್ತೆ ತೀವ್ರಗೊಂಡಿದ್ದು ಎರಡೂ ದೇಶಗಳ ನಡುವಿನ ಡ್ರೋನ್ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಪೂರ್ವ ಉಕ್ರೇನ್‍ನ ಖಾರ್ಕಿವ್ ನಗರದ ಶೆವ್ಚೆಂಕಿವಸ್ಕಿ ಜಿಲ್ಲೆಯಲ್ಲಿ ರಶ್ಯದ ಡ್ರೋನ್ ದಾಳಿಯಲ್ಲಿ ಇಬ್ಬರು ಹತರಾಗಿದ್ದು ಮೂವರು ಮಹಿಳೆಯರ ಸಹಿತ ಇತರ 7 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಗವರ್ನರ್ ಒಲೆಗ್ ಸಿನೆಗುಬೊವ್ ಹೇಳಿದ್ದಾರೆ. ಆಗ್ನೇಯ ನಗರ ಖೆರ್ಸನ್‍ನಲ್ಲಿ ಮಿನಿ ಬಸ್ಸೊಂದರ ಮೇಲೆ ರಶ್ಯದ ನಡೆಸಿದ ಡ್ರೋನ್ ದಾಳಿಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‍ನ ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ಝಪೊರಿಝಿಯಾದ ರಶ್ಯ ಆಕ್ರಮಿತ ಪ್ರದೇಶದ ವಾಸಿಲಿವ್ಕಾ ಪಟ್ಟಣದಲ್ಲಿ ಕಾರೊಂದರ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿರುವುದಾಗಿ ರಶ್ಯ ನೇಮಿಸಿರುವ ಗವರ್ನರ್ ಯೆವ್ಗಿನಿ ಬಲಿಟ್ಸ್ಕಿ ಹೇಳಿದ್ದಾರೆ.

ವಾರ್ತಾ ಭಾರತಿ 12 Mar 2026 10:21 pm

ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ: ಸಚಿವ ಸಂಪುಟ ಅನುಮೊದನೆ

ಬೆಂಗಳೂರು: ‘ಕೆಎಚ್‍ಬಿ ಸೂರ್ಯ’ ಕ್ರೀಡಾ ಗ್ರಾಮ ಎಂಬ ಹೆಸರಿನಲ್ಲಿ ಬೆಂಗಳೂರು ನಗರದ ಆನೇಕಲ್ ತಾಲೂಕಿನ ಸೂರ್ಯನಗರ 4ನೆ ಹಂತದ ಬಡಾವಣೆಯ 75 ಎಕರೆ ವಿಸ್ತೀರ್ಣದ ಜಮೀನಿನಲ್ಲಿ 1980 ಕೋಟಿ ರೂ.ವೆಚ್ಚದಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಅನುಮೋದನೆ ನೀಡಿದೆ. ಕ್ರೀಡಾಂಗಣ ಸುತ್ತಲೂ ವಾಣಿಜ್ಯ ಕಟ್ಟಡಗಳ ನಿರ್ಮಾಣ ಹಾಗೂ ಇತರ ಕಟ್ಟಡ ಕಾಮಗಾರಿಗಳ ಪರಿಷ್ಕೃತ ವೆಚ್ಚದ ಮಾಹಿತಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇತರೆ ನಿರ್ಣಯಗಳು: ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾವೇರಿ ಶಾಖಾ ನಾಲೆ, ಕೆರಗೋಡು ಶಾಖಾ ನಾಲೆ, ಶಿಂಷಾ ಶಾಖಾ ನಾಲೆ ಮತ್ತು ಹೊಸ ಮದ್ದೂರು ಶಾಖಾ ನಾಲೆಗಳಡಿಯಲ್ಲಿನ ವಿತರಣಾ ನಾಲೆ ಹಾಗೂ ಪಿಕಲ್ ನಾಲೆಗಳ ಆಧುನೀಕರಣ ಕಾಮಗಾರಿಯನ್ನು 100 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ. ಮೈಸೂರು ಸಕ್ಕರೆ ಕಾರ್ಖಾನೆಯ ಬಾಯ್ಲಿಂಗ್ ಹೌಸ್ ದುರಸ್ತಿ ಮತ್ತು 5 ಸಾವಿರ ಟಿಸಿಡಿ ಕಬ್ಬು ನುರಿಸಲು ಸ್ಪಂದಿಸುವ ಹೊಸ ಯಂತ್ರೋಪಕರಣಗಳನ್ನು ಅಳವಡಿಸುವ 60 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ಅಧಿಕೃತ ಷೇರು ಬಂಡವಾಳವನ್ನು 95 ಕೋಟಿ ರೂ.ಗಳಿಂದ 125 ಕೋಟಿ ರೂ.ಗಳಿಗೆ ಹೆಚ್ಚಿಸಲು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿಯನ್ನು 10.83 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ. ವಿಜಯಪುರ ನಗರದ ವಾರ್ಡ್ ಸಂಖ್ಯೆ 5ರಲ್ಲಿನ ಸಿಟಿಎಸ್ ಸಂಖ್ಯೆ 605ಎ, 1ಎ, 1ಎ1, ಎ2ರಲ್ಲಿ ಗುತ್ತಿಗೆ ಆಧಾರದ ಮೇಲೆ ನೀಡಿರುವ 6 ಎಕರೆ ಜಮೀನನ್ನು ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯಕ್ಕೆ ಆಯುರ್ವೇದ ಮಹಾವಿದ್ಯಾಲಯ ಕಟ್ಟಡ, ಆಟದ ಮೈದಾನ ಮತ್ತು ಆಯುರ್ವೇದ ಗಿಡಗಳನ್ನು ಬೆಳೆಸುವುದಕ್ಕಾಗಿ ಖಾಯಂ ಆಗಿ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದ ಸ.ನಂ.68ರಲ್ಲಿ 100 ಎಕರೆ ‘ಗೋಮಾಳ’ ಜಮೀನನ್ನು ಬೆಂಗಳೂರಿನ ನೊಳಂಬ ಲಿಂಗಾಯಿತ ಸಂಘ(ರಿ)ಕೆಕ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಮಂಜೂರು ಮಾಡಲು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕು ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗಳ 11.60 ಕೋಟಿ ರೂ.ಗಳ ಪರಿಷ್ಕøತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. 2025-26ನೆ ಸಾಲಿನ 15ನೆ ಹಣಕಾಸು ಆಯೋಗದ ಅನುದಾನದಡಿ 27 ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು 17.55 ಕೋಟಿ ರೂ.ಅಂದಾಜು ಮೊತ್ತದಲ್ಲಿ ನಿರ್ಮಿಸಲು, ಕರ್ನಾಟಕ ಜಾಹೀರಾತು ನೀತಿ-2026 ಹಾಗೂ ಖೇಲೋ ಇಂಡಿಯಾ ಯೋಜನೆಯಡಿ ಮಂಡ್ಯ ಜಿಲ್ಲೆಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಯನ್ನು 14 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎನ್ನಲಾಗಿದೆ. ಲೀಪ್ ಕಾರ್ಯಕ್ರಮದಡಿ ಗ್ರಾಮೀಣ ಕೇಂದ್ರೀತ ಹಸ್ತಕ್ಷೇಪ ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಉತ್ಕøಷ್ಟತಾ ಕೇಂದ್ರವನ್ನು 16.05 ಕೋಟಿ ರೂ.ಗಳ ಮೊತ್ತದಲ್ಲಿ ಕಲಬುರಗಿಯಲ್ಲಿ ಸ್ಥಾಪಿಸಲು ಅನುಮೋದನೆ ನಈಡಿ ಫೆ.24ರಂದು ಹೊರಡಿಸಿರುವ ಸರಕಾರಿ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ರಾಯಚೂರು ಜಿಲ್ಲೆ ಮಾನ್ನಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ಜಲಸಂಗ್ರಹ ಗಾರ (Impounding Reservoir) ಕಾಮಗಾರಿ ಯನ್ನು ರೂ.38.50 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಹಾಗೂ ಗದಗ, ಶಿರಹಟ್ಟಿ ಹಾಗೂ ಮುಂಡರಗಿ (ಮುಂಡರಗಿ ಪಟ್ಟಣ ಸೇರಿದಂತೆ) ತಾಲ್ಲೂಕುಗಳ ಗ್ರಾಮೀಣ ಪ್ರದೇಶದ ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಕಾರ್ಯಾ ಚರಣೆ ಹಾಗೂ ನಿರ್ವಹಣೆ ಕಾಮಗಾರಿಯನ್ನು ರೂ.110.65 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ. ಮಡಿಕೇರಿ ಪ್ರಾದೇಶಿಕ ವಿಭಾಗ, ಕುಶಾಲನಗರ ವ್ಯಾಪ್ತಿಯಲ್ಲಿ ಅಂಚೆತಿಟ್ಟು ಗಾರೆಕಟ್ಟೆ ಗಡಿಯಿಂದ ಜೋಜೋ ಥಾಮಸ್ ಮನೆ, ಘಟ್ಟದಳ್ಳ ಬೀಟ್ ಮಲ್ದಾರೆ ಸೆಕ್ಷನ್ ವರೆಗೆ ಒಟ್ಟು 6.95ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್‍ ಅನ್ನು ರೂ.12.40 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. 76 ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆಗಳನ್ನು ಹಾಗೂ 41 ಉರ್ದು ಮಾಧ್ಯಮ ಶಾಲೆಗಳನ್ನು ರೂ.683.33 ಕೋಟಿಗಳ ಅಂದಾಜು ಮೊತ್ತದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಹಾಗೂ ‘ಕರ್ನಾಟಕ ವೃತ್ತಿಗಳ, ಕಸುಬುಗಳ,ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕ,2026ಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ)ವಿಧೇಯಕ 2026 ಹಾಗೂ ಕೊಪ್ಪಳ ಜಿಲ್ಲೆಯ ಕುಕನ್ನೂರು ತಾಲ್ಲೂಕಿನ ಕುಕನೂರು ಪಟ್ಟಣದ ಶ್ರೀ ಗುದ್ದೇಶ್ವರ ದೇವಸ್ಥಾನದ ಸ.ನಂ. 78ರಲ್ಲಿ 73.07 ಎಕರೆ ಜಮೀನಿನ ಪೈಕಿ 10 ಎಕರೆ ಜಮೀನನ್ನು ಕುಕನೂರು ಪಟ್ಟಣದ 100 ಹಾಸಿಗೆ ಆಸ್ಪತ್ರೆಗೆ ಮತ್ತು 7 ಎಕರೆ ಜಮೀನನ್ನು ಕುಕನೂರು ತಾಲ್ಲೂಕು ಕ್ರೀಡಾಂಗಣಕ್ಕೆ ಗುತ್ತಿಗೆ ಆಧಾರದ ಮೇಲೆ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಕರ್ನಾಟಕ ರಾಜ್ಯ ಕಂದಾಯ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು, 2026 ಹಾಗೂ 2024ರ ಸೆ.11ರಂದು 25 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ 2500 ಕಾಫಿ ಕಿಯೋಸ್ಟ್ ಗಳನ್ನು ಸ್ಥಾಪಿಸಲು ನೀಡಿರುವ ಆಡಳಿತಾತ್ಮಕ ಆದೇಶವನ್ನು ಅನುಮೋದನೆಯ ಪರಿಷ್ಕರಿಸಿ ಅದೇ ವೆಚ್ಚದಲ್ಲಿ 1840 ಕಾಫಿ ಕಿಯೋಸ್ಕ್ ಗಳನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ವಾರ್ತಾ ಭಾರತಿ 12 Mar 2026 10:03 pm

ದೇಶದಲ್ಲಿ LPG ಉತ್ಪಾದನೆ ಪ್ರಮಾಣದಲ್ಲಿ 25% ಹೆಚ್ಚಳ : ಕೇಂದ್ರ ಸಚಿವಾಲಯ ಸ್ಪಷ್ಟನೆ

ಹೊಸದಿಲ್ಲಿ,ಮಾ.13: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಹೊಟೇಲ್‌ಗಳು ಹಾಗೂ ಕ್ಯಾಂಟೀನ್‌ಗಳು ಮುಚ್ಚುಗಡೆಗೊಂಡಿರುವ ನಡುವೆ ಕೇಂದ್ರ ತೈಲ ಸಚಿವಾಲಯ ಹೇಳಿಕೆಯೊಂದನ್ನು ನೀಡಿದ್ದು, ದೇಶದಲ್ಲಿ ನೈಸರ್ಗಿಕ ಅನಿಲ ಉತ್ಪಾದನೆಯನ್ನು ಶೇ.25ರಷ್ಟು ಹೆಚ್ಚಿಸಲಾಗಿದ್ದು ಜನರು ಆತಂಕಗೊಳ್ಳುವ ಅಗತ್ಯವಿಲ್ಲವೆಂದು ತಿಳಿಸಿದೆ. ಈಗಾಗಲೇ ಗುರುತಿಸಲಾದ ಆದ್ಯತೆಯ ವಲಯಗಳನ್ನು ಹೊರತುಪಡಿಸಿದ ಉದ್ಯಮಗಳು ಹಾಗೂ ಗ್ರಾಹಕರಿಗೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲು ಕೇಂದ್ರ ಸರಕಾರವು ನಿರ್ಧರಿಸಿದೆ. ಆದರೆ ಅದನ್ನು ಯಾರು ಪಡೆಯಬೇಕೆಂಬುದನ್ನು ನಿರ್ಧರಿಸುವಲ್ಲಿ ರಾಜ್ಯ ಸರಕಾರಗಳು ಮಖ್ಯ ಪಾತ್ರವಹಿಸಲಿವೆ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ ಗುರುವಾರ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಸಕ್ತ ಸನ್ನಿವೇಶವು ಅತ್ಯಂತ ಸವಾಲುದಾಯಕವಾಗಿದೆ. ಭಾರತವು ತನ್ನ ಎಲ್‌ಪಿಜಿ ಅವಶ್ಯಕತೆಗಳ ಶೇ.60ರಷ್ಟನ್ನು ಹಾರ್ಮುಝ್ ಜಲಸಂಧಿ ಮಾರ್ಗವಾಗಿಯೇ ಆಮದು ಮಾಡಿಕೊಳ್ಳುತ್ತಿದೆ. ಇರಾನ್ ಹಾಗೂ ಇಸ್ರೇಲ್-ಅಮೆರಿಕ ನಡುವೆ ಮಿಲಿಟರಿ ಸಂಘರ್ಷ ಆರಂಭಗೊಂಡ 13 ದಿನಗಳ ಬಳಿಕ ವಾಣಿಜ್ಯ ಹಡಗುಗಾರಿಕೆ ಸ್ಥಗಿತಗೊಂಡಿದೆ. ಹೀಗಾಗಿ ಅತ್ಯಂತ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ದೇಶದಲ್ಲಿ ನೈಸರ್ಗಿಕ ಅನಿಲದ ಉತ್ಪಾದನೆಯನ್ನು ಶೇ.25ರಷ್ಟು ಹೆಚ್ಚಿಸಲಾಗಿದೆ. ಗೃಹಬಳಕೆಯ ಗ್ರಾಹಕರಿಗೆ ಅಡುಗೆ ಅನಿಲ ದೊರೆಯುವುದನ್ನು ಖಾತರಿಪಡಿಸಲು ಕೇಂದ್ರ ಸರಕಾರವು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆಯೆಂದು ಅವರು ಹೇಳಿದ್ದಾರೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಗೆ ಆಗ್ರಹಿಸಿ ವಾಣಿಜ್ಯ ಬಳಕೆದಾರರ ಅಹವಾಲುಗಳನ್ನು ಸಾರ್ವಜನಿಕರಂಗದ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಎಚ್‌ಪಿಸಿಎಲ್ ಹಾಗೂ ಬಿಪಿಸಿಎಲ್ ಕಂಪೆನಿಗಳ ಕಾರ್ಯಕಾರಿ ನಿರ್ದೇಶಕರ ತ್ರಿಸದಸ್ಯ ಸಮಿತಿಯು ಪರಾಮರ್ಶೆ ನಡೆಸಿದೆ. ವಾಣಿಜ್ಯ ಸಿಲಿಂಡರ್‌ಗಳನ್ನು ಸೀಮಿತ ಪ್ರಮಾಣದಲ್ಲಿ ಬಿಡುಗಡೆಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ ಎಂದು ಸುಜಾತ ಶರ್ಮಾ ತಿಳಿಸಿದ್ದಾರೆ. ವಾಣಿಜ್ಯ ಎಲ್‌ಪಿಜಿ ಪೂರೈಕೆಯಲ್ಲಿ ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುವುದೆಂದು ಕೇಂದ್ರ ಸರಕಾರವು ಮಂಗಳವಾರ ತಿಳಿಸಿತ್ತು.

ವಾರ್ತಾ ಭಾರತಿ 12 Mar 2026 10:03 pm

ಸೇಡಂ | ಅತ್ಯುತ್ತಮ ಎಸ್.ಡಿ.ಎಂ.ಸಿ.ಯಾಗಿ ಊಡಗಿ ಪ್ರಾಥಮಿಕ ಉರ್ದು ಶಾಲೆ ಆಯ್ಕೆ

ಸೇಡಂ : 2025-26ನೇ ಸಾಲಿನ ಅತ್ಯುತ್ತಮ ಎಸ್.ಡಿ.ಎಂ.ಸಿ ಗಳ ಪಟ್ಟಿಯಲ್ಲಿ ಊಡಗಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ ಎಂದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಖಾಸಿಂ ಸಾಬ್ ತಿಳಿಸಿದ್ದಾರೆ. 2025-26 ನೇ ಸಾಲಿನಲ್ಲಿ BEST SDMC ಎಂದು ಕಲಬುರಗಿ ಜಿಲ್ಲೆಯಲ್ಲಿನ ಕೆಲ ತಾಲೂಕುವಾರು ಶಾಲೆಗಳಲ್ಲಿ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಅದರಲ್ಲಿ ತಾಲೂಕಿನ ಊಡಗಿ ಗ್ರಾಮದ ಉರ್ದು ಶಾಲೆಯು ಉತ್ತಮ ಎಸ್.ಡಿ.ಎಂ.ಸಿ.ಯನ್ನು ಹೊಂದಿದೆ ಎಂದು ಆಯ್ಕೆ ಮಾಡಲಾಗಿದೆ. ಈ ಆಯ್ಕೆಯಿಂದ ಸಿಆರ್‌ಪಿ ಮತ್ತು ತಾಲೂಕಿನ ಬಿಇಓ ಅವರು ಶಾಲೆ ಹಾಗೂ ಎಸ್ಡಿಎಂಸಿ ಅಧ್ಯಕ್ಷ್ಯರಿಗೆ, ಶಾಲೆಯ ಮುಖ್ಯಗುರುಗಳಿಗೆ, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಸವರಾಜ ಪಾಟೀಲ್ ಊಡಗಿ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿಯೇ ನಮ್ಮ ಊಡಗಿ ಗ್ರಾಮದ ಉರ್ದು ಶಾಲೆಯು ಅತ್ಯುತ್ತಮವಾದ ಎಸ್.ಡಿ.ಎಂ.ಸಿ.ಯಾಗಿ ಆಯ್ಕೆಯಾಗಿರುವುದು ನಿಜಕ್ಕೂ ಸಂತಸದ ಸುದ್ದಿಯಾಗಿದೆ. ಇದಕ್ಕೆ ಶ್ರಮಿಸಿದ ಎಸ್‌.ಡಿ.ಎಂಸಿ ಅಧ್ಯಕ್ಷರಿಗೆ, ಶಾಲೆಯ ಮುಖ್ಯಗುರುಗಳಿಗೆ, ಅಭಿನಂದನೆ ಸಲ್ಲಿಸಿದ್ದಾರೆ.

ವಾರ್ತಾ ಭಾರತಿ 12 Mar 2026 10:00 pm

ಅಫಜಲಪುರ | ಮಾ.15 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು 135ನೇ ಜಯಂತ್ಯೋತ್ಸವದ ಪೂರ್ವಭಾವಿ ಸಭೆ

ಅಫಜಲಪುರ: ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಜಯಂತ್ಯೋತ್ಸವದ ನಿಕಟಪೂರ್ವ ಅಧ್ಯಕ್ಷ ಕುಮಾರ್ ಕೊಳಿಗೇರಿ ತಿಳಿಸಿದ್ದಾರೆ. ಸಭೆ ಮಾರ್ಚ್ 15 ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ಅಫಜಲಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆಯಲಿದೆ ಎಂದರು. ಜಯಂತ್ಯೋತ್ಸವವನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ಸಭೆಯಲ್ಲಿ ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಲಿದ್ದು, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಆದ್ದರಿಂದ ಅಫಜಲಪುರ ತಾಲ್ಲೂಕಿನ ಸಮಸ್ತ ಡಾ. ಅಂಬೇಡ್ಕರ್ ಅಭಿಮಾನಿಗಳು, ಸಮಾಜದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಈ ಪೂರ್ವಭಾವಿ ಸಭೆಗೆ ತಪ್ಪದೇ ಆಗಮಿಸಿ ತಮ್ಮ ಸಲಹೆಗಳನ್ನು ನೀಡುವ ಮೂಲಕ ಜಯಂತ್ಯೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವಾರ್ತಾ ಭಾರತಿ 12 Mar 2026 9:58 pm

ಕಲಬುರಗಿ | ರಾಜ್ಯ ಸರಕಾರಿ ನೌಕರರ ಗೃಹ ನಿರ್ಮಾಣ ಮಂಡಳಿಯ ಚುನಾವಣೆಗೆ 17 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಕಲಬುರಗಿ: ರಾಜ್ಯ ಸರ್ಕಾರಿ ನೌಕರ ಗೃಹ ನಿರ್ಮಾಣ ಮಂಡಳಿಯ ಚುನಾವಣೆಯ ಅಂಗವಾಗಿ ನಾಗಪ್ಪ ಹೊನ್ನಳ್ಳಿ ಅವರ ನೇತೃತ್ವದಲ್ಲಿ ಗುರುವಾರ ಒಟ್ಟು 17 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಲ್ಲಯ್ಯ ಗುತ್ತೇದಾರ್, ತಾಲೂಕು ಅಧ್ಯಕ್ಷರಾದ ಮುಸಿಬ್, ಈಶ್ವರಗೌಡ ಪಾಟೀಲ, ನೌಕರರ ಸಂಘದ ನಿರ್ದೇಶಕರಾದ ಮಹೇಶ್ ಬಸರಕೋಡ, ಹಿರಿಯ ಉಪಾಧ್ಯಕ್ಷರಾದ ಎಂ.ಬಿ. ಪಾಟೀಲ್, ವಿಭಾಗೀಯ ಉಪಾಧ್ಯಕ್ಷರಾದ ನಿಜಲಿಂಗಪ್ಪ ಕೋರಳ್ಳಿ, ರುದ್ರಪ್ಪ ಚಟ್ನಳ್ಳಿ, ಗುರುಶಾಂತಪ್ಪ ಚಿಂಚೋಳಿ, ಅರುಣಕುಮಾರ್ ಪಾಟೀಲ್, ಬೋಗೊಂಡೆ, ವಿಜಯಕುಮಾರ ನಾಗೂರು, ಪ್ರೇಮಾನಂದ, ತಾಲೂಕು ಅಧ್ಯಕ್ಷರಾದ ಮಿಟ್ಟೆಸಾಬ್, ಶಿವಪುತ್ರ ಕರಣೀಕ, ದಾನಪ್ಪಗೌಡ ಹಳಿಮನಿ ಹಾಗೂ ಶಿವಕುಮಾರ ಡಂಬಳ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷರಾದ ಸೇವಂತಾ ಚವಾಣ, ಕಾರ್ಯದರ್ಶಿಗಳಾದ ಸಾವಿತ್ರಿ ಪಾಟೀಲ್, ಉರ್ದು ಜಿಲ್ಲಾ ಘಟಕದ ಅಧ್ಯಕ್ಷರಾದ ಏಡಿ ಭಾಷಾ ಮತ್ತು ಕಾರ್ಯದರ್ಶಿಗಳಾದ ಉಸ್ಮಾನ್ ಪಾಶಾ, ಎಸ್ಸಿ-ಎಸ್ಟಿ ನೌಕರರ ಸಂಘದ ಅಧ್ಯಕ್ಷರಾದ ಮಹೇಶ್ ಹುಬ್ಬಳ್ಳಿ, ಪಟ್ಟಣ ಸಹಕಾರಿ ಸಂಘದ ಸದಸ್ಯರಾದ ರೇವಣ್ಣ ಕರಕಳ್ಳಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಮರೆಪ್ಪ ಬಸವಪಟ್ಟಣ ಸೇರಿದಂತೆ ವಿವಿಧ ಇಲಾಖೆಗಳ ವೃಂದ ಸಂಘಗಳ ಪದಾಧಿಕಾರಿಗಳು ಹಾಗೂ ನೂರಾರು ನೌಕರರು ಭಾಗವಹಿಸಿದ್ದರು.

ವಾರ್ತಾ ಭಾರತಿ 12 Mar 2026 9:56 pm

ಬೌದ್ಧ ಧರ್ಮದ‌ ಕುರುಹು, ದೇವಾಲಯಗಳ ರಕ್ಷಣೆಗೆ ಉತ್ಖನನ ನಡೆಸುವಂತೆ ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನಲ್ಲಿ ಆಗ್ರಹ

ನವದೆಹಲಿ/ ಕಲಬುರಗಿ: ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರ್ವೆ ಹಾಗೂ ಉತ್ಖನನ ನಡೆಸಿ ಬೌದ್ಧ ಧರ್ಮ ದೇವಾಲಯಗಳ ಮತ್ತು ಕುರುಹುಗಳನ್ನು ರಕ್ಷಣೆ ಮಾಡುವಂತೆ ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಿದ್ದ ಅವರು ಕೃಷ್ಣಾ ಹಾಗೂ ಭೀಮಾ‌ ನದಿ ತೀರದಲ್ಲಿ ಅದರಲ್ಲೂ ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಬೌದ್ಧ ಧರ್ಮದ ಕುರುಹುಗಳು ಇವು. ಸರ್ಕಾರ ಉತ್ಖನನ ನಡೆಸಿ ಅವುಗಳನ್ನು ರಕ್ಷಿಸುವಂತೆ ಈಗಾಗಲೇ ಮೂರು ನಾಲ್ಕು ಬಾರಿ ಪತ್ರ ಬರೆದಿದ್ದೇನೆ. ಆದರೂ ರಕ್ಷಿಸುವ ಕೆಲಸವಾಗಿಲ್ಲ ಎಂದು ರಾಜ್ಯಸಭೆ ಅಧ್ಯಕ್ಷರಾದ ಸಿ.ಪಿ.ರಾಧಾಕೃಷ್ಣನ್ ಅವರ ಗಮನಕ್ಕೆ ತಂದರು. ಅಮರಾವತಿ ರಾಜನಿಂದ ಆ ನಂತರ ನಾಗಾರ್ಜುನ ಆಚಾರ್ಯರವರೆಗೆ ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಬೌದ್ದ ಧರ್ಮ ವಿಸ್ತಾರಗೊಂಡ ಇತಿಹಾಸವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಖರ್ಗೆ ಅವರು ಬೌದ್ಧ ಧರ್ಮದ ಕುರುಹುಗಳನ್ನು ಪತ್ತೆ ಹಚ್ಚುವ ಸಲುವಾಗಿ ಹಾಗೂ ಬೌದ್ಧ ಧರ್ಮದ ದೇಗುಲ ರಕ್ಷಿಸುವ ಸಲುವಾಗಿ ಉತ್ಖನನದ ಅಗತ್ಯೆತೆಯನ್ನು ಒತ್ತಿ ಹೇಳಿ,‌ ಕೂಡಲೇ ಕೇಂದ್ರ ಸರ್ಕಾರ ಸಚಿವರು ಅಗತ್ಯ ಕ್ರಮವಹಿಸುವಂತೆ ಅವರು ಕೋರಿದರು.

ವಾರ್ತಾ ಭಾರತಿ 12 Mar 2026 9:55 pm

ಕಲಬುರಗಿ | ಅನುಭವಿ ರಂಗ ಕಲಾವಿದರಿಂದ ಅರ್ಜಿ ಆಹ್ವಾನ

ಕಲಬುರಗಿ: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ “ವಚನ ಕಲ್ಯಾಣ” ಎಂಬ ಅಹೋರಾತ್ರಿ (ಒಂಬತ್ತು ಗಂಟೆ) ನಾಟಕವನ್ನು ಸಿದ್ಧಪಡಿಸಿ, ನಾಡಿನಾದ್ಯಂತ ಪ್ರದರ್ಶನ ಮಾಡಲು ಇಲಾಖೆ ಉದ್ದೇಶಿಸಿದೆ. ಈ ಸಂಬಂಧ ನುರಿತ ಹಾಗೂ ಆಸಕ್ತಿಯುಳ್ಳ ಯುವಕ-ಯುವತಿಯರು ಹಾಗೂ ಅನುಭವಿ ರಂಗಕಲಾವಿದರು /ಗಾಯಕರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ವಯೋಮಿತಿ 18 ರಿಂದ 40 ವರ್ಷದೊಳಗಿನ ರಂಗಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರಿಗೆ ಅದ್ಯತೆಯನ್ನು ನೀಡಲಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು 2026ರ ಮಾ. 20 ರೊಳಗಾಗಿ ಸದಸ್ಯ ಕಾರ್ಯದರ್ಶಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056. ಇಲ್ಲಿಗೆ ಮುದ್ದಾಂ ಅಥವಾ ಅಂಚೆಯ ಮೂಲಕ ತಲುಪುವಂತೆ ಅಥವಾ ಮೇಲ್ ವಿಳಾಸ: kanakaresearchcentre@gmail.com ದ ಮೂಲಕ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳ ಕಾಲದ ಅವಧಿಯಲ್ಲಿ ಪೂರ್ಣಕಾಲಿಕವಾಗಿ ತರಬೇತಿ-ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಮಾಸಿಕ ಗೌರವಧನ ಮತ್ತು ಊಟ -ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಸಂಸ್ಕøತಿ ಇಲಾಖೆಯ kannadasiri.karnataka.gov.in ವೆಬ್‍ಸೈಟ್‍ದಿಂದ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಸಿ. ಬಸವಲಿಂಗಯ್ಯ (ವಚನ ಕಲ್ಯಾಣ ನಾಟಕದ ನಿರ್ದೇಶಕರು) ಇವರನ್ನು ಸಂಪರ್ಕಿಸಲು ಹಾಗೂ ಮೊಬೈಲ್ ಸಂಖ್ಯೆ-94485 38620ಗೆ ಸಂಪರ್ಕಿಸಬೇಕು. ಸಂದರ್ಶನಕ್ಕೆ ಹಾಜರಾಗುವ ಕಲಾವಿದರಿಗೆ ಇಲಾಖೆಯು ಯಾವುದೇ ಭತ್ಯೆ ನೀಡಲಾಗುವುದಿಲ್ಲ.

ವಾರ್ತಾ ಭಾರತಿ 12 Mar 2026 9:53 pm

ಇಂಡಿಯನ್ಸ್ ವೇಲ್ಸ್ ಟೂರ್ನಿ | ಕಾಸ್ಪರ್ ರೂಡ್ ವಿರುದ್ಧ ಕಾರ್ಲೊಸ್ ಅಲ್ಕರಾಝ್ ಜಯಭೇರಿ

ಮೆಕ್ಸಿಕೊ ಸಿಟಿ, ಮಾ.12: ಇಂಡಿಯನ್ಸ್ ವೇಲ್ಸ್ ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್ ನಾರ್ವೆಯ ಕಾಸ್ಪರ್ ರೂಡ್‌ರನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅಲ್ಕರಾಝ್ ಅವರು ರೂಡ್‌ರನ್ನು 6-1, 7-6(2)ಸೆಟ್‌ಗಳ ಅಂತರದಿಂದ ಮಣಿಸಿದರು. ರೂಡ್ ಅವರ ಸರ್ವ್ ಅನ್ನು ಮೂರು ಬಾರಿ ತುಂಡರಿಸಿದ ಸ್ಪೇನ್ ಆಟಗಾರ ಅಲ್ಕರಾಝ್ ಮೊದಲ ಸೆಟ್ಟನ್ನು ಕೇವಲ 37 ನಿಮಿಷಗಳಲ್ಲಿ ಗೆದ್ದುಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. 13ನೇ ಶ್ರೇಯಾಂಕದ ರೂಡ್ ಎರಡನೇ ಸೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಸ್ಪರ್ಧೆಯನ್ನು ಟೈ-ಬ್ರೇಕ್‌ಗೆ ಕೊಂಡೊಯ್ದರು. ಆದರೆ ಅಲ್ಕರಾಝ್ 7-6(2)ಅಂತರದಿಂದ ಜಯಶಾಲಿಯಾಗಿ ಈ ವರ್ಷ ಸತತ 15ನೇ ಗೆಲುವು ದಾಖಲಿಸಿದರು. ಸತತ ಐದನೇ ವರ್ಷ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು. ‘‘ನಿಜವಾಗಿಯೂ ಇಂದಿನ ವಾತಾವರಣ ಕಠಿಣವಾಗಿತ್ತು. ಚೆಂಡನ್ನು ನಿಯಂತ್ರಿಸಲು ಕಷ್ಟವಾಗುತ್ತಿತ್ತು. ಆದರೆ ನಾವಿಬ್ಬರೂ ಚೆನ್ನಾಗಿ ಆಡಿದ್ದೇವೆ’’ ಎಂದು ಎರಡು ಬಾರಿಯ ಚಾಂಪಿಯನ್ ಅಲ್ಕರಾಝ್ ಸುದ್ದಿಗಾರರಿಗೆ ತಿಳಿಸಿದರು. ಅಲ್ಕರಾಝ್ ಮುಂದಿನ ಸುತ್ತಿನಲ್ಲಿ 2021ರ ಚಾಂಪಿಯನ್ ಕ್ಯಾಮರೂನ್ ನೊರ್ರೆ ಅವರನ್ನು ಎದುರಿಸಲಿದ್ದಾರೆ. ನೊರ್ರೆ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ರಿಂಕಿ ಹಿಜಿಕಾಟಾರನ್ನು 6-4, 6-2 ನೇರ ಸೆಟ್‌ಗಳಿಂದ ಸದೆಬಡಿದರು. ಅಲ್ಕರಾಝ್ ಕಳೆದ ವರ್ಷ ಪ್ಯಾರಿಸ್ ಮಾಸ್ಟರ್ಸ್‌ನಲ್ಲಿ ಬ್ರಿಟನ್ ಆಟಗಾರನ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಇದೇ ವೇಳೆ, ರಶ್ಯದ 11ನೇ ಶ್ರೇಯಾಂಕದ ಆಟಗಾರ ಡೇನಿಯಲ್ ಮೆಡ್ವೆಡೆವ್ ಅವರು ಕೇವಲ ಒಂದು ಗಂಟೆ, 27 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅಮೆರಿಕದ ಆಟಗಾರ ಅಲೆಕ್ಸ್ ಮಿಚೆಲ್‌ಸನ್‌ರನ್ನು 6-2, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಕಳೆದ ತಿಂಗಳು ದುಬೈ ಓಪನ್ ಪ್ರಶಸ್ತಿಯನ್ನು ಗೆದ್ದಿರುವ ಮೆಡ್ವೆಡೆವ್ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದರು. ಇಗಾ ಸ್ವಿಯಾಟೆಕ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಝೆಕ್ ಆಟಗಾರ್ತಿ ಕರೋಲಿನಾ ಮುಚೋವಾರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ವಿಶ್ವದ ನಂ.2ನೇ ಆಟಗಾರ್ತಿ ಇಗಾ ಸ್ವಿಯಾಟೆಕ್ ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಪೋಲ್ಯಾಂಡ್ ಆಟಗಾರ್ತಿ ಸ್ವಿಯಾಟೆಕ್ 13ನೇ ಶ್ರೇಯಾಂಕದ ಆಟಗಾರ್ತಿ ಮುಚೋವಾರನ್ನು 6-2, 6-0 ನೇರ ಸೆಟ್‌ಗಳಿಂದ ಮಣಿಸಿದರು. ಸತತ 10 ಗೇಮ್‌ಗಳನ್ನು ಗೆದ್ದಿರುವ ಸ್ವಿಯಾಟೆಕ್ ಅವರು ಮುಚೋವಾ ವಿರುದ್ಧ ತನ್ನ ಐದನೇ ಜಯ ದಾಖಲಿಸಿದರು. ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸ್ವಿಯಾಟೆಕ್, ಕ್ವಾರ್ಟರ್ ಫೈನಲ್‌ನಲ್ಲಿ ಎಲಿನಾ ಸ್ವಿಟೋಲಿನಾರನ್ನು ಎದುರಿಸಲಿದ್ದಾರೆ. ಅಮೆರಿಕದ ಆಟಗಾರ್ತಿ ಜೆಸ್ಸಿಕಾ ಪೆಗುಲಾ ಅವರು ತಮ್ಮದೇ ದೇಶದ ಬೆಲಿಂಡಾ ಬೆನ್ಸಿಕ್‌ರನ್ನು 6-3, 7-6(5) ಸೆಟ್‌ಗಳ ಅಂತರದಿಂದ ಮಣಿಸಿದರು. ಜೆಸ್ಸಿಕಾ ಅವರು ಬೆನ್ಸಿಕ್ ವಿರುದ್ಧ ಆಡಿರುವ ಐದು ಪಂದ್ಯಗಳಲ್ಲಿ ಮೊದಲ ಗೆಲುವು ದಾಖಲಿಸಿದರು.

ವಾರ್ತಾ ಭಾರತಿ 12 Mar 2026 9:51 pm

ಸೇಡಂ | ಮಾ.14 ರಂದು ಗುಂಡೇಪಲ್ಲಿಯಲ್ಲಿ ಶ್ರೀ ಸೋಮೇಶ್ವರ ಜಾತ್ರಾ ಮಹೋತ್ಸವ : ವಿವಿಧ ಕಾರ್ಯಕ್ರಮಗಳು

ಸೇಡಂ: ತಾಲ್ಲೂಕಿನ ಮುಧೋಳ ಹತ್ತಿರದ ಗುಂಡೇಪಲ್ಲಿ (ಕೆ) ಗ್ರಾಮದ ಶ್ರೀ ಸೋಮೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಮಾರ್ಚ್ 14 ಶನಿವಾರದಂದು ಶ್ರೀ ಸೋಮೇಶ್ವರ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಸದಾಶಿವರೆಡ್ಡಿ ಗೋಪಾನಪಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರ ದಿವ್ಯ ನೇತೃತ್ವದಲ್ಲಿ  ದಿನವಿಡೀ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವ ಹಾಗೂ ಜಗದ್ಗುರು ಶ್ರೀ ರೇಣುಕಾಚಾರ್ಯರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಕುಂಭ ಕಳಸ, ವಾದ್ಯ ಮೇಳ, ಡೊಳ್ಳು ಕುಣಿತ, ಭಜನೆ ಹಾಗೂ ಪುರವಂತರ ಸೇವೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಮಠವನ್ನು ತಲುಪಲಿದೆ. ಮಧ್ಯಾಹ್ನ 2.30 ಗಂಟೆಗೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು. ಕಬಡ್ಡಿ ಪಂದ್ಯಾವಳಿ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಲ್ಲದೇ ಇದೇ ಸಂದರ್ಭದಲ್ಲಿ ಕ್ಯಾನ್ಸರ್ ಹಾಗೂ ಶುಗರ್ (ಸಕ್ಕರೆ ಕಾಯಿಲೆ) ರೋಗಿಗಳಿಗೆ ವಿಶೇಷ ಉಚಿತ ಆಯುರ್ವೇದಿಕ್ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಈ ಶಿಬಿರವು ಪರಗಿಯ ಕೃಷ್ಣಗಿರಿ ಮಠದ ಶ್ರೀ ಶ್ರೀ ಮಹಾರಾಜಯೋಗಿ ಸದ್ಗುರು ಶ್ರೀ ಕೃಷ್ಣಾನಂದ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಯಲಿದೆ. ಧರ್ಮ ಸಭೆ, ಗೋವತ್ಸ ನಾಮಕರಣ, 2026ರ ಕ್ಯಾಲೆಂಡರ್ ಬಿಡುಗಡೆ ಹಾಗೂ 13ನೇ ತುಲಾಭಾರ  ನಡೆಯಲಿದೆ.‌ ವಾರಾಣಾಸಿ ಆದಿಮಠಂ ಪಾಟಮಿರಪಲ್ಲಿ ರುದ್ರಾರಂನ ಶ್ರೀ ಡಾ.ರಾಚೋಟೇಶ್ವರ ಶಿವಾಚಾರ್ಯ, ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ, ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ತೊಟ್ನಳ್ಳಿ ಮಹಾಂತೇಶ್ವರ ಮಠದ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯ, ಮಂಗಲಗಿತ ಶ್ರೀ ಡಾ. ಶಾಂತಸೋಮನಾಥ ಶಿವಾಚಾರ್ಯ, ಸೂಗೂರ ಕೆ ಚನ್ನರುದ್ರಮುನೇಶ್ವರ ಶಿವಾಚಾರ್ಯ, ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸೇರಿದಂತೆ ಅನೇಕ ಪೂಜ್ಯರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಸಚಿವ ಡಾ.ಶರಣಪ್ರಕಾಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತೆಲಂಗಾಣದ ಮಲ್ಕಜಗಿರಿ ಸಂಸದ ಈಟಲ ರಾಜೇಂದ್ರ ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ. ಬಾಲ ಭವನ ನಿಗಮ ಅಧ್ಯಕ್ಷ ಅನೀಲ ಕುಮಾರ ಜಮಾದಾರ, ಕೃಷ್ಣ ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಅಂದೆ ಬಾಬಯ್ಯ, ಕೊಂಡಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಮುಖಂಡರು ಆಗಮಿಸಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಿವ ಸಿದ್ದ ಸೋಮೇಶ್ವರ ಶಿವಾಚಾರ್ಯ, ಶರಣರೆಡ್ಡಿ ಪಾಟೀಲ ಕಡಚರ್ಲಾ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ರಾಜಶೇಖರ ನಿಲಂಗಿ, ಅನಂತರೆಡ್ಡಿ ದಾಚಿನ್, ಗೋವರ್ಧನರೆಡ್ಡಿ ಪಾಟೀಲ ಲಿಂಗಂಪಲ್ಲಿ, ಮಹಾದೇವಪ್ಪ ಗೋಣಿ, ರಾಮರೆಡ್ಡಿ,  ನರಸರೆಡ್ಡಿ, ಶೇಖರರೆಡ್ಡಿ, ರಾಜಕುಮಾರ ಮಾಲಿಪಾಟೀಲ ಬಟಗೇರಾ, ಮಲ್ಲಪ್ಪ ಪೋಲೀಸ ಪಾಟೀಲ ಬಿಬ್ಬಳ್ಳಿ, ಮಲ್ಲನಗೌಡ, ಬಸವರಾಜ ಮಲಘಾಣ, ಮಲ್ಲಿಕಾರ್ಜುನ ಮೆಕ್ಯಾನಿಕ್, ಜಗನ್ನಾಥ ಬೆಡಪಳ್ಳಿ ಸೇರಿದಂತೆ ಇತರರು ಇದ್ದರು.

ವಾರ್ತಾ ಭಾರತಿ 12 Mar 2026 9:51 pm

ಕಲಬುರಗಿ | ಪಿಯು ಡಿಡಿಗೆ ಸಿಇಓ ನಿಯಂತ್ರಿಸುವ ಆದೇಶ ಹಿಂಪಡೆಯುವಂತೆ ಆಗ್ರಹ

ಕಲಬುರಗಿ : ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ (ಬೆಂಗಳೂರು), ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಬೋಧಕೇತರ ಸಿಬ್ಬಂದಿಗಳ ಸಂಘಗಳ ವತಿಯಿಂದ ಸರ್ಕಾರದ ಪ್ರಸ್ತಾಪಿತ ಕಡತ ಸಂಖ್ಯೆ EP 10 DGD 2026 ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತಾಪಿತ ಆದೇಶದಂತೆ ಪದವಿ ಪೂರ್ವ ಉಪನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರ್ಗಾಯಿಸುವ ಕ್ರಮವು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸ್ವಾಯತ್ತತೆ, ಸಂಸ್ಥಾತ್ಮಕ ಅಸ್ತಿತ್ವ ಹಾಗೂ ಈಗಿರುವ ಆಡಳಿತಾತ್ಮಕ ವ್ಯವಸ್ಥೆಗೆ ಗಂಭೀರ ಧಕ್ಕೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ಈ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಒಂದು ವೇಳೆ ಸರ್ಕಾರ ಈ ಆದೇಶವನ್ನು ಹಿಂಪಡೆಯದಿದ್ದರೆ ಮುಂದಿನ ದ್ವಿತೀಯ ಪಿಯುಸಿ ಪರೀಕ್ಷೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸುವಂತೆ ಸಂಘ ತೀರ್ಮಾನ ಕೈಗೊಳ್ಳಲಿದೆ ಎಂದು ಸಂಘದ ಮುಖಂಡರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ನರಸಪ್ಪ ರಂಗೋಲಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶಿವಾನಂದ ಖಜೂರಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಬೋನಾಳ, ಬೋಧಕೇತರ ಸಿಬ್ಬಂದಿಗಳ ಸಂಘದ ಅಧ್ಯಕ್ಷರಾದ ನೆಸರ ಬೆಳಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಳುಂಡಗಿ, ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ, ನಿವೃತ್ತ ಜಂಟಿ ನಿರ್ದೇಶಕರಾದ ಶಿವಶರಣಪ್ಪ ಮುಳೆಗಾಂವ, ಶರಣಗೌಡ ಪಾಟೀಲ, ನಾಮದೇವ ಕಡಕೊಳ, ಭೀಮರಾಯ ಅರಕೇರಿ, ಬಿ.ಹೆಚ್. ನಿರಗುಡಿ, ಸಿ.ಚಿ. ಲಿಂಗಣ್ಣ, ಡಾ. ಪ್ರಹ್ಲಾದ ಬುಲಿ೯, ಉಮೇಶ ಅಷ್ಟಗಿ, ಮಹಾದೇವ ನಲಕಂಠೆ, ಸುಜಾತ ಬಿರಾದಾರ, ಭಾರತಿ ಕೊಭಾ, ಪ್ರಭಾತಿ ಪಾಟೀಲ, ದಶರಥ ರಾಠೋಡ, ಬಸವರಾಜ ಅಂಗಡಿ, ಜಯಶ್ರೀ ಪಾಟೀಲ, ಸವಿತಾ ನಾಸಿ, ಮಂಜುಳಾ, ಲಿಲಾವತಿ ನಾಗಶೆಟ್ಟಿ, ಸುವರ್ಣ ಬಿರಾದಾರ, ಜಮುನಾ ಟಿಳೆ, ನೀಲಮ್ಮ ಪಾಟೀಲ, ಶಾಂತಾ ಮಾಲಿ ಪಾಟೀಲ, ಸವಿತಾ ನಾಟೀಕಾರ, ಬಲರಾಮ ಚವ್ಹಾಣ, ಶಿವಶರಣಪ್ಪ ತಮ್ಮಾಗೊಳ, ತುಳಜಾ ರಾಮ್ಸರ, ನಾಗರತ್ನ ಇಂಡಿ, ರೇವಮ್ಮ ಸನ್ನತಿ, ವಿಠಲರಾವ್ ಬಾವಿಮನಿ, ಸುರಚಂದ ಗಾಂಧಿ, ಸುನಿಲ್ ರಾಥೋಡ್, ರಂಗಸ್ವಾಮಿ, ಕಾಶಿನಾಥ್ ಮುಖರ್ಜಿ, ಸಂತೋಷ್ ಪಾಂಚಳ್, ಹಮೀದಲಿ, ಜಟ್ಟಿಂಗ್ ರಾಯ್ ಶಾಕಾಪುರ್, ಅಂಬಾದಾಸ್ ಜಾಧವ್, ದೀಕ್ಷಿತ್, ಮಲ್ಲಿನಾಥ್, ಸುಮಂಗಲ ನಾಟಿಕರ್ ಸೇರಿದಂತೆ ಅನೇಕ ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

ವಾರ್ತಾ ಭಾರತಿ 12 Mar 2026 9:47 pm

ಕರ್ನಾಟಕದ ಮುಂದಿನ ಸಿಎಂ ಎಚ್‌ಡಿಕೆ! ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ

ಕರ್ನಾಟಕದ ಮುಂದಿನ ಸಿಎಂ ಎಚ್‌ಡಿ ಕುಮಾರಸ್ವಾಮಿ ಎಂಬ ವಿಚಾರ ಗುರುವಾರ ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಸದಸ್ಯರಾದ ಸುನೀಲ್ ಕುಮಾರ್, ಸಿದ್ದು ಸವದಿ ನಡುವೆ ಮಾತಿನ ವಿನಿಮಯ ನಡೆಯಿತು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಸಿದ್ದು ಸವದಿ ಕರ್ನಾಟಕ ಮುಂದೆ ಕಾಂಗ್ರೆಸ್ ಮುಕ್ತ ರಾಜ್ಯವಾಗಲಿದೆ ಎಂದು ಹೇಳಿದರು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ 2028 ರಲ್ಲಿ ಬಿಜೆಪಿಯವರೇ ಸಿಎಂ ಆಗುತ್ತಾರೆ ಎಂದು ಸುನೀಲ್ ಕುಮಾರ್ ಭವಿಷ್ಯ ನುಡಿದರು.

ವಿಜಯ ಕರ್ನಾಟಕ 12 Mar 2026 9:44 pm

LPG ವಾಣಿಜ್ಯ ಸಿಲಿಂಡರ್‌ ಹೆಚ್ಚುವರಿ ಸ್ಟಾಕ್‌ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ; ರಾಜ್ಯಗಳಿಗೆ ಸೀಮೆ ಎಣ್ಣೆ ಕೂಡ ಹಂಚಿಕೆ

ಎಲ್‌ಪಿಜಿ ಸಿಲಿಂಡರ್‌ ಸಮಸ್ಯೆ ಸರಿಪಡಿಸಲು ಕೇಂದ್ರ ಸರ್ಕಾರವು ಹೆಚ್ಚುವರಿ ಸ್ಟಾಕ್‌ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರಗಳಿಂದ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ. ಇದರ ಜತೆಗೆ ಪರ್ಯಾಯವಾಗಿ 40,000 ಕಿ. ಲೀ ಸೀಮೆ ಎಣ್ಣೆ ಕೂಡ ರಾಜ್ಯಗಳಿಗೆ ನೀಡಲಾಗಿದೆ. ಇನ್ನು ಜನರು ಆತಂಕದ ಖರೀದಿಯನ್ನು ನಿಲ್ಲಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ.

ವಿಜಯ ಕರ್ನಾಟಕ 12 Mar 2026 9:44 pm